ನಮ್ಮ ಗುರುಗಳ ತಂಟೆಗೆ ಬಂದರೆ ಹುಷಾರ್: ಕೊಟ್ಟೂರು ಭಕ್ತರ ಖಡಕ್ ಎಚ್ಚರಿಕೆ…!
ಬೆಂಗಳೂರು/ ದಾವಣಗೆರೆ: ಸಿರಿಗೆರೆಯ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಸಿರಿಗೆರೆ ತರಳಬಾಳು ಮಠದ ಪೀಠಾಧಿಪತಿಯಾಗಿ ಉತ್ತರಾಧಿಕಾರಿ ನೇಮಕ ಮಾಡುವವರಗೆ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರೆೇ ಮುಂದುವರಿಯಬೇಕು. ಮುಂದೆ ಬೃಹನ್ಮಠದ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಮತ್ತು ಕೇಂದ್ರೀಯ ಕಾರ್ಯಕಾರಿ ಸಮಿತಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಸದಾ ಬದ್ಧ. ಇದು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಸಾಧು ಸದ್ಯರ್ಮ ವೀರಶೈವ ಲಿಂಗಾಯತ ಸಮಾಜ ಕೊಟ್ಟೂರು ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಶ್ರೀ ಮಠದ ಸದ್ಭಕ್ತರು ತೆಗೆದುಕೊಂಡಿರುವ ನಿರ್ಣಯ.
ಪಿತೂರಿ ವಿರುದ್ಧ ಆಕ್ರೋಶ:
ಸಮಾಜದ ಎಲ್ಲಾ ಬಂಧುಗಳು ಸಭೆಯಲ್ಲಿ ಭಾಗವಹಿಸಿ ಶ್ರೀ ಮಠದ ವಿರುದ್ಧ ನಡೆಯುತ್ತಿರುವ ಪಸ್ತುತ ವಿದ್ಯಮಾನಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಮಠದ ವಿರುದ್ಧ ನಡೆಯುವ ಪಿತೂರಿಗಳನ್ನು ತೀವ್ರವಾಗಿ ಖಂಡಿಸಲಾಯಿತು.
ಗುರುಗಳ ಜೊತೆ ನಿಲ್ಲೋಣ:
ನಮ್ಮ ಮಠ ಹಾಗೂ ಗುರುಗಳ ಪರವಾಗಿ ನಾವೆಲ್ಲರೂ ಇರಬೇಕು. ಜೊತೆಗೆ ಅವರು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳನ್ನು ನಾವು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವುದರ ಜೊತೆಯಲ್ಲಿ ಮಠಕ್ಕೆ ಸದಾ ಬೆಂಗಾವಲಾಗಿರುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು.
ಆಧುನಿಕ ಭಗೀರಥ, ಮಾದರಿ ಮಠ:
ಪರಮಪೂಜ್ಯ ಗುರುಗಳು ಸುಮಾರು ನೂರಾರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಂದರು. ರೈತರ ಬಾಳಿಗೆ ಬೆಳಕು ನೀಡಿದ ಅಧುನಿಕ ಭಗೀರಥ ನಮ್ಮ ಪೂಜ್ಯ ಗರುಗಳು. ಜಾತಿ ಭೇದವಿಲ್ಲದೇ ಬಡ ಮಕ್ಕಳಿಗೆ ವಸತಿಯುತ ಶಿಕ್ಷಣ ನೀಡುತ್ತಾ ಇಂದಿಗೂ ಅನೇಕ ಮಠಗಳಿಗೆ ಮಾದರಿಯಾದ ಮಠ. ಶ್ರೀ ತರಳಬಾಳು ಬೃಹನ್ಮಠ ನ್ಯಾಯಾಲಯದಲ್ಲಿ ಬಗೆಹರಿಯದೆ ಇರುವ ಎಷ್ಟೋ ಕೇಸುಗಳನ್ನು ಸದ್ದರ್ಮ ನ್ಯಾಯಪೀಠದಲ್ಲಿ ಬಗೆಹರಿಸಿ, ಎಷ್ಟು ಕುಟುಂಬಗಳಿಗೆ ಬೆಳಕು ನೀಡಿದವರು ನಮ್ಮ ಪೂಜ್ಯ ಗುರುಗಳು.
ನ್ಯಾಯ ಕೊಡಿಸಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು:
ಸರ್ಕಾರಿ ಹುದ್ದೆಯಲ್ಲಿ ನೆನಗುದಿಗೆ ಬಿದ್ದಂತಹ ಕೇಸ್ ಗಳನ್ನ ಬಗೆಹರಿಸಿ ನ್ಯಾಯ ಕೂಡಿಸಿದ ಕೀರ್ತಿ ಪೂಜ್ಯ ಗುರುಗಳಿಗೆ ಸಲ್ಲುತ್ತದೆ. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಜೊತೆಗೆ ಸಿರಿಗೆರೆ ಎಂಬ ಪುಟ್ಟ ಹಳ್ಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದು ಅಲ್ಲದೇ ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ನಮ್ಮ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಶ್ರೀ ಮದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸೇವೆ ಗಣನೀಯವಾಗಿದೆ ಎಂದು ಸಮಾಜದ ಮುಖಂಡರು ಭಕ್ತರು ಪ್ರತಿಪಾದಿಸಿದರು.
ಸ್ವಾರ್ಥ ಸಾಧನೆಗಾಗಿ ಮಾಡುವ ಹೇಯ ಕೃತ್ಯಗಳು ದೇಶಾತೀತ ಮತ್ತು ಕಾಲಾತೀತ.ಈಗಲೂ ಸಹ ರಾಜಕೀಯ ರಂಗದಲ್ಲಿ ಅಧಿಕಾರ ಪಡೆಯಲು ಒಳಸಂಚುಗಳು ನಡೆಯುತ್ತಲೇ ಇವೆ. ಇದುವರೆಗೆ Breakfast/Dinner politics ಆಗಿ ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಒಳಸಂಚುಗಳು ಕೆಲವು ವರ್ಷಗಳಿಂದ ಬಹಿರಂಗಗೊಂಡು ನಿರ್ಲಜ್ಜೆಯ ರೆಸಾರ್ಟ್ ರಾಜಕೀಯವಾಗಿ ಪರಿವರ್ತನೆಗೊಂಡಿರುವುದು ಸರ್ವವೇದ್ಯ.
ಚುನಾಯಿತ ಪ್ರತಿನಿಧಿಗಳನ್ನು ರೆಸಾರ್ಟುಗಳಲ್ಲಿ ಹಿಡಿದಿಟ್ಟುಕೊಂಡು ಅವರಿಗೆ ನಾನಾ ಆಮಿಶಗಳನ್ನು ಒಡ್ಡಿ ಅಧಿಕಾರದಲ್ಲಿದ್ದವರನ್ನು ಕೆಡವಿ ಪದಗ್ರಹಣ ಮಾಡುವ ಕಸರತ್ತುಗಳಿಗೆ ಮೊದಲೂ ಇಲ್ಲ, ಕೊನೆಯೂ ಇಲ್ಲ. ಆದ್ದರಿಂದಲೇ ಇದಕ್ಕೆ ರೆಸಾರ್ಟ್ ರಾಜಕೀಯವೆಂಬ ಕುಖ್ಯಾತಿ ಬಂದಿದೆ. ಇತ್ತೀಚೆಗೆ ಧಾರ್ಮಿಕ ರಂಗದಲ್ಲಿಯೂ ಸಹ ಈ ರೆಸಾರ್ಟ್ ರಾಜಕೀಯ ಕುಸಂಸ್ಕೃತಿ ನುಸುಳಿರುವುದು ವಿಷಾದಕರ ಹಾಗೂ ಅಸಹ್ಯಕರ. ಆದರೆ ಒಂದು ವ್ಯತ್ಯಾಸ. ರಾಜಕೀಯ ರಂಗದಲ್ಲಿ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವ ಹುನ್ನಾರ ನಡೆಸಿ ಯಶಸ್ವಿಯಾದವರು ಸ್ವತಃ ಅಧಿಕಾರದ ಗದ್ದುಗೆಯನ್ನೇರಿ ಕುಳಿತುಕೊಳ್ಳುತ್ತಾರೆ. ಧಾರ್ಮಿಕ ರಂಗದಲ್ಲಿ ರಾಜಕೀಯ ಮಾಡುವವರು ಧರ್ಮದ ಕಟ್ಟೆಯ ಮೇಲೆ ಕುಳಿತುಕೊಳ್ಳಲು ಬರುವುದಿಲ್ಲ.
ಅವರ ಉದ್ದೇಶ ಸ್ಪಷ್ಟ: ಧರ್ಮದ ಕಟ್ಟೆಯ ಮೇಲೆ ತಮಗೆ ಬೇಕಾದವರನ್ನು ಕೂರಿಸಿ ಅವರ ತಲೆ ಬೋಳಿಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಹುನ್ನಾರ. ತಮ್ಮ ತೆವಲುಗಳಿಗೆ ಇಂಬುಗೊಡದೇ ಇದ್ದರೆ ಅಂತವರ ತಲೆ ತೆಗೆಯುವ ಒಳಸಂಚು. ಇದರ ಹಿಂದೆ ತೆರೆಮರೆಯಲ್ಲಿರುವ ಕಾಣದ ದುಷ್ಟಕೂಟ ಮತ್ತು ಹಿಮ್ಮೇಳವೇ ಬೇರೆ. ಹುಡುಕುತ್ತಾ ಹೋದರೆ ನೀವು ನಂಬಲಾಗದ ಜಾಗಕ್ಕೆ ಕರೆದೊಯ್ಯುತ್ತದೆ.