03-09-2024 07:56 PM
ದಣಿವರಿಯದ ಜೀವ, ಬೆಳಗಿನೊಳಗಣ ಮಹಾಬೆಳಗು, ಸಾಧು ಲಿಂಗಾಯತ ಸಮಾಜದ ಭಕ್ತರ ಪಾಲಿನ ಆರಾಧ್ಯ ದೈವ, ಮಧ್ಯ ಕರ್ನಾಟಕದ ಶಿಕ್ಷಣ ಕ್ರಾಂತಿಯ ರಾಯಭಾರಿ, ಬಸವ ತತ್ವ ಪ್ರತಿಪಾದಕ, ಸಮಾನತೆಯ ತತ್ವ ಪ್ರಸಾರಕ, ಆಧ್ಯಾತ್ಮದ ಕಡಲು, ಕಠೋರ ಸನ್ಯಾಸಿ, ಛಲಬಿಡದ ಮಹಾಗುರು, ಪ್ರಾತಃ ಸ್ಮರಣೀಯರು ಆದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ 1108 ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೇ ಶ್ರದ್ಧಾಂಜಲಿಯು ಕೇವಲ ಗುರು ಸ್ಮರಣೆಯ ಕಾರ್ಯಕ್ರಮವಾಗದೆ, ಹಿರಿಯ ಜಗದ್ಗುರುಗಳ ಜೀವನ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಬೃಹತ್ ಸಮಾರಂಭವಾಗಲಿ. ಎಂದೆಂದಿಗೂ ಮರೆಯಲಾಗದಂತಹ ಹಿರಿಯ ಜಗದ್ಗುರುಗಳ ಜೀವನದ ಒಂದೊಂದು ದಿನಗಳು ಒಂದೊಂದು ಗ್ರಂಥ ಬರೆಯುವಷ್ಟು ವಸ್ತುವಾಗಬಲ್ಲವು. ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದ ಪರಮಪೂಜ್ಯರ ದೂರದೃಷ್ಟಿ ಮತ್ತು ಆಲೋಚನೆಗಳನ್ನು ಯಾರಿಂದಲೂ ಸರಿಗಟ್ಟಲು ಸಾಧ್ಯವಿಲ್ಲ. ಅಂತವರನ್ನು ನೆನೆಯುವುದೇ ಪುಣ್ಯ. ಚಿರಮಭಿವರ್ಧತಾಂ ತರಳಬಾಳು ಸಂತಾನಶ್ರೀ.
ಪ್ರಸನ್ನ ಯು.
ಸಿರಿಗೆರೆ