03-09-2024 02:04 PM
ಬಂಜೆ ಬೇನೆಯನರಿವಳೆ? ಬಲದಾಯಿ ಮದ್ದ ಬಲ್ಲಳೆ? ನೊಂದವರ ನೋವ ನೋಯದವರೆತ್ತ ಬಲ್ಲರೊ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ
ಎಲೆ ತಾಯಿಗಳಿರಾ?
ಅಕ್ಕನ ವಚನದಂತೆ ಘನತೆಗೆ ಕುಂದು ಉಂಟಾದಾಗ ಆಗುವ ನೋವು, ಘನತೆ ಇಲ್ಲದೇ ಮಾತನಾಡುತ್ತಿರುವ ಜನರಿಗೆ ಅರಿವು ಆಗುವುದಿಲ್ಲ.
ಸಮಸ್ಯೆ ಉಂಟಾದಾಗ ಅದನ್ನು ಹೇಗೆ ಪರಿಹರಿಸಬೇಕು ಎನ್ನುವುದು ಗೊತ್ತಿಲ್ಲದವರು,ಹೋಟೆಲ್,ರೆಸಾರ್ಟ್ ಮತ್ತು ಇತರ ಕಡೆ ಸೇರಿ,ಇನ್ಯಾರೋ ಅವರ ತಲೆಯಲ್ಲಿ ತುಂಬಿದ್ದನ್ನು(ಒಮ್ಮೊಮ್ಮೆ ಹಿಂದೆ ನಿಂತು ಕಿವಿಯಲ್ಲಿ ಹೇಳಿದ್ದನ್ನು ಕೇಳಿ) ಹೇಳುತ್ತಾರೆ.
ಸಮಸ್ಯೆಯ ಮೂಲವನ್ನು ಅರಿಯದೇ,ನಿಜ ಸ್ಥಿತಿಯನ್ನು ಅರಿಯಲು ಪ್ರಯತ್ನ ಮಾಡದೇ ಬೇರೊಬ್ಬರ ಅಭಿಪ್ರಾಯದಿಂದ ಮಾತನಾಡುತ್ತಾರೆ.
ಬೇರೆಯವರ ದೃಷ್ಟಿಕೋನದಿಂದ ಒಂದು ಘಟನೆಯನ್ನು ನೋಡಿ ನಿರ್ಧಾರಕ್ಕೆ ಬರಬಾರದು.ಪ್ರತಿಯೊಬ್ಬರೂ ಅವರದೇ ದೃಷ್ಟಿಕೋನದಿಂದ ನೋಡಿ,ಯೋಚಿಸಿ ಅಭಿಪ್ರಾಯಕ್ಕೆ ಬರಬೇಕು.
ನಿಜವಾಗಿಯೂ ಬೇರೆಯವರು ಹೇಳಿದಂತೆ ಆಗಿದೆಯಾ?ಹಾಗೆ ಆಗಲು ಸಾಧ್ಯತೆ ಇದೆಯೇ?ಅದು ಪ್ರಸ್ತುತವೇ? ಹಾಗೆ ಆದರೆ ಸಮಾಜ ಸುಧಾರಿಸುತ್ತದೆಯೇ?ಇನ್ನೂ ಮುಂತಾಗಿ ಯೋಚಿಸಿ ಮಾತನಾಡಬೇಕು.
ಯಾರೋ ಹೇಳಿದ್ದನ್ನು ಕೇಳಿ ನಿರ್ಧಾರಕ್ಕೆ ಬರುವುದು ಒಳ್ಳೆಯದಲ್ಲ.
ಘನತೆ ಹೆಚ್ಚಿಸುತ್ತವೆ ಎಂದು ಸಭೆಮಾಡುತ್ತಾ ಘನತೆಯನ್ನು ಕುಂದಿಸುವ ಕೆಲಸ ಮಾಡಿದವರಿಗೆ ಮಠದ ಬಾಗಿಲು ಮುಚ್ಚಿರುವುದು ಸರಿ ಇದೆ.
ಮಲ್ಲಿಕಾರ್ಜುನ.
India