ಡಾ. ಸಿದ್ದಯ್ಯನಿಂದ ಮಠದ ಜಮೀನು ಪರಿಹಾರದ ಹಣ ₹ 30 ಲಕ್ಷ ರೂ. ಕಬಳಿಕೆ
ಸಿರಿಗೆರೆ ಮತ್ತು ಸಿರಿಗೆರೆ ಸರ್ಕಲ್ ಬಳಿ ಸುಮಾರು 52 ಎಕರೆ ಜಮೀನನ್ನು ಈಗಿನ ಜಗದ್ಗುರುಗಳವರ ಕಾಲದಲ್ಲಿ ಮಠದಿಂದ ಖರೀದಿಸಲಾಗಿತ್ತು. ಈ ಜಮೀನುಗಳು ಶ್ರೀ ಬೃಹನ್ಮಠದ ಹಕ್ಕು ಮತ್ತು ಸ್ವಾಧೀನದಲ್ಲಿ ಇರುತ್ತವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಅಗಲೀಕರಣಕ್ಕಾಗಿ ಬೃಹನ್ಮಠಕ್ಕೆ ಸೇರಿದ ಈ ಜಮೀನುಗಳಲ್ಲಿ ಸ್ವಲ್ಪ ಭಾಗವನ್ನು ಭೂ ಸ್ವಾಧೀನ ಪಡಿಸಿಕೊಂಡಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳು ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಸುಮಾರು ₹ 30 ಲಕ್ಷ ರೂ. ಪರಿಹಾರ ನೀಡಿರುತ್ತಾರೆ.
2018 ಮತ್ತು 2020 ರಲ್ಲಿ ಬಂದ ಈ ₹ 30 ಲಕ್ಷ ರೂ. ಪರಿಹಾರ ಧನವನ್ನು ಈ ಹಿಂದೆ ಮಠದ ಕಾರ್ಯದರ್ಶಿಯಾಗಿದ್ದ ಡಾ. ಸಿದ್ದಯ್ಯನು ಶ್ರೀ ಜಗದ್ಗುರುಗಳವರಿಗೆ ಗೊತ್ತಿಲ್ಲದಂತೆ ತನ್ನ ಹೆಸರಿನಲ್ಲಿ ಬಿಡಿಸಿಕೊಂಡಿರುತ್ತಾನೆ. ಇದುವರೆಗೂ ಈ ಹಣವನ್ನು ಮಠದ ಖಾತೆಗೆ ಜಮಾ ಮಾಡಿರುವುದಿಲ್ಲ.
ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ