07-10-2024 11:49 PM
ಬಾಳಿತ್ತ ಭಗವಂತ ಬದುಕಿನಲ್ಲಿ ಬಯಸದೇ ಬರುವಂಥ ಭಾಗ್ಯಗಳನ್ನು ಬಗೆಬಗೆಯಲಿ ಕರುಣಿಸುತ್ತಾನೆ. ಪರಮಾತ್ಮ ನಿನ್ನ ಲೀಲೆ ವರ್ಣಿಸಲು ಅಸದಳ. ಆವ ಜನ್ಮದ ಸುಕೃತವೋ, ಗುರು ಹಿರಿಯರ ಆಶಿರ್ವಾದವೋ ಮೆಟ್ಟಿ ನಿಂತ ಮಣ್ಣಿನ ಪುಣ್ಯವೋ, ಜನ್ಮವಿತ್ತ ಹೆತ್ತೊಡಲುಗಳ ಹಾರೈಕೆಯೋ ಆರು ಬಲ್ಲರು.? ಕೆಲವೊಮ್ಮೆ ಅಪೂರ್ವವೂ ಅಪರೂಪವೂ ಎಣಿಸಲಾರದ ಸುಕೃತ್ಯಗಳು ಸುಗಮವಾಗಿ ಸುಫಟಿತಗೊಳ್ಳುತ್ತವೆ. ಕುಚೇಲನಿಗೆ ಕೇಶವನ ದರುಶನವಾದ ತೆರದಲಿ... ಕೃಪಾಳು, ಕರುಣಾಮೂರ್ತಿ ಶ್ರೀ ಶ್ರೀ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸನ್ನಿದಾನದ ಸುಯೋಗವು ತಾಯಿ ಮಗಳಿಗೆ ಪ್ರಾಪ್ತಿಯಾಯಿತು. ಶ್ರೀಗಳ ದಿವ್ಯ ಸಮ್ಮುಖದಲ್ಲಿ ನನ್ನ ಮಗಳು ಶಿವಾನಿ ಶೆಟ್ಟಿಗೆ ಯೋಗಾಸನ ಪ್ರದರ್ಶನ ಮಾಡುವ ಅವಕಾಶ ಒದಗಿ ಬಂತು..
ಪರಮ ಪೂಜ್ಯ ಮಹಾಸ್ವಾಮಿಗಳು ಆಶೀರ್ವಾದ, ಆಶೀರ್ವಚನ, ಅಕ್ಷತೆ ಹಾಗೂ ಹಸ್ತಾಕ್ಷರಗಳನ್ನು ನೀಡಿ ಹರಸಿದರು. ಇದಲ್ಲವೇ ಬದುಕಿನ ಸಾರ್ಥಕತೆ.? ಯಾರು ಅರಿಯದಿದ್ದರೆ ಏನು ನಮ್ಮ ಅಂತರಂಗದ ಭಾವನೆ... ಭಗವಂತನ ಬಳಿ ಬಂದಂತೆ ಯತಿವರ್ಯರು ಗುರುತಿಸಿ ನನ್ನನ್ನು ಬಳಿ ಕರೆದು ಶಿವಾನಿಯ ಬಗ್ಗೆ ಅಮೃತ ಸಮಾನ ನುಡಿಗಳ ಸಿಂಚನಗೈದರು. ಈ ಸಂದರ್ಭ, ಸನ್ನಿವೇಶ, ನಮ್ಮ ಬದುಕಿನಲ್ಲಿ ಮರೆಯಲಾರದ, ಮರೆಯಬಾರದ ಸವಿನೆನಪು.
ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ ಸಿರಿಗೆರೆ ಮಠ ಚಿತ್ರದುರ್ಗ ಜಿಲ್ಲೆ ಮತ್ತು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ತಾ//ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಯು ಉದ್ಘಾಟನೆ ಸಮಾರಂಭದಲ್ಲಿ ಸುವರ್ಣ ಅವಕಾಶ ನನ್ನ ಮಗಳ ಪಾಲಿಗೆ ಒದಗಿದ್ದಕ್ಕಾಗಿ ನಾನು ನತಮಸ್ತಕಳು....
✍️ಶ್ರೀ ಮತಿ ಸುಜಾತ ಶೆಟ್ಟಿ,ಉಡುಪಿ
ಸುಜಾತ ಶೆಟ್ಟಿ
Udupi, Karnataka,