ಭೀಮಸಮುದ್ರದತ್ತ ದಾಪುಗಾಲಿಟ್ಟ ತುಂಗಭದ್ರೆ!!

  •  
  •  
  •  
  •  
  •    Views  

ಸಾಸಿವೆಹಳ್ಳಿ  ಏತ ನೀರಾವರಿ ಯೋಜನೆಯ ಅಡಿಯಲ್ಲಿ ತುಂಗಭದ್ರೆಯ ನೀರು ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ದಿನದಂದು (ಸೆ. 24) ಅವರ ಜನ್ಮಸ್ಥಳವಾದ ಮುತ್ತುಗದೂರು ಕೆರೆಗೆ  ಪ್ರಯೋಗಾರ್ಥವಾಗಿ ಹರಿದಿದ್ದನ್ನು ಈ ಹಿಂದೆ ವರದಿ ಮಾಡಿದೆ.

ಈ ದಿನ ಕಾಗಳಗೆರೆ ಮತ್ತು ಭೀಮಸಮುದ್ರದ (2165 ಎಕರೆ ವಿಸ್ತೀರ್ಣ) ಕೆರೆಗೆ ಹಿರೇಕಂದವಾಡಿ ಹತ್ತಿರ ಪ್ರಯೋಗಾರ್ಥವಾಗಿ ನೀರು ಹರಿಸುವುದು ಯಶಸ್ವಿಯಾಗಿದೆ.

ಈ ಸಾಸಿವೆಹಳ್ಳಿ ಯೋಜನೆಯ ಅಡಿಯಲ್ಲಿ ಒಟ್ಟು 121 ಕೆರೆಗಳಿದ್ದು  ಎಲ್ಲಾ ಕೆರೆಗಳಿಗೆ   ನೀರು ಹರಿಸುವ ಯಶಸ್ವಿ ಪ್ರಯೋಗವನ್ನು ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಕಷ್ಟಪಟ್ಟು ಮಾಡುತ್ತಿದ್ದಾರೆ.  

ಅನೇಕ ಕಡೆ ಪೈಪುಗಳು ಒಡೆದಿರುವುದರಿಂದ ಅವುಗಳನ್ನು ರಿಪೇರಿ ಮಾಡುವ ಕೆಲಸ ಭರದಿಂದ ಸಾಗಿದೆ. ಕೆಲವಾರು ದಿನಗಳಲ್ಲಿ ಎಲ್ಲ 121 ಕೆರೆಗಳಿಗೂ ತುಂಗಭದ್ರೆಯ ನೀರು ಧುಮ್ಮಿಕ್ಕಲಿದೆ.  ಹೊನ್ನಾಳಿ, ಭದ್ರಾವತಿ, ಚನ್ನಗಿರಿ, ದಾವಣಗೆರೆ, ಹೊಳಲ್ಕೆರೆ ಮತ್ತು ಚಿತ್ರದುರ್ಗ ಭಾಗದ ರೈತರು ತಮ್ಮ ಕೆರೆಗೆ ಇನ್ನೂ ನೀರು ಬಂದಿಲ್ಲವೆಂದು ಅಸಮಾಧಾನಗೊಳ್ಳದೆ ತಾಳ್ಮೆಯಿಂದ ತಮ್ಮ ಕೆರೆಗೆ ನೀರು ಬರುವುದನ್ನು ನಿರೀಕ್ಷಿಸಬೇಕಾಗಿ ಪರಮಪೂಜ್ಯ ಗುರುಗಳವರು ಆಶಿಸಿದ್ದಾರೆ.

ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ ‎