ಶಿವಶರಣರ ವಚನಸಂಪುಟ ತಂತ್ರಾಂಶ ಒಂದು ಮಹತ್ಕಾರ್ಯವಾಗಿದೆ : ಶ್ರೀ ವಚನಾನಂದ ಮಹಾಸ್ವಾಮಿಗಳವರು
ಸಿರಿಗೆರೆ : ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅದರೊಳಗೆ 12ನೇ ಶತಮಾನದ ಬಸವಾದಿ ಶಿವಶರಣರ ಇಪ್ಪತ್ತೆರಡು ಸಾವಿರಕ್ಕೂ ಅಧಿಕ ವಚನಗಳನ್ನು ಅಳವಡಿಸಿದ್ದಾರೆ. ವಚನ ಸಾಹಿತ್ಯವನ್ನು ಬಹುಭಾಷೆಯಲ್ಲಿ ಅರ್ಥೈಸಿಕೊಳ್ಳಲು ಅತ್ಯಂತ ಸುಲಭ ಸಾಧ್ಯವಾಗಿಸಿದ್ದಾರೆ, ಅಷ್ಟಕ್ಕೆ ಮಾತ್ರ ಸೀಮಿತಗೊಳಿಸದೆ ಹಲವು ವಚನಗಳಿಗೆ ಸಂಗೀತ ಸಂಯೋಜನೆ ಮಾಡಿರುವುದು ಮತ್ತು ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡಬಹುದಾಗಿದೆ. ಈ ಮಹತ್ಕಾರ್ಯವು ಸಾಕ್ಷಾತ್ ಕೂಡಲಸಂಗಮದೇವನೆ ಅಹುದು ಅಹುದು ಎನ್ನುವಂತಾಗಿದೆ.
ನಿನ್ನೆ ರಾಜ್ಯಮಟ್ಟದ ಯೋಗಾಸನ ಸ್ಫರ್ಧೆಯ ಉದ್ಘಾಟನಾ ಸಮಾರಂಭಕ್ಕೆ ಹೋದಾಗ ನಮ್ಮನ್ನು ಶಾಂತಿವನಕ್ಕೆ ಆಹ್ವಾನಿಸಿ ಅಲ್ಲಿ ನಡೆದಿರುವ ಹಲವು ಅದ್ಭುತ ಕಾರ್ಯ ಯೋಜನೆಗಳನ್ನು ಕಾಲಹೆಜ್ಜೆಯಲ್ಲಿ ಸಾಗಿ ವೀಕ್ಷಿಸಿದೆವು. ತದನಂತರ ಒಟ್ಟಿಗೆ ಪಾದೋದಕ ಪ್ರಸಾದ ಸ್ವೀಕರಿಸಿದೆವು! ಜಗದ್ಗುರು ಮಹಾಸನ್ನಿಧಿಯವರ ಪಾವನ ಪದತಲದ ದಿವ್ಯಸಾನ್ನಿಧ್ಯವು ಸಾಕ್ಷಾತ್ಕಾರ ಸಾಕಾರಕ್ಕೆ "ಬಿಸಿಲು ಬೆಳದಿಂಗಳ" ಶ್ರೀಕಾರವಾಯಿತು.
- ಪರಮಪೂಜ್ಯ ಜಗದ್ಗುರು
ಶ್ರೀ ವಚನಾನಂದ ಮಹಾಸ್ವಾಮಿಗಳವರು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ
click here
https://vachana.taralabalu.in/