ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

  •  
  •  
  •  
  •  
  •    Views  

ಈ ಬಾರಿ ತರಳಬಾಳು ಹುಣ್ಣಿಮೆ ಮಹೋತ್ಸವ ಭರಮಸಾಗರದಲ್ಲಿ ನಡೆಯಲಿದೆ ಎಂದು ಶ‍್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ನಡೆಯಬೇಕಾಗಿದ್ದ ಹುಣ್ಣಿಮೆ ಕಾರ್ಯಕ್ರಮ ಬರ ಇದ್ದ ಕಾರಣಕ್ಕೆ ಮುಂದೂಡಲ್ಪಟ್ಟಿತ್ತು ಹಾಗಾಗಿ ಈ ಬಾರಿ ಪೂರ್ವ ನಿಗದಿಯಂತೆ 2025ರ ಫೆಬ್ರವರಿ 4 ರಿಂದ 12 ರವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವ ಭರಮಸಾಗರದಲ್ಲಿ ನಡೆಯಲಿದೆ.

ಮಹಾ ಮಂಟಪ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಭಾನುವಾರ ಪರಿಶೀಲಿಸಿದರು. ಬಳಿಕ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮ ಭರಮಸಾಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಿರುವ ಅಂದಾಜು 200 ಎಕರೆ ಪ್ರದೇಶವು ಹುಣ್ಣಿಮೆ ಮಹೋತ್ಸವ ಆಚರಣೆಗೆ ಸೂಕ್ತವೆಂದು ನಿರ್ಣಯಿಸಲಾಯಿತು.