ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೊಳ್ಳಲಿ : ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ: ಇಲ್ಲಿನ ಗುರುಶಾಂತ ದಾಸೋಹ ಮಂಟಪದಲ್ಲಿ ಹಮ್ಮಿಕೊಂಡ ತರಳಬಾಳು ವಿದ್ಯಾಸಂಸ್ಥೆಯ ಶಾಲಾ ಕಾಲೇಜಿನ ಮುಖ್ಯಸ್ಥರು ಮತ್ತು ಬೋಧಕ ವರ್ಗದವರಿಗೆ ಎರಡು ದಿನಗಳ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರವನ್ನು ಉದ್ದೇಶಿಸಿ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕರೆ ನೀಡಿದರು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಠ್ಯದ ಹೊರೆ ಹೊರೆಯಾಗಿದೆ. ಕಲಿತ ವಿಷಯವನ್ನು ವಿದ್ಯಾರ್ಥಿಗಳು ಕಂಠಪಾಠಗೊಳಿಸಿ ಪರೀಕ್ಷೆಗಳ ನಡೆಸಲಾಗುತ್ತಿದೆ ಇಂತಹ ಒತ್ತಡದ ಕಲಿಕೆಯ ಮಧ್ಯದಲ್ಲಿ ಪ್ರಶ್ನಿಸದ ಮನೋಭಾವದ ಮತ್ತು ಚೇತುಹಾರಿಯಾದ ಕಲಿಕೆ ಇಲ್ಲದ ಹಾಗೆ ಎದ್ದು ತೋರುತ್ತಿದೆ. ಅಲ್ಲದೆ ಸಾಮಾಜಿಕ ಮೌಲ್ಯಗಳ ಮತ್ತು ಜವಾಬ್ದಾರಿಗಳ ಅರಿವು ಮೂಡಿಸುವಲ್ಲಿ ಹಾಗೂ ಮಕ್ಕಳ ಕಲಿಕಾಸಕ್ತಿ ಮತ್ತು ಕಲಿಕಾ ಕುತೂಹಲ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ವಿಫಲವಾಗಿದೆ ಎಂದು ನುಡಿದರು.
ಮುಂದುವರೆದು ಮಾತನಾಡುತ್ತಾ ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾಭ್ಯಾಸದ ವ್ಯವಸ್ಥೆಯು ನಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆಗಿಂತಲೂ ವಿಭಿನ್ನವಾಗಿದೆ. ಅಲ್ಲಿನ ಮಕ್ಕಳಿಗೆ ಇಲ್ಲಿನ ಹಾಗೆ ಪಠ್ಯ ನಿಗದಿಗೊಳಿಸಿ ಅಭ್ಯಾಸದ ಪ್ರಶ್ನೆಗಳಿಗೆ ಉತ್ತರಿಸುವ ಪರೀಕ್ಷಾ ಪದ್ಧತಿ ಅಲ್ಲಿಲ್ಲ. ತೆರದ ಪುಸ್ತಕದ ಮಾದರಿಯಲ್ಲಿ ಅವರಿಗೆ ಈ ಹಿಂದೆ ನಿಗದಿಗೊಳ್ಳದ ಪಠ್ಯ ನೀಡಿ ಆ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಕ್ರಮ ಅಲ್ಲಿದೆ. ಅದನ್ನು ಓದಿ ಅರ್ಥೈಸಿಕೊಂಡು ತನ್ನ ಬುದ್ಧಿ ಸಾಮರ್ಥ್ಯ ಭಾಷಾ ಸಾಮರ್ಥ್ಯ ಒರೆಹಚ್ಚಿ ನೋಡಲಾಗುತ್ತದೆ ಆ ಮೂಲಕ ಅನುಭವವನ್ನು ಪರೀಕ್ಷಿಸಲಾಗುತ್ತದೆ ಇದರಿಂದ ಮಕ್ಕಳಿಗೆ ಕಂಠಪಾಠ ಮಾಡುವುದಾಗಲಿ ಆಗಲಿ ಮಾನಸಿಕ ಒತ್ತಡದ ಪ್ರಮೇಯವಾಗಲಿ ಇರುವುದಿಲ್ಲ.
ಮತ್ತೊಂದು ಪಠ್ಯವೊಂದನ್ನು ರೆಕಾರ್ಡಿನಲ್ಲಿ ಕೇಳಿಸುವುದು ಕೇಳಿಸಿದ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನ ನೀಡಿ ಉತ್ತರಿಸುವ ಪದ್ಧತಿ ಅಲ್ಲಿದೆ. ಇದರಿಂದ ಅವರ ಆಲಿಸುವಿಕೆಯ ಮಟ್ಟ ಹಾಗೂ ಅದನ್ನು ಅರ್ಥ ಗ್ರಹಿಕೆಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇಂತಹ ವಿದ್ಯಾಭ್ಯಾಸ ಕ್ರಮ ನಮ್ಮಲ್ಲಿ ಅನುಷ್ಠಾನಗೊಳಿಸಿದರೆ ಅಲ್ಲಿನ ಮಕ್ಕಳ ಹಾಗೆ ಇಲ್ಲಿನ ಮಕ್ಕಳು ಆಸಕ್ತಿ ಮತ್ತು ಉತ್ಸಾಹಿತರಾಗಿ ಕುತೂಹಲದಿಂದ ಕಲಿಯುವರು. ಮಕ್ಕಳು ಸಹಜವಾಗಿಯೇ ಪ್ರಶ್ನಿಸುವಂತಹ ಮನೋಭಾವ ಬೆಳೆಯಬೇಕು. ಇದರಿಂದ ಮಕ್ಕಳಲ್ಲಿ ಕಲಿಕೆ ದೃಢಗೊಳ್ಳುತ್ತದೆ ಉತ್ತಮ ಜ್ಞಾನಾರ್ಜನೆಯಾಗುತ್ತದೆ ನಮ್ಮ ಜನಪದ ಸಾಹಿತ್ಯದಲ್ಲಿರುವ ಹಾಗೆ ಒಗಟುಗಳನ್ನು ಹೇಳಿಸುವ, ಬಿಡಿಸುವಂತಹ ಗಾದೆಗಳನ್ನ ಅಪೂರ್ಣಗೊಳಿಸಿ ಪೂರ್ಣಗೊಳಿಸುವಂತಹ ಚಿಂತನ ಮತ್ತು ತಾರ್ಕಿಕ ಪ್ರಶ್ನೆಗಳು ರೂಪಿಸಬೇಕಾಗಿದೆ.
ತರಗತಿಯ ಕೋಣೆಯಲ್ಲಿ ಐವತ್ತು ಮಕ್ಕಳಿದ್ದಾರೆ ಎಂದು ಇಟ್ಟುಕೊಂಡರೆ ಅವರನ್ನು 5 ತಂಡಗಳನ್ನಾಗಿ ರೂಪಿಸಿ ಅವರಿಗೆ ಪಠ್ಯದ 5 ಪರಿಚ್ಛೇದಗಳನ್ನು ನೀಡಿ ಅವುಗಳನ್ನ ಅವರು ಓದಿಕೊಂಡು ಅವರೇ ಪರಸ್ಪರರು ಪ್ರಶ್ನೆಗಳನ್ನು ತಯಾರಿಸಿ ತಂಡವಾರು ಪ್ರಶ್ನೆ ಕೇಳಿ ಉತ್ತರ ಪಡೆಯುವಂತಾಗಬೇಕು. ಆ ಪ್ರಶ್ನೆಗಳು ಅನ್ವಯಿಕ ಪ್ರಶ್ನೆಗಳ ರೂಪದಲ್ಲಿರಬೇಕು. ಅದು ಅನ್ವಯಿಕ ಜ್ಞಾನವನ್ನು ಕಲಿಸುವಂತಿರಬೇಕು. ಆ ಪಠ್ಯಕ್ಕೆ ಕ್ರಿಷ್ಟಾಂಶಗಳಿಗೆ ಅಧ್ಯಾಪಕರು ಅನುಕೂಲಿಸುವಂಥವರಾಗಬೇಕೆ ಹೊರತು ಆ ಪಠ್ಯವನ್ನು ವಿವರಿಸುವಂತೆ ಆಗಬಾರದು.ಇಂತಹ ಬೋಧನಾ ವ್ಯವಸ್ಥೆ ನಮ್ಮಲ್ಲಿ ಜಾರಿಯಾಗಬೇಕೆಂದು ಸಲಹೆ ನೀಡಿದರು.
ನಾವು ವಿದೇಶಗಳಿಗೆ ಹೋದ ಹಲವು ಸಂದರ್ಭಗಳಲ್ಲಿ ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮನ್ನು ಪರಿಚಯಿಸಿಕೊಂಡು ಕೃತಜ್ಞತೆಯಿಂದ ಪ್ರಣಾಮಗಳನ್ನು ಸಲ್ಲಿಸುತ್ತಾರೆ. ಇದು ನಮಗೆ ತುಂಬಾ ಸಂತೋಷ ತರುತ್ತಿದೆ. ನಮ್ಮ ವಿದ್ಯಾ ಸಂಸ್ಥೆಯ ಬೋಧಕರು ಬೋಧನೆಯಲ್ಲಿ ಬದ್ಧತೆ ಮತ್ತು ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ. ಮುಂದೆ ನೀವು ಕಲಿಸಿದ ವಿದ್ಯಾರ್ಥಿಗಳು ನಿಮ್ಮನ್ನು ಸದಾ ಸ್ಮರಿಸುವಂತವರಾಗಬೇಕೆಂದರು.
ಕಾರ್ಯಕ್ರಮದಲ್ಲಿ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿಶೇಷ ಅಧಿಕಾರಿ ವೀರಣ್ಣ ಜತ್ತಿಯವರು ಕಾರ್ಯಾಗಾರದ ವಿವರಣೆ ನೀಡಿದರು. ಶಿಕ್ಷಕ ಎಂ.ರಂಗಣ್ಣ ನಿರೂಪಿಸಿ ವಂದಿಸಿದರು.