ಮೌಢ್ಯ ನಿವಾರಣೆ ಹೆಸರಿನಲ್ಲಿ ನಂಬಿಕೆ ನಾಶ ಸಲ್ಲದು: ತರಳಬಾಳು ಶ್ರೀ

  •  
  •  
  •  
  •  
  •    Views  

ಮಾಯಕೊಂಡ : ಮೌಢ್ಯ ಮತ್ತು ಕಂದಾಚಾರ ನಿವಾರಣೆ ನೆಪದಲ್ಲಿ ನಂಬಿಕೆ ಹಾಳುಮಾಡಬಾರದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕರೆನೀಡಿದರು.

ಸಮೀಪದ ಓಬಣ್ಣನಹಳ್ಳಿಯಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಕಂದಾಚಾರ, ಮೌಢ್ಯ ಸಮಾಜಕ್ಕೆ ಅಂಟಿದ ಒಂದು ಜಾಡ್ಯ, ಕಂದಾಚಾರ ಭಾರತದಲ್ಲಿ ಮಾತ್ರವಲ್ಲ ಇಂಗ್ಲೆಂಡ್ ಸೇರಿ ವಿಶ್ವಾದ್ಯಂತ ಇದೆ. ಕೆಲ ದೇಶಗಳಲ್ಲಿ ಇಂದಿಗೂ ಹದಿಮೂರನೇ ಅಂತಸ್ತಿನ ಮಹಲು ಕಟ್ಟಿಲ್ಲ. ನಂಬಿಕೆ ಮತ್ತು ಮೌಢ್ಯದ ಮಧ್ಯೆ ನಂಬಿಕೆಯ ತೆಳುವಾದ ಗೆರೆ ಇದೆ. ಕೆಲವರ ಮೌಢ್ಯ ಕೆಲವರಿಗೆ ನಂಬಿಕೆ. ಮೌಢ್ಯದಿಂದ ವ್ಯಕ್ತಿಗೆ ತೊಂದರೆಯಾದರೆ ಅದನ್ನು ತಿದ್ದಲು ಯತ್ನಿಸಬಹುದು. ಯಾರಿಗೂ ಅನ್ಯಾಯವಾಗದ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ, ವಿಜ್ಞಾನ, ತಂತ್ರಜ್ಞಾನ, ಬುದ್ಧಿವಂತಿಕೆಗಳಿಗಿಂತ ನಂಬಿಕೆಯೇ ದೊಡ್ಡದು ಎಂದು ಪ್ರತಿಪಾದಿಸಿದರು.

ಎಲ್ಲರಿಗೂ ಬಸವಾದಿ ಶರಣರ ಚಿಂತನೆ ತಲುಪಿಸುವ ಹಿರಿಯ ಗುರುಗಳ ಆಸೆಯಂತೆ ವೆಬ್ ಅಪ್ಲಿಕೇಶನ್ ತೆರೆದಿದ್ದೇವೆ. Link: https://vachana.taralabalu.in/ ಎಲ್ಲಾ ಶರಣರ ವಚನ ಒಂದೆಡೆ ಸಿಗುತ್ತಿವೆ. ತಾಯಂದಿರು ಮನೆಯಲ್ಲಿ ಶರಣರ ವಚನ ಕಲಿಸಬೇಕು ಎಂದರು. 

ಒಂಭತ್ತು ಶತಮಾನದ ಅವಧಿಯಲ್ಲಿ ಕಳಾಹೀನವಾದ ಬಸವಜ್ಯೋತಿಯನ್ನುಇಂಥ ಕಾರ್ಯಕ್ರಮಗಳು ಪುನಾ ಬೆಳಗಿಸುತ್ತವೆ. ದೀಪ ಹಚ್ಚುವುದೂ ಎಣ್ಣೆಯ ಅಪವ್ಯಯ, ಕಂದಾಚಾರ ಎಂದೂ ಟೀಕಿಸಿದವರೂ ಇದ್ದಾರೆ, ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯುವುದೇ ದೀಪ ಹಚ್ಚುವ ಸಂಕೇತ ಎಂದರು.

ಚರಂತೇಶ್ವರ ಮಠದ ಶರಣಬಸವದೇವರು ಮಾತನಾಡಿ, ಹಳ್ಳಿಗಳಲ್ಲಿ ಬಸವಣ್ಣನ ಪ್ರತಿಮೆಯಾಗಬೇಕು ಎಂಬುದು ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಕನಸು. ಅವರು ಮರುಳುಸಿದ್ದರುಹಾಗೂ ಬಸವಣ್ಣನ ಆದರ್ಶದಂತಯೇ ನಡೆದವರು. ಬಸವಣ್ಣ ಎಲ್ಲಾ ಕಾಲದಲ್ಲಿಯೂ ಸಲ್ಲುವ ಸಿದ್ಧಾಂತ ಜಗತ್ತಿಗೆ ಸಾರಿದವರು. ಕೇವಲ ಮನೆಗೇ, ಕೆಲಸಕ್ಕೇ ಮೀಸಲಾದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದವರು ಬಸವಣ್ಣ, ತರಳಬಾಳು ಶ್ರೀ 22ಸಾವಿರ ವಚನಗಳನ್ನು ಅಂತರ್ಜಾಲಕ್ಕೆ ಅಳವಡಿಸಿದ್ದಾರೆ. 

ಜಗತ್ತಿಗೆ ಮೊದಲ ಸಂವಿಧಾನ ನೀಡದರು ಬಸವಣ್ಣನ ವಚನಗಳೇ ಹೊರತು ಇಂಗ್ಲೆಂಡಿನ ಮ್ಯಾಗ್ರಾ ಕಾರ್ಟ್ ಅಲ್ಲ. ಇಂದು ಎಲ್ಲಡೆ ಬಸವ ತತ್ತ್ವರಾರಾಜಿಸುತ್ತಿವೆ. ಸ್ವಾಮಿಗಳು ಹೇಗೆ ಬದುಕಬೇಕು ಎಂಬುದನ್ನು ಸಿರಿಗೆರೆಯ ಹಿರಿಯ ಜಗದ್ಗುರುಗಳ ಬದುಕನ್ನು ಓದಿ ತಿಳಿಯಬೇಕು. ಅಂಗಬೇಧ, ವರ್ಗಬೇದ, ವರ್ಣಬೇಧ ಮಾಡಿದವರು ಪುರೋಹಿತಷಾಹಿಗಳು, ಗುಡ್ಡಕ್ಕೆ ಹೋಗದೇ, ಗಡ್ಡಬಿಡದೇ ಸಂಸಾರದಲ್ಲಿಯೇ ಇದ್ದು ಮೋಕ್ಷಸಾಧನೆ ಮಾಡಬಹುದು ಎಂಬುದನ್ನು ತೋರಿಸಿದರು. 

ಗ್ರಾಮಕ್ಕೆ ಆಗಮಿಸಿದ ಶ್ರೀಗಳಿಗೆ ಭಕ್ತರು ನಂದಿಕೋಲು ಕುಣಿತ, ನಾಸಿಕ್ ಡೋಲು, ಜಯಘೋಷದೊಂದಿಗೆ ಸ್ವಾಗತಿಸಿದರು. ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಂದ ವೇದಿಕೆವರೆಗೂ ಪುಷ್ಪವೃಷ್ಠಿಗರೆದು ಭಕ್ತಿ ಮೆರೆದರು. ಬಸವ ಕಲಾ ತಂಡದವರು ವಚನ ಗಾಯನ ಮಾಡಿ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿ, ವಂದಿಸಿದರು. ಗ್ರಾಮದ ಮುಖಂಡ ಓಡಿ, ಸದಾಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಎಲ್ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನಾನಾಯ್ಕನಹಳ್ಳಿ ಮುರುಗೇಂದ್ರಪ್ಪ, ರೈತ ಮುಖಂಡ ಹೊನ್ನೂರು ಮುನಿಯಪ್ಪ, ಮುಖಂಡರಾದ ಮಾಜಿ ಉಪಾಸಯಕ್ಷ ಚಂದ್ರಶೇಖರ್, ಡಿ.ಕೆ. ರಮೇಶ್, ಪ್ರಸನ್ನಕುಮಾರ್,ಓ.ಸಿ. ಮಂಜುನಾಥ, ಓ.ಬಿ. ಸಿದ್ದೇಶ್, ಕೆ.ಜಿ. ಶಿವಕುಮಾರ್, ಆಶೋಕ್, ಸುರೇಶ್, ರುದ್ರೇಶ್ ಇದ್ದರು.