ಕೆರೆಯ ನೀರು ಉಳಿಸಿದ ಶ್ರೀ ಜಗದ್ಗುರುಗಳವರಿಗೆ ರಾಮನಗರದ ಕೃಷಿಕರಿಂದ ಭಾವೈಕ್ಯತೆಯ ಭಕ್ತಿ ಸಮರ್ಪಣೆ

  •  
  •  
  •  
  •  
  •    Views  

ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು  ಹರಪನಹಳ್ಳಿ ತಾಲ್ಲೂಕಿನ ವ್ಯಾಪ್ತಿಯ  ಏತ ನೀರಾವರಿ ಯೋಜನೆಯಡಿ ನೀರು ತುಂಬಿಸುವ ಕೆರೆಗಳು ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರ ಅಪೇಕ್ಷೆಯಂತೆ ಬಾಗೀನ ಸಮರ್ಪಿಸಲು ಶ್ರೀ ಜಗದ್ಗುರುಗಳವರು ಶನಿವಾರ ದಾವಣಗೆರೆಯಿಂದ ಉಚ್ಚಂಗಿದುರ್ಗ ಮಾರ್ಗದಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಪ್ರವೇಶ ಮಾಡುವಾಗ ಮೊದಲಿಗೆ ಸಿಗುವ ಗ್ರಾಮವೇ ರಾಮನಗರ. ಹೆಸರಿಗೆ ರಾಮನಗರ ಆಗಿದ್ದರೂ, ಗ್ರಾಮ ಪೂರ್ತಿ ಮುಸ್ಲಿಂ ಧರ್ಮೀಯರು ನೆಲೆಸಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡು ಇರುವ ಕೆರೆ ಭರ್ತಿ ಆಗಿರುವುದರಿಂದ ಮತ್ತು ಇತ್ತೀಚೆಗೆ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡು ನೀರು ವ್ಯರ್ಥ ಆಗುತ್ತಿರುವುದನ್ನು ಶ್ರೀ ಜಗದ್ಗುರುಗಳವರ  ಊರಿನ ಮುಖಂಡರು ಗಮನಕ್ಕೆ ತಂದಾಗ, ಶ್ರೀ ಜಗದ್ಗುರುಗಳವರ ಮಾರ್ಗದರ್ಶನ ಮೇರೆಗೆ ಸಮರೋಪಾದಿಯಲ್ಲಿ ಕೆಲಸ ಕೈಗೊಳ್ಳಲಾಯಿತು.

ಶ್ರೀ ಜಗದ್ಗುರುಗಳವರು ಈ ಮಾರ್ಗದಲ್ಲಿ ದಯಮಾಡಿಸುವುದನ್ನು ಅರಿತ ಗ್ರಾಮಸ್ಥರು ಪೂಜ್ಯರನ್ನು ತಮ್ಮ ಗ್ರಾಮಕ್ಕೆ ಆಗಮಿಸುವಂತೆ ಬಿನ್ನವಿಸಿಕೊಂಡು, ಕರೆತಂದು ಭಕ್ತಿ ಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿದರು.