09-11-2024 11:39 AM
ಸರ್ವಜ್ಞನ ತ್ರಿಪದಿಗಳು ಮತ್ತು ಡಿವಿಜಿಯವರ ಮಂಕುತಿಮ್ಮನ ಕಗ್ಗಗಳನ್ನು ತಂತ್ರಾಂಶದ ಮೂಲಕ ಓದುಗರ ಅಂಗೈಗೆ ತಲುಪುವಂತೆ ಮಾಡಿದ ಕಾರ್ಯ ಶ್ಲಾಘನೀಯ. ಯಾರೂ ಯೋಚನೆಯನ್ನೂ ಮಾಡದ ಕೆಲಸವನ್ನು ಶ್ರೀಮಠ ಮಾಡಿರುವುದು ಅವಿಸ್ಮರಣೀಯ. ಪುರಾತನ ಹಸ್ತಪ್ರತಿಗಳು, ತಾಳೆಗರಿಗಳು ಮತ್ತು ದಶಕಗಳ ಹಿಂದಿನ ಬರಹಗಳು ಗೆದ್ದಲು ಹಿಡಿದು ಹಾಳಾಗಬಹುದು. ಆದರೆ ತಂತ್ರಾಂಶವು ಮಾತ್ರ ಯುಗಯುಗಳವರೆಗೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಇಂತಹ ಅತ್ಯಪರೂಪದ ಕೆಲಸವನ್ನು ಮಾಡಿ ಓದುಗರ ಉಪಯೋಗಕ್ಕೆ ಸಮಯೋಚಿತವಾಗಿ ದೊರಕಿಸಿಕೊಟ್ಟ ಪೂಜ್ಯರ ಕಾರ್ಯಕ್ಕೆ ಕೃತಜ್ಞನಾಗಿದ್ದೇನೆ. ಕನ್ನಡ ಸಂಸ್ಕೃತಿ, ನಾಡು-ನುಡಿ, ಸಾಹಿತ್ಯ, ಸಾಮಾಜಿಕ ಸುಧಾರಣೆ, ರಂಗಭೂಮಿ, ಕಲೆ, ಜನಪದ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕೃಷಿ, ವಿಜ್ಞಾನ ಹೀಗೆ ಹತ್ತಾರು ಕ್ಷೇತ್ರಗಳಿಗೆ ನಮ್ಮ ಶ್ರೀಮಠ ಹಾಗೂ ನಮ್ಮ ಗುರುಪರಂಪರೆಯ ಕೊಡುಗೆ ಅತ್ಯಪೂರ್ವ ಮತ್ತು ನಿರ್ವಿವಾದದ ಸಂಗತಿ.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡವು ಗಲ್ಲಿ ಗಲ್ಲಿಗೆ
ಸಿರಿಗನ್ನಡವೇ ಚೆಂದದ ಮಲ್ಲಿಗೆ
ಸಿರಿಗನ್ನಡವಿಲ್ಲದ ಜೀವನ ಇನ್ನೆಲ್ಲಿಗೆ?
ಕನ್ನಡ ಮನಸ್ಸುಗಳಿಗೆ ಶ್ರೇಯಸ್ಸಾಗಲಿ ಎಂದು ಮನದಾಳದಿಂದ ಹಾರೈಸುವೆ.
ಪ್ರಸನ್ನ ಯು
ಸಿರಿಗೆರೆ