12-11-2024 06:42 AM
ತರಳಬಾಳು ನುಡಿ ಹಬ್ಬ ರಾಜ್ಯದಲ್ಲಿಯೇ ವಿಶೇಷ ರಾಜ್ಯೋತ್ಸವ ಆರಣೆಯಾಗಿದೆ. ನಾಡು, ನುಡಿ ಕಾರ್ಯಕ್ರಮಗಳು ಹೇಗಿರಬೇಕು ಎನ್ನುವುದಕ್ಕೆ ಸಿರಿಗೆರೆಯ ನುಡಿಹಬ್ಬ ಮಾದರಿ. ಇಲ್ಲಿ ಸಮಯ ಹಾಳು ಮಾಡುವ ರಾಜಕಾರಣದ ಸೊಂಕಿಲ್ಲ, ಅಬ್ಬರದ ಡಿಜೆ ಸದ್ದಿಲ್ಲ. ಇಲ್ಲಿನ ನುಡಿ ಹಬ್ಬ ನಾಡು,,ನುಡಿ,ಧರ್ಮ, ಕಲೆ,ಸಂಸ್ಕ್ರತಿಗಳ ಸಂಗಮ. ಹಬ್ಬದಲ್ಲಿ ನೆತ್ತಿಯ ಜ್ಞಾನದ ಜೊತೆಗೆ ಹೊಟ್ಟೆಗೂ ಸಂತೃಪ್ತ ದಾಸೋಹ. ರಾಜ್ಯದ ಮೂಲೆ ಮೂಲೆಗಳಿಂದ ಹೆಕ್ಕಿ ತಂದ ವಿದ್ವಾಂಸರು,ಸಾಹಿತ್ಯ ಮೇರುಗಳು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಕನ್ನಡಾಭಿಮಾನಿಗಳೇ ಒಮ್ಮೆ ಬನ್ನಿ ನುಡಿ ಹಬ್ಬಕೆ
ಕೆ.ಎಂ. ಶಿವಸ್ವಾಮಿ
Nayakanahatty