ಮಠದಲ್ಲಿರುವ ತಾಳೆಗರಿಗಳ ಸಂರಕ್ಷಣೆ : ತರಳಬಾಳು ಶ್ರೀ ಒಲವು

  •  
  •  
  •  
  •  
  •    Views  

ಫ್ರಾನ್ಸ್ ದೇಶದ ಗ್ರಂಥಾಲಯದ ಸೂಚಿಯಲ್ಲಿ "ಕೂಡಲಸಂಗಮದೇವಾ" ತಮಿಳು ಭಾಷೆಯಲ್ಲಿದ್ದ ಗುರು ಬಸವಣ್ಣನವರ ವಚನಗಳ ತಾಡೋಲೆ ಕಟ್ಟಿನ ವಿವರವಿರುವ ಸೂಚಿ ಕಣ್ಣಿಗೆ ಬಿದ್ದ ಮೇಲೆ  ಆ ಮೂಲ ತಾಡೋಲೆ ಹಸ್ತಪ್ರತಿಯನ್ನು ನೋಡಿ, ಭಾರತ ದೇಶಕ್ಕೆ ವಾಪಸ್ಸು ಬಂದ ಮೇಲೆ, ತಮಿಳು ಭಾಷೆ ಹಾಗೂ ತಮಿಳು ಲಿಪಿಯನ್ನು ಕಲಿತು, ಮತ್ತೆ ಪ್ರಾನ್ಸ್ ಗೆ ಹೋಗಿ, ಆ ಹಸ್ತಪ್ರತಿಯಲ್ಲಿದ್ದ ಗುರು ಬಸವಣ್ಣ ವಚನಗಳನ್ನು ತಮಿಳು ಭಾಷೆಯಲ್ಲಿಯೇ ಪ್ರತಿಮಾಡಿ, ಆ ವಚನಗಳನ್ನು ತಮಿಳು ಭಾಷೆಯಲ್ಲಿ ಪ್ರಕಟ ಮಾಡಿರುವುದು ಒಂದು ಅದ್ಭುತ ಹಾಗೂ ವಿಸ್ಮಯ.

ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಶರಣ ಸಾಹಿತ್ಯ ಪ್ರಚಾರಕ್ಕೆ ಅಳವಸಿಕೊಂಡು, ಜಾತಿ-ಧರ್ಮ ಬೇಧವಿಲ್ಲದೆ, ಎಲ್ಲಾ ಶರಣರ ವಚನಗಳನ್ನು ನಾನಾ ಭಾಷೆಗಳಲ್ಲಿ ಭಾಷಾಂತರಿಸಿರುವ ಶರಣ ಸಾಹಿತ್ಯದ ಮಹಾವಿಜ್ಞಾನಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು.

ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನು ಕ್ಷಣದಲ್ಲಿ ಅರ್ಥಮಾಡಿಕೊಂಡು, ಆ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ಮಾಡುತ್ತಿರುವ ಮುಂದಿನ ಶರಣ ಸಾಹಿತ್ಯಕ್ಕೆ ತರಳುಬಾಳು ಮಠ ಅಧಿಕೃತವಾಗಬಹುದು.

ಕಳೆದ ತಿಂಗಳು ಪೂಜ್ಯರ ಆಹ್ವಾನದ ಮೇರೆಗೆ ನಾನು ಸಿರಿಗೆರೆಯಲ್ಲಿ ಪೂಜ್ಯರನ್ನು ಭೇಟಿ ಮಾಡಿದ್ದೆ. ಅವರೊಂದಿಗೆ ಚರ್ಚೆಯ ವಿಶ್ವಪರ್ಯಾಟನೆ ವಿಶ್ವದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇದ್ದ ಅನುಭವವಾಯಿತ್ತು. ನನ್ನ ಬಗ್ಗೆ ಪೂಜ್ಯರಿಗೆ ಪರಿಚಯ ಮಾಡಿಕೊಟ್ಟ  ಡಾ ಮಹಾಂತೇಶ್ ಬಿರಾದಾರ್ ಸಾರ್ ಅವರಿಗೆ ಧನ್ಯವಾದಗಳು.

ಸಿರಿಗೆರೆ ಮಠದಲ್ಲಿರುವ ತಾಡೋಲೆ ಸ್ಕ್ಯಾನಿಂಗ್ ಗಾಗಿ ಪೂಜ್ಯರೇ ಸ್ಕ್ಯಾನರ್ ಗಳನ್ನು ಖರೀದಿ ಮಾಡಿರುವುದು ಸಂತೋಷದ ವಿಷಯ. 13 ವರ್ಷದ ನನ್ನ ಪ್ರತಿಯೊಂದು ಅನುಭವವನ್ನು ಪೂಜ್ಯರು ಕ್ಷಣದಲ್ಲಿ ಅರ್ಥಮಾಡಿಕೊಂಡಿದ್ದೂ ಸಂತೋಷದ ವಿಷಯ.

ಧಾರವಾಡದ ಕರ್ನಾಟಕ ಯುನಿವರ್ಸಿಟಿಯಲ್ಲಿ ತಾಡೋಲೆ ಸ್ಕ್ಯಾನಿಂಗ್ ಕಾರ್ಯ ನಡೆಯುತ್ತಿದ್ದೂ, ಗುಲ್ಬರ್ಗ ಯುನಿವರ್ಸಿಟಿಯಲ್ಲಿ ತಾಡೋಲೆ ಗರಿಗಳ ಮಾತ್ರ ಸ್ಕ್ಯಾನಿಂಗ್ ಮಾಡಲಾಗಿತ್ತು. ಡಾ.ವೀರಣ್ಣ ರಾಜೂರ ಅವರ ಸಲಹೆಯಂತೆ ಕಾಗದ ಹಸ್ತಪ್ರತಿಗಳನ್ನು ಸ್ಕ್ಯಾನಿಂಗ್ ಮಾಡಲಾಗುವುದು. ಧಾರವಾಡ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಅಹ್ಮದಾಬಾದ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಡೋಲೆ ಸ್ಕ್ಯಾನಿಂಗ್ ಗೆ ಈ ತಿಂಗಳಲ್ಲಿಯೇ ಪ್ರಾರಂಭಮಾಡಲಾಗುವುದು. ತಾಡೋಲೆ ಸ್ಕ್ಯಾನಿಂಗ್ ಗಾಗಿ 20 ಜನರನ್ನು (full time) ನೇಮಕ ಮಾಡಲಾಗುವುದು. 

ಸಂಶೋಧನೆ ಕೃತಿಗಳನ್ನು ಪ್ರಕಟ ಮಾಡುವುದಕ್ಕೆ ಆಯಾ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚಿಸಿ ಪರಿಷ್ಕರಣೆ ಮಾಡಿ ಪ್ರಕಟ ಮಾಡಲಾಗುವುದು. ತಾಡೋಲೆ ಕಾರ್ಯದಲ್ಲಿ ಸೇವೆ ಮಾಡುವವರು ಹಾಗೂ ಈ ಕಾರ್ಯಕ್ಕೆ ಎಲ್ಲಾರ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯವಿದೆ. 

ಅಶೋಕ ದೊಮ್ಮಲೂರು
ಶಾಸನ ಮತ್ತು ಹಸ್ತಪ್ರತಿ ಸಂಶೋಧಕರು
ಬೆಂಗಳೂರು.
9886867185