ಮಾನಸಿಕ ಸಮಸ್ಯೆಗೆ ಪುಸ್ತಕಗಳಲ್ಲಿ ಪರಿಹಾರವಿದೆ : ಸಿರಿಗೆರೆ ಶ್ರೀಗಳವರು

ದಿನಾಂಕ:13-12-2024
ಸ್ಥಳ: ದಾವಣಗೆರೆ
ಜನರಲ್ಲಿ ಓದುವ ಸಂಸ್ಕೃತಿ ಬಿತ್ತುತ್ತಾ ಬಂದ ನಾಡಿನ ಪ್ರತಿಷ್ಟಿತ, ದೇಶದ ಅತೀ ದೊಡ್ಡ ಪುಸ್ತಕ ಭಂಡಾರವಾದ ಸಪ್ನ ಬುಕ್ ಹೌಸ್ ನ ದಾವಣಗೆರೆ ಶಾಖೆ ನಗರದ ಪಿಜೆ ಬಡಾವಣೆಯ ಅಕ್ಕಮಹಾದೇವಿ ರಸ್ತೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ದಯಪಾಲಿಸಿದರು.
ಪ್ರಸಿದ್ಧ ವಿದ್ವಾಂಸ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿ ಬಹು ಅರ್ಥಪೂರ್ಣವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ದೀಪಾರಾಧನೆ ಮಾಡಿದರು. ದಾವಿವಿ ಕುಲಪತಿ ಪ್ರೊ.ಬಿ.ವಿ.ಕುಂಬಾರ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.