ಡಿ.19 : ತರಳಬಾಳು ಹುಣ್ಣಿಮೆ ಪೂರ್ವಭಾವಿ ಸಭೆ

ಪರಮಪೂಜ್ಯ ಶ್ರೀ ಜಗದ್ಗುರುಗಳವರು ಇದೇ ತಿಂಗಳು 21 ರಿಂದ ಹತ್ತು ದಿನಗಳ ಕಾಲ ಉತ್ತರ ಭಾರತದಲ್ಲಿರುವ ಕಾರ್ಯಕ್ರಮಗಳಿಗೆ ದಯಮಾಡಿಸಲಿದ್ದಾರೆ. ಆದಕಾರಣ ಹೊರಡುವ ಮುನ್ನ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಂಬಂಧಿಸಿದಂತೆ ತುರ್ತಾಗಿ ಕಾರ್ಯಗಳನ್ನು ನಿರ್ವಹಿಸಲು ಈ ಕೆಳಕಂಡ ಸಮಿತಿಗಳನ್ನು ರಚಿಸಬೇಕಾಗಿದೆ.
1. ಮಹಾ ಮಂಟಪ ನಿರ್ಮಾಣ ಸಮಿತಿ
2. ಅತಿಥಿ ಸತ್ಕಾರ ಸಮಿತಿ
3. ವಸತಿ ಸಮಿತಿ
4. ವಾಹನ ನಿಲುಗಡೆ ಸಮಿತಿ
5. ನೀರು ಸರಬರಾಜು ಸಮಿತಿ
6. ವಿದ್ಯುತ್ ಸರಬರಾಜು ಸಮಿತಿ
7. ದಾಸೋಹ ಸಮಿತಿ
8. ವಸ್ತು ಪ್ರದರ್ಶನ ಸಮಿತಿ
9. ಲೆಕ್ಕಪತ್ರ ಪರಿಶೀಲನಾ ಸಮಿತಿ
10. ಕ್ರೀಡಾಸ್ಪರ್ಧೆ ಸಮಿತಿ
11. ಸಾಂಸ್ಕೃತಿಕ ಸ್ಪರ್ಧೆ ಸಮಿತಿ
12. ಸ್ವಚ್ಛತಾ ಸಮಿತಿ
13. ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಸಮಿತಿ
14. ಜಾಹೀರಾತು ಸಮಿತಿ
15. ಸ್ವಯಂಸೇವಕರ ಸಮಿತಿ
ಮೇಲ್ಕಂಡ ಸಮಿತಿಗಳನ್ನು ರಚಿಸಲು ಶ್ರೀ ತರಳಬಾಳು ಜಗದ್ಗುರುಗಳವರ ದಿವ್ಯ ಸಮ್ಮುಖದಲ್ಲಿ ದಿನಾಂಕ 19-12-2024 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಸಭೆಯನ್ನು ಕರೆಯಲಾಗಿದೆ. ಆ ದಿನ ಸದ್ಭಕ್ತರೆಲ್ಲರೂ ತಪ್ಪದೇ ಹಾಜರಾಗಬೇಕಾಗಿ ಸೂಚಿಸಿದೆ.
ಈ ಹಿಂದೆ ನ್ಯಾಯ ಪೀಠದಲ್ಲಿ ಸಭೆ ಕರೆದಾಗ ಭರಮಸಾಗರದ ಸುತ್ತಮುತ್ತಲಿನ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಎಲ್ಲಾ ಜನಾಂಗದವರನ್ನು ಒಳಗೊಂಡ 21 ಜನರಿಗೆ ಮೀರದಂತೆ ಒಂದು ಸಮಿತಿಯನ್ನು ರಚಿಸಿಕೊಂಡು ಬರಬೇಕೆಂದು ತೀರ್ಮಾನವಾಗಿತ್ತು. ಅದಕ್ಕಾಗಿ ಒಂದು ಫಾರಂ ಅನ್ನು ಕೊಡಲಾಗಿತ್ತು. ಅದನ್ನು ಸಂಬಂಧಪಟ್ಟ ಗ್ರಾಮಸ್ಥರು ಭರ್ತಿ ಮಾಡಿಕೊಂಡು ಈ ಸಭೆಗೆ ಬಂದಾಗ ಸಲ್ಲಿಸುವುದು.
ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ