ಚಲನಚಿತ್ರ ನಟ ಡಾಲಿ ಧನಂಜಯ್ ರವರಿಂದ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಮದುವೆ ಆಮಂತ್ರಣ

  •  
  •  
  •  
  •  
  •    Views  

ಸ್ಥಳ: ಬೆಂಗಳೂರು
ದಿನಾಂಕ:21-12-2024

ಮದುವೆ ಆಮಂತ್ರಣವಿತ್ತು, ಶ್ರೀ ತರಳಬಾಳು ಜಗದ್ಗುರುಗಳವರ  ಆಶೀರ್ವಾದ ಪಡೆದ ಡಾಲಿ ಧನಂಜಯ್-ಧನ್ಯತಾ.

ಬೆಂಗಳೂರಿನ ಆರ್.ಟಿ ನಗರದ ತರಳಬಾಳು ಕೇಂದ್ರದಲ್ಲಿ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಖ್ಯಾತ ನಟ ಡಾಲಿ ಧನಂಜಯ್ ಭಾವಿ ತಮ್ಮ ಪತ್ನಿ ವೈದ್ಯೆ ಧನ್ಯತಾ ರವರೊಂದಿಗೆ ವಿವಾಹ ಕಾರ್ಯಕ್ರಮಕ್ಕೆ ದಯಮಾಡಿಸುವಂತೆ ಭಿನ್ನವಿಸಿ, ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದರು.

ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿನ ಕೈಬರಹದ ಫಾಂಟ್ ನಲ್ಲಿನ ಆಮಂತ್ರಣ ಪತ್ರಿಕೆಯ ವಿನ್ಯಾಸ ನೋಡಿ ಸಂತೋಷಪಟ್ಟ‌ ಶ್ರೀ ಜಗದ್ಗುರುಗಳವರು ಈಗೆಲ್ಲ ಬಗೆಬಗೆಯ ಮದುವೆ ಆಮಂತ್ರಣ ಪತ್ರಿಕೆಗಳು ಬಂದಿವೆ. ಎಲ್ಇಡಿ ಹೊಂದಿರುವ ಆಮಂತ್ರಣ ಪತ್ರಿಕೆಗಳು ಸಹ ಮಾರುಕಟ್ಟೆಯಲ್ಲಿವೆ. ಪ್ರತಿ ಆಮಂತ್ರಣ ಪತ್ರಿಕೆ ಒಂದಕ್ಕೆ ಹತ್ತಾರು ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ  ಈ ರೀತಿಯ ದುಬಾರಿ ಆಮಂತ್ರಣ ಪತ್ರಿಕೆ ಮಾಡಿಸುವುದು ಹೆಚ್ಚಿದೆ. ಡಾಲಿ ಧನಂಜಯ್-ಧನ್ಯತಾ ಬಹಳ ಸರಳವಾದ, ಕನ್ನಡತದಿಂದ ಕೂಡಿದ, ಸುಂದರವಾದ  ಆಮಂತ್ರಣ ಪತ್ರಿಕೆಯ ಆಯ್ಕೆ ನೋಡಿದರೆ 70-80ರ ದಶಕಕ್ಕೆ ಹೋದಂತೆ ಭಾಸವಾಗುತ್ತದೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 16ರ ಭಾನುವಾರ ಬೆಳಿಗ್ಗೆ 8:30ಕ್ಕೆ ನಡೆಯಲಿದೆ. ಆರತಕ್ಷತೆ ಅದೇ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 15ರ ಸಂಜೆ 6 ಗಂಟೆಗೆ ನಡೆಯಲಿದೆ.