24-12-2024 10:42 AM
ಆತ್ಮೀಯರು,ಹಿರಿಯರಾದ ಡಾ.ವಾಮದೇವಪ್ಪ ಸರ್ ಗೆ ಸಿಕ್ಕ ಪ್ರಶಸ್ಥಿ ಮತ್ತು ಗೌರವ ನನಗೆ ಸಿಕ್ಕಷ್ಟು ಸಂತಸವಾಯಿತು. ಅವರಲ್ಲಿಯ ಸರಳತೆ,ಸಜ್ಜನಿಕೆ,ಅಪಾರ ವಿದ್ವತ್,ನಯವಾದನಡೆ,ಪ್ರತಿಭೆ-ಪರಿಶ್ರಮಗಳ ಸಮ್ಮೀಲನದ ವ್ಯಕ್ತಿತ್ವ.ಸದಾ ಸತ್ಯಪಥಿಕರು.ಬದ್ದತೆಯಿಂದ ಬದುಕಿನ ವಾಸ್ತವತೆ ಅರಿತವರು.ವಿದ್ಯಾರ್ಥಿಗಳ ಸಾಧನೆಯಲ್ಲಿ ತಮ್ಮ ಸಾಧನೆಯನ್ನು ಕಂಡುಕೊಂಡ ಆದರ್ಶ ಪ್ರಾಧ್ಯಾಪಕ,ಸಂಶೋಧಕ,ಶಿಸ್ತಿನ ವ್ಯಕ್ತಿತ್ವ.ತಮ್ಮ ಪ್ರಮಾಣಿಕತೆ,ಸರಳತೆಯಿಂದಾಗಿ ಎಲ್ಲರ ಹೃದಯ ಗೆದ್ದವರು.ಅಪರೂಪದ ಸಜ್ಜನಿಕೆಯ ಸಹೃದಯಿ ಡಾ.ವಾಮದೇವಪ್ಪ ಸರ್ ಗೆ ಈ ಶುಭ ಸಂದರ್ಭದಲ್ಲಿ ಗೌರವಿಸುತ್ತೇನೆ.ಅಭಿನಂದಿಸುತ್ತೇನೆ.ಶುಭಾಶಯಗಳು ಸರ್.
ಡಾ.ಗಂಗಾಧರಯ್ಯ ಹಿರೇಮಠ.
ವಿಶ್ರಾಂತ ಪ್ರಾಧ್ಯಾಪಕ,ದಾವಣಗೆರೆ.
ಡಾ.ಗಂಗಾಧರಯ್ಯ ಹಿರೇಮಠ.
ದಾವಣಗೆರೆ