ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಪಿಲಿಯೋಜ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರು ತೀವ್ರ ಸಂತಾಪ
ಪ್ರೆಂಚ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪಿಯರ್ರೆ ಪಿಲಿಯೋಜ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಡಾ. ಪಿಲಿಯೋಜ ಅವರೊಂದಿಗಿನ ದೀರ್ಘ ಕಾಲದ ನೆನಪುಗಳನ್ನು ಶ್ರೀಗಳು ಸ್ಮರಿಸಿದ್ದಾರೆ.
೭೦ರ ದಶಕದಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾಗೂ ಮೂರನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಡಾ.ಪಿಯರ್ರೆ ಪಿಲಿಯೋಜ ಅವರ ತಂದೆ ಡಾ.ಜಾನ್ ಪಿಲಿಯೋಜ ಅವರ ಪರಿಚಯ ನಮಗಾಗಿತ್ತು. ನಮ್ಮ ಸೊಸೆ ಡಾ.ವಸುಂಧರಾ ಕರ್ನಾಟಕದವರು ಎಂದು ಹೇಳಿ ಮಗ ಮತ್ತು ಸೊಸೆಯನ್ನು ನಮಗೆ ಪರಿಚಯಿಸಿದ್ದರು. ಅಂದಿನಿಂದ ಒಡನಾಡಿಗಳಾಗಿದ್ದ ಡಾ. ಪಿಲಿಯೋಜ ದಂಪತಿಗಳು ಹಂಪೆಯ ಇತಿಹಾಸ ಸಂಶೋಧನೆ ಮತ್ತು ಸಂಸ್ಕೃತ ಭಾಷೆಗೆ ಬಹುವಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ವ್ಯಾಕರಣ ಗ್ರಂಥ, ಪಾಣಿನಿಯ ಅಷ್ಟಾಧ್ಯಯಿಗೆ ಪತಂಜಲಿ ಮುನಿ ಬರೆದಿರುವ ವ್ಯಾಖ್ಯಾನವನ್ನು ಡಾ. ಪಿಲಿಯೋಜ ಫ್ರೆಂಚ್ ಭಾಷೆಗೆ ಅನುವಾದಿಸಿದ್ದಾರೆ. ಪ್ಯಾರಿಸ್ ಗ್ರಂಥಾಲಯದಲ್ಲಿ ನಮಗೆ ದೊರೆತ ಬಸವಣ್ಣನವರ ವಚನಗಳ ತಮಿಳು ಅನುವಾದ ಹಸ್ತಪ್ರತಿ ಸಂಶೋಧನೆಯ ಸಂದರ್ಭದಲ್ಲಿ ನಮಗೆ ನೆರವು ನೀಡಿದ್ದರು ಎಂದು ಶ್ರೀಗಳು ಸ್ಮರಿಸಿದರು. ಎರಡೂವರೆ ದಶಕಗಳ ಹಿಂದೆ ನಾವು ಪಾಣಿನಿಯ ಅಷ್ಟಾಧ್ಯಾಯಿಯನ್ನು ಕಂಪ್ಯೂಟರ್ ತಂತ್ರಾಂಶ ರೂಪಿಸುವಾಗ ಸಹ ಅಪೂರ್ವ ಸಲಹೆಗಳನ್ನು ನೀಡಿದ್ದರು. ಮೈಸೂರಿನಿಂದ ಹಂಪೆಗೆ ಹೋಗುವಾಗಲೆಲ್ಲ ನಮ್ಮ ಮಠಕ್ಕೆ ಆಗಮಿಸಿ , ಅನೇಕ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಪ್ಯಾರಿಸ್ ನಲ್ಲಿ ಇವರ ಮನೆಗೆ ಹೋದಾಗ ಕರ್ನಾಟಕದ ನೆನಪು ಬರುತಿತ್ತು.
ಮನೆಯ ಮುಂದೆ "ಕರ್ನಾಟಕ" ಎಂದು ಬರೆಯಲಾಗಿದೆ. ಮನೆಯ ಒಳಗೆ ಕರ್ನಾಟಕದ ಒಬ್ಬಟ್ಟಿನ ಸವಿಯ ಆತಿಥ್ಯವನ್ನಂತೂ ಮರೆಯಲಾಗದು. ಕಳೆದ ವರ್ಷ ನಮ್ಮ ಮಠದ ವಾರ್ಷಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ದಂಪತಿಗಳು ಭಾಗವಹಿಸಿದ್ದನ್ನು ಪೂಜ್ಯರು ಸ್ಮರಿಸಿಕಂಡರು.
ಕಳೆದ ನವಂಬರ್ 26ರಂದು ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಡಾ.ಫಿಲಿಯೋಜ ಅವರ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಗುರುಗಳ ಆಗಮದಿಂದ ಅವರಲ್ಲಿ ಸ್ವಲ್ಪ ಚೈತನ್ಯ ಮೂಡಿತು.
29-12-2024 Dear Smt Manonmani,
I was deeply saddened to learn of the passing of your father, Professor Pierre Filliozat. Over the past 50 years, he was not only a towering figure in the world of Indology but also someone I was privileged to know closely and hold in the highest regard.
His profound scholarship, immense contributions to understanding Indian culture, and his warm, engaging presence will remain etched in the hearts of those who knew him. To me, he was more than a scholar—he was a dear friend, an inspiration, and a source of wisdom that I will always cherish.
It was a wise decision that you took him back to Paris from Mysore after I personally saw him in the hospital and talked to him.
My heartfelt condolences to you and to your mother during this time of loss. May the memories of his remarkable life and legacy bring you comfort and strength.
May God bless his Soul rest in Eternal peace! *I miss him a lot!*
With deepest sympathy,
Dr Shivamurthy Swamiji
https://www.padmaawards.gov.in/Document/pdf/CitationsForTickets/2024/202453.pdf