ತರಳಬಾಳು ಹುಣ್ಣಿಮೆ ಮಹೋತ್ಸವ-2025 : ದೇಣಿಗೆ ಸಂಗ್ರಹಕ್ಕೆ ಬ್ಯಾಂಕ್ ಅಕೌಂಟ್ ವಿವರ

75 ವರ್ಷಗಳಿಂದ ನಾಡಿನಾದ್ಯಂತ ನಡೆಯುತ್ತಾ ಬಂದಿರುವ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವವು ನಾಡಹಬ್ಬವಾಗಿ ಪ್ರಖ್ಯಾತಿಯನ್ನು ಪಡೆದಿದೆ. ಭಾವೈಕ್ಯದ ನೆಲೆಗಟ್ಟಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿ ಪ್ರತಿವರ್ಷ ತಪ್ಪದೆ ನಡೆಸುತ್ತಾ ಬಂದಿರುವ ಈ ವೈಚಾರಿಕ ಹಬ್ಬವು ನಾಡು ಬಿಕ್ಕಟ್ಟನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲಾ ಸಾಂಪದಾಯಿಕ ಆಚರಣೆಗಿಂತ ನಾಡಿನ ಜನರ ಸಂಕಷ್ಟದೊಂದಿಗೆ ಭಾಗಿಯಾಗಿರುವುದು ಲೋಕಕಲ್ಯಾಣದ ನಾಡಹಬ್ಬವಾಗಿ ಜನಮಾನಸದಲ್ಲಿ ನೆಲೆಯೂರಿದೆ.
ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಉದಾರವಾಗಿ ದೇಣಿಗೆ ನೀಡಲು ಕೋರಲಾಗಿದೆ. ನೇರವಾಗಿ ಹುಣ್ಣಿಮೆ ಅಕೌಂಟ್ ಗೆ ಜಮಾ ಮಾಡುವವರು ಈ ಕೆಳಗಿನ ಕ್ಯೂಆರ್ ಕೋಡ್ ಅಥವಾ ಅಕೌಂಟ್ ವಿವರಗಳನ್ನು ಬಳಸಿಕೊಂಡು ಮಾಡಬಹುದು.
ಬ್ಯಾಂಕ್ ಅಕೌಂಟ್ ವಿವರ:
Name: Sri Taralabalu Jagadguru Brihanmath, Sirigere.
Bank: Canara Bank
Branch : Bharamasagara
IFSC Code: CNRB0000483
SB A/c No: 110218900785