14-01-2025 10:09 AM
ಈ ವರದಿಯಲ್ಲಿ ಭರಮಸಾಗರ ಮತ್ತು ಜಗಳೂರು ಯೋಜನೆಗಳು ಪ್ರಸ್ತಾಪಗೊಂಡಿವೆ. ಈ ಯೋಜನೆಗೆ ಪರಮಪೂಜ್ಯರು ಅನುಸರಿಸಿದ ನೀತಿ "ಸಹಯೋಗ ಆಡಳಿತ ಪದ್ಧತಿ (Collaborative Governance)". ಈ ಪದ್ಧತಿಯನ್ನು ಹೆಚ್ಚಾಗಿ ಅಮೆರಿಕಾ ಮತ್ತು ಯುರೋಪ್ ದೇಶಗಳಲ್ಲಿ ಸಾರ್ವಜನಿಕ ಯೋಜನೆಗಳನ್ನು ಮಾಡುವಾಗ ಅಳವಡಿಸಿಕೊಳ್ಳುತ್ತಾರೆ. ಇದಕ್ಕೆ ಮೂಲ ಕಾರಣ- ಸ್ಥಳೀಯ ಸಮಸ್ಯೆಗಳು ಮತ್ತು ಬೇಡಿಕೆಗಳು, ಸರಕಾರಗಳಿಗಿಂತ ಸ್ಥಳೀಯ ಮುಖಂಡತ್ವಕ್ಕೆ ಹೆಚ್ಚು ತಿಳಿದಿರುತ್ತದೆ, ಈ ಕಾರಣದಿಂದಹಾಗಿ ಸ್ಥಳೀಯ ಮುಖಂಡತ್ವವನ್ನು ಬಳಸಿಕೊಳ್ಳುವುದು.
ಭದ್ರಾ ಮೇಲ್ದಂಡೆ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ, ಪರಮಪೂಜ್ಯರ ಮುಂದಾಳತ್ವ ಅತ್ಯವಶ್ಯಕ ಹಾಗೂ ದೆಹಲಿ ಮತ್ತು ಬೆಂಗಳೂರು ನಡುವಿನ "ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದ" ಮಧ್ಯೆ ಸಮನ್ವಯ ಸಾಧಿಸಲು ಪರಮಪೂಜ್ಯರಿಂದ ಮಾತ್ರ ಸಾಧ್ಯ.
ಇಲ್ಲವಾದಲ್ಲಿ ಇನ್ನೂ ಎರಡು ದಶಕ ಕಳೆದರೂ ಈ ಯೋಜನೆ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ, ಭರಮಸಾಗರದ ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ, ರೈತ ಮುಖಂಡರು ಹಾಗೂ ರಾಜಕೀಯ ಮುಖಂಡರು ಸೇರಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡು ವರದಿ ಸಲ್ಲಿಸುವುದು ಸರಿಯಾದ ಪ್ರಕ್ರಿಯೆ.
ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ಏಕೆ ಎಂದು ಕೇಳಿದರೆ, ಈ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಣಯಗಳು ಎಂದು ಸೋಲನ್ನು ಕಂಡಿಲ್ಲ- Hence call this as "Taralabalu Upper Bhadra Implementation Declaration"🙏
Dr. KP. Basavaraj
Banglore