ಕಳೆದ 76 ವರ್ಷಗಳಿಂದ ನಾಡಿನಲ್ಲಿ ಭಾವೈಕ್ಯತೆಯನ್ನು ಮೂಡಿಸಿ “ಸರ್ವ ಜನಾಂಗದ ಶಾಂತಿಯ ತೋಟ”ವೆನಿಸಿದ ತರಳಬಾಳು ಹುಣ್ಣಿಮೆ ಮಹೋತ್ಸವ !!

  •  
  •  
  •  
  •  
  •    Views  

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ 76 ವರ್ಷಗಳಿಂದ ನಾಡಿನ ಒಳ-ಹೊರಗೆ ನಡೆಸಿಕೊಂಡು ಬಂದಿರುವ ವಾರ್ಷಿಕ ಸಮಾರಂಭ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ಒಂದು ನಾಡಹಬ್ಬವಾಗಿ ಸರ್ವಜನಾದರಣೆಯನ್ನು ಗಳಿಸಿದೆ. ಸಂಕುಚಿತ ಬುದ್ಧಿಯ ಮೂಲಭೂತವಾದಿಗಳ ಕೋಲಾಹಲದಿಂದಾಗಿ ವಿವಿಧ ಧರ್ಮಗಳ ಮಧ್ಯೆ ಸಂಶಯದ ಅಡ್ಡಗೋಡೆಗಳು ನಿರ್ಮಾಣವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾತಿ-ಮತ, ಪ್ರಾಂತ್ಯ-ಪ್ರದೇಶಗಳ ಭೇದವಿಲ್ಲದೆ ಎಲ್ಲರನ್ನೂ ಸದ್ಧರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ಭಾವೈಕ್ಯ ಸಂಗಮವಾದ ಈ ಮಹೋತ್ಸವದ ಮಹಾವೇದಿಕೆ ಒಂದು ಆಶಾಕಿರಣವಾಗಿದೆ.

12ನೆಯ ಶತಮಾನದ ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯ ಕಬಂಧಬಾಹುಗಳಿಂದ ರಕ್ಷಿಸಲು ಆಜೀವಪರ್ಯಂತ ಹೋರಾಡಿದರು. ಧರ್ಮದ ತಳಹದಿಯ ಮೇಲೆ ಮಾನವ ಮಾನವರ ಮಧ್ಯೆ ತರತಮ ಭಾವವಿಲ್ಲದೆ ನವ ಸಮಾಜವನ್ನು ನಿರ್ಮಿಸಿ, ಸದ್ಧರ್ಮ ಪೀಠವನ್ನು ಸ್ಥಾಪಿಸಿದರು. ಮಾಘ ಶುದ್ಧ ಪೂರ್ಣಿಮೆಯಂದು ತಮ್ಮ ಶಿಷ್ಯ ತೆಲಗುಬಾಳು ಸಿದ್ಧನನ್ನು ಸದ್ಧರ್ಮ ಪೀಠದಲ್ಲಿ ಕುಳ್ಳಿರಿಸಿ ‘ತರಳಾ, ಬಾಳು’ ಎಂದು ಹರಸಿದರು. ‘ತರಳಾ, ಬಾಳು’ ಎಂಬ ಪಂಚಾಕ್ಷರಿ ಮಂತ್ರದಲ್ಲಿ ಮಾನವ ಕುಲದ ಅಭ್ಯುದಯವೇ ಅಡಕವಾಗಿದೆ. ಈ ಆಶೀರ್ವಾದದ ಪರಂಪರೆಯಲ್ಲಿ ಸಾಗಿ ಬಂದ ಸದ್ಧರ್ಮ ಪೀಠಾಧಿಪತಿಗಳೇ ಶ್ರೀ ತರಳಬಾಳು ಜಗದ್ಗುರುಗಳವರು ಎಂದು ಹೆಸರಾಗಿದ್ದಾರೆ. ಈ ಐತಿಹಾಸಿಕ ಘಟನೆಯು ನಾಡಿನಲ್ಲಿ ‘ತರಳಬಾಳು ಹುಣ್ಣಿಮೆ’ ಎಂದು ಪ್ರಸಿದ್ಧವಾಗಿದೆ.

ಒಂದು ಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆದುಕೊಂಡು ಬಂದಿರುವ ಈ ಹುಣ್ಣಿಮೆ ಮಹೋತ್ಸವವನ್ನು ಜಾತಿ-ಮತ-ಪಂಥಗಳ ಚೌಕಟ್ಟನ್ನು ಮೀರಿ ನಾಡ ಜನರ ಭಾವೈಕ್ಯತೆಯ ಸಾಧನವನ್ನಾಗಿ ರೂಪಿಸಿದವರು ಹಿರಿಯ ಗುರುಗಳಾದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಕಳೆದ 76 ವರ್ಷಗಳಿಂದ ನಾಡಿನ ಒಳಹೊರಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ಈ ತರಳಬಾಳು ಹುಣ್ಣಿಮೆ ಮಹೋತ್ಸವವು ನಾಡಿನ ಪ್ರಮುಖ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿದೆ. ವಿಶ್ವಬಂಧು ಮರುಳಸಿದ್ಧರು ಆಶೀರ್ವದಿಸಿದ ‘ತರಳಾ ಬಾಳು’ ಎಂಬ ಮೂಲ ಮಂತ್ರದ ಆಶಯದಂತೆ ಲಿಂಗೈಕ್ಯ ಗುರುಗಳವರ ಕರಕಮಲ ಸಂಜಾತರಾದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಈ ತರಳಬಾಳು ಹುಣ್ಣಿಮೆ ಮಹೋತ್ಸವವು ಹೊಸ ಆಯಾಮವನ್ನು ಪಡೆದಿದೆ. ಈ ವರ್ಷ ಚಿತ್ರದುರ್ಗ ಜಿಲ್ಲೆ ಭರಮಸಾಗರ ಪಟ್ಟಣದಲ್ಲಿ ದಿನಾಂಕ 4-2-2025 ರಿಂದ 12-2-2025 ವರಗೆ ಅರ್ಥಪೂರ್ಣವಾಗಿ ನಡೆಯಲಿದೆ.  9 ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವದಲ್ಲಿ ಪ್ರತಿಯೊಂದು ದಿನ ಈ ಕೆಳಕಂಡಂತೆ ಒಂದೊಂದು ವಿಶಿಷ್ಟ ವಿಷಯವನ್ನು (theme) ನಿಗದಿಪಡಿಸಿದ್ದು ಅದರ ವಿವಿಧ ಆಯಾಮಗಳನ್ನು ಕುರಿತು ಮಾತನಾಡಲು ಅದರ ಒಳಹೊರಗನ್ನು ಬಲ್ಲ ಅನುಭವಿಗಳನ್ನು, ಪರಿಣತರನ್ನು ಮತ್ತು ಪ್ರತಿಷ್ಠಿತ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ:

ದಿನಾಂಕ   ವಾರ    ವಿಷಯ

4-2-2025     ಮಂಗಳವಾರ - ಶಿಕ್ಷಣ-ಕಲೆ-ಸಂಸ್ಕೃತಿ

5-2-2025 ಬುಧವಾರ - ಮಹಿಳೆ ಮತ್ತು ಸಮಾಜ

6-2-2025 ಗುರುವಾರ – ರಾಜಕಾರಣ ಮತ್ತು ಸಮಾಜ

7-2-2025 ಶುಕ್ರವಾರ – ಶರಣಸಾಹಿತ್ಯ ಮತ್ತು ಸಮಾಜ 

8-2-2025 ಶನಿವಾರ – ನ್ಯಾಯಾಲಯ ಮತ್ತು ಸಮಾಜ

9-2-2025 ಭಾನುವಾರ – ಆರೋಗ್ಯ ಮತ್ತು ಸಮಾಜ

10-2-2025 ಸೋಮವಾರ – ಸಮೂಹ ಮಾಧ್ಯಮ ಮತ್ತು ಸಮಾಜ

11-2-2025 ಮಂಗಳವಾರ – ಕೃಷಿ ಮತ್ತು ಜಲಸಂರಕ್ಷಣೆ

12-2-2025 ಬುಧವಾರ – ಧರ್ಮ-ವಿಜ್ಞಾನ-ಸಮಾಜ

 ನಾಡಿನ ಒಳಹೊರಗೆ ಈ ಹಿಂದೆ ತರಳಬಾಳು ಹುಣ್ಣಿಮೆ ಮಹೋತ್ಸವವು ನಡೆದ ಸ್ಥಳಗಳ ಮಾಹಿತಿ ಈ ಕೆಳಗಿನಂತಿದೆ: 

ಕ್ರ.ಸಂ.    ಇಸವಿ    ಸ್ಥಳ

1.     1949    ಸಿರಿಗೆರೆ

2.     1950    ಜಗಳೂರು

3.     1951    ಹಳೇಬೀಡು

4.     1952    ಸಿರಿಗೆರೆ

5.     1953    ಸಿರಿಗೆರೆ

6     1954    ಸಿರಿಗೆರೆ

7.     1955    ಸಿರಿಗೆರೆ

8.     1956    ಸಿರಿಗೆರೆ

9.     1957    ದಾವಣಗೆರೆ

10.    1958    ಸಿರಿಗೆರೆ

11.    1959    ಸಿರಿಗೆರೆ

12.    1960    ಸಿರಿಗೆರೆ

13.    1961    ಸಿರಿಗೆರೆ

14.    1962    ಸಿರಿಗೆರೆ

15.    1963    ಸಿರಿಗೆರೆ

16.    1964    ಅರಸೀಕೆರೆ

17.    1965    ಚಿತ್ರದುರ್ಗ

18.    1966    ಗುಡಿಗೇರಿ,ಧಾರವಾಡ

19.    1967    ಸಿರಿಗೆರೆ

20.    1968    ಸಿರಿಗೆರೆ

21.    1969    ಶಿವಮೊಗ್ಗ

22.    1970    ಧಾರವಾಡ

23.    1971    ರಾಣೇಬೆನ್ನೂರು

24.    1972    ಚಿಕ್ಕಮಗಳೂರು

25.    1973    ಹರಿಹರ

26.    1974    ಬೆಂಗಳೂರು

27.    1975    ಸೊಲ್ಲಾಪುರ, ಮಹಾರಾಷ್ಟ್ರ

28.    1976    ಬಿಜಾಪುರ

29.    1977    ಮುತ್ತಗದೂರು

30.    1978    ತೆಲಗುಬಾಳು, ಬಳ್ಳಾರಿ ಜಿಲ್ಲೆ

31.    1979    ಸಿರಿಗೆರೆ - ಪಟ್ಟಾಭೀಷೇಕ

32.    1980    ಮುತ್ತಗದೂರು

33.    1981    ಬೀರೂರು

34.    1982    ಭೀಮಸಮುದ್ರ

35.    1983    ರಟ್ಟಿಹಳ್ಳಿ, ಹಾವೇರಿ ಜಿಲ್ಲೆ

36.    1984    ಹಾವೇರಿ

37.    1985    ಶಿಕಾರಿಪುರ

38.    1986    ದಾವಣಗೆರೆ (ಬರ ಪರಿಹಾರ ಕಾರ್ಯಕ್ರಮ)

39.    1987    ಭದ್ರಾವತಿ

40.    1988    ಹುಬ್ಬಳ್ಳಿ

41.    1989    ಬ್ಯಾಡಗಿ

42.    1990    ಹೊಳಲು, ಬಳ್ಳಾರಿ ಜಿಲ್ಲೆ

43.    1991    ತರೀಕೆರೆ

44.    1992    ಚನ್ನಗಿರಿ

45.    1993    ಜಗಳೂರು

46.    1994    ಹೊನ್ನಾಳಿ

47.    1995    ಹಾನಗಲ್

48.    1996    ತಿಪಟೂರು

49.    1997    ರಾಣೇಬೆನ್ನೂರು

50.    1998    ಹೊಸದುರ್ಗ

51.    1999    ಹರಪನಹಳ್ಳಿ

52.    2000    ಶಿವಮೊಗ್ಗ

53.    2001    ಅರಸೀಕೆರೆ

54.    2002    ಹರಿಹರ

55.    2003    ಚಿಕ್ಕಮಗಳೂರು

56.    2004    ಅನಗೋಡು (ಬರಗಾಲ ಕುಡಿಯುವ ನೀರು ಕಾರ್ಯಕ್ರಮ: ಮರುಳಸಿದ್ಧರ ಪವಾಡ ಕ್ಷೇತ್ರಗಳಲ್ಲಿ ಸಾಂಕೇತಿಕ ಆಚರಣೆ.)

57.    2005    ಚಿತ್ರದುರ್ಗ

58.    2006    ಹಿರೇಕೆರೂರು

59.    2007    ಸಿರಿಗೆರೆ

60.    2008    ಹೊಳಲ್ಕೆರೆ

61.    2009    ದಾವಣಗೆರೆ

62.    2010    ಸಿರಿಗೆರೆ

63.    2011    ಬೆಂಗಳೂರು

64.    2012    ಕಡೂರು

65.    2013    ಸಿರಿಗೆರೆ

66.    2014    ಶಿಗ್ಗಾಂವಿ

67.    2015    ಚನ್ನಗಿರಿ

68.    2016    ಸಿರಿಗೆರೆ

69.    2017    ಸಿರಿಗೆರೆ

70.    2018    ಜಗಳೂರು

71.    2019    ಸಿರಿಗೆರೆ

72.    2020    ಹಳೇಬೀಡು, ಹಾಸನ ಜಿಲ್ಲೆ

73.    2021    ಸಿರಿಗೆರೆ (ಕೊರೋನ : ಆನ್ಲೈನ್ ಕಾರ್ಯಕ್ರಮ)

74.    2022    ಸಿರಿಗೆರೆ

75.    2023    ಕೊಟ್ಟೂರು

76.    2024    ಸಿರಿಗೆರೆ

77.    2025    ಭರಮಸಾಗರ (ಚಿತ್ರದುರ್ಗ ಜಿಲ್ಲೆ)