ಜನರ ನಿಜವಾದ ಹಿತದತ್ತ ಗಮನ ನೀಡದೆ ಅಧಿಕಾರ ಮೋಜು-ಮಸ್ತಿಗಾಗಿದೆ: ತರಳಬಾಳು ಶ್ರೀ
3627
Views
28-01-2025 09:39 AM ಪೂಜ್ಯ ಸ್ವಾಮಿ ಜಿ ಅವರಲ್ಲಿ ಸಾಷ್ಟಾಂಗ ನಮಸ್ಕಾರಗಳು
ಗಣರಾಜ್ಯೋತ್ಸವ ಸಂದರ್ಭದಲ್ಲಿ ತಾವು ನೀಡಿರುವ ಎಚ್ಚರಿಕೆಯ ಮಾತುಗಳನ್ನು ನಮ್ಮ ಸರ್ಕಾರದ ಮಂತ್ರಿ
ಮಾನ್ಯರು ಮತ್ತು ಅಧಿಕಾರಿಗಳು ಅರ್ಥ ಮಾಡಿಕೊಳ್ಳುವ
ಅಗತ್ಯತೆ ಎಂದಿಗಿಂತ ಇಂದು ಹೆಚ್ಚಿದೆ. ಜನ ಸಾಮಾನ್ಯರಿಗೆ
ಇವರಿಂದ ಹೆಚ್ಚಿನ ಅನುಕೂಲಗಳಾಗಬೇಕಿದೆ. ಸರ್ಕಾರ ತನ್ನ
ನಿರ್ವಹಣೆಗೆ ಬೇಕಾದ ಖರ್ಚು ವೆಚ್ಚಗಳಿಗೆ ಬೇರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು. ಮದ್ಯಪಾನ ನಿರೋಧ ಕಾಯಿದೆಯನ್ನು ಈ ಕೂಡಲೇ ಜಾರಿಗೆ ತರಬೇಕು. ಮದ್ಯಪಾನ ವ್ಯಸನಿಗಳಿಂದ ರಾಷ್ಟ್ರದ ಅವನತಿ ತ್ವರಿತವಾಗಿ ಸಂಭವಿಸಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಮಣ್ಣುಗೂಡುತ್ತಿವೆ.
ಸ್ವಾಮೀಜಿ ಅವರ ಸಂದೇಶ ನಮ್ಮ ಮಂತ್ರಿಗಳ ಮತ್ತು
ಆಡಳಿತ ವರ್ಗಗಳ ಅಧಿಕಾರಿಗಳ ಕಣ್ತೆರೆಯಲಿ. ದೇಶ ಪ್ರಗತಿ ಪಥದತ್ತ ಸಾಗಲಿ.