27-01-2025 01:38 PM
ಪೂಜ್ಯ ಗುರುಗಳ ಪಾದ ಪದ್ಮಾ0ಗಳಲ್ಲಿ ಪೊಡಮಟ್ಟು, ಪ್ರಸ್ತುತ ವರ್ಷ ಬರಮಸಾಗರದಲ್ಲಿ ಜರುಗುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ- 2025 ರ ಆಮಂತ್ರಣ ಪತ್ರಿಕೆ ನೋಡಿ ಅತ್ಯಂತ ಸಂತೋಷವಯಿತು.
ಈ ಹುಣ್ಣಿಮೆಯ ಆಮಂತ್ರಣ ಪತ್ರಿಕೆಯಲ್ಲಿ ಈ ವಾಡಿಕೆಯಂತೆ ರಾಜ್ಯದ ಅಧಿಕಾರದಲ್ಲಿರುವ ಮಾಜಿ,ಹಾಲಿ ಮಂತ್ರಿಗಳು, ಎಂಪಿ ಗಳು ಹಾಗೂ ಹಾಲೀ MLA ಗಳು, ಮಾಜಿ MLA ಗಳು ಮತ್ತು ಸರ್ಕಾರೀ ಉನ್ನತ ಅಧಿಕಾರಿಗಳು ಹೀಗೆ ಅನೇಕರಿಗೆ ವೇದಿಕೆಯಲ್ಲಿ ಸ್ಥಾನ ಕಲ್ಪಿಸಿದ್ದು ಹಿಂದಿನಿಂದಲೂ ಹುಣ್ಣಿಮೆ ಮಹೋತ್ಸವದಲ್ಲಿ ನಡೆದು ಬಂದಿರುವ ಸಂಗತಿ. ಅದರಂತೆ ಈ ಬಾರಿ ಕೆಲವು ಅವರವರ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿ ಹಿಡೀ ನಮ್ಮ ಜನರಿಗೆ ಮನಸ್ಸಿಗೆ ತಟ್ಟುವಂತೆ ಅವರ ಮಾತುಗಳು ಸ್ಫೂರ್ತಿ ದಾಯಕ ವಾಗಲು ದಾರಿದೀಪ ವಾಗುವ ದಿಸೆಯಲ್ಲಿ ಅತ್ಯಂತ ಪ್ರತಿಭಾನ್ವಿತರು ಗಳಾದ ಶ್ರೀ ಗುರುರಾಜ ಕರ್ಜಗಿ ಯವರು , ಶ್ರೀ ಹಿರೇಮಗಳೂರು ಕಣ್ಣನ್ರವರು ,ಶ್ರೀ ಬಿ.ರಾಜಶೇಖರಪ್ಪನವರು (ನನಗೆ PUC ಯಲ್ಲಿ ಕನ್ನಡ ಪ್ರೊಫೆಸರ್ ) ಶ್ರೀ ರಂಗನಾಥ್ರವರು (ಪಬ್ಲಿಕ್ ಟಿವಿ ಶ್ರೀ ಅಜಿತ್ ಹನುಮಕ್ಕನವ ರ್ ರವರು (ಸುವರ್ಣ tv)ಹಾಗೂ ಇನ್ನೂ ಅನೇಕ ಕರನ್ನು ಆಮಂತ್ರಿಸಿ ಅವರಿಂದ ಒಳ್ಳೆ ಒಳ್ಳೆಯ ವಿಚಾರ ದಾರೆಯನ್ನು ನಮಗೆಲ್ಲರಿಗೂ ಉಣಬಡಿಡುತ್ತಿರುವುದು ಅತ್ಯಂತ ಶ್ಲಾಘನೀಯ. ಇದೇ ರೀತಿ ಮುಂಬರುವ ದಿನಗಳಲ್ಲಿ "ಸರ್ವಜನಾಂಗದ ಶಾಂತಿ"ಯ ತೋಟ ಜಾತಿ,ಧರ್ಮ ಮತ ಬೇಧ ಭಾವ ಇಲ್ಲದೆ ಎಲ್ಲರನ್ನೂ ಉತ್ತುಂಗಕ್ಕೆ ಕರೆದುಕೊಂಡು ಹೋಗುವ ನಮ್ಮ ತರಳಬಾಳು ಹುಣ್ಣಿಮೆ ಮಹೋತ್ಸವ ನಾಡ ಹಬ್ಬವಾಗದೆ ರಾಷ್ಟ್ರೀಯ ಹಬ್ಬವಾಗಿ ಹಬ್ಬವಾಗಿ ಜನರ ಮನದ ಅಂತರಾಳದಲ್ಲಿ ಶಾಶ್ವತವಾಗಿ ನೆಲೆಯೂರುವಂತಾಗಲಿ ಎಂಬುದೇ ನನ್ನ ಆಶಯ. ಇದರಿಂದ ಸಮೃದ್ಧ ನಮ್ಮ ಸಮಾಜ, ನಮ್ಮ ನಾಡು, ನಮ್ಮ ದೇಶ ಹಾಗೂ ಹಿಡೀ ಮಾನವ ಕುಲಕ್ಕೆ ದಾರಿ ದೀಪಾವಗ ಲೆoಬುದು ನನ್ನ ಆಶಯ.ಎಲ್ಲರಿಗೂ ನನ್ನ ಅಂತರಾಳದ ನಮಸ್ಕಾರಗಳು
homanna ramappa
ನೆರಲಿಗೆ, ದಾವಣಗೆರೆ ತಾ!!