ತರಳಬಾಳು ಹುಣ್ಣಿಮೆ ಮಹೋತ್ಸವ-2025 (ಭರಮಸಾಗರ) ವಾಹನ ನಿಲುಗಡೆ ಮತ್ತು ಸಂಚಾರ ನಿರ್ವಾಹಣೆ ವ್ಯವಸ್ಥೆ

  •  
  •  
  •  
  •  
  •    Views  

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ ಮಠದ ವಾರ್ಷಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವ-2025ರ ಕಾರ್ಯಕ್ರಮವು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಬೃಹತ್ ಮಂಟಪದಲ್ಲಿ ದಿನಾಂಕ: 04-02-2025ರಿಂದ 12-02-2025ರ ವರೆಗೆ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಧರ್ಮದ, ಸಮಾಜದ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಪಾಲ್ಗೊಳ್ಳಲು ಸ್ವಾಇಚ್ಛಯಿಂದ ಬರುವ ಕಾರಣ ಬರುವಂತಹ ಎಲ್ಲಾ ಸದ್ಬಕ್ತರಿಗೆ, ಸಾರ್ವಜನಿಕರಿಗೆ ಕಾರ್ಯಕ್ರಮ ಸ್ಥಳದ ಎರಡೂ ಭಾಗದಲ್ಲೂ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿಯು ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆಯನ್ನು ಹಾಗೂ ನಿಲುಗಡೆ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯನ್ನೂ ಸಹ ಕಲ್ಪಸಲಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಬರುವ ಸದ್ಭಕ್ತರು ಹಾಗೂ ಸಾರ್ವಜನಿಕರು ಈ ಕೆಳಕಂಡ ಮಾರ್ಗಗಳಲ್ಲಿ ಸುರಕ್ಷಿತವಾಗಿ ಬರಲು ಸೂಕ್ತ ಸ್ಥಳಗಳಲ್ಲಿ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಅನುಕೂಲವಾಗುವಂತೆ ವಾಹನ ನಿಲುಗಡೆ ಸ್ಥಳದಲ್ಲಿ ಹಾಗೂ ರಸ್ತೆಯಲ್ಲಿ ಸೂಚನಾ ಫಲಕಗಳ ವ್ಯವಸ್ಥೆಯೊಂದಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಸಹ ಮಾಡಲಾಗಿರುತ್ತದೆ.

ಚಿತ್ರದುರ್ಗ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮಾರ್ಗಗಳ ವಿವರ :

ಮೋಟಾರ್‌ ಸೈಕಲ್ & ಕಾರು-ಲಘು ವಾಹನ :- ಕೊಳಾಳ್ ಗ್ರಾಮದ ಬಳಿ ದ್ವಿಚಕ್ರ ವಾಹನ ಸವಾರರು ಎಡಕ್ಕೆ ಬರುವ ಸರ್ವೀಸ್ ರಸ್ತೆ ಮುಖಾಂತರ ಹಾಗೂ ಭರಮಸಾಗರ ಗೊಲ್ಲರಹಟ್ಟಿ ಬಳಿ ಬರುವ ಸರ್ವೀಸ್ ರಸ್ತೆ ಮುಖಾಂತರ ಭರಮಸಾಗರ ಹೆದ್ದಾರಿ ಕೆಳಸೇತುವೆ ಬಳಿ ತಿರುವು ಪಡೆದು ಅದೇ ಸೇತುವೆ ಎಡಕ್ಕೆ ಸರ್ವಿಸ್ ರಸ್ತೆ ಮುಖಾಂತರ ಕಾರ್ಯಕ್ರಮ ಸ್ಥಳದ ಬಳಿ ಇರುವ ವಾಹನ ನಿಲುಗಡೆ ವ್ಯವಸ್ಥೆಯ ವಿಭಾಗಗಳಲ್ಲಿ ಬಂದು ಸೇರುವುದು, ಕಾರ್ಯಕ್ರಮ ಮುಗಿದ ನಂತರ ಅದೇ ಮಾರ್ಗವಾಗಿ ಭರಮಸಾಗರ ಕೆಳ ಸೇತುವೆ ಬಳಿ ಬಂದು ಮುಂದುವರೆದು ಅದೇ ಮಾರ್ಗವಾಗಿ ಹೆದ್ದಾರಿಯನ್ನು ಸೇರುವುದು

ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮಾರ್ಗಗಳ ವಿವರ :

ಮೋಟಾರ್‌ಸೈಕಲ್ & ಕಾರು-ಲಘು ವಾಹನ :- ದಾವಣಗೆರೆ ಜಿಲ್ಲೆಯ ಗಡಿ ಗ್ರಾಮ ಲಕ್ಕಮುತ್ತೇನಹಳ್ಳಿಯ ಬಳಿ ಬರುವ ಸರ್ವೀಸ್ ರಸ್ತೆ ಮುಖಾಂತರ ಎಮ್ಮೆಹಟ್ಟಿ ಹಾಗೂ ಪಂಪನೂರು ಕೆಳಸೇತುವೆ ಆದ ನಂತರ ಸರ್ವಿಸ್ ರಸ್ತೆ ಮುಖಾಂತರ ಕಾರ್ಯಕ್ರಮ ಸ್ಥಳದ ಬಳಿ ಇರುವ ವಾಹನ ನಿಲುಗಡೆ ವ್ಯವಸ್ಥೆಯ ವಿಭಾಗಗಳಲ್ಲಿ ಬಂದು ಸೇರುವುದು, ಕಾರ್ಯಕ್ರಮ ಮುಗಿದ ನಂತರ ಅದೇ ಮಾರ್ಗವಾಗಿ ಹಂಪನೂರು ಕೇಳಸೇತುವೆ ಬಳಿ ಎಡ ತಿರುವು ಪಡೆದು ಸರ್ವಿಸ್ ರಸ್ತೆ ಮುಖಾಂತರ ಅದೇ ಮಾರ್ಗವಾಗಿ ಹೆದ್ದಾರಿಯನ್ನು ಸೇರಿ ದಾವಣಗೆರೆ ಮಾರ್ಗವಾಗಿ ಹೋಗುವುದು.

ಬಿಳಿಚೋಡು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮಾರ್ಗಗಳ ವಿವರ :

ಮೋಟಾರ್‌ಸೈಕಲ್ & ಕಾರು-ಲಘು ವಾಹನ :- ಭರಮಸಾಗರ ಗ್ರಾಮದ ಜಿಲ್ಲಾ ಮುಖ್ಯ ರಸ್ತೆ ಮುಖಾಂತರ ಬಂದು ಹಳೇ ಹೆದ್ದಾರಿಯ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ಬಂದು ಸೇರುವುದು, ಕಾರ್ಯಕ್ರಮ ಮುಗಿದ ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು.

ಹೆಗ್ಗೆರೆ & ಹಂಪನೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಮಾರ್ಗಗಳ ವಿವರ :

ಮೋಟಾರ್‌ಸೈಕಲ್ & ಕಾರು-ಲಘು ವಾಹನ :- ಹೆಗ್ಗೆರೆ ರಸ್ತೆ ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆ ಮುಖಾಂತರ ನಂತರ ಸರ್ವಿಸ್ ರಸ್ತೆ ಮಾರ್ಗವಾಗಿ ಬರುವುದು, ಅದೇ ರೀತಿ ಹಂಪನೂರು ಗ್ರಾಮದ ರಸ್ತೆ ಬಳಿಯ ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆ ಮುಖಾಂತರ ನಂತರ ಸರ್ವಿಸ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ಸ್ಥಳಕ್ಕೆ ಬಂದು ಸೇರುವುದು, ಕಾರ್ಯಕ್ರಮ ಮುಗಿದ ನಂತರ ಅದೇ ಮಾರ್ಗವಾಗಿ ವಾಪಸ್ಸು ಹೋಗುವುದು

ವಿಷೇಶ ಸೂಚನೆ :- ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸದ್ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮ ಸ್ಥಳದ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ ಯಾರೂ ಕೂಡ ಪಾದಚಾರಿಯಾಗಿ ಹೆದ್ದಾರಿಯನ್ನು ದಾಟುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಹಾಗೆಯೇ ಹೆದ್ದಾರಿಯಲ್ಲಿ ವಿವಿಧ ಬಗೆಯ ಬ್ಯಾನರ್‌ಗಳನ್ನು ಅಳವಡಿಸುವುದನ್ನು ಸಹ ನಿಷೇಧಿಸಲಾಗಿದೆ.

ಕಾರ್ಯಕ್ರಮಕ್ಕೆ ಬರುವ ಸದ್ಭಕ್ತರು ಹಾಗೂ ಸಾರ್ವಜನಿಕರು ಡಿಜಿಟಲ್ ಪಾರ್ಕಿಂಗ್ ವ್ಯವಸ್ಥೆಯ ಅನುಕೂಲವನ್ನು ಪಡೆದುಕೊಳ್ಳುವುದು.

ಈ ಲಿಂಕನ್ನು ಒತ್ತಿ  https://goo.gl/maps/EQxFrmkcrMSDDbEE9?g_st=aw

ಈ ಕ್ಯೂ.ಆರ್. ಕೋಡ್‌ ನ್ನು ಗೂಗಲ್ ಲೆನ್ಸ್ ಮುಖಾಂತರ ಸ್ಕ್ಯಾನ್ ಮಾಡಿ

ಕ್ಯೂ.ಆರ್. ಕೋಡ್‌ ಸ್ಕ್ಯಾನ್ ಮಾಡಿ