ಶ್ರೀ ತರಳಬಾಳು ಜಗದ್ಗುರುಗಳವರಿಂದ ಆಶೀರ್ವಾದ ಪಡೆದ ಡಾಲಿ ಧನಂಜಯ ಮತ್ತು ಧನ್ಯತಾ

ದಿನಾಂಕ:16-02-2025
ಸ್ಥಳ: ಮೈಸೂರು
ಇಂದು ಬೆಳಗ್ಗೆ ನಟ ಧನಂಜಯ್, ವೈದ್ಯೆ ಧನ್ಯತಾ ರವರು ಮಾಂಗಲ್ಯ ಧಾರಣೆಯ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಮೈಸೂರು ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಆಕ್ಟರ್ ಮತ್ತು ಡಾಕ್ಟರ್ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಯಮಾಡಿಸಿ ನೂತನ ದಂಪತಿಗಳಿಗೆ ಆಶೀರ್ವಾದಿಸಿದರು.