ಮೈಸೂರು ರಾಜಮನೆತನದ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಿ : ತರಳಬಾಳು ಹುಣ್ಣಿಮೆಯಲ್ಲಿ ಶ್ರೀಜಗದ್ಗುರುಗಳವರ ಆಗ್ರಹ

ಇಡೀ ಮೈಸೂರು ರಾಜ್ಯವನ್ನೇ ಭಾರತಾಂಬೆಗೆ ಮೊಟ್ಟ ಮೊದಲು ಅರ್ಪಿಸಿದ ಮೈಸೂರು ರಾಜಮನೆತನದ ಮೇಲೆ ಗೌರವ ಅಗತ್ಯ : ತರಳಬಾಳು ಶ್ರೀಗಳವರ ಒತ್ತಾಸೆ
ರಾಜ ಪರಂಪರೆ ವಿರುದ್ಧ ಪ್ರಕರಣ ಸಲ್ಲದು
ಭರಮಸಾಗರ (ಚಿತ್ರದುರ್ಗ) : ಸ್ವತಂತ್ರ ಭಾರತ ನಿರ್ಮಾಣ ಸಂದರ್ಭದಲ್ಲಿ ಮೊದಲಿಗೆ ತಮ್ಮ ರಾಜ್ಯ ಹಾಗೂ ಎಲ್ಲ ಆಸ್ತಿಗಳನ್ನು ಬಿಟ್ಟುಕೊಡುವುದಾಗಿ ಘೋಷಿಸಿದವರು ಮೈಸೂರು ರಾಜರು. ಆದರೆ, ಅಂತಹ ರಾಜಮನೆತನದ ವಿರುದ್ಧವೇ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿರುವುದು ನೋವು ತರಿಸಿದೆ ಎಂದು ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು. ಭರಮಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಗುರುವಾರದ ಕಾರ್ಯಕ್ರಮದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಶೀರ್ವದಿಸಿ ಮಾತನಾಡಿದರು. ದೇಶಕ್ಕಾಗಿ ತ್ಯಾಗ ಮಾಡಿದ ರಾಜಪರಂಪರೆಗೆ ನೀಡಬೇಕಾದ ಗೌರವವನ್ನು ಸರಕಾರ ಇಟ್ಟುಕೊಂಡಿಲ್ಲದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ಸಚಿವ ಸಂಪುಟ ಅನೇಕ ಖಾಸಗಿ ಪ್ರಕರಣಗಳನ್ನೇ ಹಿಂಪಡೆಯುತ್ತಿದೆ. ಹೀಗಿರುವಾಗ ರಾಜಪರಂಪರೆ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ಸು ಪಡೆಯುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ರಾಜವಂಶಸ್ಥರ ಪಾಲಿಗೆ ಉಳಿದ ಸಣ್ಣಪುಟ್ಟ ಆಸ್ತಿ ಅವರಿಗೆ ನೀಡಬೇಕು. ಯಾವುದೇ ರೀತಿ ಕೋರ್ಟ್ ಅಲೆದಾಟಕ್ಕೆ ಅವಕಾಶ ನೀಡಬಾರದು. ತ್ಯಾಗ ಮಾಡಿದವರ ಸಂತತಿಯನ್ನು ಗೌರವಿಸಬೇಕು. ಆಡಳಿತ ವರ್ಗದ ಮೇಲೆ ಜನರು ಒತ್ತಾಯ ತರಬೇಕಿದೆ ಎಂದರು. ಯದುವೀರ ಒಡೆಯರ್ ಅವರನ್ನು ಎಂ.ಪಿ ಎಂದು ಕರೆಯಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಅವರು ನಮಗೆ ಮತ್ತು ನಾಡಿಗೆ ಮಹಾರಾಜರು ಎಂದು ಗೌರವದ ಮಾತುಗಳನ್ನಾಡಿದ ಶ್ರೀಗಳು, ಮೈಸೂರು ರಾಜ ಪರಂಪರೆಯ ಮೂರು ತಲೆಮಾರು ಜತೆಗಿನ ಮಠದ ಬಾಂಧವ್ಯವನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಟ್ಟರು. ದೇಶದಲ್ಲಿ ಬಹಳಷ್ಟು ರಾಜರು ತಮ್ಮ ಇಡೀ ರಾಜತ್ವ, ಆಸ್ತಿಯನ್ನು ಸ್ವತಂತ್ರ ಭಾರತ ನಿರ್ಮಾಣ ಕಟ್ಟಲು ಕೊಟ್ಟಿದ್ದಾರೆ. ಅವರು ಮತ್ತು ಅವರ ಸಂತತಿಗೆ ರಾಜ್ಯಪಾಲ ಹುದ್ದೆ ನೀತಿ ಜಾರಿಗೊಳಿಸಿದ್ದರೆ, ಮೀಸಲು ಎಂಬ ರಾಜ್ಯಪಾಲರ ಮೂಲಕ ಕೆಟ್ಟ ರಾಜಕೀಯ ಮಾಡುವ ಪದ್ಧತಿ ಇರುತ್ತಿರಲಿಲ್ಲ ಎಂದರು. ಆದರೆ, ಈಗ ಅಧಿಕಾರಕ್ಕೆ ಬರುವ ಪಕ್ಷಗಳು, ತಮ್ಮದೆ ಪಕ್ಷದ ವ್ಯಕ್ತಿಯನ್ನು ರಾಜ್ಯಪಾಲರನ್ನಾಗಿ ನೇಮಿಸಿ ಅವರ ಮೂಲಕ ರಾಜಕೀಯ ದ್ವೇಷ ಸಾಧಿಸುತ್ತಿವೆ. ಇದು ತಪ್ಪು ಎಂದು ಶ್ರೀಗಳು ಖಂಡಿಸಿದರು.
ದಿನಾಂಕ 12-2-2025 ತರಳಬಾಳು ಹುಣ್ಣಿಮೆ ಮುಗಿದ ನಂತರ ಯೋಗಾಯೋಗವೋ ಎಂಬಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ದಿನಾಂಕ 15-2-2025 ರಂದು ಕರ್ನಾಟಕ ಸರ್ಕಾರಕ್ಕೆ ಈ ಕೆಳಗಿನಂತೆ ತಾಕೀತು ಮಾಡಿದೆ.