28-02-2025 12:37 PM
ಶಿವರಾತ್ರಿ ಕಾರ್ಯಕ್ರಮ ಆಚರಣೆಯ ನಿಮಿತ್ತ ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹ.ಪೂಜ್ಯ ಗುರುಗಳು ೨೨ ಸಾವಿರ ಶರಣರ ವಚನಗಳನ್ನು ಮೊಬೈಲ್ ಆ್ಯಪ್ ನಲ್ಲಿ ತಂದು ಓದುಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕನ್ನಡ ನಾಡಿನ ಇತಿಹಾಸದಲ್ಲಿಯೇ ಪ್ರಥಮ.. ಶಿಕ್ಷಕರು ಮಕ್ಕಳಿಗೆ ವಚನಗಳನ್ನು ಯಥಾವತ್ತಾಗಿ ಕಂಠಪಾಠ ಮಾಡಿಸಿದರೆ ಪ್ರಯೋಜನವಾಗದು.ಇದರಿಂದ ಮಕ್ಕಳಲ್ಲಿ ವಿಚಾರಶಕ್ತಿ, ಯೋಚನಾ ಶಕ್ತಿ ಬೆಳೆಯದು.ಅಧ್ಯಾಪಕರು ವಚನವನ್ನು ವಿಶ್ಲೇಷಣೆ ಮಾಡುವ,ಅರ್ಥಯಿಸುವ,ತಿಳಿದುಕೊಳ್ಳುವ,ತಿಳಿಸಿಕೊಡುವ ಕಾರ್ಯಮಾಡಿದರೆ...ಮಕ್ಕಳ ಬದುಕಿನಲ್ಲಿ,ಅವರ ವಿಚಾರ ಶಕ್ತಿ ಹೆಚ್ಚಿಸುವ ಕೆಲಸವಾಗಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ..ಒಂದೊಂದು ವಚನ ಆಯ್ಕೆ ಮಾಡಿಕೊಂಡು ಶರಣರು,ವಚನಕಾರರು ಇದನ್ನು ಏತಕ್ಕಾಗಿ ಹೇಳಿದ್ದಾರೆ.ಎಂತಹ ಸಂದರ್ಭಕ್ಕೆ ಹೇಳಿದ್ದಾರೆ..? ಪ್ರಸ್ತುತ ಸನ್ನಿವೇಶದಲ್ಲಿ ವಚನಗಳು ಅವಶ್ಯಕತೆ ಏನು? ಎಂಬ ಕುರಿತು ಮೊದಲು ಅಧ್ಯಾಪಕರಲ್ಲಿ ನಂತರ ಮಕ್ಕಳಲ್ಲಿ ನಡೆಯುವುದಾದರೆ ಪೂಜ್ಯ ಗುರುಗಳು ಸಮಗ್ರ ವಚನಗಳನ್ನು ಮೊಬೈಲ್ ಆ್ಯಪ್ ಗೆ ತಂದದ್ದು ಖಂಡಿತವಾಗಿ ಸಾರ್ಥಕವಾಗುತ್ತದೆ.ಗುರುಗಳು ಮಾಡಿದ ಈ ಮಹಾತ್ಕಾರ್ಯದ ಸದುಪಯೋಗ ಮಾಡಿಕೊಳ್ಳಲು ಎಲ್ಲರೂ ಸಕ್ರೀಯವಾಗಿ ಅಧ್ಯಯನಶೀಲರಾಗೋಣ...ಶರಣು, ಶರಣಾರ್ಥಿಗಳು.
ಡಾ.ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು.
ದಾವಣಗೆರೆ.೦೪.
ಡಾ.ಗಂಗಾಧರಯ್ಯ ಹಿರೇಮಠ
Davangere.04.