•  
  •  
  •  
  •  
  •  

Тайна умиротворённой жизни

ನಿಜವಾದ ಸತ್ಯ ಏನೆಂದು ತಿಳಿಯದೆ ಇದ್ದಾಗ ಈಗಲೂ ದೈನಂದಿನ ಜೀವನದಲ್ಲಿ ಜನರ ಬಾಯಿಂದ ಕೇಳಿ ಬರುವ ಉದ್ಗಾರದ ಮಾತು: 'ಯಕ್ಷಪ್ರಶ್ನೆ'! ಏನಿದು ಯಕ್ಷಪ್ರಶ್ನೆ? ಇದು ಮಹಾಭಾರತದ ವನಪರ್ವದಲ್ಲಿ ಬರುವ ಒಂದು ಪ್ರಸಂಗ. ಪಾಂಡವರು ವನವಾಸದಲ್ಲಿರುವಾಗ ಧರ್ಮರಾಯನಿಗೆ ತುಂಬಾ ಬಾಯಾರಿಕೆಯಾಗಿರುತ್ತದೆ. ಹತ್ತಿರದಲ್ಲಿ ಕಾಣಿಸುತ್ತಿದ್ದ ಸರೋವರದಿಂದ ನೀರು ತರಲು ಒಬ್ಬರ ನಂತರ ಒಬ್ಬರು ಹೋದ ಸಹೋದರರಾರೂ ಮರಳಿ ಬರುವುದಿಲ್ಲ. ಬಹಳ ಹೊತ್ತು ಕಾದರೂ ಯಾರೂ ಬಾರದೆ ಇದ್ದ ಕಾರಣ ಧರ್ಮರಾಯ ಸ್ವತಃ ಹೋಗುತ್ತಾನೆ. ಎಲ್ಲ ಸಹೋದರರೂ ಸರೋವರದ ದಂಡೆಯಲ್ಲಿ ನಿಶ್ಚೇಷ್ಟಿತರಾಗಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಳ್ಳುತ್ತಾನೆ. ತಕ್ಷಣವೇ ಒಂದು ಅಶರೀರವಾಣಿ ಕೇಳಿಬರುತ್ತದೆ: 'ನನ್ನ ಪ್ರಶ್ನೆಗೆ ಉತ್ತರ ಕೊಟ್ಟು ನೀರು ಕುಡಿ, ಇಲ್ಲವಾದರೆ ನೀನೂ ಸಹ ನಿನ್ನ ಸಹೋದರರಂತೆ ಕೆಳಗೆ ಉರುಳಿ ಬೀಳುತ್ತೀಯಾ!' ಎಂದು ಆ ಸರೋವರದ ಮಾಲೀಕನಾದ ಯಕ್ಷ ಎಚ್ಚರಿಸುತ್ತಾನೆ. ಆ ಯಕ್ಷನ ಪ್ರಶ್ನೆ: 'ಈ ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯಕರವಾದ ಸಂಗತಿ ಯಾವುದು?'

ಇದಕ್ಕೆ ಧರ್ಮರಾಯ ಕೊಟ್ಟ ಉತ್ತರ:

ಅಹನ್ಯಹನಿ ಭೂತಾನಿ ಪ್ರವಿಶಂತಿ ಯಮಾಲಯಮ್ ।
ಶೇಷಾಃ ಸ್ಥಾವರಮಿಚ್ಛಂತಿ ಕಿಮಾಶ್ಚರ್ಯಮತಃ ಪರಮ್ ॥

'ನಿತ್ಯವೂ ಒಂದಲ್ಲ ಒಂದು ಜೀವಿ ಸತ್ತು ಯಮಲೋಕ ಸೇರುತ್ತಿದೆ. ಇದನ್ನು ನೋಡಿಯೂ ಮನುಷ್ಯ ತಾನು ಶಾಶ್ವತವಾಗಿ ಈ ಭೂಮಿಯ ಮೇಲೆ ಬದುಕಿರಬೇಕೆಂದು ಬಯಸುತ್ತಾನೆ. ಇದಕ್ಕಿಂತ ಆಶ್ಚರ್ಯಕರವಾದ ಸಂಗತಿ ಈ ಜಗತ್ತಿನಲ್ಲಿ ಏನಿದೆ?'

ಧರ್ಮರಾಯನ ಉತ್ತರ ಸಮಂಜಸವಾಗಿಯೇನೋ ಇದೆ. ಆದರೆ ಇದಕ್ಕಿಂತ ಆಶ್ಚರ್ಯಕರವಾದ ಸಂಗತಿ ನಮ್ಮ ದೃಷ್ಟಿಯಲ್ಲಿ ಅವನ ಮುಂದಿನ ನಿರ್ಧಾರದಲ್ಲಿದೆ. 'ಕೆಳಗೆ ಉರುಳಿ ಬಿದ್ದ ನಿನ್ನ ನಾಲ್ವರು ಸಹೋದರರಲ್ಲಿ ಒಬ್ಬನನ್ನು ಮಾತ್ರ ಬದುಕಿಸಿಕೊಡಬಲ್ಲೆ. ಅವರಲ್ಲಿ ನೀನು ಯಾರನ್ನು ಬಯಸುತ್ತೀಯಾ?' ಎಂದು ಯಕ್ಷ ಕೇಳುತ್ತಾನೆ. ಧರ್ಮರಾಯನು ನಕುಲನನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಭೀಮ ಅಪಾರ ಬಲಶಾಲಿ; ಅರ್ಜುನ ಅಪ್ರತಿಮ ಧನುರ್ಧಾರಿ. ದುರ್ಯೋಧನನನ್ನು ಎದುರಿಸುವ ಸಾಮರ್ಥ್ಯವುಳ್ಳ ಇವರು ನಿನಗೆ ಬೇಕಿಲ್ಲವೇ ಎಂದು ಯಕ್ಷ ಪ್ರಶ್ನಿಸುತ್ತಾನೆ. ಅದಕ್ಕೆ ಧರ್ಮರಾಯ ಕೊಟ್ಟ ಉತ್ತರ: ನಾವು ಮೂವರೂ ಕುಂತಿಯ ಮಕ್ಕಳು. ಉಳಿದಿಬ್ಬರು ನನ್ನ ಚಿಕ್ಕಮ್ಮ ಮಾದ್ರಿಯ ಮಕ್ಕಳು. ಕುಂತಿಯ ಮಗ ನಾನೊಬ್ಬ ಉಳಿದಿದ್ದೇನೆ. ನಕುಲನನ್ನು ಬದುಕಿಸಿದರೆ ನನ್ನ ಚಿಕ್ಕಮ್ಮ ಮಾದ್ರಿಗೂ ಒಬ್ಬ ಮಗ ಉಳಿದಂತೆ ಆಗುತ್ತದೆ; ನನಗೆ ಇಬ್ಬರೂ ತಾಯಂದಿರು ಸಮಾನರು. ಧರ್ಮರಾಯನು ಮಾಡಿಕೊಂಡ ಈ ಆಯ್ಕೆ ಯಕ್ಷನ ಮನಸ್ಸನ್ನು ಸೂರೆಗೊಳ್ಳುತ್ತದೆ. ಎಲ್ಲರನ್ನೂ ಅವನು ಬದುಕಿಸುತ್ತಾನೆ.

ಸಾವು ಯಾರಿಗೆ ಬರುವುದಿಲ್ಲ? ಹುಟ್ಟಿದ ಪ್ರತಿಯೊಬ್ಬ ಮನುಷ್ಯನೇ ಏಕೆ, ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ಈ ಸತ್ಯ ಎಲ್ಲರಿಗೂ ಗೊತ್ತು. ಆದರೆ ವಿಚಿತ್ರವಾದ ಸಂಗತಿಯೆಂದರೆ: 'ಸಾಯುವವರು ಬೇರೆಯವರು ಮಾತ್ರ, ತಾವಲ್ಲ ಎಂಬ ಭ್ರಮೆ!' ಯಾರಾದರೂ ಸತ್ತ ಸುದ್ದಿ ಕೇಳಿದಾಗ ತಾತ್ಪೂರ್ತಿಕವಾಗಿ ನಾಲ್ಕು ಹನಿ ಕಣ್ಣೀರು ಸುರಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಮರುಕ್ಷಣವೇ ಮೈಮರೆತು ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಮಗ್ನರಾಗುತ್ತಾರೆ. ಆದರೆ ಕಾಯಿಲೆ ಬಿದ್ದು ಆಸ್ಪತ್ರೆಗೆ ಸೇರಿದಾಗ ಕ್ಯಾನ್ಸರ್ ಆಗಿದೆ ಬಹಳ ಕಾಲ ಬದುಕುವುದಿಲ್ಲ ಎಂದು ತಮ್ಮ ಸಾವಿನ ವಿಚಾರ ಬಂದಾಗ ಎದೆ ನಡುಗುತ್ತದೆ. ಮನುಷ್ಯನ ಬದುಕಿನ ಸಾರ್ಥಕತೆ ಯಾವುದರಲ್ಲಿ ಅಡಗಿದೆ? ಅಧಿಕಾರ/ಅಂತಸ್ತಿನಲ್ಲಿಯೋ? ಹಣದಲ್ಲಿಯೋ? ಸಮಾಜದಲ್ಲಿ ಗಳಿಸಿದ ಗೌರವದಲ್ಲಿಯೋ? ಅಥವಾ ಇವೆಲ್ಲವನ್ನೂ ಮೀರಿದ ಬೇರೊಂದರಲ್ಲಿಯೋ? ಯಾವುದರಲ್ಲಿ? ಇಂತಹ ಪ್ರಶ್ನೆಗಳನ್ನು ಓದುಗರ ಮನಸ್ಸಿನಲ್ಲಿ ಹುಟ್ಟುಹಾಕುವ ಅಪೂರ್ವ ಸಾಹಿತ್ಯ ಕೃತಿ ರಷ್ಯಾದ ಮಹಾನ್ ಕಥೆಗಾರ ಲಿಯೋ ಟಾಲ್‌ಸ್ಟಾಯ್ ಬರೆದ 'The Death of Ivan Ilyich' ಎಂಬ ಕಿರು ಕಾದಂಬರಿ. 1886ರಲ್ಲಿ ಪ್ರಕಟವಾದ ಈ ಕೃತಿ ಸಾವಿನ ಕಥೆಯಂತೆ ಕಂಡರೂ ವಾಸ್ತವವಾಗಿ ಬದುಕಿನ ನಿಜಾರ್ಥವನ್ನು ಹುಡುಕುವ ಕಥೆ.

ಒಂದು ದಿನ ಕೋರ್ಟಿನಲ್ಲಿ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಎಂದಿನಂತೆ ಕಾರ್ಯನಿರತರಾಗಿರುತ್ತಾರೆ. ಬಿಡುವಿನ ವೇಳೆಯಲ್ಲಿ ಪತ್ರಿಕೆಯ ಮೇಲೆ ಕಣ್ಣು ಹಾಯಿಸಿದಾಗ ಮಧ್ಯವಯಸ್ಕರಾಗಿದ್ದ ಅವರ ಸಹೋದ್ಯೋಗಿ ನ್ಯಾಯಾಧೀಶ ಇವಾನ್ ಇಲಿಚ್ ರವರ ಅನಿರೀಕ್ಷಿತ ಸಾವಿನ ಸುದ್ದಿ ತಿಳಿದು ಎಲ್ಲರೂ ವಿಷಾದ ವ್ಯಕ್ತಪಡಿಸುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಮೂಡಿ ಬಂದ ಆಲೋಚನೆಗಳೇ ಬೇರೆ. ಅನಿರೀಕ್ಷಿತವಾಗಿ ಮರಣ ಹೊಂದಿದ ನ್ಯಾಯಾಧೀಶ ಇವಾನ್‌ನಂತೆ ತಮಗೂ ಸಾವು ಬರಬಹುದು ಎಂಬ ಭಯದ ಆಲೋಚನೆಯಲ್ಲ. ಅವರ ಸಾವಿನಿಂದ ತೆರವಾಗುವ ಹುದ್ದೆ ತಮಗೆ ಸಿಗಬಹುದೆಂಬ ಆಸೆ. ತಮ್ಮ ವರ್ಗಾವಣೆಯ ಸಮಸ್ಯೆ ಉದ್ಭವಿಸಲಾರದು ಎಂಬ ಲೆಕ್ಕಾಚಾರ. ಎಲ್ಲರ ಮನಸ್ಸಿನಲ್ಲೂ ಹೇಳಿಕೊಳ್ಳಲಾಗದ ಒಂದು ಸಮಾಧಾನ: 'ಸತ್ತವನು ಅವನು, ನಾನಲ್ಲ!' ಎಂಬ ಭಾವನೆ.

ಸಹೋದ್ಯೋಗಿಯಾದ ಪೀಟರ್ ಶೋಕ ವ್ಯಕ್ತಪಡಿಸಲು ದಿವಂಗತ ಇವಾನ್ ಮನೆಗೆ ಹೋಗುತ್ತಾನೆ. ಶವದ ಪೆಟ್ಟಿಗೆಯಲ್ಲಿ ಮಲಗಿರುವ ಇವಾನ್ ಮುಖವನ್ನು ನೋಡುತ್ತಾನೆ. ಆ ಮುಖದಲ್ಲಿ ಶಾಂತಿ ಇತ್ತು. ಬದುಕಿರುವವರಿಗೆ ತಿಳಿಯದ ಯಾವುದೋ ಸತ್ಯವನ್ನು ಆತ ಅರಿತುಕೊಂಡಂತೆ ಕಾಣಿಸುತ್ತಿತ್ತು! ಇವಾನ್ ಪತ್ನಿ ಪ್ರಸ್ಕೋವ್ಯಾ ತನ್ನ ಗಂಡನ ಸಾವಿನಿಂದ ಉಂಟಾದ ದುಃಖವನ್ನು ಹೇಳಿಕೊಳ್ಳುತ್ತಾಳೆ. ಮಾತಿನ ಮಧ್ಯೆ ಗಂಡನ ಮರಣದಿಂದ ತನಗೆ ಎಷ್ಟು ಹಣ ಸರ್ಕಾರದಿಂದ ದೊರೆಯಬಹುದು ಎಂಬ ವ್ಯಾವಹಾರಿಕ ವಿಚಾರವನ್ನೂ ಪ್ರಸ್ತಾಪಿಸುತ್ತಾಳೆ. ಪೀಟರ್ ಬಹಳ ಹೊತ್ತು ಶವದ ಬಳಿ ಇರದೆ ಬೇಗನೆ ಹೊರ ಬಂದು ಕ್ಲಬ್ಬಿಗೆ ಹೋಗಿ ಸ್ನೇಹಿತರೊಂದಿಗೆ ಇಸ್ಪೀಟಾಟದಲ್ಲಿ ತೊಡಗುತ್ತಾನೆ. ಹೀಗೆ ಟಾಲ್‌ಸ್ಟಾಯ್ ತನ್ನ ಕಾದಂಬರಿಯ ಕಥಾನಾಯಕನ ಸಾವಿನ ಸುದ್ದಿಯಿಂದಲೇ ಆರಂಭಿಸಿ ನಂತರ Flashback ತರಹ ಕಥೆಯ ನಿರೂಪಣೆಯನ್ನು ಮಾಡುತ್ತಾನೆ.

ಇವಾನ್ ಇಲಿಚ್ ಬಾಲ್ಯದಿಂದಲೂ ಬುದ್ಧಿವಂತ. ಕಾನೂನು ಶಿಕ್ಷಣ ಪಡೆದು ಸರ್ಕಾರಿ ಸೇವೆಗೆ ಸೇರಿದವನು. ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವುದು, ಬಡ್ತಿ ಪಡೆಯುವುದು, ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ಅವನ ಜೀವನದ ಗುರಿಯಾಗುತ್ತದೆ. ತನ್ನ ಸುತ್ತಮುತ್ತಲಿನ ಪ್ರತಿಷ್ಠಿತ ವ್ಯಕ್ತಿಗಳು ಹೇಗೆ ಬದುಕುತ್ತಾರೋ ಹಾಗೆಯೇ ಬದುಕಲು ಪ್ರಯತ್ನಿಸುತ್ತಾನೆ. ಸುಂದರ ಯುವತಿಯನ್ನು ಮದುವೆ ಮಾಡಿಕೊಂಡಿದ್ದು ಆರಂಭದಲ್ಲಿ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಆದರೆ ಕ್ರಮೇಣ ಗಂಡಹೆಂಡಿರ ಮಧ್ಯೆ ಮನಸ್ತಾಪಗಳು ಉಂಟಾಗುತ್ತವೆ. ಮನೆಯಲ್ಲಿನ ಕಿರಿಕಿರಿ ತಪ್ಪಿಸಿಕೊಳ್ಳಲು ಹೆಂಡತಿಯೊಂದಿಗೆ ಮನಬಿಚ್ಚಿ ಮಾತನಾಡುವ ಬದಲು ತನ್ನ ನ್ಯಾಯಾಲಯದ ಕೆಲಸಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಾನೆ. ಕಾನೂನಿನ ಕಡತಗಳೊಂದಿಗೆ ಕಾಲ ಕಳೆಯುವುದೇ ಅವನಿಗೆ ಹೆಚ್ಚು ಹಿತಕರವೆನಿಸುತ್ತದೆ.

ಕಾಲಕ್ರಮೇಣ ಅವನಿಗೆ ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ ದೊರೆಯುತ್ತದೆ. ಹೊಸ ಮನೆಯನ್ನು ಕಟ್ಟಿಕೊಂಡು ಬೆಲೆಬಾಳುವ ಪೀಠೋಪಕರಣಗಳು, ಪರದೆಗಳು, ರತ್ನಗಂಬಳಿಗಳು, ಅಲಂಕಾರಿಕ ವಸ್ತುಗಳು ಎಲ್ಲವನ್ನೂ ಖರೀದಿಸುತ್ತಾನೆ. ಒಂದು ದಿನ ಮನೆಯ ಕಿಟಕಿಗೆ ಪರದೆಗಳನ್ನು ಅಳವಡಿಸಲು ಏಣಿಯ ಮೇಲೆ ಹತ್ತಿದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಕಿಟಕಿಯ ಚೌಕಟ್ಟಿಗೆ ಅವನ ಪಕ್ಕೆಲುಬು ಬಲವಾಗಿ ಬಡಿಯುತ್ತದೆ. ಸಣ್ಣ ಗಾಯವೆಂದು ನಗುತ್ತಾ ಸುಮ್ಮನಾಗುತ್ತಾನೆ. ಕೆಲವು ದಿನಗಳ ನಂತರ ನೋವು ಕಾಣಿಸಿಕೊಂಡು ದಿನದಿಂದ ದಿನಕ್ಕೆ ಹೆಚ್ಚಾಗಿ ಆಸ್ಪತ್ರೆಗೆ ಸೇರುತ್ತಾನೆ. ಕಾಯಿಲೆ ಉಲ್ಬಣಿಸಿ ಹಾಸಿಗೆ ಹಿಡಿಯುವಂತಾಗುತ್ತದೆ. 

'ಡಾಕ್ಟರೇ, ನನ್ನ ಕಾಯಿಲೆ ಗಂಭೀರವಾಗಿದೆಯೇ? ನಾನು ಸಾಯುತ್ತೇನೆಯೇ?' ಎಂದು ಒಂದು ದಿನ ಕೇಳುತ್ತಾನೆ. ವೈದ್ಯರು ಅದಕ್ಕೆ ನೇರವಾದ ಉತ್ತರ ಕೊಡುವುದಿಲ್ಲ. ಇವಾನ್‌ಗೆ ತನ್ನ ನ್ಯಾಯಾಲಯದ ಕೇಸುಗಳು ನೆನಪಾಗುತ್ತವೆ. ತನ್ನ ಮುಂದೆ ನಿಂತಿರುವ ಆರೋಪಿಗಳ ಭಯ, ಆತಂಕ, ಸಂಕಟಗಳನ್ನು ಗಮನಿಸದೆ ಕಾನೂನಿನ ವಿಧಿವಿಧಾನಗಳಲ್ಲಿಯೇ ಮುಳುಗಿರುತ್ತಿದ್ದೆ. ಈಗ ವೈದ್ಯರೂ ತನ್ನನ್ನು ಅದೇ ರೀತಿಯಲ್ಲಿ ನೋಡುತ್ತಿದ್ದಾರಲ್ಲವೇ ಎನಿಸುತ್ತದೆ.

ದೈಹಿಕ ನೋವಿಗಿಂತ ಅವನನ್ನು ಹೆಚ್ಚು ಕಾಡುವುದು ಸುತ್ತಮುತ್ತಲಿನವರ ನಡವಳಿಕೆ. ಹೆಂಡತಿಗೆ ಗಂಡನ ಕಾಯಿಲೆಯೇ ದೊಡ್ಡ ಕಿರಿಕಿರಿಯಾಗುತ್ತದೆ. ಮಗಳು ತನ್ನ ಮದುವೆ ಮತ್ತು ಮೋಜು ಮೇಜವಾನಿಯ ಸಂಭ್ರಮದಲ್ಲಿರುತ್ತಾಳೆ. ಬಂಧುಮಿತ್ರರು ಬಂದು ಔಪಚಾರಿಕವಾಗಿ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಾರೆ. ಇವಾನ್‌ಗೆ ತನ್ನ ಸಾವು ಸಮೀಪಿಸುತ್ತಿರುವ ಅನುಭವವಾಗುತ್ತದೆ. ತನ್ನ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಯಿಂದ ನಾಲ್ಕು ಮಾತುಗಳನ್ನಾಡುವವರು ಯಾರೂ ಇಲ್ಲವಲ್ಲಾ ಎಂಬ ನೋವು ಅವನನ್ನು ಕಾಡಿಸುತ್ತದೆ. ಇಂತಹ ಸಂದರ್ಭದಲ್ಲಿ ಅವನನ್ನು ಉಪಚರಿಸುವವನು ಅವನ ಮನೆಯಲ್ಲಿದ್ದ ಗೆರಾಸಿಮ್ ಎಂಬ ಬಡ ಸೇವಕ. ಅವನು ಹೆಚ್ಚು ವಿದ್ಯಾವಂತನಲ್ಲ. ಆದರೆ ಅವನಲ್ಲಿ ಅಪಾರವಾದ ಮಾನವೀಯತೆ ಇತ್ತು. ಯಜಮಾನರ ಕಾಲುಗಳನ್ನು ಮೇಲಕ್ಕೆತ್ತಿ ಹಿಡಿದಾಗ ನೋವು ಸ್ವಲ್ಪ ಕಡಿಮೆಯಾಗುತ್ತದೆಯೆಂದು ಕಾಲುಗಳನ್ನು ತನ್ನ ಭುಜಗಳ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳುತ್ತಾನೆ. ಅವನ ಸೇವೆಯನ್ನು ಕಂಡು ಇವಾನ್‌ಗೆ ಸಂಕೋಚವಾಗುತ್ತದೆ. 'ನಿನಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆಯಲ್ಲವೇ?' ಎಂದು ಕೇಳುತ್ತಾನೆ. 'ಇದರಲ್ಲಿ ತೊಂದರೆಯೇನು ಸ್ವಾಮಿ? ನೀವು ಕಾಯಿಲೆಯಿಂದ ಬಳಲುತ್ತಿದ್ದೀರಿ. ನಿಮಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ?' ಎಂದು ವಿನೀತನಾಗಿ ಉತ್ತರಿಸುತ್ತಾನೆ. ಆ ಮಾತುಗಳು ಇವಾನ್‌ನ ಹೃದಯವನ್ನು ತಟ್ಟುತ್ತವೆ. ಮಡದಿ ಮಕ್ಕಳು ಯಾರೂ ನೀಡದ ಮಾನವೀಯ ಸಾಂತ್ವನವನ್ನು ಈ ಬಡ ಸೇವಕ ನೀಡುತ್ತಿದ್ದಾನಲ್ಲ! ಎಂದು ಇವಾನ್‌ಗೆ ಅನಿಸುತ್ತದೆ. ತಾನು ಇಷ್ಟು ವರ್ಷ ಬದುಕಿದ್ದು ಯಾವುದಕ್ಕಾಗಿ? ಬಡ್ತಿ, ಸಂಬಳ, ಅಧಿಕಾರ, ಸುಂದರವಾದ ಮನೆ, ಬೆಲೆಬಾಳುವ ಪೀಠೋಪಕರಣಗಳು ಇವೆಲ್ಲವೂ ಈಗ ತನ್ನ ನೋವನ್ನು ಕಡಿಮೆ ಮಾಡಬಲ್ಲವೇ? ಸಾವಿನಿಂದ ತನ್ನನ್ನು ರಕ್ಷಿಸಬಲ್ಲವೇ? ಇಂತಹ ಅನೇಕ ಪ್ರಶ್ನೆಗಳು ಇವಾನ್‌ನ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದಕ್ಕಿಂತ ಹೇಗೆ ಬದುಕಿದ ಎಂಬುದು ಮುಖ್ಯ. ನೂರು ವರ್ಷ ಬದುಕಿದರೂ ಸ್ವಾರ್ಥ, ದುರಹಂಕಾರ, ದ್ವೇಷ, ಅಸೂಯೆಗಳಲ್ಲಿಯೇ ಮುಳುಗಿದ್ದರೆ ಆ ಬದುಕಿಗೆ ಏನು ಅರ್ಥ?

ಅಧಿಕಾರವಿದ್ದಾಗ ಎಲ್ಲರೂ ಗೌರವಿಸುತ್ತಾರೆ. ಹಣವಿದ್ದಾಗ ಬಂಧುಮಿತ್ರರು ಸುತ್ತುವರಿಯುತ್ತಾರೆ. ಆರೋಗ್ಯವಿದ್ದಾಗ ಭೋಗಭಾಗ್ಯಗಳನ್ನು ಅನುಭವಿಸಬಹುದು. ಆದರೆ ಕಾಯಿಲೆಯಿಂದ ಹಾಸಿಗೆ ಹಿಡಿದು ನರಳುವಾಗ ಇವೆಲ್ಲವೂ ಅರ್ಥಹೀನವೆನಿಸುತ್ತವೆ. ಆಗ ಬೇಕಾಗುವುದು ಆತ್ಮೀಯತೆಯಿಂದ ಕೈಹಿಡಿಯುವ, ನೋವಿಗೆ ಮಿಡಿಯುವ ಒಂದು ಹೃದಯ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.22-10-2026.

Even today, when people are unable to discover the real truth about something, an expression frequently heard in everyday conversation is “Yaksha Prashna” (the Yaksha’s Question)!

What exactly is this Yaksha Prashna? It refers to an episode in the Vana Parva of the Mahabharata.

During their exile in the forest, Dharmaraya (Yudhishthira) becomes extremely thirsty. One after another, his brothers go to fetch water from a nearby lake, but none of them returns. After waiting for a long time, Dharmaraya himself goes in search of them. To his utter shock, he finds all his brothers lying motionless on the bank of the lake.

Suddenly, a disembodied voice is heard:

“Answer my question before drinking water. Otherwise, you too will fall to the ground like your brothers!”

It is the warning of a Yaksha, the guardian of the lake.

The Yaksha asks:

“What is the most astonishing thing in this world?”



Dharmaraya replies:

"Ahanyahani bhūtāni praviśanti yamālayam,
Śeṣāḥ sthāvaram icchanti kim āścaryam ataḥ param?"


“Every day, living beings die and depart to the abode of Yama, the Lord of Death. Yet, despite witnessing this, human beings wish to live forever on this earth. What could be more astonishing than this?”

Dharmaraya’s answer is certainly appropriate. But, in our view, something even more astonishing lies in the decision he makes immediately afterwards.

The Yaksha asks:

“I can restore only one of your four fallen brothers to life. Whom would you choose?”

Dharmaraya chooses Nakula.

The Yaksha is surprised.

“Bhima possesses extraordinary physical strength, and Arjuna is an incomparable archer. Do you not need these two warriors who are capable of confronting Duryodhana?”

Dharmaraya replies:

“We three are the sons of Kunti, while the other two are the sons of my stepmother Madri. I, a son of Kunti, am still alive. If Nakula is restored to life, my stepmother Madri too will have one surviving son. Both mothers are equally dear to me.”

The Yaksha is deeply moved by Dharmaraya’s sense of justice and fairness. Pleased with his choice, he restores all four brothers to life.

Who can escape death? Not merely every human being born into this world, but every living creature in creation must die one day. Everyone knows this truth.

Yet the strange thing is the illusion that “Death comes only to others, never to oneself!”

When people hear of someone’s death, they shed a few tears, pray for the departed soul to rest in peace, and the very next moment forget everything and become absorbed in their daily affairs.

But when they themselves fall ill and are admitted to a hospital, and the doctors diagnose cancer and indicate that they may not live much longer, the very thought of their own death makes their hearts tremble.

What makes human life truly meaningful? Does its fulfilment lie in power and position? In wealth? In the respect and recognition one earns in society? Or does it lie in something beyond all these? If so, what is it?

An extraordinary literary masterpiece that raises such questions in the minds of readers is the short novel The Death of Ivan Ilyich, written by the great Russian author Leo Tolstoy.

Published in 1886, this work may appear to be a story about death, but in reality, it is a profound exploration of the true meaning of life.

One day, judges and officials are engaged in their usual work at a courthouse. During a break, they glance through a newspaper and come across the unexpected news of the death of their middle-aged colleague, Judge Ivan Ilyich.

Everyone expresses sorrow at his passing. But the thoughts passing through their minds are quite different.

They are not frightened by the possibility that death might come to them too, just as unexpectedly as it came to Ivan. Instead, they begin to wonder whether his vacant position might offer them an opportunity for promotion. Others calculate whether his death might help them avoid an inconvenient transfer.

Deep within their hearts, everyone experiences an unspoken sense of relief:

“It is he who has died, not I!”

Peter, one of Ivan’s colleagues, visits the deceased judge’s home to offer his condolences. He looks at Ivan lying in his coffin.

There is an expression of peace on Ivan’s face. It seems as though he has discovered some truth that remains unknown to those who are still alive!

Ivan’s wife, Praskovya, speaks about the grief caused by her husband’s death. But in the course of the conversation, she also raises a practical question: how much money might she receive from the government following her husband’s death?

Peter does not remain beside the dead body for long. He soon leaves the house, goes to his club, and joins his friends in a game of cards.

Thus, Tolstoy begins his novel with the news of his protagonist’s death and then unfolds the story of his life through a series of events narrated retrospectively, almost like a flashback.

Ivan Ilyich has been intelligent since childhood. After studying law, he enters government service. Winning the approval of his superiors, securing promotions, and establishing himself as a respectable member of society become the principal goals of his life.

He tries to live just as the distinguished and influential people around him do.

He marries a beautiful young woman, and their married life is pleasant in the beginning. Gradually, however, misunderstandings and disagreements arise between husband and wife.

Instead of speaking openly with his wife and resolving their differences, Ivan immerses himself more and more deeply in his judicial work to escape the unpleasant atmosphere at home. Spending his time among legal documents and court cases becomes more agreeable to him than family life.

As time passes, he obtains a prestigious position and a handsome salary. He acquires a new home and purchases expensive furniture, curtains, carpets, and decorative articles.

One day, while standing on a ladder to arrange the curtains near a window, he accidentally slips and falls. His side strikes the window frame with considerable force.

He laughs off the incident, dismissing it as a minor injury.

A few days later, however, pain begins to trouble him. It grows increasingly severe, and he seeks medical treatment. His condition worsens until he is confined to bed.



One day, he asks the doctor:

“Doctor, is my illness serious? Am I going to die?”

The doctor gives no direct answer.

Ivan is reminded of the cases he used to hear in his courtroom. He recalls how he would remain absorbed in legal procedures without paying attention to the fear, anxiety, and suffering of the accused persons standing before him.

Now he feels that the doctors are treating him in much the same way!

More than his physical pain, it is the behaviour of those around him that torments Ivan.

To his wife, her husband’s illness becomes a great inconvenience. His daughter remains preoccupied with her approaching marriage and the pleasures of social gatherings. Relatives and friends visit him, make polite enquiries about his health, and leave.

Ivan gradually senses that his death is approaching.

What pains him most is the feeling that there is no one who truly understands his condition and speaks a few affectionate words to comfort him.

At this stage, the person who cares for him is Gerasim, a poor servant employed in his household.

Gerasim is not highly educated, but he possesses an abundance of humanity and compassion.

He notices that Ivan’s pain diminishes somewhat when his legs are raised. So he sits beside him, supporting his master's legs on his shoulders.

Ivan feels embarrassed by such devoted service.

“Doesn't this cause you a great deal of trouble?” he asks.

“What trouble is there in this, sir? You are suffering from an illness. What is wrong with helping you?” Gerasim replies humbly.

Those simple words touch Ivan’s heart.

Here is a poor servant offering him the human warmth and consolation that neither his wife nor his children have been able to give!

Ivan begins to reflect upon his entire life.

What has he been living for all these years?

Promotions, salary, power, a beautiful house, expensive furniture: can any of these things now lessen his suffering? Can they save him from death?

Numerous questions of this kind arise in Ivan’s mind.

What matters is not how many years a person has lived, but how that person has lived.

Even if one lives for a hundred years, what meaning can such a life have if it is spent in selfishness, arrogance, hatred, and jealousy?

When a person holds power, everyone shows respect. When one possesses wealth, relatives and friends gather around. When one enjoys good health, one can indulge in the pleasures and comforts of life.

But when illness confines a person to bed and leaves him suffering helplessly, all these things begin to appear meaningless.

What one needs at such a moment is a loving hand to hold and a compassionate heart that feels another's pain!


- Sri Taralabalu Jagadguru
Dr. Shivamurthy Shivacharya Mahaswamiji

Sri Taralabalu Jagadguru Brihanmath, Sirigere
Published in Vijaya Karnataka,
Bisilu Beladingalu, 22 Oct 2026.
Даже сегодня, когда людям не удаётся докопаться до истины, в повседневной речи часто звучит выражение «Якша-Прашна» («Вопрос Якши»)!

Что же такое эта Якша-Прашна? Так называют эпизод из «Лесной книги» Махабхараты.

Во время лесного изгнания Дхармараджу (Юдхиштхиру) мучила сильная жажда. Один за другим его братья отправлялись за водой к ближнему озеру, но ни один не вернулся. Прождав долгое время, Дхармараджа сам пошёл их искать. К своему ужасу, он нашёл всех братьев бездыханными на берегу озера.

Вдруг раздался голос, но говорящего не было видно:

«Прежде чем пить воду, ответь на мой вопрос. Иначе и ты падёшь на землю, как твои братья!»

Это было предостережение Якши, стража озера.

Якша спросил:

«Что самое поразительное в этом мире?»


Дхармараджа ответил:

«Аханьяхани бхутани правишанти ямалаям,
Шешах стхаварам иччханти ким ашчарьям атах парам?» —

«Каждый день живые существа умирают и уходят в обитель Ямы, владыки смерти. И всё же, видя это, люди желают жить на земле вечно. Что может быть поразительнее?»

Ответ Дхармараджи, бесспорно, точен. Но, на наш взгляд, ещё поразительнее решение, которое он принял сразу после этого.

Якша спросил:

«Я могу вернуть к жизни лишь одного из твоих четырёх павших братьев. Кого ты выберешь?»

Дхармараджа выбрал Накулу.

Якша удивился.

«Бхима наделён необычайной силой, а Арджуна — несравненный лучник. Разве тебе не нужны эти два воина, способные противостоять Дурьодхане?»

Дхармараджа ответил:

«Мы трое — сыновья Кунти, а двое других — сыновья моей мачехи Мадри. Я, сын Кунти, ещё жив. Если Накула вернётся к жизни, то и у моей мачехи Мадри останется в живых один сын. Обе матери одинаково дороги мне».

Якша был глубоко тронут справедливостью и беспристрастностью Дхармараджи. Довольный его выбором, он вернул к жизни всех четырёх братьев.

Кто может избежать смерти? Не только каждый рождённый в этом мире человек, но и всякое живое существо однажды должно умереть. Эта истина известна всем.

И всё же странно, что людей не покидает иллюзия: «Смерть приходит только к другим, но не ко мне!»

Узнав о чьей-то смерти, люди погорюют, помолятся за упокой души усопшего — и уже в следующую минуту обо всём забудут, погрузившись в повседневные дела.

Но когда они сами заболевают и попадают в больницу, а врачи ставят диагноз «рак» и дают понять, что жить, возможно, осталось недолго, одна лишь мысль о собственной смерти заставляет их сердце трепетать.

Что делает человеческую жизнь по-настоящему осмысленной? В чём её полнота, во власти и положении? В богатстве? В уважении и признании общества? Или в чём-то, что выше всего этого? Если так, то в чём же?

Необыкновенное литературное произведение, пробуждающее в читателе такие вопросы, — повесть «Смерть Ивана Ильича» великого русского писателя Льва Толстого.

Опубликованное в 1886 году, это произведение может показаться рассказом о смерти, но на самом деле это глубокое исследование подлинного смысла жизни.

Однажды судьи и чиновники были заняты привычной работой в здании суда. Во время перерыва они просматривали газету и наткнулись на неожиданное известие о смерти своего коллеги средних лет, судьи Ивана Ильича.

Вслух все выразили сожаление по поводу его кончины. Но мысли, проносившиеся у них в головах, были совсем иными.

Их не пугало то, что смерть может прийти и к ним так же неожиданно, как пришла к Ивану Ильичу. Вместо этого одни тут же принялись прикидывать, нельзя ли занять освободившееся место и получить повышение, а другие — нельзя ли теперь избежать нежелательного перевода.

В глубине души каждый испытывал несказанное облегчение:

«Умер он, а не я!»

Пётр Иванович, один из коллег Ивана Ильича, пришёл в дом покойного выразить соболезнования. Он посмотрел на Ивана Ильича, лежавшего в гробу.

На лице покойного было выражение умиротворения. Казалось, будто он постиг некую истину, неведомую тем, кто ещё жив!

Жена Ивана Ильича, Прасковья Фёдоровна, говорила о горе, которое причинила ей смерть мужа. Но в ходе разговора она подняла и практический вопрос: сколько денег она сможет получить от казны после смерти мужа?

Пётр Иванович недолго оставался возле покойного. Вскоре он ушёл, отправился в клуб и сел с друзьями за карты.

Так Толстой начинает повесть с известия о смерти героя, а затем разворачивает историю его жизни через ряд событий, рассказанных ретроспективно, почти как воспоминание.

Иван Ильич с детства был умён. Окончив курс правоведения, он поступил на государственную службу. Заслужить одобрение начальства, получать повышения и утвердиться в качестве почтенного члена общества — вот что стало главными целями его жизни.

Он старался жить так же, как жили окружавшие его знатные и влиятельные люди.

Он женился на красивой молодой девушке, и поначалу их супружеская жизнь была приятной. Однако постепенно между мужем и женой стали возникать недоразумения и разногласия.

Вместо того, чтобы открыто поговорить с женой и разрешить недопонимание, Иван Ильич всё глубже погружался в судебную работу, спасаясь от нежеланной атмосферы дома. Проводить время среди судебных бумаг и дел стало для него приятнее, чем семейная жизнь.

Со временем он получил престижную должность и солидное жалованье. Он обзавёлся новым домом и купил дорогую мебель, гардины, ковры и предметы убранства.

Однажды, стоя на лесенке, чтобы повесить гардины на окно, он нечаянно оступился и упал, сильно ударившись боком о раму.

Он со смехом отмахнулся от происшествия, сочтя его пустяковым ушибом.

Однако через несколько дней его начала беспокоить боль. Она становилась всё сильнее, и он обратился к врачам. Его состояние ухудшалось, пока он не оказался прикован к постели.


Однажды он спросил врача:

«Доктор, моя болезнь опасна? Я умру?»

Врач не дал прямого ответа.

Иван Ильич вспомнил дела, которые слушал в своём суде. Он вспомнил, как бывал поглощён судебными процедурами, не обращая внимания на страх, тревогу и страдания стоявших перед ним подсудимых.

Теперь ему казалось, что врачи обращаются с ним точно так же!

Больше, чем физическая боль, Ивана Ильича мучило поведение окружающих.

Для жены болезнь мужа стала большим неудобством. Дочь была занята предстоящей свадьбой и удовольствиями светской жизни. Родственники и друзья навещали его, вежливо справлялись о здоровье, и уходили.

Иван Ильич постепенно чувствовал, что смерть приближается.

Больнее всего ему было от ощущения, что нет никого, кто по-настоящему понимал бы его состояние и сказал бы несколько ласковых слов утешения.

В это время о нём заботился Герасим, бедный слуга, работавший в доме.

Герасим был необразован, но в нём было много человечности и сострадания.

Он заметил, что боль Ивана Ильича немного стихает, когда его ноги приподняты. Поэтому он садился рядом и держал ноги барина у себя на плечах.

Ивану Ильичу было неловко от такой преданной заботы.

«Тебе ведь это в тягость?» — спросил он.

«Какая же тут тягость, барин? Вы больны. Отчего же не помочь?» — смиренно ответил Герасим.

Эти простые слова тронули сердце Ивана Ильича.

Бедный слуга дарил ему то человеческое тепло и утешение, которого не смогли дать ни жена, ни дети!

Иван Ильич стал размышлять обо всей своей жизни.

Ради чего он жил все эти годы?

Повышения, жалованье, власть, красивый дом, дорогая мебель — может ли что-либо из этого теперь облегчить его страдания? Может ли спасти от смерти?

Множество подобных вопросов возникало в уме Ивана Ильича.

Важно не то, сколько лет прожил человек, а то, как он прожил.

Даже если прожить сто лет, какой смысл может иметь жизнь, проведённая в эгоизме, высокомерии, в ненависти и зависти?

Когда у человека есть власть, все проявляют к нему почтение. Когда у него есть богатство, вокруг собираются родственники и друзья. Когда он здоров, он может предаваться удовольствиям и радостям жизни.

Но когда болезнь приковывает человека к постели, и он страдает в беспомощности, всё это оборачивается совершенно бессмысленным.

В такую минуту человеку нужно лишь то, чтобы кто-то с любовью держал его за руку и чьё-то сердце откликалось на его боль!

— Шри Таралабалу Джагадгуру
д-р Шивамурти Шивачарья Махасвамиджи,
Шри Таралабалу Джагадгуру Брихан-матх, Сиригере.
Опубликовано в газете «Виджая Карнатака»,
рубрика «Бисилу Беладингалу», 22 октября 2026 г.