ಮೆಳ್ಳೆಕಟ್ಟೆಯಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರಿಂದ ‘ಶ್ರೀ ತರಳಬಾಳು ಭವನ’ ಉದ್ಘಾಟನೆ :

  •  
  •  
  •  
  •  
  •    Views  

ಸುಮಾರು ಐವತ್ತು ವರ್ಷಗಳ ಹಿಂದೆ ಶ್ರೀ ತರಳಬಾಳು ಬೃಹನ್ಮಠಕ್ಕೆ ಮೆಳ್ಳೇಕಟ್ಟೆ ಗ್ರಾಮದಲ್ಲಿನ ಜಾಗವನ್ನು ದಾನವಾಗಿ ಬರೆಯಲಾಗಿತ್ತು.  ಆ ಜಾಗ ಖಾಲಿ ಇರುವುದನ್ನು ಕಂಡು ಗ್ರಾಮದಲ್ಲಿ ಹಾಲಿನ ಡೈರಿಗೆ ಸರಿಯಾದ ವ್ಯವಸ್ಥಿತ ಕೊಠಡಿ ಇಲ್ಲದ ಕಾರಣ ಸದರಿ ಜಾಗದಲ್ಲಿ ಕೊಠಡಿ ನಿರ್ಮಿಸಿ ಕೊಡಲು ಶ್ರೀ  ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ  ಸಂಘದ ಹಾಗೂ ಗ್ರಾಮಸ್ಥರ ವತಿಯಿಂದ ಕೇಳಿಕೊಳ್ಳಲಾಗಿತ್ತು. 

ಪರಮಪೂಜ್ಯರು ಮನವಿಗೆ ಒಪ್ಪಿ ತಮ್ಮ ಶ್ರೀ ಮಠದ ಖರ್ಚಿನಿಂದ ನೂತನ ಕೊಠಡಿಯನ್ನು ನಿರ್ಮಿಸಿ ಕೊಡಲು ಒಪ್ಪಿಕೊಂಡಂತಹ ಕರುಣಾಮಹಿ, ನಡೆದಾಡುವ ದೇವರು. ರೈತರ ಬಾಳಿನ ಆಶಾಕಿರಣ ಎನ್ನುವ ಮಾತಿಗೆ ಮತ್ತೆ ಸಾಕ್ಷಿಯಾದ ಪೂಜ್ಯರು ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಕೊಠಡಿಯನ್ನು ನಿರ್ಮಿಸಿಕೊಟ್ಟು ಉದ್ಘಾಟನೆಗೆ ದಿನಾಂಕ : 26-3-2022 ರ ಶನಿವಾರದಂದು ಮೆಳ್ಳೆಕಟ್ಟೆ ಗ್ರಾಮಕ್ಕೆ ಆಗಮಿಸಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು ಹಾಗೂ ಗ್ರಾಮಸ್ಥರರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿ ಅಧ್ಯಕ್ಷರ ಕೈಗೆ ಕೊಠಡಿಯ ಕೀಲಿಕೈ ಹಸ್ತಾಂತರಿಸುವ ಮೂಲಕ ಶುಭ ಹಾರೈಸಿದರು ಹಾಗೂ ಗ್ರಾಮದ ಜನರ ಜೀವನಕ್ಕೆ ಆಧಾರವಾಗಿರುವ ಹಾಲು ಉತ್ಪಾದಕರಿಗೆ ಆರ್ಥಿಕ ಸಬಲರಾಗುವಂತೆ ಕರೆನೀಡಿದರು. 

ಈ ಕಾರ್ಯಕ್ರಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರು ಗ್ರಾಮಸ್ಥರು ಹಾಗೂ ಕೊಠಡಿ ನಿರ್ಮಾಣಕ್ಕೆ ಶ್ರಮಿಸಿದ ಸಿ.ಟಿ.ಕುಮಾರ್ ಮತ್ತು ಸಿ.ಎಂ.ಮಾರುತಿ, ಚನ್ನಬಸಪ್ಪ, ಗುರುಸಿದ್ದಪ್ಪ, ಎಂ.ಎಂ.ಗಿರೀಶ್, ಎ.ಈ.ನಾಗರಾಜು ಇತರರು ಇದ್ದರು.