ಜಂಗಮ ತರಬೇತಿ ಶಿಬಿರಕ್ಕೆ ಚಾಲನೆ : ನಿವೃತ್ತ ಪ್ರಾಧ್ಯಾಪಕರಾದ ಡಾ. ಈಶ್ವರ ಶರ್ಮಾ ಅವರಿಂದ

  •  
  •  
  •  
  •  
  •    Views  

ಸಿರಿಗೆರೆ: ಜಂಗಮರು ಶ್ರೀಮಠ ಮತ್ತು ಭಕ್ತರ ನಡುವೆ ಸಂಪರ್ಕ ಸೇತುವೆಯಂತೆ ಸೇವೆ ಸಲ್ಲಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕರು ಮತ್ತು ಶ್ರೀಮಠದ ಮುಖ್ಯಪರೋಹಿತರಾದ ಡಾ. ಈಶ್ವರ ಶರ್ಮಾ ತಿಳಿಸಿದರು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಜಂಗಮ ತರಬೇತಿ ಶಿಬಿರವನ್ನು ಜ್ಯೋತಿ ಬಳಗಿಸಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ವೈದ್ಯರ ಮಕ್ಕಳು ವೈದ್ಯರೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಅವರು ವೈದ್ಯಕೀಯ ಕೋಸ್೯ ಅನ್ನು ಓದಬೇಕು. ಆಗ ವೈದ್ಯರಾಗುತ್ತಾರೆ. ಅಂತೆಯೆ ಜಂಗಮರ ಮಕ್ಕಳು ಜಂಗಮರು ಎಂದು ಕರೆಸಿಕೊಳ್ಳಬೇಕಾದರೆ ಜಂಗಮ ದೀಕ್ಷೆ ಮುಖ್ಯ ಎಂದರು. ಕೇವಲ ಜಂಗಮದೀಕ್ಷೆ ಮುಖ್ಯವೆಂದರೆ ಸಾಲದು ಅವರಿಗೆ ಸಂಸ್ಕಾರ,  ವೇದ ಮಂತ್ರಗಳ ಮತ್ತು  ಜ್ಯೋತಿಷ್ಯ ಅಭ್ಯಾಸದ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಎಲ್ಲರೂ ಕಲಿತು ಸಂಸ್ಕಾರವಂತರಾಗಬೇಕು ಎಂದರು. ಶಿಕ್ಷಣ ವ್ಯವಸ್ಥೆಯಲ್ಲಿ ನೀವು ಸಂಸ್ಕ್ರತ ಭಾಷೆಯನ್ನು ಕಲಿಯಬೇಕು. ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ ಇದ್ದಂತೆ ಎಂದರು. 

ಶ್ರೀ ಕಾಶಿ ಮಹಾಲಿಂಗಸ್ವಾಮಿಗಳವರು ಕಬ್ಬಿಣದ ಕಡಲೆಯಂತಿದ್ದ ಸಂಸ್ಕೃತ ವ್ಯಾಕರಣವನ್ನು ಕಾಶಿಯಲ್ಲಿ ಅಭ್ಯಾಸ ಮಾಡಿ ಕರಗತ ಮಾಡಿಕೊಂಡಿದ್ದರು. ಶ್ರೀ ಗುರುಶಾಂತ ರಾಜದೇಶೀಕೇಂದ್ರ  ಮಹಾಸ್ವಾಮಿಗಳವರು, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಶಿಯಲ್ಲಿ ಅಭ್ಯಾಸ ಮಾಡಿರುವುದನ್ನು ನೆನಪಿಸಿಕೊಂಡರು.

ಅಣ್ಣನ ಬಳಗದ ಅಧ್ಯಕ್ಷರಾ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ  ಜಂಗಮ ತರಬೇತಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಇಂತಹ ತರಬೇತಿಗಳಲ್ಲಿ ಭಾಗವಹಿಸುವುದರಿಂದ ಬೇರೆ ಬೇರೆ ಭಾಗಗಳ ವಿದ್ಯಾರ್ಥಿಗಳ ಸ್ನೇಹ ಬೆಳಸಿಕೊಳ್ಳಬಹುದು. ತಂದೆ ತಾಯಿಯರನ್ನು ಬಿಟ್ಟು ಬದುಕುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಜಂಗಮ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಸಂಚಾಲಕ ಎಸ್.ಆರ್.ಮಲ್ಲಿಕಾರ್ಜುನಯ್ಯ, ವೇದ ಶಿಕ್ಷಕ ಹೆಚ್ ಮರುಳಸಿದ್ದ ಸ್ವಾಮಿ, ಜಂಗಮವಟುಗಳು ಮತ್ತು ಪೋಷಕರು ಇದ್ದರು.