ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

  •  
  •  
  •  
  •  
  •    Views  

ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲೂಕು ಉತ್ತಂಗಿ ಗ್ರಾಮದ ದಿವಂಗತ ರೇವಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಕೊಟ್ರಮ್ಮ 2012 ರಲ್ಲಿ ನಮ್ಮ ಮಠಕ್ಕೆ 15 ಎಕರೆ ಜಮೀನನ್ನು ಕ್ರಯಕ್ಕೆ ಕೊಟ್ಟಿದ್ದರು. ಇದಲ್ಲದೆ ಎರಡು  ಮನೆಗಳನ್ನು ದಾನವಾಗಿ ಕೊಟ್ಟಿದ್ದರು. ಈ  ಆಸ್ತಿಗಳು ಆಗ ಮಠದ ಕಾರ್ಯದರ್ಶಿಯಾಗಿದ್ದ ಡಾ. ಸಿದ್ಧಯ್ಯನ ಹೆಸರಿಗೆ ರಿಜಿಸ್ಟರ್ ಆಗಿದ್ದವು. 

ಮಠದ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿದ ಮೇಲೆ ಡಾ. ಸಿದ್ಧಯ್ಯನು ಈ ಆಸ್ತಿಗಳು ತನ್ನದೇ ಎಂದು, ಇದಾವುದೂ ಮಠಕ್ಕೆ ಸೇರಿದ ಆಸ್ತಿಗಳಲ್ಲವೆಂದು ಹೂವಿನ ಹಡಗಲಿ ಕೋರ್ಟಿನಲ್ಲಿ ಮಠದ ವಿರುದ್ಧ ಕೇಸು ದಾಖಲಿಸಿದ್ದನು. 

ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ ಡಾ. ಸಿದ್ಧಯ್ಯನ ದಾವೆಯನ್ನು ದಿನಾಂಕ 31-8-2024 ರಂದು ವಜಾ ಗೊಳಿಸಿದ ಸಂಗತಿಯನ್ನು ಈ ಹಿಂದೆ ವರದಿ ಮಾಡಲಾಗಿತ್ತು. 

ಉತ್ತಂಗಿ ಜಮೀನು ಕಬಳಿಸಲು ವಿಫಲ ಪ್ರಯತ್ನ!!! ನ್ಯಾಯಾಲಯದಲ್ಲಿ ಡಾ. ಎಸ್ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ    http://news.taralabalu.in/news.php?tp=2636

ಸಿದ್ದಯ್ಯನು ಇಲ್ಲಿಗೆ ಸುಮ್ಮನಾಗದೆ ಇದು ತನ್ನದೇ ಆಸ್ತಿ ಎಂದು, ಮಠದ ಆಸ್ತಿ ಅಲ್ಲವೆಂದು ಹೈಕೋರ್ಟ್ (ಧಾರವಾಡ ಬೆಂಚ್) ನಲ್ಲಿ ಮಠದ ವಿರುದ್ಧ ಎರಡು ದಿನಗಳ ಹಿಂದೆ ರಿಟ್ ಪಿಟಿಷನ್  ಕೇಸು ದಾಖಲಿಸಿರುತ್ತಾನೆ.

ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ