N-2651 
  13-09-2024 03:45 PM   
ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.
1942 ರಿಂದ 1980 ಸಿರಿಗೆರೆ ಮಠಕ್ಕೆ ,ಸಾಧು ಲಿಂಗಾಯತ ಸಮಾಜಕ್ಕೆ,ಸಾಧು ಸಮಾಜದವರ ಅವಲಂಬಿತ ಸಮಾಜಗಳ ಕುಟುಂಬದವರಿಗೆ ಭದ್ರ ಬುನಾದಿಯನ್ನು ಹಾಕಿದ ಕಾಲಮಾನ.
. ಲಕ್ಷಾಂತರ ಕುಟುಂಬಗಳು ಏಕಕಾಲಕ್ಕೆ ಬೆಳವಣಿಗೆ ಕಂಡು ಅಭಿವೃದ್ಧಿ ಹೊಂದಿ ಪ್ರವರ್ಧಮಾನಕ್ಕೆ ಬಂದ ಕಾಲಮಾನ.... ಒಂದಿಡೀ ತಲೆಮಾರಿಗೆ ಅಕ್ಷರ ಜ್ಞಾನ ನೀಡಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆ ತರಲು ಕಾರಣೀಭೂತವಾದ ಕಾಲಮಾನ....ಮನೆಗಳ ಖಾಸಗೀ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಶರಣರನ್ನು ವಚನ ಸಾಹಿತ್ಯವನ್ನು ಮನೆಗಳಲ್ಲಿ ಅಚ್ಚಳಿಯದೇ ಮೂಡಿಸಿದ ಕಾಲಮಾನ......ದೇಶ ತಿರುಗು ಕೋಶ ಓದು ಎಂಬ ನಾಣ್ಣುಡಿಗೆ ಭಾಷ್ಯ ಬರೆದಂತೆ ಊರಿನಿಂದ ಹೊರಗೆ ಹೋಗೋದೂ ಗೊತ್ತಿಲ್ಲದ ಶಿಷ್ಯರನ್ನು ಭಾರತವನ್ನು ತೋರಿಸಿದ ಕಾಲಮಾನ.....ನಿಂತ ನೆಲ ಕುಸಿಯುವಂತೆ ಮಾಡುವ ಶತ್ರುಗಳೂ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ ಕಾಲಮಾನ.....ಇಂದು ಸಾಧು ಸಮಾಜದವರು ಸತತ ಮೂರು ಬಾರಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೆ ಅಧ್ಯಕ್ಷರಾಗುವುದಕ್ಕೂ ಅಡಿಪಾಯ ಹಾಕಿದ ಕಾಲಮಾನ...... ಹೇಳಲು ಹೋದರೆ ಮುಗಿಯದ ಕಥನ.....ಈ ಮೇಲಿನ ಎಲ್ಲಾ ಸಾಧನೆಗಳ ಹಿಂದಿದ್ದ ಸಿದ್ಧಿ ಪರುಷಮಣಿ ದೊಡ್ಡಗುರುಗಳೆಂದೇ ಜನಮಾನಸದಲ್ಲಿ ಪ್ರಖ್ಯಾತ ರಾದ ಶ್ರೀ ಶ್ರೀ ಶ್ರೀ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು.....ಅವರನ್ನು ನೆನೆವುದೆ ಚೇತೋಹಾರಿ ಅನುಭವ...ಅವರ ಸಾಧನೆ ಚಿತ್ರಿಸುವುದು ಶೋಷಣೆಯಿಂದ ಹೊರಬಂದು ನಿಂತುಕೊಂಡು ನೋಡುವ ಮನಸ್ಸಿಗೆ ಆಹ್ಲಾದಕರ ಭಾವ.....ಇಂತಹ ಗುರುಗಳು ಪಡೆದ ಸಮಾಜ ಧನ್ಯ..... ಅವರೊಂದಿಗೆ ಒಡನಾಡಿದ ಸಮಕಾಲೀನ ಶಿಷ್ಯರ ಜೀವನ ಪಾವನ.....ಹೊರಗಿನ ಪ್ರಪಂಚದ ಸವಾಲುಗಳಿಗೆ ದಿಟ್ಟ ಹೆಜ್ಜೆ... ಅಂತರ್ಧ್ವನಿ ಕೆಳಿಸಿಕೊಳ್ಳಲು ಬಯಸುವವರಿಗೆ ಆತ್ಮ ನಿವೇದನೆ.......ಇವೆರಡೂ ಪುಸ್ತಕಗಳು ಮನುಷ್ಯನ ಬಾಹ್ಯ ಮತ್ತು ಆಂತರೀಕ ಜಗತ್ತಿನ ವಿಕಾಸಕ್ಕೆ ರೆಫರೆನ್ಸ ಆಗಿ ಕೆಲಸ ಇಂದಿಗೂ ಪ್ರಸ್ತುತ ಆಗಿರುವುದು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಬದುಕಿದ್ದಾಗಲೇ ದಂತಕಥೆ ಎಂದೇ ಕರೆಸಿಕೊಳ್ಳುತ್ತಿದ್ದ ಮಹಾನ್ ಚೇತನ.....ಈ ಚೇತನ ಭೌತಿಕವಾಗಿ ಕಣ್ಮರೆಯಾಗಿ 32 ವರ್ಷ ಆಗಿರುವ ಈ ಸಂದರ್ಭದಲ್ಲಿ ಇಡೀ ಸಮಾಜವನ್ನು ಅದರ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ಒಂದೇ ಕಸಬರಿಕೆಯ ಕಟ್ಟಿನಂತೆ ಸಮಾಜದ ಕೊಳೆ ಗೂಡಿಸಿ ಸ್ವಚ್ಛತೆ ಗೊಳಿಸುವ ಎಂದೂ ಮುಗಿಯದ ಶಾಶ್ವತ ಸೇವೆಗೆ ಅಣಿಗೊಳಿಸುವುದೇ ಮಹಾನ್ ಚೇತನಕ್ಕೆ ನಮ್ಮ ಭಕ್ತಿಯ ಶ್ರದ್ಧಾಂಜಲಿ ಎಂದು ಭಾವಿಸುತ್ತೇನೆ...... ಮರುಳಸಿದ್ಧ ಪರಂಪರೆಯ ಎಲ್ಲ ಗುರು ವೃಂದಕ್ಕೆ ಹಣೆಹಚ್ಚಿ ದೀರ್ಘದಂಡ ಪ್ರಣಾಮಗಳೊಂದಿಗೆ ಸರ್ವರನ್ನೂ ಮರುಳಸಿದ್ದೊದರಾದಿಯಾಗಿ ದೊಡ್ಡ ಗುರುಗಳು ಕೈಹಿಡಿದು ಮುನ್ನಡೆಸುವ ಭಾಗ್ಯ ಹೊಂದಲಿ ಎಂದು ಪ್ರಾರ್ಥಿಸುತ್ತೇನೆ.
ಸುರೇಂದ್ರ ಜಿ ಎಸ್
India