N-2540 
  17-05-2024 03:39 PM   
ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ
ಬಿಸಿಲು ಬೆಳದಿಂಗಳು ಅಂಕಣ ಪ್ರತಿಕ್ರಿಯೆ
*ಮುತ್ತುಗಳ ನಾಡಿನಿಂದ ಒಂದು ಪತ್ರ*
ಶ್ರೀಗಳವರಿಗೆ ಪ್ರಣಾಮಗಳು
ಹವಳ ಮುತ್ತುಗಳ ನಾಡೆಂದು ಪ್ರಸಿದ್ಧಿಯಾದ ಒಮಾನ್ ದೇಶದ ಭೌಗೋಳಿಕ ಅಂಶಗಳು, ಅಲ್ಲಿನ ಜನಸಂಖ್ಯೆ, ಒಮಾನ್ ಹಾಗೂ ಭಾರತ ದೇಶದೊಂದಿಗಿನ ವಾಣಿಜ್ಯೋದ್ಯಮದ ನಂಟಿನ ಬಗ್ಗೆ ಶ್ರೀಗಳು ವಿವರವಾಗಿ ಈ ಲೇಖನದಲ್ಲಿ ತಿಳಿಸಿರುತ್ತಾರೆ.
ನಾವು ಈ ಲೇಖನವನ್ನ ಓದುತ್ತಿದ್ದರೆ ವಿದೇಶ ಪ್ರವಾಸದಲ್ಲಿ ಇದ್ದೀವೆನೋ ಎಂಬ ಅನುಭವ ಉಂಟಾಗುತ್ತಿದೆ. ಶ್ರೀಗಳ ಬರಹದಲ್ಲಿ ಒಂದೊಂದು ವಾಕ್ಯವು ಸಹ ಒಮಾನ್ ದೇಶದ ಇತಿಹಾಸವನ್ನ ಬಿಚ್ಚಿಡುತ್ತಾ ಸಾಗುತ್ತಿದೆ.
ಒಮಾನ್ ದೇಶದಲ್ಲಿ ಹೆಚ್ಚು ಮುಸ್ಲಿಮರಿದ್ದರೂ ಸಹ ಯಾವುದೇ ಮತಿಯ ಘರ್ಷಣೆ ಇಲ್ಲದಿರುವ ಪ್ರಸಂಗವು ಕೇಳಲು ಗೌರವಯುತವಾಗಿದೆ. ಎಲ್ಲಾ ಧರ್ಮೀಯರು ತಮ್ಮ ತಮ್ಮ ಧರ್ಮಗಳನ್ನು ಗೌರವಿಸುವುದರ ಜೊತೆಗೆ ಇತರ ಧರ್ಮಗಳನ್ನು ಸಹ ಗೌರವಿಸುವ ಸೌಹಾರ್ದ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂಬ ಆಶಯ ಅಲ್ಲಿದೆ. ಇಂತಹ ಸಂದರ್ಭಗಳು ಹಾಗೂ ಕ್ಷಣಗಳು ಭಾರತದಲ್ಲಿ ಬಂದರೆ ಇಡೀ ದೇಶವೇ ಸುಭಿಕ್ಷವಾಗುವುದರಲ್ಲಿ ಎರಡು ಮಾತಿಲ್ಲ.
ಅಲ್ಲಿನ ಶಿವಾ ದೇವಾಲಯ ಹಾಗೂ ಶ್ರೀಕೃಷ್ಣನ ದೇವಾಲಯಗಳ ವಾಡಿಕೆ ಅದ್ಭುತವಾಗಿದೆ.
ಅಲ್ಲಿ ಮಳೆ ವರ್ಷಕ್ಕೆ ನಾಲ್ಕು ಇಂಚು ಅಷ್ಟೇ ಬಂದರೂ ಸಹ ಸಮುದ್ರದ ನೀರನ್ನು ಪರಿಷ್ಕರಿಸಿ ಯಥೇಚ್ಛವಾಗಿ ಮನೆಮನೆಗೂ ದೊರೆಯುವಂತೆ ಮಾಡಲಾಗಿರುವ ಯೋಜನೆಯು ನಮ್ಮ ಶ್ರೀಗಳವರು ಹಲವಾರು ವರ್ಷಗಳ ಹಿಂದೆಯೇ ಪೂರ್ವ ನಿಯೋಚಿತವಾಗಿ ಸಿರಿಗೆರೆಗೆ ಸೂಳೆಕೆರೆಯಿಂದ ಕುಡಿಯಲು ನೀರು ತಂದ ಯೋಜನೆ ಹಾಗೂ ಕೆಲ ವರ್ಷಗಳ ಹಿಂದೆ ಹರಿಹರದ ತುಂಗಭದ್ರ ನದಿಯಿಂದ ಭರಮಸಾಗರ ಏತ ನೀರಾವರಿ ಯೋಜನೆ ಮೂಲಕ 42 ಕೆರೆಗಳಿಗೆ ನೀರು ತಂದ ಯೋಜನೆಗೆ ಸರಿ ಸಮನಾಗಿ ಕಾಣುತ್ತಿದೆ. ಹಾಗಾಗಿ ಶ್ರೀಗಳು ಬರೆದ ಇಂದಿನ ಲೇಖನ ಅರ್ಥಪೂರ್ಣವಾಗಿದ್ದು, ಓದುಗರ ಮನಸ್ಸನ್ನು ವಿದೇಶ ಪ್ರವಾಸದ ಕಡೆಗೆ ಕರೆದೊಯ್ಯುವ
ಹಾಗೂ ಅಲ್ಲಿನ ಕೆಲವು ಯೋಜನೆಗಳು ಶ್ರೀಗಳು ಜಾರಿಗೆ ತಂದ ಯೋಜನೆಗಳಿಗೆ ನಿದರ್ಶನವಾಗಿರುವುದು ನಮ್ಮ ಅದೃಷ್ಟವೇ ಸರಿ.....
ಎಸ್.ಎಂ ಸುನೀಲ್ ಕುಮಾರ್ರ್, ಶಿಕ್ಷಕರು ಹಾಗೂ ಪತ್ರಕರ್ತರು (ವಿಜಯ ಕರ್ನಾಟಕ) ಸಿರಿಗೆರೆ