N-2528 
  04-05-2024 12:50 PM   
ಎದೆಯಲ್ಲಿ ಇರಿಯುವ 'ಪ್ರೀತಿಯ' ಚೂರಿ!
*ಪೂಜ್ಯ ಗುರುಗಳವರ ಪಾದಗಳಿಗೆ ನಮಸ್ಕರಿಸುತ್ತಾ..*
ಎದೆಯಲ್ಲಿ ಇರಿಯುವ `ಪ್ರೀತಿಯ` ಚೂರಿ!
ಪ್ರೀತಿ ಯಾವತ್ತೂ ಅದು ಅಮೃತವಾಗುವುದಿಲ್ಲ , ವಿಷವೇ ಆಗುವುದು , ಎನ್ನುವುದು ಪದೇ ಪದೇ ಅನುಭವಿಸುತ್ತ ಇದ್ದೇವೆ.. ಹಾಗೆ ಕೇಳುತ್ತಿದ್ದೇವೆ.. ನೋಡುತ್ತಿದ್ದೇವೆ.. ಓದುತ್ತಿದ್ದೇವೆ..
ಇತಿಹಾಸವೇ ಎಷ್ಟೊಂದು ಉದಾಹರಣೆಗಳ ಮೂಲಕ ನಮ್ಮ ಮುಂದೆ ತೆರೆದುಕೊಂಡಿದೆ ಆದರೂ ನಾವು ಇನ್ನೊಬ್ಬರ ಮೇಲೆ ವಿಶ್ವಾಸವನ್ನು ಇಟ್ಟು ಹಳ್ಳಕ್ಕೆ ಬೀಳುತ್ತಲೇ ಇದ್ದೇವೆ..
ಈ ಅಂಕಣವು ನಿಮ್ಮೆಲ್ಲಾ ಅಂಕಣಗಳಿಗಿಂತ ನನಗೆ ಅತ್ಯಂತ ಪ್ರಿಯವಾಗಿದೆ.. ಯಾರನ್ನ ನಂಬುವುದು..? ಯಾರನ್ನ ಬಿಡುವುದು , ಯಾರೊಂದಿಗೆ ಹೇಗೆ ವಿಶ್ವಾಸವನ್ನು ಗಳಿಸುವುದು. .? ಎನ್ನುವುದೇ ಅಂದಿಗೂ ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ..
ಇಂಥವರೊಂದಿಗೆ ಬದುಕು ಹೇಗೋ ಸಾಗುತ್ತಿದೆ..
"ನಂಬಿಕೆ ಬಲು ಬೇಗ ಸಾಯುತ್ತದೆ..
ಅಪನಂಬಿಕೆ ಅವಕಾಶ ಸಿಕ್ಕಾಗಲಿಲ್ಲ ಅರಳುತ್ತಿರುತ್ತದೆ.."
ಸತ್ಯ ಸಂಗತಿಗಳು ಅನೇಕ ಜನರ ಅಭಿಪ್ರಾಯಗಳನ್ನು ಬದಲಾಯಿಸುವುದಿಲ್ಲ.. ಏಕೆಂದರೆ ಅವರು ಸತ್ಯ ಸಂಗತಿಗಳನ್ನು ಆಧರಿಸಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡಿರುವುದಿಲ್ಲ, ತಮ್ಮ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳಿಗೆ ತಕ್ಕಂತೆ ಸತ್ಯ ಸಂಗತಿಗಳನ್ನು ತಿರುಚುತ್ತಾರೆ..
ಅದೆಷ್ಟು ಸತ್ಯವಾದ ವಾಕ್ಯ ಇದು ಬುದ್ದಿಯವರೇ..
ಒಬ್ಬ ವ್ಯಕ್ತಿಯ ಮೇಲೆ ನಾವು ಹೊಂದಿರುವ ನಂಬಿಕೆಯು ಹೇಗೆಂದರೆ ನಾವು
ಅತೀ ಬಿಗಿಹಗ್ಗದ ಮೇಲೆ ಅವಶ್ಯಕತೆಗಿಂತ ಹೆಚ್ಚಾದ ಭಾರವನ್ನು ಹೊರಿಸುವುದು ನಮ್ಮ ನಂಬಿಕೆ ಆಗಿರುತ್ತದೆ.. ಆದರೆ
ಎರಡು ಮನಸ್ಸುಗಳನ್ನು ಜೋಡಿಸುವುದು
ಸೂಕ್ಷ್ಮವಾದ ದಾರವಾಗಿರುತ್ತದೆ..
ಅದನ್ನು ಪ್ರಾಮಾಣಿಕತೆ ಹಾಗೂ ನಿಷ್ಠೆ ಅಥವಾ ವಿಶ್ವಾಸಾರ್ಹತೆಯಿಂದ ಕೂಡಿಸಲಾಗಿರುತ್ತದೆ..
ಆದರೆ ಅದೇ ಬಿಗಿಯಾದ ಹಗ್ಗ ಅಥವಾ ಎಳೆಯನ್ನು ಪ್ರಶ್ನೆ ಮತ್ತು ಇನ್ನೊಬ್ಬರಿಗೆ ಹೇಳುವ ತವಕದಿಂದ ಅಥವಾ ಅನುಮಾನದಿಂದ ಆ ನಂಬಿಕೆ ಇರಿಸಿದ ವ್ಯಕ್ತಿಯನ್ನು ದುರ್ಬಲಗೊಳಿಸಿದಾಗ ಮಾತ್ರ ಆ ಹಗ್ಗ
ಸಂಪೂರ್ಣ ಸಮತೋಲನವನ್ನು ಕಳೆದುಕೊಂಡು ತುಂಡಾಗುವುದು ..
ದ್ರೋಹ ಎನ್ನುವುದು
ನಮ್ಮ ಸ್ವಂತ ಭಯಗಳಿಂದ ಹುಟ್ಟಿ ವಿವಿಧ ಸ್ಥಳಗಳನ್ನು ತಲುಪಿ ಅಪನಂಬಿಕೆಯನ್ನು ಹುಟ್ಟಿಸುತ್ತದೆ..
ಮುರಿದ ವಿಶ್ವಾಸ , ಭರವಸೆ, ನಂಬಿಕೆಯ ಉಲ್ಲಂಘನೆಯಾಗುತ್ತದೆ.. ನಮ್ಮೊಳಗಿನ ಆಂತರಿಕ ಎಚ್ಚರಿಕೆಗಳು ನಮ್ಮ ನಡವಳಿಕೆಯ ಪ್ರವೃತ್ತಿಯಾಗಬೇಕು..
ಅದು ಎಲ್ಲಿಂದ ಯಾರಿಂದ ಹೊರ ಸೋರಿದರೂ ಅಪನಂಬಿಕೆ ಎನ್ನುವುದು ಸಂಬಂಧಗಳಲ್ಲಿ ಅಥವಾ ಸ್ನೇಹದಲ್ಲಿ ನುಸುಳುತ್ತದೆ.. ಅದು ಎಂದಿದ್ದರು ನಮಗೆ ಅನಿಶ್ಚಿತತೆ ಮತ್ತು ಅನುಮಾನದ ನೆರಳನ್ನೇ ನೀಡುತ್ತದೆ..
ಪುನಃ ಪುನಃ ಓದುವಂತ ಲೇಖನ ಬುದ್ಧಿಯವರೆ..
ಬಣ್ಣಬಳಿದ ಮುಖಕ್ಕೆ ಹಿಡಿದ ಕನ್ನಡಿಯಂತಿದೆ ಪ್ರತಿಯೊಂದು ಪದಗಳು..
ಓದಿ ಪ್ರತಿಕ್ರಿಯೆಯನ್ನು ಬರೆಯುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಂತ ನಿಮಗೆ ನನ್ನ ಧನ್ಯವಾದಗಳು..
ಶ್ರೀ ಮಠದ ಭಕ್ತಳು
ಕೆ. ಜಿ. ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು