N-2642 
  07-09-2024 04:12 PM   
ಜಿ.ನಿಜಲಿಂಗಪ್ಪನವರ ನಿಧನ : ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ
ಶ್ರೀಯುತರು ಶ್ರೀಮಠದ ಪರಮ ಭಕ್ತರಲ್ಲೊಬ್ಬರಾಗಿದ್ದರು. ಹಾಗೂ 40 ವರ್ಷಗಳ ಕಾಲ ಶ್ರೀ ಸಂಸ್ಥೆಯ ಆಡಳಿತಾಧಿಕಾರಿಗಳಾಗಿದ್ದ ದಿವಂಗತರು ತಮ್ಮ ಜೀವನದುದ್ದಕ್ಕೂ ಅನೇಕ ಏಳು ಬೀಳುಗಳನ್ನು ಅನುಭವಿಸಿದವರು. ತಮ್ಮ ಧರ್ಮ ಪತ್ನಿಯರ ನಿಧನ, ಹಾಗೂ ಮಗನ ನಿಧನದಂಥಹ ಅನೇಕ ದುಃಖ ಪ್ರಸಂಗ ಗಳನ್ನು ಅನುಭವಿಸಿದ್ದರು, ಲಿ॥ ಹಿರಿಯ ಜಗದ್ಗುರುಗಳ ಕಾಲದಿಂದಲೂ ದಕ್ಷ ಆಡಳಿತ ನಡೆಸಿದವರು. ನಾನು ಸುಮಾರು 42 ವರ್ಷಗಳಿಂದ ಅವರ ಪರಿಚಯದಲ್ಲಿದ್ದೇನೆ.
ಶ್ರೀಯುತರ ನಿಧನದಿಂದ ಶ್ರೀಸಂಸ್ಥೆ ಹಾಗೂ ಮಠಕ್ಕೆ ಹಾಗೂ ಸಮಾಜಕ್ಕೆ
ತುಂಬಲಾರದ ನಷ್ಟವಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ
ನೀಡಲೆಂದೂ , ಕುಟುಂಬ ವರ್ಗದವರಿಗೆ ದುಃಖ ತಡೆಯುವ ಶಕ್ತಿ ನೀಡಲೆಂದು ಬೇಡಿಕೊಳ್ಳುತ್ತೇನೆ.
ಪ್ರೇಮ್ ನಜ಼ೀರ್
ಶುಭಪ್ರಧ ಲೇಔಟ್, ಸೋಮಿನಕೊಪ್ಪ-577204 ಶಿವಮೊಗ್ಗ