N-2642 

  07-09-2024 01:14 PM   

ಜಿ.ನಿಜಲಿಂಗಪ್ಪನವರ ನಿಧನ : ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ

  ನಾನು ಕಂಡಂತೆ ಜಿ ನಿಜಲಿಂಗಪ್ಪ ನವರ ವ್ಯಕ್ತಿತ್ವ ವೇ ಆದರ್ಶ.ಅವರ ಆಡಳಿತಾಧಿಕಾರಿ ಯಾಗಿ ದ್ದಾಗಿನ ನಡವಳಿಕೆ ನೌಕರ ವರ್ಗಕ್ಕೆ ಬಲವಿದ್ದಂತಾಗಿತ್ತು.ಹಾಗೂ ಶಿವಕುಮಾರ ಸ್ವಾಮಿಗಳ ಕಾಲದ ಆಡಳಿತದ ಕೈ ಕನ್ನಡಿ (ನನ್ನ ಸ್ನೇಹಿತ ನಾ ತಂದೆ) ಜಿ ನಿಜಲಿಂಗಪ್ಪ ನವರು .ಇವರ ಆತ್ಮಕ್ಕೆ ಶಾಕತಿದೂರಕಿಸಲೆಂದು‌ ತರಳಬಾಳು ಗುರುಪರಂಪರೆ ಯನ್ನು ಬೇಡಿಕೂಳ್ಳುತ್ತೇನೆ..
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2642 

  07-09-2024 01:10 PM   

ಜಿ.ನಿಜಲಿಂಗಪ್ಪನವರ ನಿಧನ : ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ

 ಜೀವನದುದ್ದಕ್ಕೂ ಗಡುಸುತನ, ನೇರ ಮಾತು, ಸ್ಪಷ್ಟವಾದ ನಿಲುವುಗಳನ್ನು ಇಟ್ಟುಕೊಂಡು ಬದುಕಿದವರು. ಬುದ್ಧಿ ಬಂದಾಗಿನಿಂದ ಅವರೊಂದಿಗೆ ಮಾತಾಡಿದ್ದೇನೆ. ಪ್ರತಿ ಸಲ ಮಾತನಾಡುವಾಗಲೂ ಸಣ್ಣ ಭಯ ಮನಸ್ಸಿನಲ್ಲಿ. ತುಂಬಾ ನೇರವಾದ ವ್ಯಕ್ತಿತ್ವ. ಅಂತವರನ್ನು ಕಂಡರೆ ಎಂತವರಿಗೂ ಭಯ ಆಗಿಯೇ ಆಗುತ್ತೆ. ಅವರ ಜೊತೆಗೆ ಕಳೆದ ಕ್ಷಣಗಳು ಇನ್ನು ನೆನಪು ಮಾತ್ರ. ಆಡಳಿತದ ವಿಚಾರದಲ್ಲಿ ವಿದ್ಯಾಸಂಸ್ಥೆಯನ್ನು ಹೇಗೆ ನಡೆಸಬೇಕು ಎಂದು ತೋರಿಸಿಕೊಟ್ಟವರು. ಎಂದೆಂದಿಗೂ ಸಂಸ್ಥೆಯ ನೌಕರರನ್ನು ಅಯ್ಯೋ ಅನ್ನಿಸಲಿಲ್ಲ. ಸರಿ ಯಾವುದು ತಪ್ಪು ಯಾವುದು ಎಂಬ ಸಾಮಾನ್ಯ ತಿಳುವಳಿಕೆ ಅವರ ಎಲ್ಲಾ ನಡವಳಿಕೆಗಳಲ್ಲಿ ಎದ್ದು ಕಾಣುತ್ತಿತ್ತು. ಸ್ವಂತ ಮಕ್ಕಳೂ ಎನ್ನದೆ ತಪ್ಪು ಮಾಡಿದವರು ಯಾರಾದರೂ ಸರಿ ತಪ್ಪು ತಪ್ಪೇ ಅಂತಾ ಕಡ್ಡಿ ಮುರಿದಂತೆ ಮಾತನಾಡುತ್ತಿದ್ದರು. ಕಡೆಯವರೆಗೂ ಯಾವ ಮುಲಾಜಿಗೂ ಒಳಗಾಗಿಲ್ಲ. ಅಂತವರ ನೆನಪು ಸದಾ ಚಿರಸ್ಥಾಯಿ. ಹಿರಿಯ ಜಗದ್ಗುರುಗಳ ಕಾಲದಿಂದ ಅವರು ಶ್ರೀಮಠಕ್ಕೆ ಮತ್ತು ವಿದ್ಯಾಸಂಸ್ಥೆಗೆ ದಣಿವರಿಯದ ಸೇವೆ ಸಲ್ಲಿಸಿದ್ದಾರೆ. ಅವರ ಈ ಸೇವೆ ಸದಾ ಶ್ಲಾಘನೀಯ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏💐
ಪ್ರಸನ್ನ ಯು., ಸಿರಿಗೆರೆ
India

N-2299 

  07-09-2024 01:04 PM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಪೂಜ್ಯರೇ ಎಷ್ಟೋ ಸಭೆ ಸಮಾರಂಭಗಳಲ್ಲಿ ಸಾಕಷ್ಟ ವಿಚಾರಗಳನ್ನು ಹೇಳಿದ್ದೀರಿ ಜನ
ಜನನಾಯಕರು ಕೇಳಿದ್ದಾರೆ ಅನುಸರಣಿ ಇಲ್ಲಾ. ಹಸುವಿನ ಮುಖವಾಡ ಹಾಕಿಕೊಂಡ ವ್ಯಾಘ್ರ ಗಂಳತೆಇದ್ದಾರೆ ಪೂಜೆ ಪುನಸ್ಕಾರಗಳು ತೋರಿಕೆ ಆಡಂಬರಕ್ಕೆ ಇವೆ ಭಕ್ತಿಮಾರ್ಗಕ್ಕೆ ಅಲ್ಲಾ. ಗುರುಕರಣೆ ದೇವರ ದರ್ಶನ ಅವರ ಅವರ ಭಾವ ಭಕ್ತಿಗೆ ಅವರ ಕಾಯಕಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಇಂದಿನ ದಿನಗಳಲ್ಲಿ ಸಮಾಜವನ್ನು ಸರಿದಾರಿಗೆ ತರುವುದು ಕಷ್ಟಸಾಧ್ಯವಾದರು ಮಾನವ ಕುಲದ ಉಳುವಿಗಾಗಿ ತಮ್ಮ ಜ್ಯಾನಾಮ್ಯತವನ್ನು ಸದಾ ನೀಡಬೇಕು ಗೋಮುಖ ವ್ಯಾಘ್ರರನ್ನು ಮಠದಿಂದ ದೂರವಿಟ್ಟು ನಿಜ ಭಕ್ತರಿಗೆ ತಮ್ಮ ಆಶಿರ್ವಾದ ಸದಾ ಇರಲಿ ಇಂತಿ ನಿಮ್ಮ ಭಕ್ತ
Karibasappa N
Chikkabenur

N-2299 

  07-09-2024 12:43 PM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಹೊಟ್ಟೆ ಪಾಡಿಗಾಗಿ ಅನೈತಿಕ ವೃತ್ತಿ ನಡೆಸಿ ಜೀವನ ಸಾಗಿಸುತ್ತಿದ್ದ ಮೇರಿ ಮ್ಯಾಗ್ದಲೀನಳನ್ನು ಪಾಪದ ಕಾರ್ಯಕ್ಕಾಗಿ `ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆಗೆ` ಗುರಿಪಡಿಸಿದಾಗ ಯೇಸು ಕ್ರಿಸ್ತರು `ಯಾರೂ ಯಾವ ಪಾಪವನ್ನು ಮಾಡದೇ ಇರುವವರು ಮಾತ್ರ` ಕಲ್ಲನ್ನು ಎಸೆಯಬಹುದೆಂದು ಹೇಳಿದಾಗ ಎಲ್ಲರ ಕೈಯಲ್ಲಿದ್ದ ಕಲ್ಲುಗಳನ್ನು ಎಸೆಯಲಾಗದೆ ಕೆಳಗೆ ಬೀಳುತ್ತವೆ. ಈ ಘಟನೆಯನ್ನು ಪರಮ ಪೂಜ್ಯರು ಉದಹರಿಸಿ ಲೇಖನದಲ್ಲಿ ತಿಳಿಸಿರುವುದು ಪ್ರಸಕ್ತ ಸನ್ನಿವೇಶದಲ್ಲಿ ರಾಜಕಾರಣಿಗಳು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ.ಇದು ಬಹುಷಃ ನ್ಯಾಯಾಂಗ ಕ್ಷೇತ್ರವನ್ನು ಬಿಟ್ಟಿಲ್ಲವೆಂದು ಕಾಣುತ್ತದೆ. ಈಗಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಕೆಸರಾಟ /ವಿದ್ಯಾಮಾನ ನೋಡಿದರೆ ಇದು ಸತ್ಯವಾಗಿದೆ...ಪರಮ ಪೂಜ್ಯರಿಗೆ ಭಕ್ತಿಪೂರ್ವಕ ನಮನಗಳು...🙏🏻🙏🏻🙏🏻

ಡಿ. ಪ್ರಸನ್ನಕುಮಾರ್
ಬೆಂಗಳೂರು
ಡಿ. ಪ್ರಸನ್ನಕುಮಾರ್
ಬೆಂಗಳೂರು

N-2625 

  07-09-2024 12:35 PM   

ನಮ್ಮ ಗುರುಗಳ ತಂಟೆಗೆ ಬಂದರೆ ಹುಷಾರ್: ಕೊಟ್ಟೂರು ಭಕ್ತರ ಖಡಕ್ ಎಚ್ಚರಿಕೆ…!

 It is not good to divide the religion unity by few people
Halesh R Haller
Hubli

N-2299 

  07-09-2024 12:24 PM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಪರಮಪೂಜ್ಯ ಡಾ॥ ಜಗದ್ಗುರುಗಳ ಲೇಖನ ತುಂಬಾ ಸಮಯೋಚಿತವಾಗಿದೆ..ಸ್ವ ಧರ್ಮ ಅಥವಾ ಪರಧರ್ಮಗಳನ್ನು ಅನವಶ್ಯಕ ಟೀಕಿಸುವ ಕುಹಕಿಗಳಿಗೆ ಈ ಲೇಖನ ಸಮರ್ಪಣೆಯಾಗಲಿ ..
B.N.M.SWAMY
India

N-2299 

  07-09-2024 12:09 PM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಪೂಜ್ಯ ಗುರುಗಳ ಆಶಿರ್ವಚನ ಅದ್ಭುತವಾಗಿದೆ.
Shivadeepa G M
Davangere

N-2299 

  07-09-2024 10:43 AM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

  ದ್ವೇಷ ಅಸೂಹೆ ಮರೆತು ಒಂದಾಗಿ ಬಾಳಬೇಕೆಂದು ತೋರಿಸಿದ ನಮ್ಮ ಪೂಜ್ಯ ಶ್ರೀಗಳಿಗೆ ನನ್ನ ಅನಂತ ಅನಂತ ನಮಸ್ಕಾರಗಳು
Devappa veerappa mangalore koppal 583231
Karnataka india

N-2299 

  07-09-2024 10:21 AM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಶ್ರೀ ಗುರುಗಳಿಗೆ ಗಣೇಶ ಚತುರ್ಥಿಯ ದೀರ್ಘ ದಂಡ ನಮಸ್ಕಾರಗಳು. ನಮ್ಮ ಸಂಸ್ಕೃತಿಯಲ್ಲಿ ಬಹು ದೇವತೆಗಳ ಪರಿಕಲ್ಪನೆಯು ಅದರ ಪ್ರಾಚೀನ ತತ್ತ್ವಶಾಸ್ತ್ರ ಮತ್ತು ನಂಬಿಕೆಗಳಲ್ಲಿ ಬೇರೂರಿದೆ.
ಇಲ್ಲಿ ಅನೇಕ ಹೆಣ್ಣು ಮತ್ತು ಗಂಡು ದೇವರುಗಳು ಇರುವುದಕ್ಕೆ ಕೆಲವು ಕಾರಣಗಳಿವೆ.

1. *ಬಹುದೇವತಾ ಸಂಪ್ರದಾಯ*: ನಮ್ಮದು ಬಹುದೇವತಾ ಧರ್ಮ, ಅಂದರೆ ಅದು ವಿಭಿನ್ನ ಪಾತ್ರಗಳು/ಜವಾಬ್ದಾರಿಗಳೊಂದಿಗೆ ಬಹು ದೇವತೆಗಳನ್ನು ಅಂಗೀಕರಿಸುತ್ತದೆ.

2. *ಸಾಂಕೇತಿಕತೆ ಮತ್ತು ಪ್ರಾತಿನಿಧ್ಯ*: ಪ್ರತಿ ದೇವತೆಯು ಬ್ರಹ್ಮಾಂಡದ ಒಂದು ನಿರ್ದಿಷ್ಟ ಅಂಶವನ್ನು ಪ್ರತಿನಿಧಿಸುತ್ತದೆ, ಮಾನವ ಸ್ವಭಾವ, ಅಥವಾ ಕಾಸ್ಮಿಕ್ ಶಕ್ತಿಗಳು.

3. *ಅಂತಿಮ ವಾಸ್ತವದ ವೈವಿಧ್ಯಮಯ ಅಂಶಗಳು*: ನಾವು ಒಂದೇ, ಎಲ್ಲವನ್ನೂ ಒಳಗೊಳ್ಳುವ ಅಂತಿಮ ವಾಸ್ತವದಲ್ಲಿ (ಬ್ರಹ್ಮನ್) ನಂಬುತ್ತೇವೆ.
ಬಹು ದೇವತೆಗಳು ಈ ವಾಸ್ತವದ ವಿವಿಧ ಅಂಶಗಳನ್ನು ಸಂಕೇತಿಸುತ್ತವೆ.

4. *ವಿಕಾಸ ಮತ್ತು ಸಾಂಸ್ಕೃತಿಕ ಪ್ರಭಾವಗಳು*: ನಮ್ಮ ಸಂಸ್ಕೃತಿಯು ಸ್ಥಳೀಯ ಮತ್ತು ಪ್ರಾದೇಶಿಕ ದೇವತೆಗಳು, ಪುರಾಣಗಳು ಮತ್ತು ದಂತಕಥೆಗಳನ್ನು ಒಳಗೊಂಡು ಸಾವಿರಾರು ವರ್ಷಗಳಿಂದ ವಿಕಸನಗೊಂಡಿತು.

5. *ಸ್ತ್ರೀಲಿಂಗ ಮತ್ತು ಪುಲ್ಲಿಂಗ ತತ್ವಗಳು*: ಸ್ತ್ರೀ ಮತ್ತು ಪುರುಷ ದೇವತೆಗಳು ವಿಶ್ವದಲ್ಲಿ ಸ್ತ್ರೀಲಿಂಗ (ಶಕ್ತಿ) ಮತ್ತು ಪುಲ್ಲಿಂಗ (ಶಿವ) ತತ್ವಗಳ ನಡುವಿನ ಸಾಮರಸ್ಯ ಮತ್ತು ಪರಸ್ಪರ ಕ್ರಿಯೆಯನ್ನು ಪ್ರತಿನಿಧಿಸುತ್ತವೆ.

6. *ಗುಣಲಕ್ಷಣಗಳು ಮತ್ತು ಗುಣಗಳು*: ಪ್ರತಿ ದೇವತೆಯು ಪ್ರೀತಿ, ಬುದ್ಧಿವಂತಿಕೆ, ಶಕ್ತಿ ಅಥವಾ ಸೃಷ್ಟಿಯಂತಹ ನಿರ್ದಿಷ್ಟ ಗುಣಲಕ್ಷಣಗಳು ಮತ್ತು ಗುಣಗಳನ್ನು ಒಳಗೊಂಡಿರುತ್ತದೆ.

7. *ಆರಾಧನೆ ಮತ್ತು ಭಕ್ತಿ*: ಬಹು ದೇವತೆಗಳು ಭಕ್ತರು ತಮ್ಮ ವೈಯಕ್ತಿಕ ನಂಬಿಕೆಗಳು ಮತ್ತು ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ವೈಯಕ್ತಿಕ ದೇವತೆಯನ್ನು (ಇಷ್ಟ-ದೇವ) ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತಾರೆ.

8. *ಪೌರಾಣಿಕ ಕಥೆಗಳು ಮತ್ತು ಬೋಧನೆಗಳು*: ವಿವಿಧ ದೇವತೆಗಳು ಮತ್ತು ಅವರ ಕಥೆಗಳು ನೈತಿಕ ಬೋಧನೆಗಳು, ನೈತಿಕ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಒಳನೋಟಗಳನ್ನು ತಿಳಿಸುತ್ತವೆ.

ಈ ಅಂಶಗಳು ಮಾನವನ ಅನುಭವ ಮತ್ತು ಬ್ರಹ್ಮಾಂಡದ ವೈವಿಧ್ಯತೆ ಮತ್ತು ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ನಮ್ಮ ದೇವತೆಗಳ ಶ್ರೀಮಂತತೆಯನ್ನು
ಕೊಡುಗೆ ನೀಡಿವೆ.
ಗಣೇಶ ಚತುರ್ಥಿಯ ಶುಭಾಶಯಗಳು.👨‍👩‍👦‍👦💏❤️👏🌺 ಪ್ರಭುದೇವ್ ಎಮ್ ಎಸ್ ಮತ್ತು ಕುಟುಂಬದವರು ಶಿವಮೊಗ್ಗ
Prabhudev M S
SHIVAMOGGA

N-2609 

  07-09-2024 10:00 AM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 ಕಳೆದ ಎರಡು ದಶಕಗಳಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಕೃಷಿಕರಿಗೆ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ನಮ್ಮ ಕೃಷಿ ವಿಜ್ಞಾನ ಕೇಂದ್ರ ಮುಂಚೂಣಿಯಲ್ಲಿದೆ.. ಪರಮಪೂಜ್ಯರ ಮಾರ್ಗದರ್ಶನದಿಂದ ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಅಭಿವೃದ್ಧಿಗೆ ಕೃಷಿಯ ನೂತನ ತಂತ್ರಜ್ಞಾನಗಳು ಇಂದು ಪ್ರತಿಯೊಬ್ಬರಿಗೂ ದೊರಕಲು ಕೃಷಿ ವಿಜ್ಞಾನ ಕೇಂದ್ರ ಅವಿರತವಾಗಿ ಶ್ರಮಿಸುತ್ತಿದೆ..
ಅನ್ನದಾತರ ಸೇವೆಯನ್ನು ಮಾಡಲು ನಮಗೆ ಅವಕಾಶ ಮಾಡಿಕೊಟ್ಟ ಪರಮ ಪೂಜ್ಯರಿಗೆ ಕೋಟಿ ಕೋಟಿ ನಮನಗಳು 🙏
ಬಸವನಗೌಡ ಎಂ. ಜಿ., ICAR - ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ
Davanagere

N-2299 

  07-09-2024 09:25 AM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಶ್ರೀಗಳವರ ಲೇಖನ ವೈಚಾರಿಕತೆಯಿಂದ ಕೂಡಿದೆ. ದೇವರು ಒಬ್ಬನೇ ಹೆಸರುಗಳು ಬೇರೆ ಬೇರೆ ಇರುತ್ತವೆ. ಶುದ್ಧ ಮನಸ್ಸಿನಿಂದ ಯಾವ ಪೂಜೆ ಮಾಡಿದರು ನಮಗೆ ದೇವರು ಒಲಿಯುತ್ತಾನೆ.ಇನ್ನೊಬ್ಬರ ಸಂಪ್ರದಾಯಗಳನ್ನು ಟೀಕಿಸಬಾರದು. ಮನಸ್ಸಿಗೆ ನೋವನ್ನುಂಟುಮಾಡಬಾರದು. ಶುದ್ದ ಮನಸ್ಸಿದ್ದರೆ ಸಾಕ್ಷಾತ್ಕಾರವಾಗುತ್ತದೆ. ಕುವೆಂಪು ಅವರ ಜಲಗಾರ ಎಂಬ ನಾಟಕದಲ್ಲಿ ಗುಡಿಯ ಮುಂದೆ ಕಸ ಹೊಡೆಯುತ್ತಿದ್ದ ವ್ಯಕ್ತಿಗೆ ದೇವರು ಒಲುಮೆಯಾಗಿದೆ. ಆದರೆ ಗುಡಿಯ ಒಳಗೆ ಅಶುದ್ಧ ಮನಸ್ಸಿನ ಪುರೋಹಿತನಿಗೆ ದೇವರು ಒಲಿಯಲಿಲ್ಲ. ನಂಬಿದವನಿಗೆ ಕಲ್ಲು ದೇವರ ವಾಗುತ್ತದೆ. ನಂಬದಿದ್ದೆ ಅವನಿಗೆ ದೇವರೇ ಕಲ್ಲು. ಸಿದ್ದನಗೌಡ ಉಜ್ಜಯಿನಿ.
ಸಿದ್ದನಗೌಡ ಉಜ್ಜಯಿನಿ.
ಉಜ್ಜಯಿನಿ ವಿಜಯನಗರ ಜಿಲ್ಲೆಉಜ್ಜಯಿನಿ ವಿಜಯನಗರ ಜಿಲ್ಲೆ, ಭಾರತ ಶ್ರೀಗಳವರ ಲೇಖನ

N-2299 

  07-09-2024 09:25 AM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 ಶ್ರೀಗಳವರ ಲೇಖನ ವೈಚಾರಿಕತೆಯಿಂದ ಕೂಡಿದೆ. ದೇವರು ಒಬ್ಬನೇ ಹೆಸರುಗಳು ಬೇರೆ ಬೇರೆ ಇರುತ್ತವೆ. ಶುದ್ಧ ಮನಸ್ಸಿನಿಂದ ಯಾವ ಪೂಜೆ ಮಾಡಿದರು ನಮಗೆ ದೇವರು ಒಲಿಯುತ್ತಾನೆ.ಇನ್ನೊಬ್ಬರ ಸಂಪ್ರದಾಯಗಳನ್ನು ಟೀಕಿಸಬಾರದು. ಮನಸ್ಸಿಗೆ ನೋವನ್ನುಂಟುಮಾಡಬಾರದು. ಶುದ್ದ ಮನಸ್ಸಿದ್ದರೆ ಸಾಕ್ಷಾತ್ಕಾರವಾಗುತ್ತದೆ. ಕುವೆಂಪು ಅವರ ಜಲಗಾರ ಎಂಬ ನಾಟಕದಲ್ಲಿ ಗುಡಿಯ ಮುಂದೆ ಕಸ ಹೊಡೆಯುತ್ತಿದ್ದ ವ್ಯಕ್ತಿಗೆ ದೇವರು ಒಲುಮೆಯಾಗಿದೆ. ಆದರೆ ಗುಡಿಯ ಒಳಗೆ ಅಶುದ್ಧ ಮನಸ್ಸಿನ ಪುರೋಹಿತನಿಗೆ ದೇವರು ಒಲಿಯಲಿಲ್ಲ. ನಂಬಿದವನಿಗೆ ಕಲ್ಲು ದೇವರ ವಾಗುತ್ತದೆ. ನಂಬದಿದ್ದೆ ಅವನಿಗೆ ದೇವರೇ ಕಲ್ಲು. ಸಿದ್ದನಗೌಡ ಉಜ್ಜಯಿನಿ.
ಸಿದ್ದನಗೌಡ ಉಜ್ಜಯಿನಿ.
ಉಜ್ಜಯಿನಿ ವಿಜಯನಗರ ಜಿಲ್ಲೆಉಜ್ಜಯಿನಿ ವಿಜಯನಗರ ಜಿಲ್ಲೆ, ಭಾರತ ಶ್ರೀಗಳವರ ಲೇಖನ

N-2299 

  07-09-2024 09:15 AM   

ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

 

ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಇವುಗಳಿಗೆ ಸಾವಿರ ಸಾವಿರ ವರ್ಷಗಳ ಇತಿಹಾಸವಿದೆ ಹಾಗೂ ಕಾಲಕಾಲಕ್ಕೆ ತನ್ನನ್ನು ತಾನು ಪರಿಷ್ಕರಣೆಗೆ ಒಡ್ಡಿಕೊಂಡಿದೆ . ಈ ಹಾದಿಯಲ್ಲಿ ವೇದ, ಉಪನಿಷತ್ತು ಹಾಗೂ ಪುರಾಣಗಳು- ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರಣಗಳಿಗಾಗಿ 12ನೇ ಶತಮಾನದ ಬಸವಾದಿ ಶಿವಶರಣರಿಂದ ತಿರಸ್ಕಾರಗೊಂಡಿದ್ದ ಒಂದು ಅನಿವಾರ್ಯ ಪ್ರಕ್ರಿಯೆ. ಈ ಪ್ರಕ್ರಿಯೆ ಭಾಗವಾಗಿ ಹೊಸ ಚಿಂತನೆ ಮೂಡಿಬಂದಿದ್ದು ವಚನಗಳ ರೂಪದಲ್ಲಿ ಹಾಗೂ ಸಕಲರನ್ನು ಒಳಗೊಂಡ ಸಂವಿಧಾನದ ರೀತಿಯಲ್ಲಿ. ಈ ಹೊಸ ಚಿಂತನೆ "ಎಡ ಅಥವಾ ಬಲ ಪಂಥವು ಅಲ್ಲದ, ಎಡಬಿಡಂಗಿ ಮದ್ಯಪಂತವ ಅಲ್ಲದ", ಇವೆಲ್ಲವನ್ನೂ ಮೀರಿದ ಆಯಾಮವಾದ
- ಕಾಯಕ
- ದಾಸೋಹ
- ಭಕ್ತಿ
ಗಳನ್ನು ಒಳಗೊಂಡಂತಹ ಧರ್ಮದ ಪರಿಕಲ್ಪನೆ. ಇಂಥ ಪರಿಕಲ್ಪನೆಯನ್ನು ವಿಮರ್ಷಿಸುವಾಗ, ವೇದ ಉಪನಿಷತ್ತುಗಳ ಮತ್ತು ಬಸವಾದಿ ಶಿವಶರಣರ ವಚನ ಶಾಸ್ತ್ರವನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿದವರಿಂದ ಮಾತ್ರ ಸಾಧ್ಯ. ಈ ರೀತಿ ಜ್ಞಾನ ಪಡೆದ ಸ್ವಾಮಿಗಳು ಬೆರಳೆಣಿಕೆಯಷ್ಟು ಇಲ್ಲ. ಈ ರೀತಿ ಸಂಶೋಧನಾತ್ಮಕ ಅಧ್ಯಯನ ಮಾಡಿರುವುದರಲ್ಲಿ ನಮ್ಮ ಪರಮಪೂಜ್ಯರು ಒಬ್ಬರು.

ಅವರ ಯಾವುದೇ ಲೇಖನಗಳನ್ನು ತೆಗೆದುಕೊಂಡಲ್ಲಿ, ಅದರಲ್ಲೂ ಬಿಸಿಲು ಬೆಳದಿಂಗಳು ಅಂಕಣದಲ್ಲಿ ಅವರ ಲೇಖನ( ಸಾಮಾಜಿಕ ಇಲ್ಲವೇ ಧಾರ್ಮಿಕ ) ಶುರುವಾಗುವುದು " ವೇದ ಉಪನಿಷತ್ತುಗಳ ಸಾಲುಗಳಿಂದ". ಆ ಸಾಲುಗಳಿಗೆ ಸಾರಾಂಶವನ್ನು ಬರೆದು, ನಂತರ ವಚನದ ಸಾಲುಗಳನ್ನು ಉದಾ ದಾರಿಸುತ್ತ ಹೋಗುತ್ತಾರೆ. ಕೊನೆಗೆ ಲೇಖನ ಕೊನೆಗೊಳ್ಳುವುದು ಶರಣರ ವಿಚಾರಧಾರೆಯೇ ಶ್ರೇಷ್ಠ ಎಂದು. ತಮ್ಮ ವಾದ ಮಂಡನೆಯಲ್ಲಿ ಎಲ್ಲೂ ದ್ವಂದ್ವ ನಿಲುವು, ಮತ್ತೊಂದು ಧರ್ಮಿಯರನ್ನು ಮೆಚ್ಚಿಸುವ ಅಥವಾ ಟೀಕಿಸುವ ನಿಲುವನ್ನು ತಾಳದೆ "ಶರಣರೆ ಸರ್ವಶ್ರೇಷ್ಠರು" ಎಂದು ಪ್ರತಿಪಾದಿಸುವ ವಿದ್ವತ್ ಉಳ್ಳವರು.

Dr. KP. Basavaraj
Banglore

N-2609 

  07-09-2024 08:57 AM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 ನಮ್ಮ ಹೆಮ್ಮೆಯ ಶ್ರೀ ಗಳು ಸಮಾಜಮುಖಿ ಚಿಂತನೆಗಳ ಹಿನ್ನೆಲೆಯಲ್ಲಿ ರೈತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ.ಆದ್ದರಿಂದಲೇ ಇಂದು ಕೆರೆ ತುಂಬಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ಸಹಸ್ರಾರು ರೈತಾಪಿ ವರ್ಗ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕಾರಣೀಭೂತರಾಗಿದ್ದಾರೆ.ಪರಮಪೂಜ್ಯರ ಈ ಜನಪರ ಕೈಂಕರ್ಯ ಹೀಗೆ ಮುಂದುವರಿಯಲಿ.ಅವರ ವಿರುದ್ಧದ ದುಷ್ಟರ ಶಕ್ತಿಗಳು ಸರ್ವನಾಶಗಲಿ.
ಶಂಕರಪ್ಪಆಸಂದಿ
Asandi

N-2640 

  07-09-2024 07:45 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೆಯ ಶ್ರದ್ಧಾಂಜಲಿ : ದಾಸೋಹ ಮತ್ತು ಕಾಣಿಕೆ ಪ್ರಕಟಣೆ

 Sharanu sharanrti, 🙏🙏🙏
GIRISH TOPPAL
India

N-2609 

  07-09-2024 06:39 AM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 ಜ್ಞಾನವುಜಗದೂಳು ತಪವಯ್ಯಾ, ಧ್ಯಾನವು ಮನದೂಳು ತಪವಯ್ಯಾ.ಜ್ಞಾನ, ವಿಜ್ಞಾನ ಪ್ರಾಕೃತಿಕ ಸಂಪತ್ತಿನ ನಿರ್ವಹಣೆ ಗಳು ವಿಜ್ಞಾನ ತಂತ್ರಜ್ಞಾನ ಕೇಂದ್ರ ಗಳು ರೈತಾಪಿ ಜನರ ಸ್ವಾತಂತ್ರ ಬದುಕು ಕಂಡು ಕೂಳ್ಳುವ, ಹವಾಮಾನ ವೈಪರಿತ್ಯದಲ್ಲೂ ಅವ .. ಮಾನವನಾಗಿ ಬೆಳೆ ಬೆಳೆಯುವ ಯೋಜನೆಯ ಮೂಲಕ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮೂಲಕ ಮಣ್ಣು ಪರೀಕ್ಷೆ,ನೀರು ಪರೀಕ್ಷೆ ಮಾಡಿಸಿ ಕೊಂಡು ಮುಂದಿನ ಬೆಳೆ ಬೆಳೆಯುವ ಯೋಜನೆ, ಯೋಚನೆಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಯೋಜನೆಗಳಿವೆ.
ರೈತಾಪಿ ವರ್ಗದ ದೂರ‌ದೃಷ್ಟಿಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅಡಿಯಲ್ಲಿ ರೈತರರು ಹಳ್ಳಿಗಳಲ್ಲಿ ಅವರದೇ ಸ್ವಂತ ಕೃಷಿ ಕೇಂದ್ರಗಳ ರಚನೆ ಮಾಡಿದ್ದಾರೆ.ಈತರಹದ ಗುರು ಯೋಜನೆಗಳು ರೈತರಬೆನ್ನೆಲುಬನ್ನು ಗಟ್ಟಿಗೂಳಿಸುವಮಹತ್ತರ ಕಾರ್ಯವಾಗಿದೆ.
,"🌺ಉಳುವ ಯೋಗಿಯ ನೋಡಲ್ಲಿ.....ಹೆಸರನು ಬಯಸದೆ,ಅತಿ ಸುಖ ಬಯಸಿದೆ ದುಡಿವನು...ಎನ್ನುವ ಕುವೆಂಪು ನುಡಿಯಲ್ಲಿ ದ್ದಂತೆ.."🌺ಇದು ಸಾಧ್ಯ ತರಳಬಾಳು ಧೀರ ಪ್ರಭುವಿನ ಶಿಷ್ಯರಾದ ದಿಟ್ಟ ಹೆಜ್ಜೆಯ,ನಿಜಸ್ಥಲದ ಕುರುಹು ಶ್ರೀಗಳದ್ದಾಗಿದೆಯಲ್ಲವೆ.
ಧೀರ್ಘ ದಂಡ ಪ್ರಣಾಮಗಳು ಗುರೂಜಿ.


ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2640 

  07-09-2024 05:55 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೆಯ ಶ್ರದ್ಧಾಂಜಲಿ : ದಾಸೋಹ ಮತ್ತು ಕಾಣಿಕೆ ಪ್ರಕಟಣೆ

 Shiva
Arun kumar
India

N-1806 

  06-09-2024 09:35 PM   

ಜನಮಾನಸದಲ್ಲಿ ನೆಲೆಗೊಂಡ ಅಪ್ರತಿಮ ದಿವ್ಯಚೇತನ

 ಶ್ರೀ ಗಳ ಚರಣಗಳಿಗೆ ದೀರ್ಘ ದಂಡ ನಮಸ್ಕಾರಗಳು. ದೊಡ್ಡ ಗುರುಗಳ ಬಗ್ಗೆ ಹಲವಾರು ಬಾರಿ ಕೇಳಿದ್ದೆ ಓದಿದ್ದೆ. ತಮ್ಮ ಮುಖಾಂತರ ಮತ್ತೊಮ್ಮೆ ಓದಿ ಪುನೀತನಾದೆ. ನಿಮ್ಮ ಪ್ರಭುದೇವ್ ಎಮ್ ಎಸ್ ಶಿವಮೊಗ್ಗ
Prabhudev M S
SHIVAMOGGA

N-2640 

  06-09-2024 08:10 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೆಯ ಶ್ರದ್ಧಾಂಜಲಿ : ದಾಸೋಹ ಮತ್ತು ಕಾಣಿಕೆ ಪ್ರಕಟಣೆ

 Vedike yannu blr collage himbagadalli haki. Male bandaru thondareyaguvudilla.
B.basavaraja
Kannakatte.kottur TQ vijayanagara dist

N-2640 

  06-09-2024 08:04 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32 ನೆಯ ಶ್ರದ್ಧಾಂಜಲಿ : ದಾಸೋಹ ಮತ್ತು ಕಾಣಿಕೆ ಪ್ರಕಟಣೆ

 💐🙏
GP manju