N-2639 
  03-09-2024 07:01 PM   
ಡಾ. ಸಿದ್ದಯ್ಯನಿಂದ ಮಠದ ಜಮೀನು ಪರಿಹಾರದ ಹಣ ₹ 30 ಲಕ್ಷ ರೂ. ಕಬಳಿಕೆ
ಶ್ರೀ ಮಠದ ಆಸ್ತಿ ಸಾರ್ವಜನಿಕರ ಆಸ್ತಿಯಾಗಿರುತ್ತದೆ. ಇಂತಹ ಸಾರ್ವಜನಿಕರಿಗೆ ಸಂಬಂಧಿಸಿದ ಆಸ್ತಿಯ ಅಥವಾ ಹಣವನ್ನು ಯಾವ ಒಬ್ಬ ವ್ಯಕ್ತಿಯು ತನ್ನ ಸ್ವಂತಕ್ಕಾಗಿ ಬಳಸುವುದು ಅಥವಾ ಉಪಯೋಗಿಸುವುದು ಕ್ಷಮಿಸಲಾರದ ಅಪರಾಧವಾಗಿರುತ್ತದೆ.
ಪರಮಪೂಜ್ಯ ಜಗದ್ಗುರುಗಳವರು ನಂಬಿಕೆಯಿಂದ ಇರುವಂತಹ ವ್ಯಕ್ತಿಗಳಿಗೆ ಇಂತಹ ಜವಾಬ್ದಾರಿಯುತ ಕೆಲಸವನ್ನು ನೀಡಿರುತ್ತಾರೆ. ಆದರೆ ಶ್ರೀಮಠಕ್ಕೆ ಅನ್ಯಾಯವನ್ನು ಅಥವಾ ದ್ರೋಹವನ್ನು ಬಗೆದು ಮಠದ ಆಸ್ತಿಯ ಸಂಬಂಧಿತ ಹಣವನ್ನು ಸ್ವಂತಕ್ಕೆ ಬಳಸುವುದು ಅಕ್ಷಮ್ಯ ಅಪರಾಧವಾಗುತ್ತದೆ.
ಆದ್ದರಿಂದ ಸಂಬಂಧಿಸಿದವರಿಂದ ದುರ್ಬಳಕೆಯಾದ ಮೊತ್ತವನ್ನು ಮಠದ ಆಸ್ತಿಗೆ ಜಮೆ ಮಾಡಿ ಬಡ ಮತ್ತು ನೊಂದ ಜನತೆಗೆ ಸದ್ವಿನಿಯೋಗವಾಗುವಂತಹ ಕಾಯಕವನ್ನು ಹಾಗೂ ರೈತರಿಗೆ ಅನುಕೂಲವಾಗುವಂತಹ ಕಾಯಕವನ್ನು ಮಾಡುವುದು ಸತ್ಸಂಪ್ರದಾಯವಾಗಿದೆ. ಇಂತಹ ಕಾಯಕವನ್ನು ಮಾಡುವಂತಹ ಶ್ರೀಮಠಕ್ಕೆ ಜನಸಾಮಾನ್ಯರು ಹಾಗೂ ಉದಾರ ಮನಸ್ಸಿನ ಸುಶಿಕ್ಷಿತ ವ್ಯಕ್ತಿಗಳಿಂದ ಸಹಕಾರವು ಅಗತ್ಯವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಶ್ರೀಮಠದ ಹೆಸರು ಜಗತ್ಪ್ರಸಿದ್ಧವಾಗಿರುವಂತೆ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿರುತ್ತದೆ. ಭಗವಂತ ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದು ಹಾರೈಸೋಣ. ಸರ್ವರಿಗೂ ಶುಭವಾಗಲಿ.
ಪರಮಪೂಜ್ಯ ಜಗದ್ಗುರುಗಳ ಪಾದಕಮಲಗಳಿಗೆ ನಮನಗಳು. ಎಂ.ಜಿ .ರಾಜಣ್ಣ ಹೊಸಮನೆ ಭದ್ರಾವತಿ.
Rajana M.G.
Bhadravathi