N-2613 
  16-08-2024 09:01 AM   
ಆಡಳಿತಾಧಿಕಾರಿಗಳಾಗಿದ್ದ ಎಸ್.ಬಿ.ರಂಗನಾಥ್ ನಿಧನಕ್ಕೆ ತರಳಬಾಳು ಜಗದ್ಗುರುಗಳ ಸಂತಾಪ
ಎಸ್ ಬಿ ಆರ್ ಅವರದ್ದುದು ಸಂಯಮಶೀಲ ವ್ಯಕ್ತಿತ್ವ. ಸಾಧಕತ್ವ ಹೊಂದಿದ ಸಾರ್ಥಕ ಬದುಕು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಯಲ್ಲಿ ಏನೇನು ಒಳ್ಳೆಯ ಕೆಲಸಗಳನ್ನು ಮಾಡಬಹುದೋ ಅಷ್ಟೆಲ್ಲಾ ಕೆಲಸಗಳನ್ನು ಸಾಧಿಸಿ; ಭೌತಿಕವಾಗಿ ಅಗಲಿದರೂ, ವೃತ್ತಿ ಹಾಗೂ ಪ್ರವೃತ್ತಿಯಲ್ಲಿನ ಕೆಲಸಗಳು ಅಮರವಾಗಿರುವಂತೆ ಜೀವಿಸಿದ ಧೀಮಂತ ವ್ಯಕ್ತಿತ್ವ. ಎಸ್ ಬಿ ಆರ್ ಅವರು ಟಿಆರ್ ಡಿಎಫ್ ನಲ್ಲಿ ಸಂಯೋಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅವರ ಜೊತೆಯಲ್ಲಿ ನಾನೂ ಸಹ ಕೆಲಸ ಮಾಡುತ್ತಿದ್ದೆ. ಒಮ್ಮೆ ಐಕ್ಯಮಂಟಪದ ಹತ್ತಿರ ಯಾವುದೋ ವಿಷಯದ ಚರ್ಚೆಗೆ ನಾನು ಮತ್ತು ಎಸ್ ಬಿ ಆರ್ ಡಾ.ಶ್ರೀಗಳ ಭೇಟಿಗೆ ಹೋದೆವು. ಡಾ.ಶ್ರೀಗಳು ವಿಷಯ ಚರ್ಚಿಸುವಾಗ; ಶ್ರೀಗಳ ಪ್ರಶ್ನೆಗೆ ಎಸ್ ಬಿ ಆರ್ ತಕ್ಷಣ ಉತ್ತರ ನೀಡಲಿಲ್ಲ, ಅದೇ ವಿಚಾರದ ಬಗ್ಗೆ ಎಸ್ ಬಿ ಆರ್ ಚಿಂತಿಸುತ್ತಿದ್ದರು, ಆಗ ಶ್ರೀಗಳು ಏನ್ರೀ ರಂಗನಾಥ್ ರವರೇ ನಿದ್ರೆ ಮಾಡ್ತೀರೆನ್ರಿ ಎಂದು ತಮಾಷೆ ಮಾಡಿದರು; ಅದಕ್ಕೆ ಪ್ತತ್ಯುತ್ತರವಾಗಿ ಎಸ್ ಬಿ ಆರ್ ʼಬುದ್ಧಿ ತಮ್ಮನ್ನ ನೆನೆಸಿಕೊಂಡರೆ ರಾತ್ರಿ ಹೊತ್ತೇ ನಿದ್ರೆ ಬರಲ್ಲ ಇನ್ನೂ ಈ ಮದ್ಯಾಹ್ನದ ಹೊತ್ತಲ್ಲಿ ನಿದ್ರೆ ಹೇಗೆ ಬರುತ್ತೇ ?ʼಎಂದು ತಮಾಷೆಯಿಂದ ಉತ್ತರಿಸಿದ್ದ ನೆನಪಿದೆ.
ಇನ್ನೊಂದು ಸಂದರ್ಭದಲ್ಲಿ ತರಳಬಾಳು ಸಿಬಿಎಎಸ್‌ಇ ಶಾಲೆಯಲ್ಲಿ ನಾನು ಕೆಲಸ ನಿರ್ವಹಿಸುತ್ತಿರುವಾಗ, ನನ್ನ ಪೋಷಕರಿಗೆ ಆರೋಗ್ಯ ಸರಿಯಿಲ್ಲದ; ಕೆಲಸ ಮುಂದುವರೆಸುವುದು ಕಷ್ಕಕರವಾಗಿತ್ತು. ಆ ಸಂದರ್ಭದಲ್ಲಿ ಸದರಿ ವಿಷಯವನ್ನು ಎಸ್ ಬಿ ಆರ್ ಗೆ ತಿಳಿಸಲು ಹೋದಾಗ, ಶಾಲೆ ಜವಾಬ್ದಾರಿ ಹೊತ್ತಿದ್ದ ಮರಿ ರವಿಗೆ ಕೂಡ ಅಲ್ಲಿಗೆ ಬಂದರು. ಆಗ ಎಸ್ ಬಿ ಆರ್ ಮರಿ ರವಿಗೆ ಇವನ ತಂದೆ ಗುರುಶಾಂತಪ್ಪ ನೀಲಾಂಬಿಕಾ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ, ತರಳಬಾಳು ಕಲಾ ಸಂಘದಲ್ಲಿ ಧೀರ್ಘ ಕಾಲದವರೆಗೆ ತುಂಬಾ ಜವಾಬ್ದಾರಿಯಿಂದ ಕೆಲಸ ಮಾಡಿದವರು. ಇವನಿಗೆ ಏನಾದರೂ ಒಳ್ಳೆಯದು ಮಾಡಿಕೊಡು ಎಂದು ಸಲಹೆ ನೀಡಿದ್ದರು.
ಒಂದೆರಡು ವರ್ಷಗಳ ಹಿಂದೆ ಮದುವೆ ಸಮಾರಂಭದಲ್ಲಿ ಅವರನ್ನು ಬೇಟಿಯಾದಾಗ ʼಸರ್ ತುಂಬಾ ಯಂಗ್ ಆಗಿ ಕಾಣ್ತಾ ಇದೀರಿʼ ʼಮದುವೆ ಗಂಡಿನ ಥರಾʼ ಎಂದು ತಮಾಷೆ ಮಾಡಿದ್ದು ಈಗ ನೆನಪು ಮಾತ್ರ. ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸದೇ ಸಂಪೂರ್ಣವಾಗಿ ಕೆಲಸ ಮುಗಿಸುತ್ತಿದ್ದ ಛಲದಂಕ ಮಲ್ಲ ಎಸ್ ಬಿ ಆರ್.
ವಿಶ್ವಬಂಧು ಮರುಳಸಿದ್ಧರು ಮೃತರ ಕುಟುಂಬಕ್ಕೆ ಅವರ ಅಗಲುವಿಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ.
Basavaraj G Santhebennur
India