N-2580 
  19-07-2024 06:31 PM   
ನಾಡಿನ ರೈತರ ಜೀವನಾಡಿ ಕೆರೆ!
🌹ನಾಡಿನ ರೈತರ ಜೀವನಾಡಿ ಕೆರೆ🌹
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯವರ ಚರಣಗಳಿಗೆ ವಂದನೆಗಳು.🙏
ಬಿಸಿಲು ಬೆಳದಿಂಗಳು ಲೇಖನ ಸಂಸ್ಕೃತ ಸೂಕ್ತಿpಯೊಂದಿಗೆ ಆರಂಭವಾಗಿದೆ.
ವೇದ ಶಾಸ್ತ್ರ ಪುರಾಣಗಳ ಜೊತೆ
ಕೃಷಿಯನ್ನು ಉಲ್ಲೇಖಿಸಿರುವುದು
ನಿಜಕ್ಕೂ ಅನ್ನದ ಹಿರಿಮೆಯನ್ನು ಸೂಚಿಸಿದಂತೆನಿಸಿದೆ.
ಜ್ಞಾನ ದಷ್ಟೇ ಅಗತ್ಯ ಅನ್ನ . ಆಹಾರ ಜೀವಿಗಳ ಜೀವನಾಧಾರ ಎಂಬುದನ್ನು ಸೂಚಿಸುತ್ತದೆ.
ಯಜ್ಞದಿಂದ ಮಳೆ, ಮಳೆಯಿಂದ ಬೆಳೆ.
ಬೆಳೆಯಿಂದ ಜೀವಿಗಳ ಪೋಷಣೆ. ಇದು ವೇದದ ಉಕ್ತಿ.
ನೀರಿನ ಮಹತ್ವವನ್ನು ತಿಳಿಸುವ ವಚನಗಳು ,ಗೀತೆಗಳು ಸೂಕ್ತಿಗಳನ್ನು ಗುರುಗಳು ಅತ್ಯಂತ ಸುಂದರವಾಗಿ ತಿಳಿಸುತ್ತಾ ಜಲವನ್ನು ಹಿತಮಿತವಾಗಿ ಬಳಸುವ ಹಾಗೂ ಶುಚಿಯಾಗಿಡುವಲ್ಲಿ,ನೀರನ್ನು ಸಂಗ್ರಹಿಸುವಂತೆ ಕಿವಿಮಾತು ಹೇಳಿದಂತೆ ಅನಿಸುತ್ತಿದೆ.
ಆಷಾಢ ಮಾಸದಲ್ಲಿ ಭಾಗೀರಥಿ ಹಬ್ಬವೂ ಬರುತ್ತದೆ.ಅದರೊಟ್ಟಿಗೆ ಗಂಗೆ ಭುವಿಗೆ ಬಂದ ಸಂಗತಿ,ಭಗೀರಥನ ಅವಿರತ ಪ್ರಯತ್ನ, ಗಂಗೆಯಿಂದ ಮುಕ್ತಿ ಪಡೆದ ಸಗರನ ಮಕ್ಕಳ ಚರಿತೆ. ಕಣ್ಮುಂದೆ ಬರುತ್ತದೆ.
ರೈತರ ಸಂಕಷ್ಟ ಕಣ್ತುಂಬುವಂತೆ ಮಾಡುತ್ತದೆ ಲೇಖನ.
ಎಂದಿನಂತೆ ಗುರೂಜಿಯವರ ಲೇಖನ ಹಲವಾರು ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತಾ, ಸಮಸ್ಯೆಗಳ ಬಗ್ಗೆ, ಅವುಗಳ ಪರಿಹಾರದ ಬಗ್ಗೆ ನಾಗರಿಕರು ಚಿಂತನಾಶೀಲರಾಗುವಂತೆ ಮಾಡುತ್ತದೆ.
.ಗುರುಗಳಿಗೆ ನಮನಗಳು🙏
ಸತ್ಯಪ್ರಭಾ ವಸಂತಕುಮಾರ್, ಚಿತ್ರ ದುರ್ಗ.