N-2580 
  11-07-2024 09:20 PM   
ನಾಡಿನ ರೈತರ ಜೀವನಾಡಿ ಕೆರೆ!
ಬಿಸಿಲು ಬೆಳದಿಂಗಳು*
*ನಾಡಿನ ರೈತರ ಜೀವನಾಡಿ ಕೆರೆ!*
ಸಂಸ್ಕೃತ ಸೂಕ್ತಿಯಿಂದ ಪ್ರಾರಂಭವಾಗುವುದು ಈ ಲೇಖನ. ಕೃಷಿಯ ಮಹತ್ವವನ್ನು ಹಲವಾರು ಉದಾಹರಣೆಗಳಿಂದ ವಿವರಿಸಿದ್ದಾರೆ. ಕುವೆಂಪುರವರ `ನೇಗಿಲ ಯೋಗಿ`ಯ ಸಾಲುಗಳನ್ನು ರೈತರ ಇಂದಿನ ಪರಿಸ್ಥಿತಿ ಗೆ ಬದಲಾಯಿಸಿ ಹೇಳಿರುವ ರೀತಿಗೆ ಮನ ಮರುಗುವುದು. ರೈತರ ಜೀವನಾಡಿ ಕೆರೆ ಇಡೀ ದೇಶದ ಜೀವನಾಡಿ ಎಂಬುದು ಸತ್ಯವಾದ ಸಂಗತಿ.
ಹಳೆಯ ಮೈಸೂರು ಪ್ರಾಂತ್ಯದಲ್ಲಿ ಹಳ್ಳಿಗಳ ಹೆಸರು ಕೆರೆ ಎಂಬ ಶಬ್ದದಿಂದ ಕೊನೆಗೊಳ್ಳುವುದನ್ನು ಗಮನಿಸಿದಾಗ ಹಿರಿಯರು ಕೆರೆಗಳಿಗೆ ಎಷ್ಟು ಮಹತ್ವವನ್ನು ಕೊಟ್ಟಿರುವ ವಿಚಾರ ತಿಳಿಯುವುದು.
ಹಿಂದಿನಿಂದಲೂ ರಾಜ ಮಹರಾಜರು ನೀರಿಗೆ ಕೊಟ್ಟ ಮಹತ್ವವನ್ನು ಓದಿದಾಗ ಇಂದಿನ ಪ್ರಜೆಗಳು ಕೆರಯನ್ನೇ ಒತ್ತುವರಿ ಮಾಡಿ ಕೆರೆಗಳೇ ಇಲ್ಲದಂತೆ ಮಾಡುತ್ತಿರುವುದು ಒಂದು ವಿಪರ್ಯಾಸವೇ ಸರಿ.ಮನುಷ್ಯ ಎಷ್ಟು ಸ್ವಾರ್ಥಿಯಾಗಿದ್ದಾನಲ್ಲವೇ?
ಇಂದಿನ ದಿನಗಳಲ್ಲಿ ಇರುವ ಟೆಕ್ನಾಲಜಿ ಇಲ್ಲದ ಕಾಲದಲ್ಲಿ ಕ್ರಿ.ಶ.150 ಚೋಳರು ಕಟ್ಟಿಸಿದ ಕೆರೆ ಇಂದಿಗೂ ಉತ್ತಮ ಸ್ಥಿತಿಯಲ್ಲಿರುವುದನ್ನು ಓದಿದಾಗ ಬಹಳ ಆಶ್ಚರ್ಯವಾಯಿತು.
ಇಂದಿಗೂ ಕೆರೆಗಳನ್ನು ಪುನಶ್ಚೇತನಗೊಳಿಸಲು ಸರಕಾರ ಹಾಗೂ ಕೆಲವಾರು ಸಂಸ್ಥೆಗಳು ಕಾರ್ಯನಿರ್ವಾಹಿಸುತ್ತಿವೆ. ಆದರೆ ಈ ಪ್ರಯತ್ನಗಳು ಸಾಲದೆಂದೆನಿಸುವುದು.
ಗುರುಗಳಿಗೆ ರೈತರ ಬಗ್ಗೆ, ನಾಡಿನ ಏಳ್ಗೆಯ ವಿಚಾರವಾಗಿ, ಪ್ರಜೆಗಳ ಬಗ್ಗೆ ಇರುವ ಕಾಳಜಿ ತಿಳಿದಾಗ ಇವರ ಬಗ್ಗೆ ಬಹಳ ಹೆಮ್ಮೆ ಹಾಗೂ ಗೌರವ ವೆನಿಸುವುದು.
`ನಾಡಿನ ರೈತರ ಜೀವನಾಡಿ ಕೆರೆ` ಯಾದರೆ ಸಮಾಜದ ಜೀವನಾಡಿ ಸಿರಿಗೆರೆ ಗುರುಗಳು ಎನ್ನಬಹುದು.ಇವರ ಮಾರ್ಗದರ್ಶನದಲ್ಲಿ,ನೇತ್ರತ್ವದಲ್ಲಿ ತುಂಗಭದ್ರಾ ಏತ ನೀರಾವರಿ,ಭರಮಸಾಗರಕ್ಕೆ ಪೈಪ್ ಗಳ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದು ರೈತರ ಆತಂಕ ಕಡಿಮೆ ಮಾಡಿದ್ದು ಬಹಳ ಪ್ರಶಂಸನೀಯ ಹಾಗೂ ಆದರ್ಶಣಿಯವಾದ ಮಹತ್ ಕಾರ್ಯಗಳು.
ಶ್ರೀ ಗುರುಗಳು ಪ್ರತಿ ಲೇಖನದಲ್ಲಿ ಹಲವಾರು ಸಂತರು,ಕವಿಗಳನ್ನು ಉದಾಹರಿಸಿ,ಹಲವಾರು ಹೊಸ ವಿಚಾರಗಳನ್ನು ತಿಳಿಸುತ್ತಿರುವರು. ಅವರಿಗೆ ಹೃತ್ಪೂರ್ವಕ ಪ್ರಣಾಮಗಳು.
ಇಂದಿನ ದಿನಗಳಲ್ಲಿ ಸಹಾ ಹಲವಾರು ಸಂಸ್ಥೆಗಳು ಕೆರೆಗಳ ಪುನಶ್ಚೇತನಕ್ಕೆ ಕೈಗೂಡಿಸುತ್ತಿರುವರು.ನಮ್ಮ ಯಜಮಾನರು ವೃತ್ತಿಯಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದರು.ವೃತ್ತಿಯಿಂದ ನಿವೃತ್ತರಾದ ನಂತರ ಇಂತಹ ಸಂಸ್ಥೆಗಳಲ್ಲಿ ( ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಏ.ಓ.ಎಲ್. ಸಂಸ್ಥೆ) ಸ್ವಯಂಪ್ರೇರಿತ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು.
ಈ ಅವಕಾಶವನ್ನು ಮಾಡಿಕೊಡುತ್ತಿರುವ ಅಣ್ಣನ ಸಮಾನರಾದ ಶ್ರೀ.ವೆಂಕಟೇಶ ಶೆಟ್ಟಿ ಯವರಿಗೂ ಧನ್ಯವಾದಗಳು.
ನೇಗಿಲೊಳು ಉತ್ತಿಹೆವು
ಜಗಭಾರ ಹೊತ್ತಿಹೆವು;
ಬಾಗಿಲೊಳು ಕೈ ಮುಗಿದು
ಉಣ ಬಾರ ಎಂದಿಹೆವು;
ಒಕ್ಕಲಿಗರು ನಾವು ಒಕ್ಕಲಿಗರು..!
ಅಕ್ಕರೆಯ ನಗುವಲ್ಲಿ ಸಕ್ಕರೆಯ ಕರೆಯೋಲೆ;
ಬಿಕ್ಕಳಿಕೆ ಬರದಿಲ್ಲಿ ಹೆಗ್ಗಳಿಕೆ ನೋಡಲ್ಲೇ;
ದಾಸೋಹ ಜಾತ್ರೆಯಲಿ ಚೊಚ್ಚಲಿಗರು..!
ಮೆಕ್ಕಲುತನ ನಂಬುಗೆಯ
ಒಕ್ಕಲುತನದವರು..!!2!!
ಒಕ್ಕಲಿಗರು ನಾವು ಒಕ್ಕಲಿಗರು
ದಾಸೋಹ ಜಾತ್ರೆಯಲಿ ಚೊಚ್ಚಲಿಗರು
ಮೆಕ್ಕಲುತನ ನಂಬುಗೆಯ
ಒಕ್ಕಲುತನ ನಮದು..!!
ದಾತರಿಗೆ ದಾತರು ನಾವನ್ನದಾತರು
ಜೀತದಲಿ ಬದುಕುವುದನೆಂದಿಗೂ ಬಯಸೆವು;
ಆಳಾಗಿ ದುಡಿವೆವು ಅರಸಾಗಿ ಉಣ್ಣುವೆವು,
ಕೀಳಾಗಿ ಕಾಣದೆಯೆ ಮೇಲಾಗಿ ಮೆರೆಸುವೆವು..!
ಒಕ್ಕಲಿಗರು..ನಾವು ಒಕ್ಕಲಿಗರು
ಆಸರೆಯಾಗುವವರು ಹೆಸರೆಮ್ಮ ರೈತರು,
ಉಸಿರಿಗೆ ಉಸಿರು ನಾವ್ ಹಸಿರಿನವರು;
ಹೆಸರಿರದ ಉಸಿರಿಗೂ ಹಸಿರಮ್ಮ ರೈತರು,
ಮೆಕ್ಕಲುತನ ನಂಬುಗೆಯ ಒಕ್ಕಲುತನದವರು..!!
ಒಕ್ಕಲಿಗರು ನಾವು ಒಕ್ಕಲಿಗರು
ದಾಸೋಹ ಜಾತ್ರೆಯಲಿ ಚೊಚ್ಚಲಿಗರು
ಮೆಕ್ಕಲುತನ ನಂಬುಗೆಯ ಒಕ್ಕಲುತನದವರು..!!
ದಿಕ್ಕೆಟ್ಟ ಧರೆಗೆ ದಿಕ್ಕಾಗಿ ನಿಂತವರು
ಕಂಗೆಟ್ಟ ದೊರೆಗೆ ಬೆನ್ನಾಗಿ ಬಂದವರು;
ಸುಗ್ಗಿಯ ಸಮಯದಿ ಹುಗ್ಗಿಯನಿಡುವವರು
ಕುಗ್ಗಿದ ಸಮಯದಿ ಹಿಗ್ಗನು ನೆಡುವವರು..;
ಕಟ್ಟುವೆವು ನಾಡ, ಕಟ್ಟಿಹೆವು ನೋಡಾ,
ಬಿತ್ತಿಹೆವು ಕಾಡ, ಬಿಕ್ಕಿರಲು ಮೋಡ;
ಅಟ್ಟದಲಿ ಹಿಡಿ ಕಾಳು ಮಿಕ್ಕಿರದೆ ಕೂಡ
ಬಟ್ಟಲಲ್ಲಿ ಜಗಕನ್ನ, ಇಟ್ಟಿಹೆವು ನೋಡಾ..!
ಒಕ್ಕಲಿಗರು ನಾವು ಒಕ್ಕಲಿಗರು,
ದಾಸೋಹ ಜಾತ್ರೆಯಲಿ ಚೊಚ್ಚಲಿಗರು;
ಮೆಕ್ಕಲುತನ ನಂಬುಗೆಯ ಒಕ್ಕಲುತನದವರು..!!
ಉಪ್ಪಿನ ಕೊಳಗದಿ ಉಪ್ಪನ್ನಿಕ್ಕುವೆವು
ಉಪ್ಪಿಟ್ಟ ಮನೆಗೆ ತಂಪನೆರೆಯುವೆವು;
ಹಾಲನ್ನವಿಕ್ಕುವೆವು ಹಾಲಕ್ಕಿ ಒಕ್ಕಲಿಗರು
ಹಾಲಿಟ್ಟ ಎದೆಗೆ ಜೇನನ್ನೇ ಉಣಿಸುವೆವು..!
ಬೆಡಗುಂಟು ನಮ್ಮಲಿ ಹಲವಾರು ತೆರದಲ್ಲಿ
ಅರೆಭಾಷೆ, ಹೊಸದೇವ, ದಾಸರಿಹರಿಲ್ಲಿ;
ಹೆಸರುಗಳು ಗುರುತುಗಳು ಹತ್ತಿರಲಿ ನೂರಿರಲಿ
ಗೌಡ ಕುಲ ಸಂಕುಲಗಳು ಒಟ್ಟೊಟ್ಟಿಗಿರಲಿ..!!
ಒಕ್ಕಲಿಗ ಒಕ್ಕಿದರೆ ಉಕ್ಕುವುದು ಸಿಹಿಬೆಲ್ಲ,
ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ;
ಒಕ್ಕಲಿಗರ ಒಕ್ಕಲೆಬ್ಬಿಸಿದರೆ ತರವಲ್ಲ,
ಒಕ್ಕಣಿಸಿ, ರೈತ ದೇಶದ ಬೆನ್ನೆಲುಬು..!!
ಹರುಷವಿದೆ ಗರ್ವವಿದೆ ಹೆಮ್ಮೆಯಿದೆ ನಮಗೆ
ಒಕ್ಕಲಿಗರು..ನಾವು ಒಕ್ಕಲಿಗರು
ವರುಷವಿಡಿ ಬಡಿಸುವೆವು ಅನ್ನವನು ನಿಮಗೆ
ಒಕ್ಕಲಿಗರು..ನಾವು ಒಕ್ಕಲಿಗರು
ದಾಸೋಹ ಜಾತ್ರೆಯಲಿ ಚೊಚ್ಚಲಿಗರು..!
ಮೆಕ್ಕಲುತನ ನಂಬುಗೆಯ ಒಕ್ಕಲುತನದವರು..!!2!!
ಒಕ್ಕಲಿಗರು.. ನಾವು ಒಕ್ಕಲಿಗರು
ದಾಸೋಹ ಜಾತ್ರೆಯಲಿ ಚೊಚ್ಚಲಿಗರು
ವೇಣುಗೋಪಾಲ್ ಎಂ ಎನ್
ಅನಿತಾ ಶೆಟ್ಟರ್, ಬೆಂಗಳೂರು