N-2580 
  11-07-2024 05:50 PM   
ನಾಡಿನ ರೈತರ ಜೀವನಾಡಿ ಕೆರೆ!
"ನಾಡಿನ ರೈತರ ಜೀವನಾಡಿ ಕೆರೆ"!..
ಪೂಜ್ಯ ಶ್ರೀಗಳ ಜಲಕ್ರಾಂತಿಯನ್ನು ನೆನೆದು ಮನದಲ್ಲಿಯೇ ಕೃತಜ್ಞತೆಯನ್ನು ಸಲ್ಲಿಸುತ್ತೇನೆ..
ಕೆರೆಗಳು ನಮ್ಮ ರೈತರ ಜೀವನಾಡಿ ಅನ್ನುವುದು ಅಷ್ಟೇ ಅಲ್ಲ. ಜೀವನ ಜಗತ್ತಿಗೆ ಉಸಿರುಳಿಯಲು ಒಡನಾಡಿ..
ರೈತನ(ಕೃಷಿಯ) ಮೇಲೆ ಎಷ್ಟೊಂದು ಜನ ಅವಲಂಬಿತರು ಆಗಿದ್ದಾರೆ ಎಂದು ಗುರುಗಳು ತಮ್ಮ ಲೇಖನದಿಂದ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ...
ಇವತ್ತು ದೇಶದಲ್ಲಿ ಭಾವನಾತ್ಮಕವಾಗಿ ಸೆಳೆಯುವ ಅಂಶಗಳಲ್ಲಿ ರೈತ ಹಾಗೂ ಸೈನಿಕರ ವಿಷಯವೂ ಒಂದು..
ಸೈನಿಕರು , ರೈತರು ಅಂದ ತಕ್ಷಣವೇ ನಾನು ಹಿಂದೆ ಬರೆದ ಒಂದು ಪದ್ಯ ನೆನಪಾಯಿತು ..
ಇಲ್ಲಿ ಮತ್ತೊಮ್ಮೆ ಪ್ರಕಟಿಸುತ್ತಾ ಇರುವೆ..
*ವಿಷ ಸರ್ಪಗಳು*
------------------------------------
ಬಡಪಾಯಿ ರೈತ ,ಸಿಪಾಯಿಗಳು
ದುಡಿಯುವ ಯಂತ್ರ ಎಂಬ
ಪರಿಭಾಷೆಯಲ್ಲಿ ಗ್ರಹಿಸುವುದಾದರೆ
ನೀನು ಒಂದು ವಿಷಸರ್ಪ..
ಅಂತಹ ತಿಳುವಳಿಕೆ ನಿನಗೆ
ನೀಡಿದ್ದಾದರೂ ಯಾರು ?
ಹಾಗಾದರೆ ದೂರವಿಡಿ
ಅಪಾಯವನ್ನು
ಸರ್ಪದ ವಿಷ ಮೈಯಿಗೆ
ಅಂಟಿದ ಅಂಟು ರೋಗದಂತೆ
ಅವರಿಸತೊಡಗುವುದು ಇಲ್ಲವಾದರೇ ..
ಅಕಸ್ಮಾತ್ ಇದರ ಉಸಿರು
ಸೊಂಕಿದರೂ ದೇಹ ಕೃಶವಾಗುತ್ತದೆ
ಬದುಕು ನಿಂತ ನೀರಾಗಿ
ಹಸಿರು ಗಟ್ಟಿ ಉಸಿರು ನಿಂತು
ಒಳಗೊಳಗೇ ಭೀಕರವಾಗಿ
ಉಲ್ಬಣಿಸುತ್ತದೆ ..
ಈ ವಿಷ ಸರ್ಪ
ಒಂದು ದಿಕ್ಕಿನಲ್ಲಿ ಹರಿಯುತ್ತಿಲ್ಲ
ದಿಕ್ಕುದಿಕ್ಕಿನಲ್ಲಿ ಆಳ ಅಗಲ
ಅವರಿಸುತ್ತಾ ಸಾವಿರಾರು ಕೋಟಿ
ಲಕ್ಷಾಂತರ ಜನರ
ಆಸ್ತಿ ಪಾಸ್ತಿ ನುಂಗುತ್ತಾ
ಊರೂರು ಕೇರಿ ಕೇರಿ ಸುತುತ್ತಾ
ನೂರಾರು ಮೊಟ್ಟೆ ಮರಿಗಳ
ಸಂತಾನ ಮಾಡುತ್ತಾ ..
ಹೇಸಿಗೆಯ ವಿಷ ನೆತ್ತರ ತುಂಬಿ
ಅಬ್ಬರಿಸಿ ಸೃಷ್ಟಿಕರ್ತನಿಗೆ
ಸವಾಲಾಗಿ ಬಾಲವಲ್ಲಾಡಿಸುತ್ತಲೇ
ಸಾಮಾಜಿಕ ಪ್ರಜ್ಞೆಯ ಉದಾತ್ತ
ತತ್ವಗಳನ್ನು ವಿಚಿತ್ರವಾಗಿ
ಜಡ್ಡುಗಟ್ಟಿದ ಸಮಾಜದ ಎದುರು
ಪ್ರತಿಪಾದಿಸುತ್ತಿದೆ ..
ಹುತಾತ್ಮರೆದುರು
ಒಡೆದು ಆಳುವ ನೀತಿಯ
ಆನಿಯತ್ತಿನಿಂದ ನೇಮಿಸಿಕೊಂಡ
ವಿಷಸರ್ಪಗಳು ಸಾರ್ವನಾಶವಾಗುವುದಾದರೂ ಎಂದು ??
------------------------------------
ಸೈನಿಕ ತನ್ನ ಕೈಯಲ್ಲಿ ಬಂದೂಕವನ್ನು ಹಿಡಿಯಬೇಕಾದರೆ ,
ರೈತ ಬೆಳೆದ ಆಹಾರ ಬೇಕೇ ಬೇಕಾಗುತ್ತದೆ..
ಆದರೆ ರೈತರ ಹಿತ ಕಾಯುವವರು ಯಾರು ಎಂದ ತಕ್ಷಣವೇ ನೆನಪಾಗುವುದು ನಮ್ಮ ಶ್ರೀಗಳು..
ವಿಜ್ಞಾನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬಹುದು ಅಷ್ಟೇ.
ರಾಗಿ, ಭತ್ತ,ಗೋಧಿಯನ್ನು ಸೃಷ್ಟಿ ಮಾಡಲು ಸಾಧ್ಯವೇ ಇಲ್ಲ...
ಸೇವಿಸುವ ಆಹಾರ
ಉತ್ಪಾದನೆಗೆ ಭೂಮಿ ಬೇಕಾಗುತ್ತದೆ..
ಅದಕ್ಕೆ ಕೃಷಿ ಉಳಿಯಲೇ ಬೇಕು.
ಕೃಷಿ ಉಳಿಯಲೇ ಬೇಕಾದರೆ ಜೀವನಾಡಿ ನೀರು ಬೇಕೇ ಬೇಕು..
ಜೀವಿಸುವ
ಪ್ರತಿಯೊಬ್ಬರಿಗೂ ಅನ್ನ , ರೊಟ್ಟಿ , ಮುದ್ದೆ ಬೇಕು.. ಈಗಂತೂ
ರೈತ ಆಗಲು ಯಾರೂ ತಯಾರಿಲ್ಲ ..
ಪ್ರತಿಯೊಬ್ಬರಿಗೂ ನೆರಳು,ಗಾಳಿ ಬೇಕು,ಗಿಡ ನೆಡಲು ಯಾರೂ ತಯಾರಿಲ್ಲ , ಹಾಗೆ ಜೀವಜಲ ವನ್ನು ಸಂಸ್ಕರಿಸಲು ಸಿದ್ಧರಿಲ್ಲ..
ನಾಯಿ ಕೊಡೆಗಳೆಂತೆ ಎದ್ದಿರುವ ಕಾಂಕ್ರೆಟ್ ಕಾಡಿನ ಮಧ್ಯೆ ಕೆರೆಗಳ ಅವಶೇಷಗಳು ಕೂಡ ಕಾಣದಂತೆ ಮುಚ್ಚಿ ನೂರೆಂಟು ಅನಾಹುತಗಳಿಗೆ ಕಾರಣವೂ ಆಗುತ್ತಾ ಇದೆ..
ಈ ದೇಶದಲ್ಲಿ
ಅತಿ ಹೆಚ್ಚು ಅಲಕ್ಷೆಗೆ ಒಳಗಾಗುತ್ತಿರುವುದು ಕೃಷಿ ಕ್ಷೇತ್ರ..
ಅತಿ ಹೆಚ್ಚು ಅಸಡ್ಡೆಗೆ ಒಳಗಾಗುತ್ತಿರುವುದು ರೈತರ ಬದುಕು..
ಈ ಸರಿಯಂತೂ
ಜೀವನಾಡಿಯಾದ
ಕೆರೆಗಳ ಅಸು ಪಾಸಿ ನಲ್ಲಿ ಇರುವಂತ ತೋಟದ ಮಾಲೀಕರು ತಮ್ಮ ಕೊಳವೆ ಬಾವಿಯ
ಒಡಲಿಗೆ ಕನ್ನಹಾಕಿ ಧಾನದಾಹಕ್ಕಾಗಿ ರೈತರ ಜೀವನಾಡಿಯ ಕಗ್ಗೊಲೆಯನ್ನೇ ಮಾಡಿದ್ದಾರೆ , ಆದರೂ ಅವರಂತವರ
ಹಿತವನ್ನು ಕೂಡ ಕಾಯಲು ಸರ್ಕಾರದೊಂದಿಗೆ ಸೆಣೆಸಾಡುತ್ತಾ ಇರುವವರು ನಮ್ಮ ಗುರುಗಳು..
ಗುರುಗಳ ಪಾದಗಳಿಗೆ ಸಾಷ್ಟಾಂಗ ಪ್ರಣಾಮಗಳು.
ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಕರ್ನಾಟಕ. ದಾವಣಗೆರೆ ಜಿಲ್ಲೆ .ಚನ್ನಗಿರಿ. ಪಾಂಡೋಮಟ್ಟಿ