N-2572 
  27-06-2024 05:43 PM   
ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!
ಗುರುಗಳ ಪಾದಗಳಿಗೆ ವಂದಿಸುತ್ತಾ..
ಒಂದು ವೇಳೆ
ನಿಮ್ಮ ಕೈಯಲ್ಲಿ
ಲೇಖನಿ ಇಲ್ಲದೆ ಹೋಗಿದ್ದರೆ..!
ಬಹುಶಃ ನಮಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಾ ಇದ್ದೆವು ಅನ್ನಿಸುತ್ತಾ ಇದೆ..
*ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!*
*ಈ ಬೆಳದಿಂಗಳ ನವಿರಾದ ಬಿಸಿಲೇ*
*ಹೇಳುತ್ತಿದೆ ಇದೊಂದು ವಿಶೇಷವಾದ* *ಲೇಖನವೆಂದು..*
*ಯೋಗ ದಿನಾಚರಣೆ ಶುಭಾಶಯಗಳೊಂದಿಗೆ..*
ಯೋಗದ ಬಗ್ಗೆ ಅತ್ಯಂತ ವಿವರವಾಗಿ ವಿವರಿಸಿರುವಿರಿ ಗುರುಗಳೇ..
ನಮಗೆ ತಿಳಿಯದೆ ಇರುವ ಸಂಗತಿಗಳನ್ನು ತಿಳಿಸಿಕೊಟ್ಟಿರುವಿರಿ..
ಬಿಡುವಿಲ್ಲದೇ ಇದ್ದರೂ ಕೂಡ ಓದುಗರಿಗೆ ವಿಶೇಷವಾಗಿ ನಾವು ಏನಾದರೂ ಹೊಸ ರುಚಿಯನ್ನು ಉಣಬಡಿಸಲೇಬೇಕೆಂದು , ಸಮಯ ಮಾಡಿಕೊಂಡು ನಮಗಾಗಿ ಬಿಸಿಲಿನಲ್ಲಿ ಕೂಡ ಬೆಳದಿಂಗಳನ್ನೇ ಹೊತ್ತು ಪ್ರತಿ ಗುರುವಾರವು ನಮ್ಮ ಮುಂದೆ ಪ್ರತ್ಯಕ್ಷವಾಗುತ್ತಾ ಇದ್ದೀರಿ..
ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂದು ಪ್ರತಿ ಬಾರಿಯೂ ನಿಮ್ಮ ಲೇಖನಗಳಿಂದ ಸಾಬೀತು ಮಾಡುತ್ತಲೇ ಬಂದಿರುವಿರಿ..
ನಿಮ್ಮ ಬಗ್ಗೆ ಅದೆಷ್ಟು ಮಾತನಾಡಿದರು ಕಡಿಮೆ ನೀವು ನಮ್ಮ ಗುರುಗಳು ಎಂದು ಹೇಳಿಕೊಳ್ಳಲು ನಮಗಂತೂ ಅತ್ಯಂತ ಹೆಮ್ಮೆ ಇದೆ..
ಯೋಗವು `ಯುಜ್` ಎಂಬ ಸಂಸ್ಕೃತ ಪದದಿಂದ ಬಂದಿದೆ, ಇದರರ್ಥ `ಯುನಿಯನ್`. ಯೋಗದ ಅಭ್ಯಾಸವು `ದೇಹ` ಮತ್ತು `ಮನಸ್ಸು` ಶಿಸ್ತು ಅಥವಾ ತರಬೇತಿಯನ್ನು ಒಳಗೊಂಡಿರುತ್ತದೆ ಎಂದು ಓದಿದ ನೆನಪಿದೆ..
ಫಿಟ್‌ನೆಸ್ ಕಾಯ್ದುಕೊಳ್ಳಲು ನಮಗೆ ಬೆಸ್ಟ್ ಆಯ್ಕೆಯಾಗಿರುವ ಯೋಗವನ್ನು ಸಂಭ್ರಮಿಸುವ
ದಿನವಿದು..
ಯೋಗವು ದೇಹದ ಲಯ, ಮನಸ್ಸಿನ ಮಧುರ, ಆತ್ಮದ ಸಾಮರಸ್ಯ ಮತ್ತು ಜೀವನದ ಸ್ವರಮೇಳವಾಗಿದೆ.
ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಾರ್ವತ್ರಿಕ ಆಕಾಂಕ್ಷೆಯ ಸಂಕೇತವಾಗಿದೆ..
*ಇದು ಶೂನ್ಯ ಬಜೆಟ್‌ನಲ್ಲಿ ಒದಗುವ ಆರೋಗ್ಯದ ಭರವಸೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ..*
ನಿಮ್ಮ ಲೇಖನದಿಂದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವಂತಯಿತು..
ಮನುಷ್ಯ ತನ್ನ ಮನಸ್ಸನ್ನು ಹೇಗೆ ನಿಗ್ರಹಿಸಿಕೊಂಡಿರಬೇಕೆಂದು ಬಸವಣ್ಣನವರ ವಚನದ ಮೂಲಕ ತಿಳಿಸಿಕೊಟ್ಟಿರುವಿರಿ ..
ಮನುಷ್ಯನು ತನ್ನ ಮನಸ್ಸನ್ನು ಬುದ್ದಿಯ ಅಂಕೆಯಲ್ಲಿಟ್ಟುಕೊಳ್ಳಬೇಕು. ಚಂಚಲತೆಯಿಂದ ಕುಣಿದಾಡುವ ಮನಸ್ಸಿಗೆ ನಿಶ್ಚಲತೆಯ ಕುಣಿಕೆಯನ್ನು ಹಾಕಬೇಕು. ನಾಯಿಯು ಬಾಲವನ್ನು ಅಲ್ಲಾಡಿಸಬೇಕೇ ಹೊರತು ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಗಬಾರದು!
ಇದಿಷ್ಟೇ ಸಾಕಲ್ವಾ ಬುದ್ಧಿ ನಾನು ನಾನೇ ಎಂಬುವರಿಗೆ..
ಧನ್ಯವಾದಗಳು ..
ಶ್ರೀಮಠದ ಭಕ್ತಳು..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಕರ್ನಾಟಕ. ದಾವಣಗೆರೆ ಜಿಲ್ಲೆ .ಚನ್ನಗಿರಿ. ಪಾಂಡೋಮಟ್ಟಿ