N-2549 

  02-06-2024 10:47 AM   

ಕಡಿಮೆ ನೀರು ಬಳಸಿ ಸಿರಿ ಭತ್ತವನ್ನು ಬೆಳೆಯಲು ಮುಂದಾಗಿ ರೈತ ಮಹಿಳೆಯರಿಗೆ ತರಳಬಾಳು ಶ್ರೀ ಸಲಹೆ

 ಈಗ ಬಿತ್ತನೆ ಮಾಡಲು ಸಕಾಲವಾಗಿದೆ ದಾವಣಗೆರೆಯ ಕೃಷಿ ವಿಜ್ಞಾನ ಕೇಂದ್ರ ಈ ಬಗ್ಗೆ ಗ್ರಾಮಾಂತರ ಪ್ರದೇಶದ ರೈತರಿಗೆ ಅರಿವು ಮೂಡಿಸಬೇಕಾಗಿದೆ.
ಸೋಮಶೇಖರಪ್ಪ ಜಿಬಿ ವಕೀಲರು ಓಬವ್ವನಾಗ್ತಿಹಳ್ಳಿ. ಚಿತ್ರದುರ್ಗ ತಾಲ್ಲೂಕು
ಓಬವ್ವನಾಗ್ತಿ ಹಳ್ಳಿ. ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ

N-0 

  01-06-2024 09:00 PM   

 



N-2548 

  01-06-2024 02:54 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಗುರುಗಳ ಚರಣಗಳಿಗೆ ಶರಣು ಶರಣಾರ್ಥಿ.
ದಿನಾಂಕ 30 ಮೇ 2024ರ ವಿಜಯ ಕರ್ನಾಟಕ ಪತ್ರಿಕೆಯ ಬಿಸಿಲು ಬೆಳದಿಂಗಳು ಓದಿದೆ. ಅರಬ್ ನೆಲದ ಮಂದಿರ ಮಸೀದಿ ಈ ಲೇಖನದ ಬಗ್ಗೆ ನನ್ನ ಅನಿಸಿಕೆ.

ಸ್ವಾಮೀಜಿಯವರು ತಮ್ಮ ಒಂದು ಪುಸ್ತಕದಲ್ಲಿ ಹೇಳಿದ್ದಾರೆ: ಬರೆದ ಲೇಖನವನ್ನು ಪತ್ರಿಕೆಗೆ ಕಳುಹಿಸಲು ಸಂಪಾದಕರು ನಿಗದಿಪಡಿಸಿದ ದಿನ ಸಮೀಪಿಸುತ್ತಿದ್ದಂತೆ ಶೀತ ವಲಯದಲ್ಲಿ ಇದ್ದರೂ ನಮಗೆ ಬಿಸಿಲಿನ ತಾಪ ಏರುತ್ತದೆ. ಬರೆದು ಕಳಿಸಿದ ಮೇಲೆ ತಂಪು ಬೆಳದಿಂಗಳೊಪಾದಿಯಲ್ಲಿ ಆಹಲ್ಲಾದಕರವಾಗುತ್ತದೆ. ಅದಕ್ಕೆ ಈ ಲೇಖನ ಬಿಸಿಲು ಬೆಳದಿಂಗಳು ಎಂಬ ಹೆಸರು ಉಂಟಾಯಿತು ಏನೋ! ಎಂದು ಸೊಗಸಾಗಿ ನುಡಿದಿದ್ದಾರೆ.

ಸ್ವಾಮೀಜಿಯವರಂತೆ ನಮಗೂ ಸಹ ಅವರ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಮೊದಲು ಬಿಸಿಲಿನ ಬೇಗೆಯೇ ಸರಿ. ಕಳಿಸಿದ ಮೇಲೆ ಹಿತವಾದ ತಂಪು ಅನುಭವ.

ಬಸವ ಜಯಂತಿ ಪ್ರಯುಕ್ತ ಅರಬ್ ರಾಷ್ಟ್ರಗಳ ತಮ್ಮ ಪ್ರವಾಸ ಕಥನದ ರಸದೌತಣವನ್ನು ಉಣ ಬಡಿಸುತ್ತಿದ್ದಾರೆ ಸ್ವಾಮೀಜಿಯವರು. ಬಸವ ಜಯಂತಿ ಹಬ್ಬದಂದು ಅಕ್ಷಯ ತದಿಗೆ ಹಬ್ಬವನ್ನು ಆಚರಿಸುತ್ತೇವೆ. ಅಂದಿನ ವಿಶೇಷ ಏನೆಂದರೆ ಏನೇ ದೊರಕಲಿ ಅದು ಅಕ್ಷಯವಾಗುತ್ತದೆ ಎಂಬ ಪ್ರತೀತಿಯಿದೆ. ಭಗೀರಥನಿಗೆ ಗಂಗೆ ಒಲಿದದ್ದು ಅಕ್ಷಯ ತೃತೀಯ ದಿನದಂದೇ. ಅಕ್ಷಯಧಾರ್ಣಿಯಾಗಿ ಬೃಹದಾಕಾರವಾಗಿ ಹರಿದು ದೇಶದ ಹಲವಾರು ರಾಜ್ಯಗಳಲ್ಲಿ ನೀರಿನ ಅವಶ್ಯಕತೆ ಪೂರೈಸಿ ದೇವಗಂಗೆ ಆಗಿದ್ದಾಳೆ. ಶ್ರೀಕೃಷ್ಣ ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿದ್ದು ಇದೇ ದಿನದಂದು. ಹಾಗೆಯೇ ಸ್ವಾಮೀಜಿಯವರ ಯಾತ್ರೆ ಅನುಭವವು ಅಕ್ಷಯವಾದ ವಿಚಾರಧಾರೆಯಾಗಿದೆ. ಎಲ್ಲರೂ ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯ ಯಾವುದೆಂದರೆ, ಮಸೀದಿ ಮಂದಿರಗಳ ಸುಮಧುರ ಬಾಂಧವ್ಯ. ಇದಕ್ಕೆ ಮುಖ್ಯ ಕಾರಣವೇನೆಂದರೆ ಅಲ್ಲಿನ ಶೇಕ್ ರವರ ಆಡಳಿತ ನೀತಿ. ದೇಶದ ಎಲ್ಲೆಡೆ ಯಾವುದೇ ಅಪರಾಧಗಳಿಗೂ ವಂಚನೆಗಳಿಗೂ ದರೋಡೆಗಳಿಗೂ ಲಂಚ ರುಶುವತ್ತುಗಳಿಗೂ ಜಾಗವೇ ಇಲ್ಲ. ಹಾಗೇನಾದರೂ ನಡೆಯದಲ್ಲಿ ಶಿಕ್ಷೆ ಘನ ಘೋರ. ಹೀಗಾಗಿ ಯಾವುದೇ ಮತೀಯ ಕಲಹಗಳಿಗೆ ಅವಕಾಶವಿಲ್ಲವಾಗಿದೆ.

ಸ್ವಾಮಿ ನಾರಾಯಣ ದೇವಾಲಯಕ್ಕೆ 27 ಎಕರೆ ಜಾಗವನ್ನು ಶೇಖರವರು ಉಚಿತವಾಗಿ ಕೊಡುಗೆ ಕೊಟ್ಟ ವಿಚಾರ ತಿಳಿದು ಸಂತೋಷವಾಯಿತು. ಏಳು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದೇಗುಲದ ವರ್ಣನೆ ಓದಿ, ಆನಂದವಾಯಿತು. ಅಬ್ಬಬ್ಬಾ ಎಂದು ಉದ್ಗರಿಸುವಂತಾಯಿತು. ದೇಗುಲ ಪ್ರವೇಶ ಮಾಡುವಾಗ *ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ* ನೆನಪಾಯಿತು ಎಂದಿದ್ದಾರೆ ಸ್ವಾಮೀಜಿಯವರು. ವಾಹ್ ನಮ್ಮ ಹೃದಯ ಧನ್ಯವಾಯಿತು, ಪರವಶವಾಯಿತು ನಮ್ಮ ಮನ, ಸಾರ್ಥಕವಾಯಿತು ನಮ್ಮ ಜನುಮ ಎನಿಸಿತು.

ಗುರುಗಳ ಹಾಗೂ ನಮ್ಮ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವ ವೆಂಕಟೇಶ್ ಶೆಟ್ರು ರವರಿಗೆ ಅನಂತಾನಂತ ಧನ್ಯವಾದಗಳು.
ಶಕುಂತಲಾ ಸಿದ್ದರಾಜು, ಹೊಸದುರ್ಗ


N-2548 

  31-05-2024 03:06 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಪೂಜ್ಯರಿಗೆ ವಂದಿಸಿ

ಗುರುಗಳ *ಆರಬ್ ನೆಲದ ಮಂದಿರ ಮಸೀದಿ* ಅಂಕಣ ಓದಿ ಸಂತೋಷ ಆಶ್ಚರ್ಯಗಳು ಉಂಟಾದವು. ಬಸವ ಜಯಂತಿ ಪ್ರಯುಕ್ತ ಗುರುಗಳು ಪರ ರಾಷ್ಟ್ರವಾದ ದುಬೈ ನಗರವನ್ನು ಭೇಟಿ ಮಾಡಿದ್ದು ಅಲ್ಲಿನ ಧಾರ್ಮಿಕ ಸೌಹಾರ್ದತೆಯನ್ನು ಕುರಿತು ಬರೆದಿದ್ದಾರೆ.

ಮುಸ್ಲಿಂ ರಾಷ್ಟ್ರವಾದರೂ ಆ ದೇಶದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದು ಇತರ ದೇಶಗಳಿಗೆ ಮಾದರಿ ಎಂದು ಅವರು ತಿಳಿಸಿದ್ದಾರೆ.

ದುಬೈನ ಶೇಕ್ ರಶೀದ್ ಬಿನ್ ಸೈದ್ ರವರು ಮಸೀದಿ ಮಂದಿರಗಳಿಗೆ ಅವಕಾಶ ನೀಡಿರುವುದಲ್ಲದೆ, ಸ್ವಾಮಿ ನಾರಾಯಣ ಪಂಥದವರಿಗೆ ವಿಶಾಲ ಜಾಗವನ್ನು ಮಂಜೂರು ಮಾಡಿದ್ದಾರೆ. ಆ ದೇವಾಲಯದ ವಿಶೇಷತೆಯನ್ನು ಪೂಜ್ಯರು ರೋಚಕವಾಗಿ ವಿವರಿಸಿದ್ದಾರೆ.

ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋದ ಭಾರತದ ಐಟಿ ಬಿಟಿ ಯುವ ಪ್ರತಿಭೆಗಳು ಭಾರತದಲ್ಲಿ ಬೆಳೆದು ಖಾಯಂ ಆಗಿ ರಫ್ತಾದ ಅಪರೂಪದ ಹಣ್ಣುಗಳು ಎಂದು ಭಾರತದ ಯುವ ಪ್ರತಿಭೆಗಳನ್ನು ಸೊಗಸಾಗಿ ಬಣ್ಣಿಸಿದ್ದಾರೆ.

ದುಬೈ ನಗರವನ್ನು ನೋಡಿದಾಗ ಗುರುಗಳಿಗೆ ಅನ್ನಿಸಿದ್ದು ಇಷ್ಟು. ಭಾರತದಲ್ಲಿ ಎಲ್ಲ ಧರ್ಮಗಳು ನಿಂತ ನೀರಾಗಿ ಪಾಚಿ ಕಟ್ಟಿವೆ. ಪರಧರ್ಮ ಸಹಿಷ್ಣತೆ ಮರೆಯಾಗಿ ದೀಪ ಹಚ್ಚುವ ಬದಲು ಬೆಂಕಿ ಹಚ್ಚಲು ಧರ್ಮಗಳು ರಾಜಕೀಯಕ್ಕೆ ದುರ್ಬಳಕೆ ಯಾಗುತ್ತಿವೆ. ಇದು ಶೋಚನೀಯ ಎಂದು ಅಭಿಪ್ರಾಯ ಪಡುತ್ತಾರೆ.

ಪೂಜ್ಯರ ಅಂಕಣ ಬರಹಕ್ಕೆ ಪ್ರತಿಕ್ರಿಯೆ ನೀಡಲು ಪ್ರೋತ್ಸಾಹ ನೀಡುತ್ತಿರುವ ವೆಂಕಟೇಶ ಶೆಟ್ಟರಿಗೆ ಹೃತ್ಪೂರ್ವಕ ವಂದನೆಗಳು🙏.
ರಾಜೇಶ್ವರಿ ಹರೀಶ್, ಕಡಬ


N-2548 

  31-05-2024 03:01 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 *ಅಂಕಣ ಪ್ರತಿಕ್ರಿಯೆ*

ಶ್ರೀಗಳು ತಮ್ಮ ಇತ್ತೀಚಿನ ಅಂಕಣದಲ್ಲಿ ತಮ್ಮ ಪ್ರವಾಸದಲ್ಲಿ ಕಂಡುಕೊಂಡ ಸತ್ಯಗಳನ್ನು ತಿಳಿಸಿದ್ದಾರೆ. ಮುಖ್ಯವಾಗಿ, ಅರಬ್‌ ದೇಶಗಳಲ್ಲಿ ಕಾಣುವ ಧರ್ಮ ಸಾಮರಸ್ಯದ ಬಗ್ಗೆ ತಿಳಿಸಿದ್ದಾರೆ. ಮತ್ತು ಅಂತಹ ಸಾಮರಸ್ಯವು ನಮ್ಮ ದೇಶದಲ್ಲಿ ಕಾಣುವುದಿಲ್ಲ ಎನ್ನುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅವರ ಅನಿಸಿಕೆಗಳು ನೂರಕ್ಕೆ ನೂರು ಸತ್ಯ. ನಮ್ಮಲ್ಲಿ ಕಾಣುವ ಧರ್ಮ ಸಾಮರಸ್ಯದ ಕೊರೆತೆಗೆ ಕಾರಣ ನಮ್ಮ ರಾಜಕಾರಣಿಗಳು ಎನ್ನುವುದು ಸರ್ವವಿದಿತ. ತಮ್ಮ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಅವರು ಧರ್ಮ ಧರ್ಮಗಳ ನಡುವೆ ಭೇದಗಳನ್ನು ಹುಟ್ಟುಹಾಕಿ ಇಬ್ಬರ ಜಗಳದಲ್ಲಿ ಲಾಭ ಪಡೆಯುವ ನಿಕೃಷ್ಟ ಕೆಲಸವನ್ನು ಮಾಡುತ್ತಿದ್ದಾರೆ. ತಕ್ಷಣದ ಲಾಭಕ್ಕಾಗಿ ದೇಶದ ಭವಿಷ್ಯಕ್ಕೆ ಧಕ್ಕೆ ತುರುತ್ತಿದ್ದಾರೆ ಎನ್ನುವುದು ಕಟು ಸತ್ಯ. ಇದು ಕೇವಲ ಒಂದು ರಾಜಕೀಯ ಪಕ್ಷದ ಕಥೆಯಲ್ಲ, ಎಲ್ಲ ರಾಜಕೀಯ ಪಕ್ಷಗಳೂ ಈ ಆಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಕೆಲವು ಪಕ್ಷಗಳು ಓಂದು ಧರ್ವನ್ನು ಬೆಂಬಲಿಸಿದರೆ ಇನ್ನು ಕೆಲವು ಪಕ್ಷಗಳು ಇನ್ನೊಂದು ಧರ್ಮವನ್ನು ಬೆಂಬಲಿಸುತ್ತಿವೆ. ಕೆಲವು ಧರ್ಮಗಳು ಇಂತಹ ಸಂದರ್ಭದ ಲಾಭವನ್ನು ಪಡೆಯಲು ಯತ್ನಿಉತ್ತಿರುವುದೂ ವಿಷಾದನೀಯ. ಇವರಿಗೆ ಪಾಠ ಕಲಿಸಲು ಕೇವಲ ದೇಶದ ಭವಿಷ್ಯದ ಬಗ್ಗೆ ಕಳಕಳಿಯನ್ನು ಹೊಂದಿರುವ ಪ್ರಜೆಗಳಿಗೆ ಮಾತ್ರ ಸಾಧ್ಯ. ಆದರೆ ಪ್ರಜೆಗಳು ಈ ಮಾಯಾಜಾಲದಿಂದ ಹೊರಬಂದು ಎಚ್ಚೆತ್ತುಕೊಳ್ಳುವುದು ಯಾವಾಗ ಎನ್ನವುದು ಎಲ್ಲರನ್ನೂ ಕಾಡುತ್ತಿರುವ ಯಕ್ಷಪ್ರಶ್ನೆ!

ಬಹಳ ಪ್ರಸ್ತುತವಾದ ವಿಷಯವನ್ನು ಮಂಡಿಸಿ ಜನರನ್ನು ಚಿಂತನೆಗೆ ತೊಡಗಿಸಿರುವ ಗುರುಗಳಿಗೆ ಹಾಗೂ ಅವರ ವಾಣಿಯನ್ನು ನಮಗೆ ತಲುಪಿಸುತ್ತಿರುವ ವೆಂಕಟೇಶ ಶೆಟ್ಟಿಯವರಿಗೆ ಅನಂತ ಧನ್ಯವಾದಗಳು!
ಕೃಷ್ಣಕವಿ, ಬೆಂಗಳೂರು


N-2548 

  31-05-2024 02:56 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಪರಮ ಪೂಜ್ಯ ಗುರುಗಳಿಗೆ ಶರಣು ಶರಣಾರ್ಥಿಗಳು*

*ಬಿಸಿಲು ಬೆಳದಿಂಗಳು ಅಂಕಣ ದಿನಾಂಕ. 30.05.2024 ಕ್ಕೆ ಪ್ರತಿಕ್ರಿಯೆ*

ನಾನು ಆರಂಭ ಕಾಲದಿಂದಲೂ ಪೂಜ್ಯರ ಅಂಕಣದ ಅಭಿಮಾನಿ.

ಪೂಜ್ಯ ಗುರುಗಳು ಅರಬ್ ಸಂಯುಕ್ತ ಸಂಸ್ಥಾನ (ಯು.ಎ.ಇ.) ದೇಶದ ಕುರಿತು ನೀಡಿದ ಮಾಹಿತಿಯಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ತಿಳಿದು ಜ್ಞಾನ ದಾಸೋಹದಲ್ಲಿ ಪ್ರಸಾದ ಉಂಡಷ್ಟು ಸಂತೋಷವಾಯಿತು.

1. ಅರಬ್, ಮಾಸ್ಕತ್ ನಂತಹ ಮುಸ್ಲಿಂ ರಾಷ್ಟ್ರಗಳಲ್ಲಿ ಬಸವ ಜಯಂತಿ ಆಚರಣೆ ಎಂಬುದು *ಎತ್ತಣ ಮಾಮರ, ಎತ್ತಣ ಕೋಗಿಲೆ* ಎಂಬ ಅಲ್ಲಮರ ವಚನ ನೆನಪಿಸಿದ್ದು.

2. ಅಲ್ಲಿಯೇ ಹುಟ್ಟಿ ಬೆಳೆದ ಬೇರೆ ದೇಶದ ಮಕ್ಕಳಿಗೂ ಆ ದೇಶದ ಪೌರತ್ವ ಸಿಗುವುದಿಲ್ಲ ಎಂಬುವುದು.

2. ಈ ದೇಶದಲ್ಲಿರುವ ೯೫ ಲಕ್ಷ ಜನರಲ್ಲಿ ೪೦ ಲಕ್ಷ ಭಾರತೀಯರೇ ಇದ್ದಾರೆ ಎನ್ನುವುದು.

3. ದುಬೈ, ಅಬುದಾಬಿ, ಶಾರ್ಜಾ, ಸೌದಿ ಮೊದಲಾದ ಹೆಸರುಗಳನ್ನು ಕೇಳಿ ಗೊಂದಲವಾಗುತ್ತಿದ್ದ ನಮಗೆ UAE ದೇಶದ ಬಗ್ಗೆ ಸಂಪೂರ್ಣ ತಿಳುವಳಿಕೆ ಮೂಡಿದ್ದು.

4. ಸಂಯುಕ್ತ ಅರಬ್ ಸಂಸ್ಥಾನ ದೇಶದಲ್ಲಿರುವ ಪರಧರ್ಮ ಸಹಿಷ್ಣ್ಣು ಭಾವ. ಅದಕ್ಕೆ ಉದಾಹರಣೆಯಾಗಿ ದುಬೈ ಶೇಖ್ ರಶೀದ್ ಬಿನ್ ಸಯೀದ್ ಅವರು 1958 ರಲ್ಲಿಯೇ ಮಂದಿರಗಳನ್ನು ನಿರ್ಮಿಸಲು ಅವಕಾಶಮಾಡಿಕೊಟ್ಟಿದ್ದು ಹಾಗೂ ಅಬುದಾಭಿಯ ಶೇಖ್ ಮೊಹಮ್ಮದ್ ಬಿನ್ ಜೈದ್ 27 ಎಕರೆ ಭೂಮಿಯನ್ನು ಸ್ವಾಮೀ ನಾರಾಯಣ ಮಂದಿರ ನಿರ್ಮಾಣಕ್ಕೆ ಉಚಿತವಾಗಿ ನೀಡಿದ್ದಾರೆ ಎಂಬುವುದು.

5. ದುಬೈನ `ಅಲ್ ಮನ್ ಖೂಲ್` ಎಂಬ ಬಡಾವಣೆಯಲ್ಲಿ ಹಿಂದೂಗಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದನ್ನು ನೋಡಿ ಎಲ್ಲ ಜನಾಂಗದ ಜನರು ಸಂತೋಷಪಡುವುದು.

ಸದಾ ಒಂದಿಲ್ಲೊಂದು ರೀತಿಯಲ್ಲಿ ಮತೀಯ ಹಿಂಸೆಯಲ್ಲಿ ತೊಡಗುವ ನಮ್ಮ ದೇಶದ ಮತೀಯ ತೀವ್ರವಾದಿ ಜನರಿಗೆ ಒಂದು ಮಾದರಿ ದೇಶ ಹಾಗೂ ಮುಸ್ಲಿಂ ಬಗ್ಗೆ ಇರುವ ದೃಷ್ಟಿಕೋನವನ್ನು ಬದಲಿಸುವ ಲೇಖನ ಇದಾಗಿದೆ. ದುಬೈ ಮಸ್ಕತ್ ನಂತಹ ದೇಶಗಳಲ್ಲಿ ಬಸವ ಜಯಂತಿ ಆಚರಣೆ ಎಂಬುದನ್ನು ಕೇಳಿದಾಗ *ಇವಾನರವ ಇವನಾರವ ಎಂದನಿಸದಿರಯ್ಯ* ಎಂಬ ಅಪ್ಪ ಬಸವಣ್ಣನ ವಚನದ ಸಾಕಾರ ವಾದಂತೆ ಭಾಸವಾಯಿತು.

ಜ್ಞಾನದ ಭಂಡಾರವಾದ ಪರಮಾಪೂಜ್ಯರು ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಲೋಕದ ವಿಷಯಗಳನ್ನು ಉಣಬಡಿಸುತ್ತ ಭಕ್ತರಿಗೆ ಲೋಕಜ್ಞಾನವನ್ನು ನೀಡುತ್ತಿರುವುದು ಅತ್ಯಂತ ಸಂತೋಷದ ವಿಷಯ.
ಗುರುವರ್ಯರಿಗೆ ಶರಣು ಶರಣಾರ್ಥಿಗಳು.
ರಾಜ್ ಕುಮಾರ್ ಉಪಾಸೆ,. ಬೆಂಗಳೂರು*


N-2548 

  31-05-2024 10:21 AM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಅಂಕಣ ಪ್ರತಿಕ್ರಿಯೆ

ಶ್ರೀಗಳ ಅಂಕಣ ಅರಬ್ ನೆಲದ ಮಂದಿರ ಮಸೀದಿ,ಬಸವ ಜಯಂತಿಯ ನಿಮಿತ್ತ ಕೈಗೊಂಡ ಪ್ರವಾಸದ ಅನುಭವಗಳ ವಿವರಣೆ ಬಹಳ ಕುತೂಹಲಕಾರಿ ಎನಿಸಿದೆ. ಕಾರಣ ಶ್ರೀಗಳು ತಾವು ಕೇಳಿದ ನೋಡಿದ ಎಲ್ಲ ಮಾಹಿತಿಗಳನ್ನು ಆಮೂಲಾಗ್ರವಾಗಿ ಗ್ರಹಿಸಿ ಭಕ್ತರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಮತೀಯ ಗಲಭೆಗಳಿಲ್ಲದೆ ಅರಬ್ ನೆಲದಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳ ವಿಶೇಷವನ್ನು ತಿಳಿಸಿದ್ದಾರೆ. ಶ್ರೀಗಳ ಪ್ರವಾಸ ಕಥನ ನಮಗೆ ನೀಡುತ್ತಿವೆ ಮಾರ್ಗದರ್ಶನ. ಶ್ರೀಗಳಿಗೆ ವಂದಿಸಿ ವಿರಮಿಸುವೆ
ಜೆ.ಆರ್.ಶಿವಕುಮಾರ್, ಚಿತ್ರದುರ್ಗ


N-2548 

  31-05-2024 08:07 AM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಈ ವಾರದ ಲೇಖನ ಓದಿದ ಎಲ್ಲಾರು ದುಬಾಯ್ ಒದಂತೆ
M B Chandrashekhara
Karanata, india

N-2548 

  31-05-2024 08:06 AM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ನಮ್ಮ್ ಗುರು ನಮ್ಮ್ ದೊರೆ, ನಾವು ಧನ್ಯರು, ಆರಬ್ ದೇಶದಲ್ಲಿ ಮುಸ್ಲಿಂ ಹುಡುಗ ನಾ ಭಾವನೆ, ಅರಸೀಕೆರೆ ವಿದ್ಯರ್ಥಿಯ ಧನ್ಯತೆ. ಮೈ, ಮನ ಜಲ್ ಅನುಸುತ್ತೆ. ಗುರುವೇ, ಗುರು ಇದ್ದರೆ ಗುರಿ 🙏🙏🙏🙏🙏🙏
M B Chandrashekhara
Karanata, india

N-2548 

  30-05-2024 08:57 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಬಿಸಿಲು ಬೆಳದಿಂಗಳು ಅಂಕಣದ ಪ್ರತಿಕ್ರಿಯೆ

*ಅರಬ್ ನೆಲದ ಮಂದಿರ ಮಸೀದಿ*

ತರಳಬಾಳು ಶ್ರೀಗಳು ಇಂದಿನ ಅಂಕಣದಲ್ಲಿ ಮಸ್ಕತ್ ಮತ್ತು ದುಬೈ ನಗರಗಳ ಸೌಹಾರ್ದತೆಯ ಬಗ್ಗೆ ವಿವರವಾಗಿ ತಿಳಿಸಿರುತ್ತಾರೆ. ಈ ನಗರಗಳಿಗೆ ಉದ್ಯೋಗ ಅರಸಿ ಬಂದ ಭಾರತೀಯರನ್ನ ಇಲ್ಲಿನ ಜನರು ಗೌರವದಿಂದ ಕಾಣುವ ಪ್ರಸಂಗ ಹಾಗೂ ಈ ದೇಶದ ಒಟ್ಟು 95 ಲಕ್ಷ ಜನಸಂಖ್ಯೆಯಲ್ಲಿ ಸು. 40 ಲಕ್ಷ ಭಾರತೀಯರು ಇದ್ದರೂ ಸಹ ಈ ದೇಶದ ಧರ್ಮ ಧರ್ಮಗಳ ನಡುವಿನ ಸಂಬಂಧ ಅನ್ಯೋನ್ಯತೆಯಿಂದ ಕೂಡಿದೆ. ಹೆಚ್ಚು ಮುಸ್ಲಿಮರಿದ್ದರೂ ಸಹ ಮತೀಯ ಘರ್ಷಣೆಗಳು ಸಂಭವಿಸದೇ ಇರುವುದು ಈ ದೇಶದ ಧಾರ್ಮಿಕ ಸ್ವತಂತ್ರಕ್ಕೆ ಇರುವ ಕೈಗನ್ನಡಿಯಾಗಿದೆ. ಇಲ್ಲಿನ ಸರ್ಕಾರವು ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣುತ್ತಿರುವುದು ಸಹ ಈ ದೇಶದ ಪ್ರಗತಿಗೆ ಮುಖ್ಯ ಕಾರಣವಾಗಿದೆ. ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮಿಯರನ್ನು ಸಮಾನವಾಗಿ ಕಾಣುವ ನಿಯಮಗಳು ಇದ್ದರೂ ಸಹ ಇಲ್ಲಿನ ಕೆಲ ಜನರು ಧರ್ಮ ಧರ್ಮಗಳ ನಡುವೆ ರಾಜಕೀಯ ಬಣ್ಣ ಬೆರೆಸಿ ಸಮಾಜವನ್ನೇ ಹಾಳು ಮಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆಯಾ ಧರ್ಮದ ಜನರಿಗೆ ಅವರ ಧರ್ಮದ ಬಗ್ಗೆ ಇರುವ ಗೌರವ ಆಚಾರ-ವಿಚಾರ, ಸಂಸ್ಕೃತಿಯಂತೆ ಎಲ್ಲರೂ ಸಹ ಎಲ್ಲ ಧರ್ಮಗಳನ್ನ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಧರ್ಮಗಳು,ಜಾತಿಗಳು ಮನುಷ್ಯರು ಸಮಾಜದಲ್ಲಿ ಬದುಕಲು ಮಾಡಿಕೊಂಡಿರುವ ನಿಯಮಗಳೇ ಹೊರತು ಇವುಗಳನ್ನು ಯಾವ ದೇವರು ಸಹ ಸೃಷ್ಟಿಸಿಲ್ಲ. ದೇವರು ಸೃಷ್ಟಿಸಿರುವುದು ಒಂದೇ ಅದುವೇ ಮಾನವ ಧರ್ಮ. ಈ ಲೇಖನದಲ್ಲಿ ಶ್ರೀಗಳು ಭಾರತದಲ್ಲಿ ಎಲ್ಲಾ ಧರ್ಮಗಳು ನಿಂತ ನೀರಾಗದೆ, ರಾಜಕೀಯವಾಗಿ ದುರ್ಬಳಕೆಯಾಗದೆ, ತಿಳಿ ಮನಸ್ಸಿನಿಂದ ಸ್ವಚ್ಛಂದವಾಗಿ ಹರಿಯುವ ನೀರಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿರುವುದು ಶ್ರೀಗಳ ಭವ್ಯ ಭಾರತ ನಿರ್ಮಾಣದ ಕನಸಾಗಿದೆ.

ಅಂಕಣಕ್ಕೆ ಪ್ರತಿಕ್ರಿಯೆ ಬರೆಯಲು ಅವಕಾಶ ಮಾಡಿಕೊಟ್ಟ *ರಾ. ವೆಂಕಟೇಶ್ ಶೆಟ್ಟಿ* ಸರ್ ಅವರಿಗೆ ಅಭಿನಂದನೆಗಳು.
ಸುನೀಲ್ ಕುಮಾರ್. ಎಸ್.ಎಂ, ಶಿಕ್ಷಕರು ಹಾಗೂ ಪತ್ರಕರ್ತರು, ಸಿರಿಗೆರೆ.


N-2548 

  30-05-2024 08:52 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಬಿಸಿಲು ಬೆಳದಿಂಗಳು ಅಂಕಣ*
ದಿನಾಂಕ..೩೧-೫-೨೦೨೪
ನಾವು ನಮ್ಮನ್ನು ಮಾತ್ರ ಕಾಣುತ್ತಾ ನಿಂತಲ್ಲೇ ನಿಲಬಾರದು. ಪಕ್ಕದವರನ್ನು ನೋಡಿ ಅವರಿಂದ ಕಲಿಯಬೇಕಾದ ನಡವಳಿಕೆಗಳನ್ನು ಅನುಸರಿಸಿದರೆ ಬಲು ಚೆನ್ನವಲ್ಲವೆ ?

ಈ ಅಂಶಕ್ಕೆ ಪೂರಕವಾಗಿ ಕೆಲವು ಉದಾಹರಣೆಗಳನ್ನು ಹೇಳುತ್ತಲೇ ಶ್ರೀ ಗುರುಗಳು ಅವರ ಪ್ರವಾಸ ಸಂದರ್ಭದಲ್ಲಿ ಪ್ರತ್ಯಕ್ಷ ಕಂಡ ವಿಚಾರಗಳನ್ನು ಸ್ಪಷ್ಟನುಡಿಗಳಲ್ಲಿ ವಿವರಿಸಿರುವುದು ಮನನೀಯ ಅಂಶವೆನಿಸಿತು. ಸರ್ವಧರ್ಮ ಸಮನ್ವಯ ಸಮಭಾವ ಸಾಧಿಸಿದ ರಾಜಪ್ರಭುತ್ವದ ಉದಾಹರಣೆಗಳು ನಮ್ಮ ಕಣ್ಣುಗಳ ಮುಂದೆಯೇ ಇವೆ. ನಮ್ಮ ಧರ್ಮಕ್ಕೆ ಸಂಬಂಧಿಸಿದ ದೇವಾಲಯಗಳಿಗೆ ಯಥೇಚ್ಛವಾಗಿ ಜಾಗ ನೀಡಿ ಭವ್ಯತೆ ಮೆರೆದ ಸಮುಚ್ಚಯಗಳನ್ನು ಪ್ರವಾಸದ ಹಿನ್ನೆಲೆಯಲ್ಲಿ ನೋಡಿ ಬರುತ್ತೇವೆ. ಅಲ್ಲದೆ ಅಲ್ಲಿನ ವಿಚಾರಗಳನ್ನು ಕುರಿತು ಮೆಚ್ಚುನುಡಿಗಳನ್ನೂ ಆಡುತ್ತೇವೆ. ನಮ್ಮಲ್ಲಿ ಹೀಗೇಕೆ ಆಗಿಲ್ಲ ಎನ್ನುವ ಗುಂಗಿಬಲ್ಲಿ ಒಂದೆರಡು ದಿನ ಮಾತನಾಡಿ ಮತ್ತೆ ಯಥಾಸ್ಥಿತಿಯತ್ತ ಜಾರಿಬಿಡುತ್ತೇವೆ. ಅರಬ್ ದೇಶಗಳ ಈ ಸಂಸ್ಕೃತಿಯು ನಮ್ಮಲ್ಲಿಯೂ ಬರಲು ಹಲವು ಹಂತಗಳ ಚಿಂತನೆ ಮತ್ತು ಅನುಷ್ಠಾನಕ್ಕೆ ತರಲೇಬೇಕೆಂಬ ಪ್ರಬಲ ಇಚ್ಛಾಶಕ್ತಿ ಉಂಟು ಮಾಡುವ ಹಿನ್ನೆಲೆಯಲ್ಲಿ ಈ ಅಂಕಣ ಕಣ್ಣಿಗೆ ಬಿದ್ದಿರುವ ಧೂಳು ತೊಳೆದು ಸ್ಪಷ್ಟ ದೃಷ್ಟಿ ಮೂಡುವಂತಾಗಲಿ. ಓದುಗರೆಡೆಗೆ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ತಲುಪಿಸಲು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸತತ ಪ್ರಯತ್ನಶೀಲರಾಗಿರುವ ರಾ.ವೆಂಕಟೇಶ ಶೆಟ್ಟರಿಗೆ ಧನ್ಯವಾದಗಳು.
ಟೀಕಾ. ಸುರೇಶ ಗುಪ್ತ, ಚಿತ್ರದುರ್ಗ


N-2548 

  30-05-2024 08:36 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು " ಎಂಬ ಗುರುಗಳ ಇಂದಿನ ಪ್ರಕಟಿತ ಲೇಖನದ ವಿಸ್ತಾರ ಅನನ್ಯ. ಗುರುತ್ವಾಕರ್ಷಣೆ ಎಂಬ ಭೌತಶಾಸ್ತ್ರ ಸಿದ್ದಾಂತದಂತೆ ಮಸ್ಕತ್ -ದುಬೈಗಳಲ್ಲಿ ನೆಲೆಸಿದ ಭಾರತೀಯ ITBT ಯ ಪ್ರತಿಭೆಗಳು ಭಾರತದಲ್ಲಿ ಬೆಳೆದು ರಫ್ತಾದ ಹಣ್ಣುಗಳು. ಅವು ಮರಳಿ ಭಾರತಕ್ಕೆ ಬರಲಿರುವ ಪರಿಪಕ್ವ ಹಣ್ಣುಗಳೆಂಬ ಗುರೂಜಿ ಅವರ ನುಡಿಗಳಲ್ಲಿ ನಮ್ಮ ಯುವ ಪ್ರತಿಭೆಗಳ ಬಗೆಗಿನ ಅಂತಃಕರಣ ಮತ್ತು ಭರವಸೆಯನ್ನು ಸೂಚಿಸುತ್ತದೆ, ಲೇಖನದ ಉದ್ದಕ್ಕೂ ಬಿಂಬಿತವಾದ ಆ ದೇಶದ ಧಾರ್ಮಿಕ ಸಾಮರಸ್ಯದ ಕುರಿತಾದ ಚಿಂತನೆಗಳು ನಮ್ಮಲ್ಲಿಯೂ ಸಾಧ್ಯವಾಗಲಿ ಎಂದು ನನ್ನ ಮನೆ ಬಯಸುತ್ತಿದೆ.
ವೆಂಕಟೇಶ ಜನಾದ್ರಿ ಕಲಬುರ್ಗಿ


N-2548 

  30-05-2024 07:47 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 I`m always happy to watch n read DR.SRI SRI SRI 1108 GURU JI`S articles and pravachans.
S.SATHISHA
Davanagere, karnataka,INDIA

N-2548 

  30-05-2024 07:00 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 Lekhana tumbha tumbha adbhuthavagee mudi bandeede.Hora deshada smskruthi alli nelaseeruva nammavara naduvaleeke adarsha praya.Arab rastrada parichaya adbhutha.
sharanu sharanarthee.
C.m.jagadeesh
mysuru

N-2548 

  30-05-2024 05:03 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಗುರುಗಳ ಪಾದಗಳಿಗೆ ಭಕ್ತಿ ಪೂರ್ವಕವಾಗಿ ವಂದಿಸುತ್ತಾ ..
ನಿಮ್ಮಂತಹ ಗುರುಗಳು ನಮಗೆ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯವೆಂದು ಭಾವಿಸುತ್ತೇನೆ..
ಗುರುಗಳವರ ಅಂಕಣವನ್ನು ಓದಿದೇ..
ಅರಬ್ ದೇಶದ ಇತಿಹಾಸದ ಹಲವಾರು ವಿಷಯಗಳು ನಮಗೆ ತಿಳಿದವು..
ಅಲ್ಲಿನ ವಿಷಯಗಳನ್ನು ಗುರುಗಳು ಅದೆಷ್ಟು ಚಿಕ್ಕ ಹಾಗೂ ಚೊಕ್ಕವಾಗಿ ವಿವರಿಸಿದ್ದಾರೆ..
ಅರಬ್ ದೇಶದ ಧಾರ್ಮಿಕ ಸೌಹಾರ್ದತೆಯ ಬಗ್ಗೆ ಓದಿ ಅತ್ಯಂತ ಸಂತೋಷವಾಯಿತು..
ಇನ್ನೊಂದು ಧರ್ಮದವರ ಬಗ್ಗೆ ಗೌರವಧಾರಗಳನ್ನು ಹೊಂದಿರುವುದು ತುಂಬಾ ಪ್ರಶಂಸನೀಯ ಸಂಗತಿ..
ಇಂತಹ ದಿನಗಳು ಆದಷ್ಟೂ ಬೇಗ ನಮ್ಮ ದೇಶದಲ್ಲಿಯೂ
ಬರಲಿ ನಿಮ್ಮ ಆಶೀರ್ವಾದದಿಂದ...

ಭಾರತದಲ್ಲಿ ಎಲ್ಲಾ ಧರ್ಮಗಳೂ ನಿಂತ ನೀರಾಗಿ ಪಾಚಿ ಕಟ್ಟಿವೆ. ಧರ್ಮಗುರುಗಳೆನಿಸಿದವರು ತಮ್ಮ ಧರ್ಮಬಾಹಿರ ನಡವಳಿಕೆಗಳಿಂದ ಜಾರಿ ಬೀಳುತ್ತಿದ್ದಾರೆ.. ತಮ್ಮ ಸುತ್ತ ಇರುವವರನ್ನೂ ಸಹ ಜಾರಿಸಿ ಬೀಳಿಸುತ್ತಿದ್ದಾರೆ... ಧರ್ಮಪಥದಲ್ಲಿ ನಡೆಯುವವರ ವಿರುದ್ಧ ಷಡ್ಯಂತ್ರ ರೂಪಿಸುತ್ತಾರೆ... “ಧರ್ಮಂ ಪ್ರವಕ್ಷ್ಯಂತ್ಯಧರ್ಮಜ್ಞಾಃ ತಸ್ಮಾತ್ ಕ್ಷೀಯತೇ ಧರ್ಮಃ” ಎಂದು ಶ್ರೀಮದ್ಭಾಗವತವು ಹೇಳುವಂತೆ ಧರ್ಮದ ನಿಜವಾದ ಅರಿವು ಇಲ್ಲದವರು ಧರ್ಮಬೋಧೆ ಮಾಡುತ್ತಿರುವುದರಿಂದ ಧರ್ಮವು ಕ್ಷೀಣಿಸುತ್ತಿದೆ. “ಬಳ‍್ಳಿಗುರುಡರು ಸೇರಿ ಹಳ್ಳವನು ಬಿದ್ದಂತೆ ಒಳ್ಳೆಯ ಗುರುವಿನುಪದೇಶವಿಲ್ಲದಿರೆ ಎಲ್ಲಿಹುದು ಮುಕ್ತಿ ಸರ್ವಜ್ಞ?” ಎನ್ನುವಂತಾಗಿದೆ... ಈಗೀಗಲಂತೂ ಅನೇಕ “ಧರ್ಮಗುರುಗಳು” ಪ್ರಚ್ಛನ್ನ ರಾಜಕಾರಣಿಗಳಾಗಿದ್ದಾರೆ. ಹೀಗಾಗಿ ದೀಪ ಹಚ್ಚುವ ಬದಲು ಬೆಂಕಿ ಹಚ್ಚಲು ಧರ್ಮಗಳು ರಾಜಕೀಯಕ್ಕೆ ದುರ್ಬಳಕೆಯಾಗುತ್ತಿವೆ!
ಸತ್ಯ ದರ್ಶನವಾಗುವಂತ ನುಡಿಗಳು ಗುರುಗಳೇ..
ಶಬ್ದ ಕಟುವಾದರೂ ಇದರಲ್ಲಿರುವ ಸತ್ಯ ಅಗಾಧವಾಗಿದೆ.. ಪ್ರತಿಯೊಬ್ಬ ಗುರು ಇದನ್ನು ಅನುಸರಿಸಿದರೆ ಇನ್ನೊಂದು ದೇಶಕ್ಕೆ ನಮ್ಮ ದೇಶವನ್ನು ಹೋಲಿಸಿ, ಸಂಕಟಪಡುವ ಸಂದರ್ಭಗಳು ನಮಗೆ ಬರುವುದಿಲ್ಲ..
ಇಲ್ಲಿ ಎಲ್ಲವೂ ತಮ್ಮ ಸ್ವಾರ್ಥಕ್ಕಾಗಿ ನಡೆಯುತ್ತಾ ಇದೆ..
ಅದೆಷ್ಟೋ ಗುರುಗಳು ಮಾಡಬಾರದನ್ನೆಲ್ಲ ಮಾಡಿ ಜೈಲಿನ ಕಂಬಿಯನ್ನು ಸಹ ಎಣಿಸುತ್ತಿದ್ದಾರೆ ..
ಆದರೂ ಇವರೆಲ್ಲ ಧರ್ಮ ಗುರುಗಳು..
*ಕಂಬಿಯಿಂದ ಆಚೆ ಬಂದಾಗ ಕಾಲು ಹಿಡಿಯುವವರು ಇರುವವರೆಗೂ ತಪ್ಪುಗಳು ನಡೆಯುತ್ತಾಲೇ ಇರುತ್ತವೆ..*
ಕಂಡು ಕೇಳರಿಯಾದ ಅದೆಷ್ಟೋ ವಿಷಯಗಳನ್ನು ನಿಮ್ಮ ಮೂಲಕ ತಿಳಿದಂತೆ ಆಯ್ತು..
ಗುರುಗಳಿಗೆ ದೊರೆತ ಉನ್ನತ ಮಟ್ಟದ ಗೌರವ ಕಂಡು ನಮಗೆ ಸಂತೋಷವಾಗಿದೆ..
ನಿಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಅದೃಷ್ಟವಂತೂ ನನಗೆ ಸಿಕ್ಕಿಲ್ಲ...
ಆದರೆ ನಿಮ್ಮ ದರ್ಶನ ಭಾಗ್ಯ ಸಿಕ್ಕು ನಮ್ಮೊಂದಿಗೆ ಒಂದಷ್ಟು ಸಮಯ ನಿಮ್ಮ ಮೆಚ್ಚುಗೆಯ ಮಾತುಗಳು ಕೇಳಿದ್ದೆ ನನ್ನ ಸೌಭಾಗ್ಯ ಸಾಕಿಷ್ಟು ಈ ಜನುಮಕ್ಕೆ..
ಗೌರವ ಪೂರ್ವಕ ವಂದನೆಗಳೊಂದಿಗೇ
ಶ್ರೀ ಮಠದ ಭಕ್ತಳು
ಕೆ. ಜಿ. ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು

N-2548 

  30-05-2024 03:50 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಈ ಅಂಕಣ ಓದಿ ಮನಸ್ಸಿಗೆ ಬಹಳ ಸಂತೋಷ ವಾಯಿತು ಗುರುಗಳ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಗಳು.
ಎನ್ ಚಂದ್ರಶೇಖರಪ್ಪ ಹಿರೇಜಂಬೂರು ಶಿಕಾರಿಪುರ
ಹಿರೇಜಂಬೂರು ಶಿಕಾರಿಪುರ ತಾಲ್ಲೂಕು

N-2548 

  30-05-2024 02:53 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 *ಮರಳ ಒಡಲಿನ ಧರ್ಮಸಹಿಷ್ಣುತೆ*

ಸುಮಾರು ಎರಡು ವಾರಗಳ ಹಿಂದೆ, ಒಮಾನ್ ದೇಶದ ಪ್ರವಾಸ ಕುರಿತಾದ ಗುರುಗಳ ಅಂಕಣವನ್ನು ಓದಿದ ನೆನಪು ಮಾಸುವ ಮುನ್ನವೇ, ಸ್ವಾಮೀಜಿಯವರ ಅರಬ್ ರಾಷ್ಟ್ರಗಳ ಪ್ರವಾಸ ಕುರಿತಾದ ಮತ್ತೊಂದು ಅಂಕಣವನ್ನು ವಾಚಿಸುವ ಸೌಭಾಗ್ಯ ದೊರೆತಿದೆ.

ಸಿರಿಗೆರೆ ಸಂತರನ್ನು, ಅರಬ್ ರಾಷ್ಟ್ರಗಳಲ್ಲಿರುವ ಸರ್ವಧರ್ಮ ಸಹಿಷ್ಣುತಾ ಭಾವ ಗಮನ ಸೆಳೆದ ಹೂರಣವೇ ಈ ಲೇಖನದ ಅಂತರಾತ್ಮವಾಗಿದೆ, ಹಂದರವಾಗಿದೆ, ಸಂದೇಶವಾಗಿದೆ. "ಅನೇಕತೆಯಲ್ಲಿ ಏಕತೆ" ಎನ್ನುವ ಘೋಷಾವಾಕ್ಯದ ರಾಷ್ಟ್ರದಿಂದ, ಒಮಾನ್ ಹಾಗೂ ಯು.ಎ.ಇ. ದೇಶಗಳಿಗೆ ಭೇಟಿ ಕೊಟ್ಟ, ತೆರೆದ ಮನಸ್ಸಿನ ಎಂತಹವರಿಗಾದರೂ, ತಟ್ಟುವ ಸಂವೇದನೆಗಳು ಜ್ಞಾನಾರ್ಥಿಯಾದ ಜಗದ್ಗುರುಗಳ ಮನಸ್ಸನ್ನು ತಟ್ಟದೇ ಹೋಗುವ ಸಾಧ್ಯತೆಗಳು ಇಲ್ಲ. ಧರ್ಮದ ಸೂಕ್ಷ್ಮತೆಗಳನ್ನು, ಒಂದು ನಿರ್ದಿಷ್ಟ ಕೋನದಿಂದ ವೀಕ್ಷಿಸಿದಾಗಲಷ್ಟೇ, ಲಭ್ಯವಾಗುವ ಅಲೌಕಿಕ ಭಾವನೆಗಳ ಮೂರ್ತತೆಯನ್ನು, ಸ್ವಾಮೀಜಿ, ತಮ್ಮ ಅಂಕಣದಲ್ಲಿ ಎಂದಿನ ಸರಳತೆ, ಸುಂದರತೆಯಿಂದ ತೆರೆಯುತ್ತಾ ಸಾಗುತ್ತಾರೆ. ರಾಜಪ್ರಭುತ್ವದ ಮುಸ್ಲಿಂ ರಾಷ್ಟ್ರಗಳಲ್ಲಿಯೂ, ಆಳುವವರ ಸದ್ಭಾವನೆಗಳು, ನಾಗರೀಕರ ಧರ್ಮಜೀವನದಲ್ಲಿ ಎಂತಹ ಗುರುತರವಾದ, ಸಹ್ಯಪರವಾದ, ಜೀವನಪರತೆಯ ಬದಲಾವಣೆಗಳನ್ನು ತರಬಲ್ಲವು ಎನ್ನುವುದನ್ನು ಸೋದಾರಹಣೆಗಳ ಮೂಲಕ ಶ್ರೀ ಶಿವಮೂರ್ತಿ ಸ್ವಾಮಿಗಳು ಅದ್ಭುತವಾಗಿ ವಿವರಿಸಿದ್ದಾರೆ. ದೇಶದ ಎಲ್ಲಾ ಪ್ರಜೆಗಳಿಗೂ ಕೊಟ್ಟಿರುವ, ಹಲವು ನಿರ್ಬಂಧನೆಗಳಿಗೆ ಒಳಪಟ್ಟ, ಧಾರ್ಮಿಕ ಸ್ವಾತಂತ್ರ್ಯ, ಅರಬ್ ದೇಶಗಳ ಸಹಜೀವನವನ್ನು ಉತ್ತಮಗೊಳಿಸಿರುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಯತಿಗಳು, ಮರಳ ಒಡಲ ಈ ಧರ್ಮ ಸಹಿಷ್ಣುತೆಗೆ ಬೆರಗುಗೊಳ್ಳುತ್ತಾರೆ.

ಮನುಷ್ಯನ ಮನಸ್ಸೇ ಹಾಗೆ, ತೌಲನಿಕತೆಯ ತೂಗು ಮಂಚವಿಲ್ಲದೆ ಅದು ತನ್ನ ತುಡಿತಕ್ಕೆ ವಿರಾಮ ಹಾಕಲಾರದು. ಸಹಜವಾಗಿಯೇ, ಸ್ವಾಮಿಗಳು ಸರ್ವಧರ್ಮ ಸಹಿಷ್ಣತೆಯ ಬೀಡಾದ ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಕಳವಳ, ಆತಂಕಗಳನ್ನು ವ್ಯಕ್ತ ಪಡಿಸುತ್ತಾರೆ. ಸರ್ವಧರ್ಮಗಳನ್ನೂ ಸಮಾನವಾದ ದೃಷ್ಟಿಕೋನದಿಂದ ಕಂಡ ನಮ್ಮ ಪುರಾತನ ಸನಾತನಪ್ರಜ್ಞೆಗೆ ಹಿಡಿದಿರುವ ರಾಜಕೀಯ ಜಾಡ್ಯವನ್ನು ಮುಕ್ತ ಮನಸ್ಸಿನಿಂದ ಖಂಡಿಸುತ್ತಾರೆ. "ಭಾರತದಲ್ಲಿ ಎಲ್ಲ ಧರ್ಮಗಳೂ ನಿಂತ ನೀರಾಗಿ ಪಾಚಿ ಕಟ್ಟಿವೆ" ಎನ್ನುವ ಮಠಾಧೀಶರ ನಿರ್ಭೀಡೆಯ ಮಾತುಗಳು, ಅನೇಕ ವಿಚಾರ ತರಂಗಗಳನ್ನು ಮನದಲ್ಲಿ ಹುಟ್ಟು ಹಾಕುತ್ತಿವೆ. ಮನುಷ್ಯನಿಗೆ ಇತಿಹಾಸಪ್ರಜ್ಞೆ ಅವಶ್ಯಕ; ಆದರೆ ಈ ಪ್ರಜ್ಞೆ ಇಂದು ಒಂದು ಸುಂದರ, ಸಮನ್ವಯ, ಒಡನಾಟದ ಸಾಂಘಿಕ ಬದುಕನ್ನು ಕಟ್ಟಿಕೊಳ್ಳಲು ಅಡ್ಡಿಯಾದಲ್ಲಿ, ಇಂತಹ ಇತಿಹಾಸ ಪ್ರಜ್ಞೆಯಿಂದ ಯಾವ ಪುರುಷಾರ್ಥ ಸಿದ್ಧಿಯಾದೀತು? ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಸದ್ಭಾವನೆ ಯಾವ ಸುಂಕವನ್ನೂ ಬೇಡುವುದಿಲ್ಲ. ಯಾವುದೇ ಧರ್ಮದ ಶ್ರೇಷ್ಠ ಹಿಂಬಾಲಕನ ಪ್ರಮುಖ ಲಕ್ಷಣ ಎಂದರೆ ಪರಧರ್ಮ ಸಹಿಷ್ಣುತೆ ಎನ್ನುವುದೇ ಆಗಿದೆ.

ಸ್ವಾಮೀಜಿಗಳ ಆಶೀರ್ವಚನ, ಅರಬ್ ರಾಷ್ಟ್ರಗಳ ಕುರಿತಾದ ಅವರ ಆರ್ದ್ರತೆಯ ಲೇಖನಗಳು ಇವುಗಳನ್ನೆಲ್ಲಾ ನೋಡಿ ಮನಸ್ಸು ತುಂಬಿ ಬಂದಿದೆ; ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿರುವ ಇಂತಹ ಮಾನವತೆಯ, ಮಾನವೀಯತೆಯ ವೈದ್ಯ (ಪೂಜಾರಿ)ರ ಅವಶ್ಯಕತೆ, ಭೌತಿಕ ಆರೋಗ್ಯ ಕಾಪಿಡುವ ವೈದ್ಯರ ಅವಶ್ಯಕತೆಗಿಂತ ಎಷ್ಟೋ ಪಾಲು, ಸಾಮಾಜಿಕ ಸಂದರ್ಭದಲ್ಲಿ, ಹೆಚ್ಚಿದೆ ಎನ್ನುವುದನ್ನು ಪ್ರಮಾಣೀಕರಿಸಲು ಸಿರಿಗೆರೆ ಯತಿವರ್ಯರನ್ನು ಒಮ್ಮೆ ಭೇಟಿಯಾದರೆ ಸಾಕೆನಿಸುತ್ತದೆ.

ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್

N-2548 

  30-05-2024 02:46 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಶ್ರೀ ಗುರುಗಳ ಅಂಕಣವನ್ನು ಓದಿ ಅರಬ್ ದೇಶದ ಇತಿಹಾಸದ ಹಲವು ವಿಷಯಗಳು ತಿಳಿದವು. ಅಲ್ಲಿನ ವಿಷಯಗಳನ್ನು ಗುರುಗಳು ಚಿಕ್ಕದಾಗಿ ಚೊಕ್ಕದಾಗಿ ಬಹಳ ಸೊಗಸಾಗಿ ವಿವರಿಸಿದ್ದಾರೆ. ಅರಬ್ ದೇಶದ ಧಾರ್ಮಿಕ ಸೌಹಾರ್ದತೆಯ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ನಮ್ಮ ದೇಶದಲ್ಲಿಯೂ ಸಹ ಅಂತಹ ದಿನಗಳು ಆದಷ್ಟು ಬೇಗ ಬರಲಿ ಎಂದು ಆಶಿಸುತ್ತೇನೆ.

ಶ್ರೀ ಗುರುಗಳಿಗೆ ನನ್ನ ನಮನಗಳು. ಅಂಕಣಕ್ಕೆ ಪ್ರತಿಕ್ರಿಯೆ ಬರೆಯಲು ಅನುವು ಮಾಡಿಕೊಟ್ಟ ರಾ ವೆಂಕಟೇಶ ಶೆಟ್ಟಿ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.
ವೈಷ್ಣವಿ ನಾಣ್ಯಾಪುರ, ಹಗರಿಬೊಮ್ಮನಹಳ್ಳಿ


N-2548 

  30-05-2024 01:18 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಪರಮ ಪೂಜ್ಯ ಗುರುಗಳಿಗೆ ಶರಣು ಶರಣಾರ್ಥಿಗಳು.
ಈ ದಿನದ ಬಿಸಿಲು ಬೆಳದಿಂಗಳು ಲೇಖನದಲ್ಲಿ ಪೂಜ್ಯ ಗುರುಗಳು ಅರಬ್ ನೆಲದ ಮಂದಿರ ಮಸೀದಿಗಳು ಶೀರ್ಷಿಕೆಯಡಿಯಲ್ಲಿ ಯು.ಎ.ಇ.ದೇಶದ ಮಾಹಿತಿಯನ್ನು ನೀಡಿರುತ್ತಾರೆ.
ರಾಷ್ಟ್ರ ಕವಿ ಕುವೆಂಪುರವರು ಕನ್ನಡನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ವರ್ಣಿಸಿದ್ದಾರೆ.ಅದೇ ವರ್ಣನೆ ಯು.ಎ.ಇ ದೇಶಕ್ಕೂ ಅನ್ವಯಿಸುತ್ತದೆ.ಈ ದೇಶದ ಬಹುಸಂಖ್ಯಾತ ಮುಸ್ಲಿಮರು ಅಲ್ಪಸಂಖ್ಯಾತರೊಂದಿಗೆ ಸಮನ್ವಯವಾಗಿ ಪ್ರೀತಿಯೊಂದಿಗೆ ಬಾಳುತ್ತಿರುವುದು ಆ ದೇಶದ ಸಂಸ್ಥಾನಗಳ ಶೇಖ್ ಅವರುಗಳು ಸರ್ವಧರ್ಮಗಳ ಬಗ್ಗೆ ಹೊಂದಿರುವ ವಿಶಾಲ ಮನೋಭಾವನೆ.
ಈ ದೇಶದಲ್ಲಿರುವ ೯೫ ಲಕ್ಷ ಜನರಲ್ಲಿ ೪೦ ಲಕ್ಷ ಭಾರತೀಯರು ಇರುವುದು ವಿಶೇಷ.ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಅದನ್ನು ಆಚರಿಸಿಕೊಂಡು ಬಂದಿದ್ದಾರೆ.
ಹಿಂದುಗಳು ಆಚರಿಸುವ ದೀಪಾವಳಿ ಹಬ್ಬದ ಸಂಭ್ರಮವನ್ನು ಅನ್ಯ ಧರ್ಮೀಯರು ನೋಡಿ ಸಂತೋಷಪಡುವುದು ಆನಂದದ ವಿಚಾರ.
ನಮ್ಮ ದೇಶದಲ್ಲಿ ಇತ್ತೀಚೆಗೆ ಮತೀಯ ಸಾಮರಸ್ಯ ಮರೀಚಿಕೆ ಆಗಿದೆ.ಇದಕ್ಕೆ ಸ್ವಾರ್ಥ ರಾಜಕಾರಣಿ ಗಳೆಂದರೆ ತಪ್ಪಾಗಲಾರದು.ತಮ್ಮ ಸ್ವಾರ್ಥ ಸಾಧನೆಗಾಗಿ ಕೋಮುಗಲಭೆಗಳು ಉಂಟಾಗುವಂತೆ ಮಾಡಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.ಇಂಥ ವಾತಾವರಣ ಬೇಗನೆ ನಶಿಸಿ ನಮ್ಮ ದೇಶದಲ್ಲಿ ಕೋಮು ಸೌಹಾರ್ದ ನೆಲೆಸಲೆಂದು ಹಾರೈಸೋಣ.
ಈ ದಿನದ ಬಿಸಿಲು ಬೆಳದಿಂಗಳು ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟ ಪೂಜ್ಯ ಗುರುಗಳಿಗೆ ‌ಸಾಷ್ಟಾಂಗ ನಮಸ್ಕಾರಗಳು.
ಮಾರ್ಗದರ್ಶಕ ಗುರುಗಳಾದ ಶ್ರೀ ವೆಂಕಟೇಶ ಶೆಟ್ಟಿಯವರಿಗೆ ಹೃತ್ಪೂರ್ವಕ ವಂದನೆಗಳು.
ಸದಾನಂದ ಶೆಟ್ಟಿ ವೈ, ಚಿತ್ರದುರ್ಗ


N-2548 

  30-05-2024 01:03 PM   

ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

 ಬಿಸಿಲು ಬೆಳದಿಂಗಳು*
*ಅಂಕಣ ೩೦.೦೫.೨೦೨೪*
*ಅರಬ್ ನೆಲದ ಮಂದಿರ ಮಸೀದಿ*

ಶ್ರೀ ಗುರುಭ್ಯೋ ನಮಃ

ಇಂದಿನ ಅಂಕಣದಲ್ಲಿ ಗುರುಗಳು ತಮ್ಮ ಅರಬ್ ದೇಶಗಳ ಪ್ರವಾಸದ ನೋಟಗಳು ಹಾಗೂ ಅನುಭವಗಳನ್ನು ಚುಟುಕಾಗಿ ವಿವರಿಸಿರುವುದನ್ನು ಓದಿದಾಗ ಎರಡು ವಿಷಯಗಳು ಚಿಂತನೆಗೆ ಹಚ್ಚುತ್ತವೆ.
ಮೊದಲನೆಯದು ಅಮೇರಿಕಾ, ಇಂಗ್ಲೆಂಡ್ ಮುಂತಾದ ಪಾಶ್ಚಾತ್ಯ ದೇಶಗಳಿಗೆ ಕಾಯಂ ಆಗಿ ರಪ್ತಾದ ಐಟಿ ಬಿಟಿ ಮಂದಿಯನ್ನು ಅಪರೂಪದ ಹಣ್ಣುಗಳಿಗೂ ಅರಬ್ ದೇಶಗಳಲ್ಲಿ ಸ್ವಲ್ಪ ಕಾಲ ನೆಲೆಸಿ ನಮ್ಮ ದೇಶಕ್ಕೆ ವಾಪಸ್ ಬರುವವರನ್ನು ಪರಿಪಕ್ವ ಹಣ್ಣುಗಳಿಗೂ ಹೋಲಿಸಿರುವುದು.

ಇತ್ತೀಚಿನ ದಿನಗಳಲ್ಲಿ ಅಮೇರಿಕಾದಿಂದ ವಾಪಸ್ ಬರುವುದೇ ಇಲ್ಲವೇನೋ ಎಂದು ನಾವಂದುಕೊಂಡಿದ್ದ ಕೆಲವರು ಅಲ್ಲಿ ಸಾಕಷ್ಟು ಸಂಪಾದಿಸಿ ವಯಸ್ಸಾದ ಮೇಲೆ ಭಾರತಕ್ಕೆ ಬಂದು ನೆಲೆಸುತ್ತಿರುವುದು. ಅರಬ್ ದೇಶಗಳಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶವಿಲ್ಲದೆ ಕೆಲವರು ಇತರ ದೇಶಗಳಿಗೆ ಹೋಗಿ ನೆಲೆಸಿದರೆ ಇನ್ನು ಕೆಲವರು ಭಾರತಕ್ಕೆ ವಾಪಸಾಗಿದ್ದಾರೆ. ಒಟ್ಟಿನಲ್ಲಿ ನಾನಾ ಕಾರಣಗಳಿಂದ ಭಾರತಕ್ಕೆ ವಾಪಸಾಗಿ ನೆಲೆಸಿದ ಕೆಲವರನ್ನು ನೋಡಿದಾಗ ಅವರುಗಳನ್ನು ಪರಿಪಕ್ವ ಹಣ್ಣುಗಳಿಗೆ ಹೋಲಿಸುವುದು ಸ್ವಲ್ಪ ಕಷ್ಟವೇ ಎನಿಸುತ್ತದೆ.

ಎರಡನೆಯದು ವಿವಿಧ ಧರ್ಮಗಳ ಜನರು ಅಲ್ಲಿ ಹೊಂದಿಕೊಂಡು ಬಾಳುತ್ತಿರುವುದನ್ನು ಓದಿದಾಗ ಇಂದಿನ ಅಂಕಣದ ಕೊನೆಯಲ್ಲಿ -"ಭಾರತದಲ್ಲಿ ಎಲ್ಲ ಧರ್ಮಗಳೂ ನಿಂತ ನೀರಾಗಿ ಪಾಚಿ ಕಟ್ಟಿವೆ, ಪರಧರ್ಮ ಸಹಿಷ್ಣುತೆ ಮರೆಯಾಗಿ ದೀಪ ಹಚ್ಚುವ ಬದಲು ಬೆಂಕಿ ಹಚ್ಚಲು ಧರ್ಮಗಳು ರಾಜಕೀಯಕ್ಕೆ ದುರ್ಬಳಕೆಯಾಗುತ್ತಿವೆ ಎನಿಸಿತು!" ಎಂಬುದು ಇಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ಗುರುಗಳ ಅಂಕಣಗಳನ್ನು ನಮಗೆ ತಲುಪಿಸಿ ಪ್ರತಿಕ್ರಿಯೆಗಳನ್ನು ಬರೆಯಲು ಪ್ರೋತ್ಸಾಹಿಸುತ್ತಿರುವ ಶ್ರೀ.ರಾ.ವೆಂಕಟೇಶ ಶೆಟ್ಟಿಯವರಿಗೆ ಧನ್ಯವಾದಗಳು.


ಸಿ ಆರ್ ಕೃಷ್ಣ‌ಸ್ವಾಮಿ, ಬೆಂಗಳೂರು