N-2548 
  30-05-2024 08:35 AM   
ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು
ಪರಮ ಪೂಜ್ಯಶ್ರೀ ಜಗದ್ಗುರುಗಳವರ ಇಂದಿನ `ಅರಬ್ ನೆಲದ ಮಂದಿರ ಮಸೀದಿ` ಲೇಖನದಲ್ಲಿವ್ಯಕ್ತ ಪಡಿಸಿರುವ ಅನೇಕ ಮಾಹಿತಿಗಳು ಸಕಾಲದಲ್ಲಿ ಮೂಡಿ ಬಂದಿವೆ.
ನಮ್ಮ ದೇಶದ ಅನೇಕ ಯುವ ಪ್ರತಿಭೆಗಳು ಪ್ರತಿಭಾ ಪಲಾಯನ ಮಾಡಿ ಜಗತ್ತಿನ ಇತರೆ ದೇಶಗಳಲ್ಲಿ ತಮ್ಮ ಸೇವೆಯನ್ನು ಮಾಡುತ್ತಿರುವುದು ಸಂತೋಷವಾದರೂ ಅಂತಹ ಪ್ರತಿಭೆಗಳಿಗೆ ನಮ್ಮ ದೇಶದಲ್ಲಿಯೇ ಒಳ್ಳೆಯ ಅವಕಾಶಗಳು ಇಲ್ಲದೇ ಅನಿವಾರ್ಯವಾಗಿ ಹೆಚ್ಚಿನ ಆರ್ಥಿಕ ಸೌಲಭ್ಯಕ್ಕಾಗಿ ಹೊರ ದೇಶಗಳಲ್ಲಿ ದುಡಿಯುವಂತಾಗಿದೆ.
ಇಂತಹ ಪ್ರತಿಭೆಗಳನ್ನು ಭೌತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಗುರೂತ್ವಕರ್ಷಣೆಗೆ ಕಾರಣವಾದ ಸೇಬು ಹಣ್ಣಿನ ಹೋಲಿಸಿ ಇತರೆ ದೇಶಗಳಲ್ಲಿ ಪೌರಾತ್ವಕ್ಕೆ ಅವಕಾಶವಿದ್ದು ಅರಬ್ ದೇಶದಲ್ಲಿ ಪೌರಾತ್ವ ಇಲ್ಲದೇ ಮತ್ತೆ ಮಾಗಿದ ಹಣ್ಣುಗಳಾಗಿ ವಾಪಸ್ಸು ನಮ್ಮ ದೇಶಕ್ಕೆ ಮರಳುವ ಬಗ್ಗೆ ತಿಳಿಸಿರುವುದು
ಸೋಜಿಗವೆನಿಸಿತು.
ಶ್ರೀ ತರಳಬಾಳು ಶ್ರೀ ಮಠದ ಆಶ್ರಯದಲ್ಲಿ ಬೆಳೆದ ವಿವಿಧ ಧರ್ಮದ ಅನೇಕ ವಿದ್ಯಾರ್ಥಿಗಳು ಅರಬ್ ಬೇರೆ ಬೇರೆ ದೇಶಗಳಲ್ಲಿ ಸೇವೆ ಸಲ್ಲಿಸಿ ಪೂಜ್ಯ ಗುರುಗಳ ಕೃಪೆಗೆ ಪಾತ್ರರಾಗಿ ಅನೇಕ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ದರ್ಶನಾಶಿರ್ವಾದ ಪಡೆಯುವುದು ತಿಳಿದು ಶ್ರೀ ಮಠದ ಜಾತ್ಯತೀತ ಮನೋಭಾವನೆ ಬಗ್ಗೆ ಸಂತೋಷವಾಗುತ್ತದೆ.
ನಮ್ಮ ದೇಶದಲ್ಲಿ ಪ್ರಜಾ ಪ್ರಭುತ್ವದ ವ್ಯವಸ್ಥೆಯಿದ್ದು ಅನೇಕ ಧರ್ಮಗಳ, ಸಾಧು ಸಂತರ, ವಿವಿಧ ಪಂಥಗಳಿದ್ದರೂ ಪರಸ್ಪರ ಸೌಹಾರ್ದತೆಯ ಕೊರತೆ ಕಂಡುಬರುತ್ತಿದೆ.ಅದೇ ರಾಜ ಪ್ರಭುತ್ವ ವ್ಯವಸ್ಥೆಯ 95 ಲಕ್ಷ ಜನ ಸಂಖ್ಯೆಯ ಅರಬ್ ದೇಶದಲ್ಲಿ ವಿವಿಧ ಧರ್ಮ, ಪಂಥಗಳಿಗೆ ಗೌರವವಾದಾರಗಳಿಂದ ಕಾಣಲಾಗುತ್ತಿದೆ.
ಇಂತಹ ಪುಟ್ಟ ದೇಶದಲ್ಲಿ ಕಂಡು ಬರುವ ಸೌಹಾರ್ದತೆಯ ವ್ಯವಸ್ಥೆ ನಮ್ಮ ದೇಶದಲ್ಲೂ ಕಂಡು ಬರುವಂತಾದರೆ ಅದೆಷ್ಟೋ ಸಮಸ್ಯೆಗಳು ಬಗೆಹರಿಯುತ್ತಿದ್ದವು.
ಅದು ಕಾರಣ ನಮ್ಮ ದೇಶದಲ್ಲಿ ಧರ್ಮಗಳು ನಿಂತ ನೀರಾಗಿ ಪಾಚಿ ಕಟ್ಟಿದಂತಾಗಿದ್ದು ರಾಜಕೀಯಕ್ಕೆ ದುರ್ಬಳಕೆ ಆಗುತ್ತಿರುವುದರ ಕುರಿತು ಪೂಜ್ಯರ ವ್ಯಕ್ತ ಪಡಿಸಿರುವ ಭಾವನೆಗಳು ಜಿಜ್ಞಾಸೆ ಮೂಡಿಸುತ್ತವೆ.
ಪರಸ್ಪರ ಧರ್ಮ,ಧರ್ಮಗಳಲ್ಲಿ ಕ್ಷೀಣಿಸುತ್ತಿರುವ ಪ್ರೀತಿ ಸೌಹಾರ್ದತೆಯ ಸನ್ನಿವೇಶದಲ್ಲಿ ಪೂಜ್ಯರ ಇಂದಿನ ಲೇಖನ ಸಕಾಲಿಕವಾಗಿ ಮೂಡಿ ಬಂದಿದೆ.
ಭಕ್ತಿ ಪೂರ್ವಕ ಪ್ರಣಾಮಗಳು...
🙏🏻🙏🏻🙏🏻
ಡಿ. ಪ್ರಸನ್ನಕುಮಾರ್
ಬೆಂಗಳೂರು