N-1530 
  11-05-2024 11:29 AM   
ಕನ್ನಡ ನಾಡಿನ ಹಳ್ಳಿಗರ ಉಸಿರು ಬಸವಣ್ಣ...
ಬಂಡಿಯನ್ನು ತೆಂಗಿನ ಗರಿ,ಮಾವಿನ ಎಲೆಗಳಿಂದ ಸಿಂಗರಿಸಿ,ಅದರಲ್ಲಿ ಹಂಡೇವು ಇಟ್ಟು ಹಂಡೇವಿಗೆ ಬೆಲ್ಲ, ನೀರು ತುಂಬಿಸುತ್ತಿದ್ದರು. ಕೊಂಬಿಗೆ ಬಣ್ಣ ಬಡಿದು ಮೈಗೆ ಜೂಲ ಹಾಕಿದ ಬಲಿಷ್ಠವಾದ ಎತ್ತುಗಳನ್ನು ಬಂಡಿಗೆ ಹೂಡುತ್ತಿದ್ದರು ಇದುವೇ "ಬೆಲ್ಲದ ಬಂಡಿ" ಇದರ ಮುಂದೆ ಅನೇಕ ಜೋಡಿ ಶೃಂಗಾರ ಗೊಂಡ ಎತ್ತುಗಳು ಸಾಲುಗಳಲ್ಲಿ ಇರುತ್ತಿದ್ದವು ಈ ಸಾಲಿನ ಮುಂದೆ ಹಲಗೆ ಹೊಡೆಯುವವರು,ಸಹನಾಯಿವಾದಕರು,ಕರಡಿಮಜಲಿನವರು ಇರುತ್ತಿದ್ದರು. ಊರಿನ ಪ್ರಮುಖ ಬೀದಿಯಲ್ಲಿ ಸಾಗಿದ ಮೇಲೆ ಬೆಲ್ಲ ನೀರಿನೊಂದಿಗೆ ಸೇರಿ "ಬೆಲ್ಲದನೀರಾ"ಗಿರುತ್ತಿತ್ತು ಊರಜನ ಚೆಂಬು ತಗೊಂಡೋಗಿ ಈ ಬೆಲ್ಲದ ನೀರು ಪಡೆಯುತ್ತಿದ್ದರು.ಇನ್ನೊಂದು ಕಡೆ ನಮ್ಮೂರಿನ ಬಸವಯ್ಯ ನವರು ಬಸವೇಶ್ವರರ ಫೋಟೋ ಇಟ್ಟು ಪೂಜೆ ಮಾಡಿ ಬಸವೇಶ್ವರರ ಜಯಂತಿ ಆಚರಿಸತ್ತಿದ್ದರು. ಇದು ನಾನು ಚಿಕ್ಕವನಾಗಿದ್ದಾಗ ನಮ್ಮೂರಲ್ಲಿ ಕಂಡ ದೃಶ್ಯ.
Kotraiah K M
Punabhagatti, Karnataka, India