N-2531 
  09-05-2024 01:59 PM   
ಸಿರಿಗೆರೆಯಲ್ಲಿ ಬಸವ ಜಯಂತಿ ಆಚರಣೆ
ಬಸವಜಯಂತಿ ಆಚರಣೆ ಎಲ್ಲಾವರ್ಗದವರು ಆಚರಿಸುವ ಕಾರ್ಯಕ್ರಮ ವಾಗಿದೆ.ಶತಮಾನಗಳಿಂದ ಮುಂದುವರೆದಿದ್ದ ಅಂಧಕಾರ, ಮೌಢ್ಯತೆ, ಕಂದಾಚಾರ, ನಿರ್ಮೂಲನೆಗೆ ಕಂಕಣ ಬದ್ಧರಾಗಿ ದ್ದವರು.`ವಿಶ್ವಮಾನವರಾದವರು,,,`*
ಸಾಂಸ್ಕೃತಿಕ ಹರಿಕಾರ ರಾಗಿ ಜಗತ್ತಿಗೆ ಜ್ಯೋತಿಯಾದರು.ಅವರ ವಚನಗಳಲ್ಲಿ ಸಾಂಸಾರಿಕ ಜೀವನ, ಸಾಮಾಜಿಕ ಕಳಕಳಿ, ಶಿಸ್ತು ಬದ್ಧ ಭಕ್ತಿಯ ಚಿಂತನೆ,ಸಮಾಜದ ಓರೆಕೋರೆಗಳನ್ನು ಸರಿಪಡಿಸಿ ಸಾಂಸ್ಕೃತಿಕ ನಾಯಕರಾಗಿ ಅಜರಾಮರಾದರು.
,"ಕರಿಯಂಜುವುದಂಕುಶಕ್ಕಯ್ಯಾ;
ಗಿರಿಯಂಜುವುದು ಕುಲಿಶಕ್ಕಯ್ಯಾ:
ತಮಂಧವಂಜುವುದು ಜ್ಯೋತಿಗಯ್ಯಾ;
ಕಾನನವಂಜುವುದು ಬೇಗೆಗಯ್ಯಾ;
ಪಂಚಮಹಾಪಾತಕವಂಜುವುದು
ಕೂಡಲಸಂಗನ ನಾಮಕ್ಕಯ್ಯಾ."ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ