N-2491 

  30-03-2024 07:32 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 ಈ ರೀತಿ ಕಾರ್ಯಕ್ರಮಗಳನ್ನು ಹವ್ಮಿಕೊಂಡರೆ ಇತ್ತೀಚಿನ ಹುಡುಗರಿಗೆ ಮಠದ ಪರಂಪರೆ, ಇತಿಹಾಸದ ಬಗ್ಗೆ ಗೊತ್ತಾಗುತ್ತೆಂದು ನನ್ನ ಅನಿಸಿಕೆ. ಇನ್ನೂ ಒಂದು ಕಾರ್ಯಕ್ರಮ ಹಾಕಿಕೊಂಡರೆ, ಅಂದರೆ ಹುಂಬುತನ ತಹಬಂದಿಗೆ ತರುವುದು ಅಂದರೆ ನಮ್ಮ ಹುಡುಗರು ಅತಿ ಸಂತೋಷದಿಂದ ಕುಣಿದಾಡುವುದರ ಬಗ್ಗೆ ಹೇಗೆ ವರ್ತಿಸಬೇಕೆಂದು ಒಂದು ಕಾರ್ಯಾಗಾರ ಹಮ್ಮಿಕೊಳ್ಳಬೇಕು..(ಈ ಕಾರ್ಯಕ್ರಮಕ್ಕೆ ಹನುಮನಹಳ್ಳಿ ನಾಗೇಂದ್ರ ಣ್ಣನಂತ ಹಿರಿಯರು ಹಾಗೂ 50-55ನೇ ವಯಸ್ಸಿನ ವ್ಯಕ್ತಿಗಳನ್ನು ಕರಸಿ ಒಂದು ಸಂದೇಶ ಕೊಡಿಸುವ ಬಗ್ಗೆ.)
K.N.HALAPPA.
DAVANAGERE.(HULIKATTE)

N-2491 

  30-03-2024 07:25 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 Nanu taralabalu peetadha baktha
Santhosh Kumar s
India

N-0 

  30-03-2024 07:22 AM   

N-2489 

  29-03-2024 10:25 AM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ಸತ್ಯ ಮತ್ತು ಸುಳ್ಳು ನ್ನು ಈಗಿನ ಸಮಾಜ ಒಂದೇ ನಾಣ್ಯದ ಎರಡು ಮುಖಗಳು ತರ ನೋಡುತ್ತಿರುವ ಹಾಗಿದೆ ತಮಗೆ ಬೇಕಾದ ರೀತಿ ಹೇಳಿಕೆಗಳನ್ನೇ ಬದಲಿಸಿ ಯಾರೋ ತಿರುಚಿದರು ಅನ್ನೋ ಮಟ್ಟಕ್ಕೆ ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿದೆ ಸುಳ್ಳಿಗೆ ಆಯುಷ್ಯ ಕಡಿಮೆ ಸುಖವಿಲ್ಲ ಎಂದೂ ಆದರೂ ಸ್ವಾರ್ಥ , ಅಸೂಯೆ ಅಹಂ ಭಾವ ದಿಂದ ಸುಳ್ಳಿನ ಸರಮಾಲೆಯನ್ನೇ ರಚಿಸುವ ಜನರಿಗೆ ಮನ ಮುಟ್ಟುವ ರೀತಿ ಪೂಜ್ಯರು ಲೇಖನ ಬರೆದಿದ್ದಾರೆ, ಓದಿ ತಿಳಿದರೆ ಬಾಳು ಸುಂದರ ಪೂಜ್ಯರಿಗೆ ಅನಂತ ವಂದನೆಗಳು 🙏🙏
ರವೀಂದ್ರ ಬಸ್ತಿಹಳ್ಳಿ
Bastihalli

N-2440 

  28-03-2024 10:20 AM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ಪರಮ ಪೂಜ್ಯ ಗುರುಗಳಿಗೆ ‌ಸಾಷ್ಟಾಂಗ ನಮಸ್ಕಾರಗಳು.

*ದಡವಿರದ ಮಮತೆಯ ಕಡಲು ತಾಯಿ*

ಮೇಲ್ಕಂಡ ತಲೆ ಬರಹದ ಬಿಸಿಲು ಬೆಳದಿಂಗಳು ಲೇಖನದಲ್ಲಿ ಗುರುಗಳು ವರ್ತಮಾನದಲ್ಲಿ ನಡೆಯುತ್ತಿರುವ ಎರಡು ಅಂಶಗಳನ್ನು ತಿಳಿಸಿದ್ದಾರೆ.
ಈಗೀಗ ವಯಸ್ಕ ಮಾತಾಪಿತೃಗಳ ಲಾಲನೆ ಪೋಷಣೆಯ ಜವಾಬ್ದಾರಿಯನ್ನು ಹೊರದೆ ವೃದ್ಧಾಶ್ರಮಗಳಿಗೆ ಕಳಿಸಿ ಕೈತೊಳೆದು ಕೊಳ್ಳುತ್ತಿದ್ದಾರೆ. ಆದರೆ ಈ ದುರ್ದೈವಿ ಮಾತೆಯನ್ನು ಬೀದಿಗೆ ಹಾಕಿದ್ದಾನೆ ಕಟುಕ ಮಗ. ಈ ಮಾತೆಯನ್ನು ಗಮನಿಸಿದ ಕರುಣಾಮಯಿ ಮಹಿಳೆ ಮೊಬೈಲ್ ಮೂಲಕ ಸಂತ್ರಸ್ತ ಮಹಿಳೆಯಲ್ಲಿದ್ದ ಭಾವಚಿತ್ರ ಹಾಕಿ ಆಕೆಗೆ ‌ಸೂಕ್ತ ವ್ಯವಸ್ಥೆ ಮಾಡಿಕೊಟ್ಟರು. ಆ ಸಂತ್ರಸ್ತ ಮಹಿಳೆಗೆ ಮಗನ ಮೇಲೆ ಫಿರ್ಯಾದು ನೀಡಲು ತಿಳಿಸಿದರೂ ಸಹ ಆ ಮಮತಾಮಯಿ ತಾಯಿ ನಿರಾಕರಿಸಿದರು. ಇದುವೇ ಮಾತೃ ಹೃದಯ.
ಈಕೆಗೆ ಅನುಕೂಲ ಲಭ್ಯವಾಗಿದ್ದು ಈಗಿನ ಡಿಜಿಟಲ್ ಮಾಧ್ಯಮದಿಂದ. ಇದನ್ನು ಸದುಪಯೋಗಿಸಿಕೊಂಡರೆ ಅನುಕೂಲ. ದುರುಪಯೋಗಿಸಿಕೊಂಡರೆ ಮಾರಕ.
ಪ್ರತಿಕ್ರಿಯೆ ತಿಳಿಸಲು ಅವಕಾಶ ಮಾಡಿಕೊಟ್ಟ ಪೂಜ್ಯ ಗುರುಗಳಿಗೆ ಶರಣು ಶರಣಾರ್ಥಿಗಳು.ಮಾರ್ಗದರ್ಶಕ ಗುರುಗಳಾದ ಶ್ರೀ ವೆಂಕಟೇಶ ಶೆಟ್ಟಿಯವರಿಗೆ ಹೃತ್ಪೂರ್ವಕ ನಮನಗಳು.
*ಸದಾನಂದಶೆಟ್ಟಿ ವೈ*
ಚಿತ್ರದುರ್ಗ

N-2489 

  27-03-2024 08:58 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ಪೂಜ್ಯರ ಶ್ರೀ ಪಾದಗಳಿಗೆ ನಮಸ್ಕರಿಸುತ್ತಾ..

ಇಂದಿನ ಲೇಖನ ಈ ಸಮಾಜಕ್ಕೆ ಅವಶ್ಯವಾಗಿ ಈಗಿನ ಪರಿಸ್ಥಿತಿಗೇ ಬೇಕಾಗಿತ್ತು ಬುದ್ದಿ ಅವರೇ..
ಸುಳ್ಳು ಹೇಳುವ ಜನರು ಅನಗತ್ಯವಾಗಿ ಎದುರಿಗೆ ಸಿಕ್ಕೇ ಸಿಗುತ್ತಾರೆ..
ವಿನಾ ಕಾರಣ ಆತುರ ಪಡುವಂತೆ ತೋರುತ್ತಾರೆ.. ಯಾರೇ ಆದರೂ ಅವರಿಗೆ ಏನಾದರೂ ಪ್ರಶ್ನೆ ಕೇಳಿದಾಗ ಅವರು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ...
ಅಥವಾ ಕೇಳಿದ ಸುಳ್ಳಿಗೆ ಮರು ಪ್ರಶ್ನೆ ಮಾಡಿದಾಗ ಅವರು ತಮ್ಮನ್ನು ಇನ್ನಾವುದೇ ಕೆಲಸದಲ್ಲಿ ಬ್ಯುಸಿಯಾಗಿರುವಂತೆ ವರ್ತಿಸುತ್ತಾರೆ...
*"ಸತ್ಯ ಹೊಸಿಲು ದಾಟುವ ಮೊದಲೇ ಸುಳ್ಳು ಊರು ಸುತ್ತಿ ಬಂದಿರುತ್ತೆ"*
ಅಂತ ತಿಳಿದವರು ಹೇಳುತ್ತಾರೆ..

ಇತ್ತೀಚಿನ ದಿನಗಳಲ್ಲಿ ಸತ್ಯಕ್ಕೆ ಬೆಲೆಯಿಲ್ಲ ..
ಸುಳ್ಳಿಗೆ ಸಾವಿಲ್ಲ ಎಂಬಂತೆ, ನಿಯತ್ತಾಗಿ ಬಾಳುತ್ತೇನೆ ಅಂದರು ಈ ದುಷ್ಟ ಸಮಾಜ ನಿಯಾತ್ತಾಗಿ ಬದುಕುವುದಕ್ಕೆ ಬಿಡುವುದಿಲ್ಲ...
ನಿಯತ್ತಿನ ದುಡಿಮೆ ಎರಡು ಹೊತ್ತಿನ ಊಟ , ವರ್ಷಕ್ಕೊಮ್ಮೆ ಬಟ್ಟೆಗೆ ಅಷ್ಟೇ ಅದರಾಚೆಗೆ ಆಸೆಗಳು ಹಿಡೇರುವುದಿಲ್ಲ..
ಒಡೆದು ಅಳುವ ಜನರಷ್ಟೇ ಉದ್ದಾರ ಆಗುವುದು.. ಸುಳ್ಳು ಅಡುವವನ ಹಿಂದೆ ಸಾವಿರಾರು ಮಂದಿ ಇರುತ್ತಾರೆ..
ಸತ್ಯ ಹೇಳುವವನ ಯಾರು ನಂಬೋಲ್ಲ ..

ಇಂದಿನ ದೃಶ್ಯ
ಮಾಧ್ಯಮಗಳೇ ಸುಳ್ಳಿನಿಂದ ಕೂಡಿದೆ ..
ಇನ್ನು ವೀಕ್ಷಕರು ನೋಡಿ ಕಲಿಯುವುದರಲ್ಲಿ
ಆಶ್ಚರ್ಯವಿಲ್ಲ..
ಆದರೆ ಎಂದಿದ್ದರು ಸತ್ಯ ಸತ್ಯವೇ ..
ಸತ್ಯ ದೂರ ಇರುತ್ತೆ ಸುಳ್ಳು ಹತ್ತಿರ ಇರುತ್ತೆ ಅಷ್ಟೇ..
ಕೇಳುವ ಕಿವಿಗಳು ನೋಡುವ ಕಣ್ಣುಗಳು
ಸರಿ ತಪ್ಪುಗಳನ್ನು ಅರ್ಥೈಸಿಕೊಳ್ಳಬೇಕು ಅಷ್ಟೇ..
ಸತ್ಯದ ಮುಂದೆ ಎಂದಾದರೂ ಒಂದು ದಿನ ಸರಣಿ ಸುಳ್ಳು ಮಂಡಿಯೂರಲೇ ಬೇಕು..

ಗುರುಗಳ ಲೇಖನ ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಿದೆ
ಸಮಾಜವನ್ನು ಎಚ್ಚರಿಸುವ ಅಮೂಲ್ಯವಾದ ಲೇಖನ..

ಸುಳ್ಳು ಸಕಲಾಭರಣ ಸುಂದರಿ
ಸತ್ಯ ನಿರಾಭರಣ ಸುಂದರಿ..

ಸತ್ಯ ಮುಗ್ದ ಸುಂದರಿ , ಸುಳ್ಳು ತಾತ್ಕಾಲಿಕವಾದ ಬ್ಯುಟಿ ಪಾರ್ಲರ್ ಸುಂದರಿ..

ವಂದನೆಗಳೊಂದಿಗೆ ಶ್ರೀ ಮಠದ ಸದ್ಭಕ್ತಳು..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು

N-2440 

  27-03-2024 07:25 PM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ಅಂಕಣಕ್ಕೆ ನನ್ನ ಪ್ರತಿಕ್ರಿಯೆ

ಪ್ರೀತಿ ಮಮಕಾರ ನಮ್ಮವರ ಮನಸ್ಸುಗಳನ್ನು ಗೆಲ್ಲುವ ಆಯುಧಗಳಾದರೆ, ಸಮಯವು ನಮಗೆ ಜೀವನದ ಪಾಠ ಕಲಿಸುವ ವಜ್ರಾಯುಧ. ಸಮಯ ಬಂದಾಗ ಮಾತ್ರ ನಾವು ಇತರರಿಗೆ ತೋರಿಸಿದ ವರ್ತನೆಗಳು ಅಥವಾ ವ್ಯಕ್ತಪಡಿಸಿದ ಭಾವನೆಗಳು ಎಂತಹವು ಎಂದು ನಮಗೆ ಅರ್ಥವಾಗುವುದು. ಪ್ರೀತಿಯನ್ನೇ ಅಥವಾ ಮಮಕಾರವನ್ನೇ ವಜ್ರಾಯುಧ ಮಾಡಿಕೊಂಡರೆ ಎಂತಹ ಸಮಯ ಬಂದರೂ ಎಲ್ಲವನ್ನೂ ಗೆಲ್ಲುವ ಆತ್ಮಸ್ಥೈರ್ಯ ನಮ್ಮೊಳಗೆ ಸದಾ ನೆಲೆಗೊಳ್ಳುತ್ತದೆ. ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸಿ ಗೌರವಿಸಿದರೆ ಇಡೀ ಜಗತ್ತೇ ಹೂವಿನ ತೋಟದಂತೆ ಕಂಗೊಳಿಸುವುದು.

ಬರೀ ಮನುಷ್ಯರನ್ನು ಪ್ರೀತಿಸಿದರೆ ಸಾಲದು.‌ ಸರ್ವಾಂತರ್ಯಾಮಿಯಾದ ಪರಮಾತ್ಮನಿಗೂ ಭಕ್ತಿಯ ರೂಪದಲ್ಲಿ, ವಯಸ್ಸಿನಲ್ಲಿ ನಮಗಿಂತ ಹಿರಿಯರಿಗೆ ಗೌರವದ ರೂಪದಲ್ಲಿ, ತಂದೆತಾಯಿಗಳಿಗೆ ಸೌಜನ್ಯದ ರೂಪದಲ್ಲಿ, ವಿದ್ಯೆ ಬುದ್ದಿ ಕಲಿಸಿದ ಗುರುವೃಂದಕ್ಕೆ ಕೃತಜ್ಞತೆಯ ರೂಪದಲ್ಲಿ ಪ್ರೀತಿ ತೋರಿಸಬೇಕು. ಏಕೆಂದರೆ ನಿರ್ಮಲವಾದ ಭಕ್ತಿಯಿಂದ, ಪ್ರಾರ್ಥನೆಯಿಂದ ಆತ್ಮ ಸಾಕ್ಷಾತ್ಕಾರ ಮಾತ್ರವಲ್ಲ, ಮುಂದೆ ಬರುವ ಗಂಭೀರವಾದ ಸಮಸ್ಯೆಗಳನ್ನೂ ಸಹ ನಿಭಾಯಿಸುವ ಶಕ್ತಿ ನಮಗೆ ಪ್ರಾಪ್ತಿ ಆಗುತ್ತದೆ. ಇದನ್ನು ಹೇಳುವಾಗ ಸರ್ವಜ್ಞನ ತ್ರಿಪದಿಯೊಂದು ನೆನಪಾಗುತ್ತದೆ.

ಆತುಮದ ಲಿಂಗವನು
ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ
ಭಯವಿಲ್ಲ
ದಶವಿಧದ ಪಾತಕಗಳಿಲ್ಲ, ಸರ್ವಜ್ಞ||

ಅಂದಮೇಲೆ ನಾವು ಬೇರೆಯವರಿಗೆ ತೋರಿಸುವ ಪ್ರೀತಿ ಮಮಕಾರಗಳೇ ನಿಜವಾದ ವಜ್ರಾಯುಧಗಳು ಅಲ್ಲವೇ? ಆಯುಧ ಎಂದರೆ ಶಕ್ತಿ ಸಾಮರ್ಥ್ಯದ ಗುರುತು. ಅಂದರೆ ಪ್ರೀತಿ ಮಮಕಾರಗಳು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ದ್ವೇಷ ಎನ್ನುವುದು ದೌರ್ಬಲ್ಯದ ಸಂಕೇತ. ದ್ವೇಷವು ನಮ್ಮ ಗೆಲ್ಲುವ ಶಕ್ತಿಯನ್ನು ಕುಗ್ಗಿಸುವಲ್ಲಿ ಸಂದೇಹವಿಲ್ಲ. ಪ್ರೀತಿಯಿಂದ ಪ್ರಪಂಚವನ್ನೇ ಗೆಲ್ಲಬಹುದು. ಅದೇ ಪ್ರಪಂಚವನ್ನು ಗೆಲ್ಲುವ ರಾಜಮಾರ್ಗ ಕೂಡಾ.

ಕಡೆಯದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ವದಂತಿಗಳು ಅಥವಾ ಸುಳ್ಳುಗಳು ಬೇರೆಯವರ ಜೀವನಕ್ಕೆ ಹೇಗೆಲ್ಲಾ ಮಾರಕವಾಗುತ್ತವೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ತಮಗಾಗದವರ ತೇಜೋವಧೆ ಮಾಡುವ ಆಯುಧಗಳಾಗಿ ಬಳಕೆ ಆಗುತ್ತಿವೆ. ರಾಜಕಾರಣಿಗಳು, ಪಟ್ಟಭದ್ರರು, ಸಾಮಾಜಿಕ ರಂಗಗಳಲ್ಲಿ ಗುರುತಿಸಿಕೊಂಡಿರುವ ಅನೇಕರು ಬೇರೆಬೇರೆ ಕಾರಣಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮಗೆ ಆಗದವರ ಬಗ್ಗೆ ಅಪಪ್ರಚಾರ ಮಾಡಲು, ತೇಜೋವಧೆ ಮಾಡಲು ಅಥವಾ ಮಾನಹಾನಿ ಮಾಡಲು ತಮ್ಮದೇ ಆದ ಜನರನ್ನು ನೇಮಿಸಿಕೊಂಡು, ಅವರಿಗೆ ಸಂಪನ್ಮೂಲ ಪೂರೈಕೆ ಮಾಡುತ್ತಾ ಇರುವುದು ಅನೇಕರಿಗೆ ಗೊತ್ತಿರುವ ವಿಷಯವೇ ಆಗಿದೆ. ಸಾಮಾಜಿಕ ಜಾಲತಾಣಗಳನ್ನು ವ್ಯವಸ್ಥಿತವಾಗಿ ಧನಾತ್ಮಕ ಉದ್ದೇಶಗಳಿಗೆ ಬಳಸಿಕೊಂಡರೆ ಅವುಗಳ ಕೊಡುಗೆ ಬೇರೆಯದ್ದೇ ಆಗಿರುತ್ತದೆ.

ಏನೇ ಆಗಲಿ ಎಲ್ಲದೂ ಕಾಲದ ಮಹಿಮೆ ಅಂದುಕೊಳ್ಳಬೇಕು. ಸಂಭವಾಮಿ ಯುಗೇ ಯುಗೇ !! ಹಿಂದಿನದನ್ನು ಸ್ಮರಿಸುವರಿಲ್ಲ. ಮುಂದಿನದನ್ನು ನೋಡಿದವರಿಲ್ಲ. ಇಂದನದ್ದು ಮಾತ್ರ ಎಲ್ಲರಿಗೂ ವೇದ್ಯ. ಇದರೊಳಗೆ ಬದುಕಬೇಕಾಗಿದೆ.

ಸಮಯೋಚಿತ ಅಂಕಣ ಇದಾಗಿದ್ದು ವಿಷಯ ಮಂಡನೆ ಚೆನ್ನಾಗಿದೆ. ಎಲ್ಲರೂ ಅರ್ಥಮಾಡಿಕೊಂಡರೆ ಬಾಳು ಸುಂದರ.
ಪ್ರಸನ್ನ ಯು. ಸನ್ನದು ಆರ್ಥಿಕ ಗುರಿಯೋಜಕರು, ಸಿರಿಗೆರೆ

  27-03-2024 07:06 PM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ಶ್ರೀ ಗುರುಗಳ ಚರಣಾರವಿಂದಗಳಿಗೆ ಶಿರಸಾಷ್ಟಾಂಗ ನಮನಗಳು.

ಗುರುಗಳೇ,

ನಿಮ್ಮ ಲೇಖನಗಳಿಗೆ ಪ್ರತಿಕ್ರಿಯೆ ನೀಡಲು ವೈಯಕ್ತಿಕವಾದ ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ. ಈ ವಾರದ ಅಂದರೆ ೨೧-೩-೨೪ರ ನಿಮ್ಮ ಲೇಖನದ ಶೀರ್ಷಿಕೆ “ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ” ಬಗ್ಗೆ ಪ್ರತಿಕ್ರಿಯೆ ನೀಡಬೇಕೆನಿಸಿತು. ಬರೆಯುತ್ತಿದ್ದೇನೆ.

ಇಂದಿನ ಮಾಧ್ಯಮಗಳಲ್ಲಿ ಸನಿಹವಾಣಿ(ಸಂಚಾರಿವಾಣಿ)ಗಳ ಮಾಧ್ಯಮದ ಭರಾಟೆಯೇ ಜೋರಾಗಿದೆ. ಇದು ಈಗ ಸದ್ಬಳಕೆಗಿಂತ ದುರ್ಬಳಕೆ ಆಗುತ್ತಿರುವ ಪ್ರಮಾಣ ಜಾಸ್ತಿಯಾಗುತ್ತಿರುವುದು ಯುವಕ ಮತ್ತು ಚಿಕ್ಕ ಮಕ್ಕಳಲ್ಲಿ ಎಂದು ಅನಿಸುತ್ತದೆ. ಆದರೆ ಅದನ್ನು ಹೇಗೆ ತಡೆಯುವುದೆಂಬುದೇ ಪ್ರಶ್ನೆಯಾಗಿದೆ. ಹಿರಿಯರ ಮಾತನ್ನು ಈಗ ಕಿರಿಯರು ಕೇಳುವ ಮನಸ್ಥಿತಿಯಲ್ಲಿಲ್ಲ. ಹಿರಿಯರಿಗೆ ತಂತ್ರಜ್ಞಾನದ ಬಳಕೆಯ ಸಾಮರ್ಥ್ಯ ಕಿರಿಯರಿಗಿಂತ ಕಡಿಮೆ ಇರುವುದರಿಂದ ಕಿರಿಯರ ಬಳಿ ಕೇಳಿಕೊಂಡು ಹಿರಿಯರು ತಂತ್ರಜ್ಞಾನವನ್ನು ಕಲಿಯಬೇಕಾದ ಪರಿಸ್ಥಿತಿ ಇರುವುದರಿಂದ ಕಿರಿಯರಿಗೆ ಹಿರಿಯರು ಬುದ್ಧಿವಾದ ಹೇಳಿದರೂ ಕಿರಿಯರು ಕೇಳುವ ಪರಿಸ್ಥಿತಿಯಲ್ಲಿರುವುದಿಲ್ಲ. ಯಾಕೆಂದರೆ ತಂತ್ರಜ್ಞಾನವನ್ನು ತಿಳಿಯಲು ಕಿರಿಯರ ಮೊರೆ ಹೋಗಬೇಕಾಗಿರುವುದರಿಂದ ಹಿರಿಯರು ಹೇಳುವಂತಹ ಬುದ್ಧಿವಾದವನ್ನು ಕಿರಿಯರು ಅಂಗೀಕರಿಸುವುದು ಸ್ವಲ್ಪ ಕಡಿಮೆಯೇ. ಹಾಗೂ ಹಿರಿಯರಿಗೆ ಈಗ ತಂತ್ರಜ್ಞಾನದ ಬಗ್ಗೆ ತಮಗೇನೂ ಹೆಚ್ಚು ಗೊತ್ತಿಲ್ಲವೆಂಬ ಕೀಳರಿಮೆ ಇರುವುದರಿಂದ ಕಿರಿಯರಿಗೆ ಬುದ್ಧಿವಾದ ಹೇಳಲೂ ಹಿಂಜರಿಯುತ್ತಾರೆ.

ಇಂದಿನ ಲೇಖನದ ಮುಖ್ಯಾಂಶವಾದ ಗಣಿತ ಶಿಕ್ಷಕಿಯ ಪರಿಸ್ಥಿತಿ ಅತ್ಯಂತ ಶೋಚನೀಯ. ಆದರೆ ಮಾಧ್ಯಮದ ಮುಖಾಂತರ ವಿಷಯ ತಿಳಿದ ಅವರ ಶಿಷ್ಯರು ಸಹಾಯ ಹಸ್ತ ಚಾಚಿರುವುದೂ ಸಹ ಅಷ್ಟೇ ಶ್ಲಾಘನೀಯ. ಮಾಧ್ಯಮದಿಂದ ಒಳ್ಳೆಯದಾದ ಪರಿಸ್ಥಿತಿ ಬಗ್ಗೆ ಮಾಧ್ಯಮಕ್ಕೆ ವಂದಿಸಬೇಕು. ಆದರೆ ಅಂತಹ ಸ್ಥಿತಿಗೆ ತಳ್ಳಿದ ಅವರ ಕುಟುಂಬದ ಬಗ್ಗೆ ವಿಷಾದಿಸಬೇಕು. ನಾನು ಅತ್ಯಂತ ಸಮೀಪದಿಂದ ಕಂಡ ನಮ್ಮವರೇ ಆದ ಒ ಕುಟುಂಬದ ಬಗ್ಗೆ ಹೇಳಬೇಕೆಂದರೆ ನೀವು ಬರೆದಿರುವ ಶಿಕ್ಷಕಿಯ ತಾಯಿ ಹೃದಯದಂತೆಯೇ ಇದೆ. ಅತ್ಯಂತ ಶ್ರೀಮಂತ ಕುಟುಂಬದ ಒಬ್ಬರ ಗಂಡ ಈಗ ತೀರಿ ಹೋಗಿದ್ದಾರೆ. ಅವರು ಬದುಕಿರುವಾಗಲೇ ತಮ್ಮ ಗಂಡು ಮಕ್ಕಳ ಹೆಸರಿಗೆ ತಮ್ಮ ಆಸ್ತಿಯೆಲ್ಲವನ್ನೂ ಬರೆದುಬಿಟ್ಟಿದ್ದಾರೆ. ಆದರೆ ಈಗ ಅವರ ಮಗ, ಸೊಸೆಯಂದಿರು ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಅವರು ನನ್ನಲ್ಲಿ ಹೇಳಿಕೊಂಡು ಕಾನೂನಿನ ಸಲಹೆ ಕೇಳಿದಾಗ ನನಗೆ ಗೊತ್ತಿರುವ ಬಗ್ಗೆ ತಿಳಿಸಿದೆ. ಆದರೆ ನಿಮ್ಮ ಲೇಖನದ ಶಿಕ್ಷಕಿಯ (ಮಾತೆಯ) ಸಹೃದಯತೆಯಂತೆಯೇ ಮಕ್ಕಳ ಮೇಲೆ ಕೇಸ್ ಹಾಕಿ ಆಸ್ತಿ ಹಿಂಪಡೆಯುವ ಮನಸ್ಥಿತಿ ಆ ಮಾತೆಗಿಲ್ಲ. ಇದು ಶಂಕರಾಚಾರ್ಯರು ಹೇಳಿರುವಂತೆಯೇ ಇದೆ. “ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ!” (ಕೆಟ್ಟ ಮಗ ಹುಟ್ಟಬಹುದು, ಆದರೆ ಕೆಟ್ಟ ತಾಯಿ ಎಲ್ಲಿಯೂ ಇಲ್ಲ. ಹಾಗಾಗಿ ಕಾನೂನು ಇದ್ದರೂ ಸಹ ಅದರ ಉಪಯೋಗ ಪಡೆಯುವವರು ಬಹುಶಃ ಕಡಿಮೆ. ವಯಸ್ಸಾದವರೇ ತಾವು ಪೂರ್ತಿ ಆಸ್ತಿಯ ಹಕ್ಕನ್ನು ಮಕ್ಕಳಿಗೆ ಹಸ್ತಾಂತರಿಸುವ ಬದಲು ವಿಲ್ ಮೂಲಕ ತಮ್ಮ ನಂತರ ಮಕ್ಕಳಿಗೆ ಅಥವಾ ತಾವು ಬಯಸಿದವರಿಗೆ ಸೇರುವಂತೆ ಬರೆದಿಟ್ಟಿದ್ದರೆ ಅದು ಅವರ ಜೀವನಕ್ಕೆ ಸಹಕಾರಿ ಎಂದು ನಾನು ತಿಳಿಸಲಿಚ್ಛಿಸುತ್ತೇನೆ.

ನಿಮ್ಮ ಮಹತ್ ವಿಷಯಗಳನ್ನೊಳಗೊಂಡ ಲೇಖನಗಳ ಹೂರಣವನ್ನು ಹಲವಾರು ಪುಸ್ತಕಗಳ ಮೂಲಕ ಉಚಿತವಾಗಿ ಎಲ್ಲರಿಗೂ ತಲ್ಪುವಂತೆ ಮಾಡುತ್ತಿರುವ ನಿಮ್ಮ ಈ ಮಹತ್ಕಾರ್ಯಕ್ಕೆ ಹಾಗೂ ನಿಮ್ಮ ಶಿಷ್ಯರಾದ ರಾ.ವೆಂಕಟೇಶ ಶೆಟ್ಟಿಯವರಿಗೂ ವಂದಿಸುತ್ತಾ, ತಮ್ಮ ಚರಣಾರವಿಂದಗಳಿಗೂ ನಮಿಸುತ್ತಾ,

ತಮ್ಮ ಆಶೀರ್ವಾದವನ್ನು ಬೇಡುವ,
*ಎಂ.ಜೆ.ನಾಗಲಕ್ಷ್ಮಿ*
ಚಿಕ್ಕಮಗಳೂರು

N-2489 

  27-03-2024 06:56 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ತಿದ್ದುಪಡಿ
ನಿರಾಭರಣ ಸುಂದರಿ

RCK

N-2489 

  27-03-2024 06:56 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ತಿದ್ದುಪಡಿ
ನಿರಾಭರಣ ಸುಂದರಿ

RCK

N-2489 

  27-03-2024 06:51 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 `ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇ ಬೇಕು` ಈ ಲೇಖನವನ್ನು ಎರಡು ಬಾರಿ ಓದಿದೆ. ನಮಗೆ ಎಂತಹುದೇ ಬಿಕ್ಕಟ್ಟಿನ ಪರಿಸ್ಥಿತಿ ಒದಗಿ ಬಂದರೂ ಸುಳ್ಳನ್ನು ಹೇಳಲೇಬಾರದು ಎಂಬುದನ್ನು ಈ ಲೇಖನವು ಅರ್ಥೈಸುತ್ತದೆ. ಪರಮ ಪೂಜ್ಯರು ತಮ್ಮ ಲೇಖನಿಯಿಂದ ಸಮಾಜವನ್ನು ತಿದ್ದುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ದಿವ್ಯ ಸಂದೇಶವನ್ನು
ನೀಡುವ ಪೂಜ್ಯರ ಲೇಖನವು ರಾಜಕಾರಣಿಗಳಿಗೆ ದಾರಿದೀಪವಾಗಲಿ ಎಂಬುದೇ ನನ್ನ ಆಶಯ.

` ಸುಳ್ಳು ಸಕಲಾಭರಣ ಸುಂದರಿ,
ಸತ್ಯ ನಿರಾಕರಣೆಯ ಸುಂದರಿ `.

Krishnamurthy setty R Chinthal
Rajarajeswari Nagar, Bangalore-98

N-2489 

  27-03-2024 04:42 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 Very true,,,
Truth remains TRUTH
Dr Shakuntala
Germany

N-2489 

  27-03-2024 01:11 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 Very good article by Swamiji.
H.Hanumanthappa
Bharath

N-2489 

  27-03-2024 01:10 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 *ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಮನೆಯಿಲ್ಲ*ಎಂದಾದರು, ಈಗೀಗ ನಂಬಿಸುವ ವ್ಯಕ್ತಿತ್ವ ನಮ್ಮದಲ್ಲವೇ?
ನಂಬಿಕೆಯಿಂದ ನಃಬಿಸುವ ಕಾರ್ಯವಾಗಬೇಕು.
ಸುಳ್ಳು ಎಂದಾದರೂ ಬಯಲಿಗೆ ಬರುತ್ತೆ ಅದೇ ಸತ್ಯ..ಇಲ್ಲಾಂದ್ರೆ ನೀನಾರಿಗಾದೆಯೋ ಎಲೆ ಮಾನ.....ವ!.💐
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ

N-2489 

  27-03-2024 12:41 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 Truth is Truth only
Shivanagouda Y Topanagoudar
Hubballi

N-2489 

  27-03-2024 11:36 AM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 OM namo shivay
N.siddeshppa Mellekatte
Karnataka davanagere

N-2489 

  27-03-2024 11:08 AM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 "ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು" ಈ ಅದ್ಭುತವಾದ ಅರ್ಥಪೂರ್ಣವಾದ ವಾಸ್ತವವಾದ ಲೇಖನ ಓದುಗರಿಗೆ ಸತ್ಯ- ಸುಳ್ಳು ಕುರಿತು ನೈಜ ಚಿತ್ರಣ ನೀಡಿದೆ.ಮುಗ್ಧ ನಿಷ್ಕಲ್ಮಷ ಮನಸ್ಸುಗಳಲ್ಲಿ ಸಂಶಯದ ವಿಷ ಬೀಜ ಬಿತ್ತಿ ಸ್ವಾರ್ಥ ಸಾಧನೆಗೆ ಹಿಂಬದಿಯ ಬಾಗಿಲಿನ ಮೂಲಕ ಪ್ರಯತ್ನ ಮಾಡುವ ಹಿತ ಶತ್ರುಗಳೂ ಇದ್ದಾರೆ. ತತ್ವಜ್ಞಾನಿ ಹಾಗೂ ವಿಜ್ಞಾನಿ ಗೆಲಿಲಿಯೋ ಹೇಳಿದ "ಭೂಮಿ ಚಲಿಸುತ್ತಿದೆ" ಎಂದು ಹೇಳಿದ ಸತ್ಯವನ್ನು ಯಾರೂ ಒಪ್ಪಲಿಲ್ಲ. ಜನರ ಮುಂದೆ ಭೂಮಿ ಚಲಿಸುವುದಿಲ್ಲ ಎನ್ನುವ ಸುಳ್ಳನ್ನು ಸಾರಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿದ್ದು ಎಂತಹಾ ವಿಪರ್ಯಾಸ. ಇತಿಹಾಸ ಪುಟಗಳನ್ನು ತಿರುವಿ ನೋಡಿದಾಗ ಸತ್ಯ ಪ್ರತಿಪಾದನೆಗೆ ತೊಡಗಿದವರನ್ನು ಕ್ರೂರವಾಗಿ ಹತ್ಯೆಗೈದ ನಿದರ್ಶನಗಳೂ ಇವೆ. ಸತ್ಯ ಖಂಡಿತವಾಗಿ ಸಾಯುವುದಿಲ್ಲ. ತಾತ್ಕಾಲಿಕವಾಗಿ ಸುಳ್ಳು ವಿಜ್ರಂಭಿಸಿದರೂ ಸದಾಕಾಲ ಉಳಿಯುವುದೇ ಸತ್ಯ. ಸತ್ಯದ ಮುಂದೆ ಸುಳ್ಳು ಮಂಡಿಯೂರಲೇ ಬೇಕಾಗುತ್ತದೆ.ಇದು ಸರ್ವಕಾಲಿಕ ಸತ್ಯ. ಪ್ರಸ್ತುತ ಸೂರ್ಯ - ಚಂದ್ರ, ಭೂಮಿ - ಆಕಾಶ ಇರವುದು ಎಷ್ಟರ ಮಟ್ಟಿಗೆ ಸತ್ಯವೋ "ಸತ್ಯ ಸಾಯುವುದಿಲ್ಲ ಅನ್ನವುದು ಅಷ್ಟೇ ಸತ್ಯ".
G.A.Jagadeesh, SP Retd,
BENGALURU CITY.

N-2489 

  27-03-2024 10:55 AM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ಸತ್ಯಮೇವ ಜಯತೆ ಧರ್ಮೋ ರಕ್ಷಿತೋ ರಕ್ಷಿತಃ
ಮನೋಹರ ಬಿ ಆರ್
ಹೊನ್ನಾಳಿ

N-2489 

  27-03-2024 10:30 AM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ಮುಟ್ಟಿದರೆ ಮುನಿ ಗಿಡದ ವಿಶೇಷ ತೆಯೇ ಹಾಗೆ.ಮುಟ್ಟಿದರೆ ಮುಚ್ಚಿ ಕೊಳ್ಳುತ್ತದೆ.ಗುರುವನ್ನು ಮುಟ್ಟ ಬೇಕಾದರೆ ನಾವು ಮುಟ್ಟಿದ ಮುನಿ ಗಿಡವಾಗಬೇಕು.
ರವಿಕುಮಾರ್ ಆರ್
Basavanashuvanakere