N-2466 
  23-03-2024 07:47 PM   
ಸಿರಿಗೆರೆಯಲ್ಲಿ ಗುರು ರೇವಣಸಿದ್ಧ ಜಯಂತಿ ಆಚರಣೆ
ಶ್ರೀ ಗುರು ರೇವಣಸಿದ್ಧರು
ಕುರುಬ ಸಮುದಾಯದಲ್ಲಿ ಹುಟ್ಟಿ ಆ ಕಾಲದಲ್ಲಿ ಬಹುದೊಡ್ಡ ವಿದ್ವಾಂಸರು ಜ್ಞಾನಿಗಳು ಐತಿಹಾಸಿಕ ಪುರುಷರು ಆದ ರೇವಣಸಿದ್ಧರು ಬಸವಾದಿ ಶರಣರ ಹಿರಿಯ ಶರಣರು
ರೇವಣಸಿದ್ಧರು ತರಳಬಾಳು ಜಗದ್ಗುರು ಬೃಹನ್ಮಠದ ಮೂಲಪುರುಷ ಮಾದಿಗರಾಗಿ ಹುಟ್ಟಿ ಮಹಾಮಾನವನಾದ ವಿಶ್ವ ಬಂಧು ಮರುಳಸಿದ್ಧರ ವಿದ್ಯಾ ಗುರುಗಳು
ರೇವಣಸಿದ್ಧರು ಜನಾನು ರಾಗಿಗಳು ಆಗಿದ್ದರು ಬಹುತೇಕ ಕೆಳವರ್ಗದ ಜನರನ್ನು ಪ್ರೀತಿಸುತಿದ್ದರು
ಇವರ ಜನಪ್ರಿಯತೆಯ ಲಾಭ ಪಡೆಯುವ ಉದ್ದೇಶದಿಂದ ಇವರನ್ನು ಹೈಜಾಕ್ ಮಾಡಿದ ಪಟ್ಟಭದ್ರರು ಇವರ ಹೆಸರಿನಲ್ಲಿ ಕಪೋಲ ಕಲ್ಪನೆಯ ಕಥೆಗಳನ್ನು ಕಟ್ಟಿದ್ದಾರೆ
ನೈಸರ್ಗಿಕ ನಿಯಮಕ್ಕೆ ವಿರುದ್ಧ ವಾಗಿ ಇವರು ಲಿಂಗದಿಂದ ಉದ್ಭವವಾಗಿದ್ದಾರೆಂದೂ ಇವರು ಸನ್ಯಾಸಿಳು ಎಂದು ರಾವಣನಿಗೂ ದೀಕ್ಷೆ ಕೊಟ್ಟಿದ್ದಾರೆ ಎಂದು ಬಿಜ್ಜಳನಿಗೆ ದೀಕ್ಷೆ ಕೊಟ್ಟಿದ್ದಾರೆ ಎಂದು ಯಾವುದೇ ತಳಬುಡ ಇಲ್ಲದ ಕಥೆಗಳನ್ನು ಹರಿಬಿಟ್ಟಿದ್ದಾರೆ
ರೇವಣಸಿದ್ಧರನ್ನು ಕುರುಬ ಜನಾಂಗದವರು ಎಂದರೆ ಎಲ್ಲಿ ತಮ್ಮ ಶ್ರೇಷ್ಠತೆ ನಾಶ ಆಗುತ್ತದೆ ಎಂದು ಬಗೆದು ರೇಣುಕಾಚಾರ್ಯ ಎಂದು ಕಲ್ಪನೆಯ ಲೋಕದಲ್ಲಿ ಕನವರಿಸಿದ್ದಾರೆ
ರೇವಣಸಿದ್ಧರು ವಿವಾಹವಾಗಿ ಅವರಿಗೆ ರುದ್ರಮುನಿ ಎಂಬ ಮಗನಿದ್ದನು
ರುದ್ರಮುನಿ ಎಂಬ ಶರಣರಿಗೆ ಮುಕ್ತಿಮುನಿ ಎಂಬ ಮಗನಿದ್ದನು
ಈ ಮುಕ್ತಿಮುನಿಗೆ ಬಸವಣ್ಣನವರ ಅಕ್ಕ ಅಕ್ಕ ನಾಗಮ್ಮ ಬಾಳೆಹೊನ್ನೂರಿನಲ್ಲಿ ಪಟ್ಟಕಟ್ಟಿದ್ದಾರೆ
ಕಲ್ಯಾಣ ಕ್ರಾಂತಿಯ ನಂತರ ವಚನಗಳ ಉಳಿವಿಗಾಗಿ ಅಕ್ಕ ನಾಗಮ್ಮನ ನೇತೃತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ
ಅಕ್ಕ ನಾಗಮ್ಮನಿಗೆ ಈ ರುದ್ರಮುನಿ ಮುಕ್ತಿಮುನಿ ನೆರವಾಗಿದ್ದಾರೆ
ಪಾ ಗು ಹಳಕಟ್ಟಿ ಶರಣರು ವಚನಗಳನ್ನು ಸಂಶೋಧನೆ ಮಾಡುವ ಸಂದರ್ಭದಲ್ಲಿ ಬಾಳೆಹೊನ್ನೂರಿನಲ್ಲಿ ಅತೀ ಹೆಚ್ಚು ವಚನಗಳು ಸಿಕ್ಕಿರುವುದು ಇದಕ್ಕೆ ಸಾಕ್ಷಿ ಆಗಬಹುದು
ಬಾಳೆಹೊನ್ನೂರಿನಲ್ಲಿ ಮುಕ್ತಿಮುನಿಗೆ ಪಟ್ಟ ಕಟ್ಟಿದ ಅಕ್ಕ ನಾಗಮ್ಮ ನಂತರ ತರಿಕೆರೆಯ ಬಳಿ ಇರುವ ಎಣ್ಣೆಹೊಳೆ ಎಂಬಲ್ಲಿ ಲಿಂಗೈಕ್ಯ ಆಗಿದ್ದಾರೆ ಅಲ್ಲಿಯೇ ಅವರ ಸಮಾಧಿ ಇರುವುದನ್ನು ಗಮನಿಸಬಹುದು
ಹೀಗೆ ಮಹಾನ್ ಚೇತನ ಆದ ರೇವಣಸಿದ್ಧರು ಕೆಲವು ಪಟ್ಟಭದ್ರರ ಹಿತಾಸಕ್ತಿಗೆ ಕಪೋಲ ಕಲ್ಪಿತರಾಗಿದ್ದಾರೆ
ರೇವಣಸಿದ್ಧರನ್ನು ಅಕ್ಕ ನಾಗಮ್ಮ ತಮ್ಮ ಒಂದು ವಚನದಲ್ಲಿ ಈ ರೀತಿಯಲ್ಲಿ ಸ್ಮರಿಸಿದ್ದಾರೆ
ಅಂಗದಿಂದುದಯವಾದಾತ ಮಡಿವಾಳಯ್ಯ. ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ. ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ. ಪಾದೋದಕದಿಂದ ಉದಯವಾದವಳು ಅಕ್ಕಮಹಾದೇವಿ. ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ. ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ. ಬಸವಣ್ಣಪ್ರಿಯ ಚೆನ್ನಸಂಗಯ್ಯ.
-
ಮಂಜನಗೌಡ ಕೆ ಜಿ
ಭರಮಸಾಗರ