N-2440 
  21-03-2024 08:41 AM   
ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ
ಪರಮ ಪೂಜ್ಯರು ಪಾದಾರವಿಂದ್ಯಗಳಿಗೆ ನಮಸ್ಕರಿಸುವೆನು.
ಪೂಜ್ಯರೆ ಅಂಕಣ ಓದುತ್ತಾ ದುಃಖ ಉಮ್ಮಳಿಸಿ ಅಳುತ್ತಲೇ ಓದಿದೆನು. ನನ್ನ ತಂದೆಯ ಜ್ಞಾಪಕ ಬಂದಿತು .ತಂದೆ ಮಕ್ಕಳ ಕಷ್ಟದಾಯಕ ಪತ್ರ ಓದುತ್ತಾ ಕಣ್ಣೀರು ಆಗುತ್ತಿದ್ದರು. ತಂದೆ ತಾಯಿ ಮಕ್ಕಳು ಮೇಲಿನ ಮಮತೆ ಪ್ರೀತಿ ಪಾಲನಾ ಪೋಷಣೆ ಮಾಡಿದಾತನ ಒಡಲಿಗೆ ಗೊತ್ತಾಗುವುದು. ನನ್ನ ತಂದೆಯ ಮುಪ್ಪಿನಾವಸ್ಥೆ ವಿಧಿ ಅಟ್ಟಹಾಸದಿಂದ ,ನನ್ನ ಹೆಂಡತಿ ಮಕ್ಕಳ ಹೊಟ್ಟೆ ಚೀಲ ತುಂಬಲು ದೂರದ ಊರಲ್ಲಿ ಕೂಲಿ ಮಾಡುತ್ತಿದ್ದೆನು.
ಆ ಚಿತ್ರಣ ಕಣ್ಮುಂದೆ ಬಂದಿತು .ನಿನ್ನೆ ಜ್ಞಾಪಿಸಿಕೊಂಡು ಕಿರು ಕಥೆ ಬರೆದು ಆಪ್ತರಿಗೆ ಜಾಲತಾಣದಲ್ಲಿ ಕಳುಹಿಸಿ ಮನೆ ಹಗುರ ಮಾಡಿಕೊಂಡು ಇರುವೆ ಗುರುಗಳೆ. ವಿದ್ಯೆಯ ಜೊತೆಗೆ ಮಾನವೀಯ ಹ್ರದಯ ವೈಶಾಲ್ಯ ಮೈಗೂಡಿಸಿಕೊಂಡು ಆಗಾಗ್ಯೆ ಮನುಷ್ಯರು. ಇಲ್ಲದಿದ್ದರೆ ಮ್ರಗಗಳು ಎನ್ನಬಹುದು.
ಗುರುಗಳ ಆಶೀರ್ವಚನ ನುಡಿ ,ಅಂಕಣದ ಮೂಲಕ ಯಾವ ಮನುಷ್ಯ ಓದಿದ್ದು ತನ್ನ ಲ್ಲಿ ಅಳವಡಿಸಿಕೊಂಡು ನುಡಿಯನ್ನು ನಡೆಯಾಗಿಸಿಕೊಳ್ಳುವದು ಮಾನವೀಯತೆ ಯ ನೆಲೆಯುಳ್ಳವರಾಗೋಣ.
ಶೇಖರಗೌಡ ಪಾಟೀಲ
ಹರಪನಹಳ್ಳಿ